ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಸುಸ್ಥಿರ ನವೋದ್ಯಮಗಳಿಗಾಗಿ "ಪಿಪಿಪಿ + ಪಿಪಿಪಿ" ಸಹಯೋಗದ ಮಾದರಿಯನ್ನು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಪ್ರಸ್ತಾಪಿಸಿದ್ದಾರೆ; ಉದ್ಯಮವನ್ನು ಉನ್ನತೀಕರಣಗೊಳಿಸುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳುವ ಮಹತ್ವವನ್ನು ಅವರು ಒತ್ತಿ ಹೇಳಿದರು
ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಸಾರ್ವಜನಿಕ, ಖಾಸಗಿ ವಲಯ, ಎನ್ ಜಿಒಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಮಾರ್ಗದರ್ಶನ ಮತ್ತು ಸಹಭಾಗಿತ್ವಕ್ಕೆ ಡಾ. ಜಿತೇಂದ್ರ ಸಿಂಗ್ ಕರೆ ನೀಡಿದರು.
ಇನ್ಕ್ಯುಬೇಟರ್ ಅಸೆಸ್ಮೆಂಟ್ ಫ್ರೇಮ್ವರ್ಕ್ (ಇನ್ಕ್ಯುಬೇಟರ್ ಮೌಲ್ಯಮಾಪನ ಚೌಕಟ್ಟನ್ನು) ಕಾರ್ಯಾರಂಭಗೊಳಿಸಿದ ಬಳಿಕ ನೀತಿ ಆಯೋಗದಲ್ಲಿ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಕುರಿತ ಎಂಎಚ್ಎಲ್ಸಿ ಸಭೆಯಲ್ಲಿ ಸಚಿವರು ಮಾತನಾಡಿದರು.
69 ಅಟಲ್ ಇನ್ಕ್ಯುಬೇಷನ್ ಸೆಂಟರ್ (ಎಐಸಿಎಸ್) ಗಳನ್ನು ಕಾರ್ಯಗತಗೊಳಿಸಲಾಗಿದೆ, ಇದುವರೆಗೆ 2900 ಕ್ಕೂ ಹೆಚ್ಚು ನವೋದ್ಯಮಗಳನ್ನು ಇದು ರೂಪಿಸಿದೆ: ಡಾ ಜಿತೇಂದ್ರ ಸಿಂಗ್
Posted On:
20 FEB 2023 7:48PM by PIB Bengaluru
ಸುಸ್ಥಿರ ನವೋದ್ಯಮಗಳು ಮತ್ತು ಸುಸ್ಥಿರ ವಿಜ್ಞಾನ ಉದ್ಯಮಗಳಿಗಾಗಿ ಅಂತರರಾಷ್ಟ್ರೀಯ ಸಹಯೋಗದಲ್ಲಿ "ಪಿಪಿಪಿ +ಪಿಪಿಪಿ" ಮಾದರಿಯನ್ನು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ನಿರ್ವಹಣೆ); ಭೂ ವಿಜ್ಞಾನ ಖಾತೆ ಸಹಾಯಕ ಸಚಿವ (ಸ್ವತಂತ್ರ ಉಸ್ತುವಾರಿ); ಪ್ರಧಾನಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಪರಮಾಣು ಇಂಧನ ಮತ್ತು ಬಾಹ್ಯಾಕಾಶ ಖಾತೆ ಸಹಾಯಕ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಪ್ರಸ್ತಾಪಿಸಿದ್ದಾರೆ.
ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್ (ಎಐಎಂ) ಸಭೆಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, ವೇಗವರ್ಧನೆಯಂತಹ ಚಟುವಟಿಕೆಗಳಲ್ಲಿ ಉದ್ಯಮವನ್ನು ತೊಡಗಿಸಿಕೊಳ್ಳುವ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳುವ ಮಹತ್ವವನ್ನು ಒತ್ತಿಹೇಳಿದರು, ಅಲ್ಲಿ ಉದ್ಯಮ ವಲಯವನ್ನು ನಕ್ಷೆ ಮಾಡಬಹುದು, ಅಂತರಗಳು, ಕೊರತೆಗಳು ಯಾವುವು ಎಂಬುದನ್ನು ನಮಗೆ ತಿಳಿದುಕೊಳ್ಳಬಹುದು ಮತ್ತು ಭಾರತೀಯ ಆವಿಷ್ಕಾರಗಳನ್ನು, ಅನ್ವೇಷಣೆಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಮಾಡುವ ಕಾರ್ಯಕ್ರಮಕ್ಕೆ ನವೋದ್ಯಮಗಳನ್ನು ತೊಡಗಿಸಿಕೊಳ್ಳಲು ನಾವು ಒಟ್ಟಾಗಿ ಕೆಲಸ ಮಾಡಬಹುದು ಎಂದರು.

ಸುಸ್ಥಿರ ಗುರಿಗಳನ್ನು ಸಾಧಿಸಲು ಎರಡೂ ಕಡೆಯ ಸಹಯೋಗಿ ಸರ್ಕಾರಗಳು ಆಯಾ ಖಾಸಗಿ ವಲಯಗಳನ್ನು ತೊಡಗಿಸಿಕೊಳ್ಳಬಹುದು ಎಂದು ಸಚಿವರು ವಿವರಿಸಿದರು. ಉತ್ಪಾದನೆಯ ವಾಣಿಜ್ಯೀಕರಣ ಸುಸ್ಥಿರತೆಗೆ ಅಗತ್ಯ ಎಂದು ಅವರು ಹೇಳಿದರು. ನಾವು ರೂಪಿಸುವ ಯಾವುದೇ ಯಶಸ್ವಿ ಮತ್ತು ಪುನರಾವರ್ತಿಸಬಹುದಾದ ಮಾದರಿಗಳು ನಮಗೆ ಮುಂದೆ ಸಾಗಲು ಸಹಾಯ ಮಾಡುತ್ತವೆ ಎಂದೂ ಅವರು ಹೇಳಿದರು.
ಮತ್ತೊಂದು ಪ್ರಮುಖ ಅಂಶವಾದ ದೇಶೀಯ, ಸ್ಥಳೀಯ ನಾವೀನ್ಯತೆ ಕಾರ್ಯಕ್ರಮ ಕುರಿತಂತೆ ಪ್ರಸ್ತಾಪಿಸಿದ ಡಾ. ಜಿತೇಂದ್ರ ಸಿಂಗ್ , ಭಾಷಾ ಅಡೆತಡೆಗಳಿಂದಾಗಿ ಈ ದೇಶದ ಅನೇಕ ಸೃಜನಶೀಲ ಮತ್ತು ಅನ್ವೇಷಣಾ ಮನಸ್ಥಿತಿಯ ಜನರಿಗೆ ಅವಕಾಶ ಸಿಗುವುದಿಲ್ಲ ಮತ್ತು ಆದ್ದರಿಂದ, ಇಂಗ್ಲಿಷ್ ಮತ್ತು ಹಿಂದಿಯನ್ನು ಮೀರಿ, ನಾವು ಪ್ರಾದೇಶಿಕ ಭಾಷೆಗಳಲ್ಲಿಯೂ ಕಾರ್ಯಕ್ರಮಗಳನ್ನು, ತರಗತಿಗಳನ್ನು ಆಯೋಜಿಸಬೇಕಾಗಿದೆ ಎಂದೂ ಹೇಳಿದರು.
ಡಾ. ಜಿತೇಂದ್ರ ಸಿಂಗ್ ಅವರು ನವೋದ್ಯಮಗಳು ಮತ್ತು ಆವಿಷ್ಕಾರಕರು ಹಾದು ಬಂದ ಹಾದಿಯ ಪ್ರಯಾಣದ ದಾಖಲೀಕರಣದ ಅಗತ್ಯವನ್ನು ಒತ್ತಿ ಹೇಳಿದರು. ಇಂದು, ಉದ್ಯಮಿಗಳಾಗಲು ಹೊರಟ ಅನೇಕ ವಿಜ್ಞಾನಿಗಳು ಯಶಸ್ವಿಯಾಗಿರಬಹುದು ಅಥವಾ ವಿಫಲರಾಗಲೂಬಹುದು, ಆದರೆ ಅವರ ಈ ಪ್ರಯಾಣದಿಂದ ಕಲಿಯುವುದಕ್ಕೆ ಅದರ ಹೊರತು ನಮಗೆ ಅನ್ಯ ಮಾರ್ಗವಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಉತ್ತೇಜಿಸಲು ಸಾರ್ವಜನಿಕ, ಖಾಸಗಿ ವಲಯ, ಎನ್ಜಿಒಗಳು, ಶಿಕ್ಷಣ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳೊಂದಿಗೆ ಮಾರ್ಗದರ್ಶನ ಮತ್ತು ಪಾಲುದಾರಿಕೆಗೆ ಸಚಿವರು ಕರೆ ನೀಡಿದರು.

ಶಾಲೆಗಳಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನವೀನ, ಅನ್ವೇಷಣೆಯುಕ್ತ ಮನಸ್ಥಿತಿಯನ್ನು ಸೃಷ್ಟಿಸಲು ಮತ್ತು ವಿಶ್ವವಿದ್ಯಾಲಯಗಳು, ಸಂಶೋಧನಾ ಸಂಸ್ಥೆಗಳು, ಖಾಸಗಿ ಮತ್ತು ಎಂಎಸ್ಎಂಇ ವಲಯದಲ್ಲಿ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸಲು ಎಐಎಮ್ ಸಮಗ್ರ ವಿಧಾನವನ್ನು ಕೈಗೆತ್ತಿಕೊಂಡು ಅನುಸರಿಸುತ್ತಿರುವುದಕ್ಕೆ ಡಾ. ಜಿತೇಂದ್ರ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದರು.
ಶ್ರೇಣಿ 2, ಶ್ರೇಣಿ 3 ನಗರಗಳು, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಬುಡಕಟ್ಟು, ಗುಡ್ಡಗಾಡು ಮತ್ತು ಕರಾವಳಿ ಪ್ರದೇಶಗಳು ಸೇರಿದಂತೆ ಭಾರತದ ಸೌಲಭ್ಯವಿಲ್ಲದ / ಕಡಿಮೆ ಸೌಲಭ್ಯಗಳಿರುವ ಪ್ರದೇಶಗಳಿಗೆ ತಂತ್ರಜ್ಞಾನ ಆಧಾರಿತ ನಾವೀನ್ಯತೆಯ ಪ್ರಯೋಜನಗಳನ್ನು ಉತ್ತೇಜಿಸಲು, ಎಐಎಮ್ ವಿಶಿಷ್ಟ ಪಾಲುದಾರಿಕೆ ಚಾಲಿತ ಮಾದರಿಯೊಂದಿಗೆ ಅಟಲ್ ಸಮುದಾಯ ನಾವೀನ್ಯತೆ ಕೇಂದ್ರಗಳನ್ನು (ಎಸಿಐಸಿ) ಸ್ಥಾಪಿಸುತ್ತಿದೆ ಎಂದು ಡಾ ಜಿತೇಂದ್ರ ಸಿಂಗ್ ಹೇಳಿದರು. ಈ ಮಾದರಿಯಲ್ಲಿ ಸಹಭಾಗಿ ಸಂಸ್ಥೆ ಅಥವಾ ಪಾಲುದಾರಿಕೆ ಸಂಸ್ಥೆ ಸಮಾನ ಅಥವಾ ಹೆಚ್ಚಿನ ಪ್ರಮಾಣದ ಹಣಕಾಸು ಹೂಡಿಕೆ ಮಾಡಿದಲ್ಲಿ ಎಐಎಮ್ ನಿಂದ ಎ.ಸಿ.ಐ.ಸಿ.ಗೆ 2.5 ಕೋ.ರೂ.ಗಳವರೆಗೆ ಅನುದಾನ ನೀಡಲಾಗುತ್ತದೆ. ಇಲ್ಲಿಯವರೆಗೆ, ದೇಶಾದ್ಯಂತ ನವೋದ್ಯಮ ಗಳು 14 ಎಸಿಐಸಿಗಳನ್ನು ಸ್ಥಾಪಿಸಿದ್ದು, ಅವುಗಳಲ್ಲಿ 10 ಕ್ಕೆ ಇನ್ಕ್ಯುಬೇಷನ್ (ಪ್ರೋತ್ಸಾಹ, ಬೆಂಬಲ ) ನೀಡಲಾಗುತ್ತಿದೆ ಎಂದು ಅವರು ಹೇಳಿದರು. 50+ ಎಸಿಐಸಿಗಳನ್ನು ಸ್ಥಾಪಿಸುವ ಗುರಿಯನ್ನು 2023ರ ಮಾರ್ಚ್ ತಿಂಗಳೊಳಗೆ ಸಾಧಿಸಲಾಗುವುದು ಎಂದವರು ವಿವರಿಸಿದರು.
ದೇಶಾದ್ಯಂತ ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಸ್ಥಾಪಿಸಲಾಗುತ್ತಿರುವುದನ್ನು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್ , 700 ಜಿಲ್ಲೆಗಳಲ್ಲಿ 10,000 ಲ್ಯಾಬ್ ಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 7.5 ದಶಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಎಟಿಎಲ್ ಎಸ್ ಸೌಲಭ್ಯ ಲಭ್ಯವಾಗುತ್ತಿದೆ ಎಂದೂ ಹೇಳಿದರು. . ಜಮ್ಮು ಮತ್ತು ಕಾಶ್ಮೀರ, ಲಡಾಖ್, ಈಶಾನ್ಯ ರಾಜ್ಯಗಳು, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಹಿಮಾಲಯನ್ ಮತ್ತು ದ್ವೀಪ ಪ್ರದೇಶಗಳಲ್ಲಿ 10,000 ಹೊಸ ಎಟಿಎಲ್ಎಸ್ ಗಳನ್ನು ಎಐಎಮ್ ಸ್ಥಾಪಿಸುತ್ತಿದೆ ಎಂದರು.

ಅಟಲ್ ನ್ಯೂ ಇಂಡಿಯಾ ಚಾಲೆಂಜ್ ಕಾರ್ಯಕ್ರಮವನ್ನು ಉಲ್ಲೇಖಿಸಿದ ಡಾ.ಜಿತೇಂದ್ರ ಸಿಂಗ್, ಇದು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಪ್ರಸ್ತುತತೆಯ ವಲಯವಾರು ಸವಾಲುಗಳನ್ನು ಪರಿಹರಿಸುವ ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳನ್ನು ರೂಪಿಸುವ, ಆಯ್ಕೆ ಮಾಡುವ, ಬೆಂಬಲಿಸುವ ಮತ್ತು ಪೋಷಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು. ಅಟಲ್ ನ್ಯೂ ಇಂಡಿಯಾ ಚಾಲೆಂಜ್ (ಎಎನ್ಐಸಿ) ನ ಮುನ್ನೋಟವು ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳಿಂದ ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ಸಾಮಾಜಿಕ ಪ್ರಸ್ತುತತೆಯ (ಉತ್ಪನ್ನೀಕರಣ) ಸಮಸ್ಯೆಗಳನ್ನು ಪರಿಹರಿಸಿ ಉತ್ಪನ್ನಗಳನ್ನು ತಯಾರು ಮಾಡಲು ಸಹಾಯ ಮಾಡುತ್ತದೆ ಮತ್ತು ಭಾರತದ ಸಂದರ್ಭದಲ್ಲಿ ಮಾರುಕಟ್ಟೆಗಳನ್ನು ಹುಡುಕುವುದಕ್ಕೆ ಸಂಬಂಧಿಸಿದ ಹೊಸ ಪರಿಹಾರಗಳನ್ನು ಹಾಗು ತ್ವರಿತವಾಗಿ ಗ್ರಾಹಕರನ್ನು (ವಾಣಿಜ್ಯೀಕರಣ) ಹುಡುಕಲು ಹೊಸ ಪರಿಹಾರಗಳನ್ನು ರೂಪಿಸಲು ಸಹಾಯ ಮಾಡುತ್ತದೆ ಎಂದರು.
ಎಲ್ಲಾ ಉಪಕ್ರಮಗಳು ಯಶಸ್ವಿಯಾಗುವಂತೆ ಮಾಡಲು , ಎಐಎಮ್ ಅತಿದೊಡ್ಡ ಮಾರ್ಗದರ್ಶಕ ತೊಡಗಿಸಿಕೊಳ್ಳುವಿಕೆ ಮತ್ತು ನಿರ್ವಹಣಾ ಕಾರ್ಯಕ್ರಮವಾದ "ಮೆಂಟರ್ ಇಂಡಿಯಾ - ದಿ ಮೆಂಟರ್ಸ್ ಆಫ್ ಚೇಂಜ್" ಪ್ರಾರಂಭಿಸಿರುವುದರತ್ತ ಡಾ. ಜಿತೇಂದ್ರ ಸಿಂಗ್ ಗಮನ ಸೆಳೆದರು. ಇದುವರೆಗೆ ಎಐಎಮ್ ದೇಶಾದ್ಯಂತ ಎಐಎಮ್ ಐಎನ್ಎನ್ಒನೆಟ್ (AIM iNNONET )ಪೋರ್ಟಲ್ನಲ್ಲಿ 10000+ ನೋಂದಣಿಗಳನ್ನು ಹೊಂದಿದೆ, ಅವುಗಳಲ್ಲಿ 4000+ ಅನ್ನು ಎಟಿಎಲ್ಎಸ್ ಮತ್ತು ಎಐಸಿಎಸ್ ಗಳಿಗೆ ಹಂಚಿಕೆ ಮಾಡಲಾಗಿದೆ ಎಂದೂ ಡಾ. ಜಿತೇಂದ್ರ ಸಿಂಗ್ ಹೇಳಿದರು.
****
(Release ID: 1901038)
Visitor Counter : 141