ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಭಾರತೀಯ ಆಹಾರ ನಿಗಮದ 3 ನೇ ಇ-ಹರಾಜಿನಲ್ಲಿ 5.07 ಎಲ್ಎಂಟಿ ಗೋಧಿ ಹರಾಜು


ಅಖಿಲ ಭಾರತ ತೂಕದ ಸರಾಸರಿ ಮೀಸಲು ದರ ಕ್ವಿಂಟಲ್ ಗೆ ರೂ. 2138.12 ಕ್ಕೆ ಪ್ರತಿಯಾಗಿ, ಅಖಿಲ ಭಾರತ ತೂಕದ ಸರಾಸರಿ ಮಾರಾಟ ಬೆಲೆ ಪ್ರತಿ ಕ್ವಿಂಟಲ್ ಗೆ ರೂ. 2172.08 ಆಯಿತು

Posted On: 23 FEB 2023 4:30PM by PIB Bengaluru

ಒಎಂಎಸ್ಎಸ್ (ಡಿ) ಅಡಿಯಲ್ಲಿ ಗೋಧಿಯನ್ನು ಮಾರಾಟ ಮಾಡಲು ಮೂರನೇ ಇ-ಹರಾಜು 22.02.2023 ರಂದು ನಡೆಯಿತು. ದೇಶಾದ್ಯಂತ ಎಫ್.ಸಿಐನ 23 ಪ್ರದೇಶಗಳಲ್ಲಿ ಹರಡಿರುವ 620 ಡಿಪೋಗಳಿಂದ ದಾಸ್ತಾನುಗಳನ್ನು ಹರಾಜಿಗೆ ಇಡಲಾಗಿತ್ತು. ಒಟ್ಟು 11.79 ಎಲ್.ಎಂಟಿ ಗೋಧಿಯನ್ನು ಹರಾಜಿಗಿಟ್ಟಿದ್ದು, 5.07 ಎಲ್.ಎಂಟಿ ಗೋಧಿಯನ್ನು ಹರಾಜು ಮಾಡಲಾಯಿತು.

ಅಖಿಲ ಭಾರತ ತೂಕದ ಸರಾಸರಿ ಮೀಸಲು ದರ ಕ್ವಿಂಟಲ್ ಗೆ ರೂ. 2138.12 ಕ್ಕೆ ಪ್ರತಿಯಾಗಿ,  ದಾಸ್ತಾನುಗಳನ್ನು ಅಖಿಲ ಭಾರತ ತೂಕದ ಸರಾಸರಿ ಮಾರಾಟ ಬೆಲೆ ಕ್ವಿಂಟಲ್ ಗೆ 2172.08 ರೂ.ನಂತೆ ಬಿಕರಿ ಮಾಡಲಾಯಿತು.

ಮಾರಾಟವಾದ ಒಟ್ಟು ಪ್ರಮಾಣದಲ್ಲಿ, ಹರಿಯಾಣ, ಪಂಜಾಬ್ ಮತ್ತು ಮಧ್ಯಪ್ರದೇಶದಿಂದ 1.39 ಎಲ್.ಎಂಟಿ ಮಾರಾಟವಾಗಿದ್ದು, ಅಲ್ಲಿ ಮೀಸಲು ದರ  ಸರಾಸರಿ ಪ್ರತಿ ಕ್ವಿಂಟಾಲ್ ಗೆ ರೂ. 2135.35 ಮತ್ತು ತೂಕದ ಸರಾಸರಿ ಮಾರಾಟ ಬೆಲೆ ಪ್ರತಿ ಕ್ವಿಂಟಾಲ್ ಗೆ ರೂ. 2148.32 ಆಗಿತ್ತು. ದೇಶದ ಉಳಿದ ಭಾಗಗಳಲ್ಲಿ (ಮಧ್ಯಪ್ರದೇಶ, ಪಂಜಾಬ್ ಮತ್ತು ಹರಿಯಾಣ ಹೊರತುಪಡಿಸಿ) ಮಾರಾಟವಾದ ಪ್ರಮಾಣವು 3.68 ಎಲ್.ಎಂಟಿ ಆಗಿದ್ದರೆ, ಮೀಸಲು ದರದ ತೂಕದ ಸರಾಸರಿ ಪ್ರತಿ ಕ್ವಿಂಟಲ್ ಗೆ 2139.16 ಮತ್ತು ತೂಕದ ಸರಾಸರಿ ಮಾರಾಟ ಬೆಲೆ ಕ್ವಿಂಟಾಲ್ ಗೆ 2181.08 ರೂ. ಆಗಿತ್ತು.

ಒಟ್ಟಾರೆ ಬೆಲೆ ಪ್ರವೃತ್ತಿಯು ಮಾರುಕಟ್ಟೆ ಶಾಂತವಾಗಿದ್ದು, ಸರಾಸರಿ ಪ್ರತಿ ಕ್ವಿಂಟಾಲ್ ಗೆ 2200 ರೂ.ಗಿಂತ ಕೆಳಗಿದೆ. ಹೀಗಾಗಿ, ಗೋಧಿಯನ್ನು ಇಳಿಸುವುದು ಗೋಧಿಯ ಬೆಲೆಯಲ್ಲಿ ಒಟ್ಟಾರೆ ಕಡಿತದ ಅಪೇಕ್ಷಿತ ಫಲಿತಾಂಶಗಳನ್ನು ತೋರಿಸುತ್ತಿದೆ.

ಮೂರನೇ ಇ-ಹರಾಜಿನಲ್ಲಿ 100 ರಿಂದ 499 ಮೆಟ್ರಿಕ್ ಟನ್ ವರೆಗೆ, ನಂತರ 50-100 ಮೆಟ್ರಿಕ್ ಟನ್ ವರಗೆ, ತರುವಾಯ 500-999 ಮೆಟ್ರಿಕ್ ಟನ್ ವರೆಗೆ ಗರಿಷ್ಠ ಬೇಡಿಕೆ ಇತ್ತು, ಇದು ಸಣ್ಣ ಮತ್ತು ಮಧ್ಯಮ ಹಿಟ್ಟು ಗಿರಣಿದಾರರು ಮತ್ತು ವ್ಯಾಪಾರಿಗಳು ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಎಂಬುದನ್ನು ಸೂಚಿಸುತ್ತದೆ. ಒಂದೇ ಬಾರಿಗೆ ಗರಿಷ್ಠ 3000 ಮೆಟ್ರಿಕ್ ಟನ್ ಗೆ ಕೇವಲ 6 ಬಿಡ್ ಗಳನ್ನು ಸ್ವೀಕರಿಸಲಾಗಿತ್ತು. ಮೂರನೇ ಇ-ಹರಾಜಿನಲ್ಲಿ ಒಟ್ಟು 1269 ಬಿಡ್ಡುದಾರರು ಭಾಗವಹಿಸಿದ್ದರು.

ದೆಹಲಿ, ಹರಿಯಾಣ, ತಮಿಳುನಾಡು ಮತ್ತು ತೆಲಂಗಾಣದಲ್ಲಿ, ಪ್ರಸ್ತಾಪಿತ ಪ್ರಮಾಣದಲ್ಲಿ ಶೇ.100ರಷ್ಟನ್ನು ಬಿಡ್ಡುದಾರರು ಖರೀದಿಸಿದ್ದಾರೆ ಮತ್ತು ಇತರ ಐದು ರಾಜ್ಯಗಳಲ್ಲಿ, ನೀಡಲಾದ ಶೇ.90 ಕ್ಕಿಂತ ಹೆಚ್ಚು ದಾಸ್ತಾನನ್ನು ಬಿಡ್ಡುದಾರರು ಖರೀದಿಸಿದ್ದಾರೆ.

ಮೊದಲ ಇ-ಹರಾಜಿನಲ್ಲಿ ಕ್ವಿಂಟಲ್ ಗೆ 2950 ರೂ.ಗಳ ಅತ್ಯಧಿಕ ಮಾರಾಟದ ಬೆಲೆ ಉತ್ತರ ಪ್ರದೇಶ ರಾಜ್ಯದಲ್ಲಿ ಕಂಡುಬಂದಿತ್ತು ಈಗ, ಬೆಲೆಗಳು ಶಾಂತವಾಗಿವೆ ಮತ್ತು ಪ್ರತಿ ಕ್ವಿಂಟಾಲ್ ಗೆ ಸರಾಸರಿ 2177 ರೂ.ಗೆ ಇಳಿದಿದೆ. ಇದು 22 ದಿನಗಳ ಅವಧಿಯಲ್ಲಿ ಪ್ರತಿ ಕ್ವಿಂಟಾಲ್ ಗೆ 773 ರೂ.ಗಳಷ್ಟು ಕಡಿತವಾಗಿದೆ.

ಮೂರನೇ ಇ-ಹರಾಜಿನಲ್ಲಿ 1086.1 ಕೋಟಿ ರೂ. ಬಂದಿದೆ.

ನಾಲ್ಕನೇ ಇ-ಹರಾಜು 2023 ರ ಮಾರ್ಚ್ 1 ರಂದು ನಡೆಯಲಿದೆ.


****


(Release ID: 1901916) Visitor Counter : 192