ಗೃಹ ವ್ಯವಹಾರಗಳ ಸಚಿವಾಲಯ

ಮಹಾರಾಷ್ಟ್ರ ಪುಣೆಯಲ್ಲಿಂದು ಶಿವಾಜಿ ಮಹಾರಾಜ್ ಅವರ ಜೀವನ ಆಧರಿಸಿದ “ಶಿವ ಸೃಷ್ಟಿ” ಪಾರ್ಕ್ ನ ಮೊದಲ ಹಂತ ಉದ್ಘಾಟಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ


ದೇಶದ ಸ್ವಧರ್ಮ ಸ್ವರಾಜ್ ಮತ್ತು ಸ್ವಭಾಷೆಗಾಗಿ ಕೊಡುಗೆ ನೀಡಿದ ಛತ್ರಪತಿ ಶಿವಾಜಿ ಮಹಾರಾಜ್ ಗೆ ನಮನ ಸಲ್ಲಿಸಿದ  ಶ್ರೀ ಅಮಿತ್ ಶಾ 

ಶಿವಾಜಿ ಮಹಾರಾಜರ ಪರಂಪರೆ ಅನುಸರಿಸುತ್ತಾ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಂದ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ತಾಣಗಳ ನವೀಕರಣ

ದೇಶಾದ್ಯಂತ ಸುತ್ತಿದ ಶಿವಶಾಹಿರ್ ಬಾಬಾ ಸಾಹೇಬ್ ಪುರಂದರೆ ಜಿ ಶಿವಚರಿತೆ ಸಂಪಾದಿಸಲು ತಮ್ಮ ಜೀವನ ಸಮರ್ಪಣೆ; ಇದರಿಂದಾಗಿ ಶಿವಾಜಿ ಮಹಾರಾಜರ ಶೌರ್ಯಗಾಥೆಗಳು ಜನಸಮೂಹ ತಲುಪಲು ಸಾಧ್ಯ

ಬಾಬಾ ಸಾಹೇಬ್ ಪುರಂದರೆ ಅವರಿಂದ ಜಗತ್ತಿನಾದ್ಯಂತ ಚದುರಿ ಹೋಗಿದ್ದ ಶಿವಾಜಿ ಮಹಾರಾಜರ ಜೀವನಾಧಾರಿತ ದಾಖಲೆಗಳನ್ನು ಶ್ರೀ ಸಂಗ್ರಹ ಮತ್ತು ಮುಂದಿನ ಪೀಳಿಗೆಗಾಗಿ ಶಿವಚರಿತ ರಚನೆ

ಶಿವಸೃಷ್ಟಿ ಥೀಮ್ ಪಾರ್ಕ್ ನಲ್ಲಿ ಶಿವಾಜಿ ಮಹಾರಾಜ್ ಅವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿ  ಸಂರಕ್ಷಣೆ; ಮುಂದಿನ ದಿನಗಳಲ್ಲಿ ಈ ಪಾರ್ಕ್ ಏಷ್ಯಾದ ಗ್ರ್ಯಾಂಡ್ ಥೀಮ್ ಪಾರ್ಕ್ ಆಗಿ ಬದಲಾವಣೆ

ಶಿವಸೃಷ್ಟಿ ನಿರ್ಮಾಣದಲ್ಲಿ ತಂತ್ರಜ್ಞಾನ ಮತ್ತು ಇತಿಹಾಸ ಎರಡರ ಅದ್ಭುತ ಸಮ್ಮಿಶ್ರಣವಿದೆ; ಹಾಲೋಗ್ರಫಿ ಪ್ರಾಜೆಕ್ಟ್ ಮ್ಯಾಪಿಂಗ್, ಮಿನಿಯೇಚರ್ ಮೋಷನ್, ಸಿಮ್ಯುಲೇಷನ್, 3ಡಿ-4ಡಿ ತಂತ್ರಜ್ಞಾನ ಹಾಗೂ ಧ್ವನಿ ಮತ್ತು ಬೆಳಕು ತಂತ್ರಜ್ಞಾನಗಳ ಸಂಯೋಜನೆ ಮೂಲಕ ಇತಿಹಾಸವನ್ನು ಜೀವಂತವಾಗಿ ತೋರಿಸಲು ಪ್ರಯತ್ನ

ಈ ಥೀಮ್ ಪಾರ್ಕ್ ನಲ್ಲಿ ನಾನಾ ಕೋಟೆಗಳ ಮೂಲಕ ಶಿವಾಜಿ ಪಯಣ; ಆಗ್ರಾದಲ್ಲಿ ಮೊಘಲರಿಂದ ತಪ್ಪಿಸಿಕೊಂಡಿದ್ದು ಸೇರಿ ಹಲವು ಪ್ರಮುಖ ಸಂಗತಿಗಳ ಸಂರಕ್ಷಣೆ

ಸ್ವರಾಜ್ ಸ್ಥಾಪನೆ ಮೂಲಕ ಶಿವಾಜಿ ಮಹಾರಾಜ್ ಯಾರೊಬ್ಬರೂ ಭಾರತವನ್ನು ದಮನ ಮಾಡಲಾಗದು, ಜನರನ್ನು ಅಪಮಾನಿಸಲಾಗದು ಎಂಬ ಸಂದೇಶ ಇಡೀ ವಿಶ್ವಕ್ಕೆ ರವಾನೆ; ಶಿವಾಜಿ ಮಹಾರಾಜರ ಈ ಸಂದೇಶ 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಕೇಳಿ ಬಂದಿತ್ತು

ಶಿವಾಜಿ ಮಹಾರಾಜರ ಸ್ವರಾಜ್ ಪಯಣ ಅಟ್ಟೋಕ್ ನಿಂದ ಕಟಕ್ ಮತ್ತು ಗುಜರಾತ್ ನಿಂದ ಬಂಗಾಳದವರೆಗೆ ತಲುಪಿತ್ತು, ಇದು ಇಡೀ ಭಾರತಕ್ಕೆ ಸ್ವಾತಂತ್ರ್ಯ ಪ್ರಜ್ಞೆ ಜಾಗೃತಗೊಳಿಸಿತ್ತು

Posted On: 19 FEB 2023 7:14PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿ ಅಮಿತ್ ಶಾ ಅವರು, ಮಹಾರಾಷ್ಟ್ರದ ಪುಣೆಯಲ್ಲಿಂದು ಛತ್ರಪತಿ ಶಿವಾಜಿ ಮಹಾರಾಜ್ ಅವರ ಜೀವನ ಆಧರಿಸಿದ “ಶಿವಸೃಷ್ಟಿ” ಥೀಮ್ ಪಾರ್ಕ್ ನ ಮೊದಲ ಹಂತವನ್ನು ಉದ್ಘಾಟಿಸಿದರು. ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವೀಸ್ ಅವರು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  

 

ದೇಶದ ಸ್ವಧರ್ಮ ಸ್ವರಾಜ್ ಮತ್ತು ಸ್ವಭಾಷೆಗೆ ಕೊಡುಗೆ ನೀಡಿದ ಛತ್ರಪತಿ ಶಿವಾಜಿ ಮಹಾರಾಜ್ ಅವರಿಗೆ ಶ್ರೀ ಅಮಿತ್ ಶಾ ಗೌರವ ನಮನ ಸಲ್ಲಿಸಿದರು. ಅವರು ಶಿವಾಜಿ ಜಯಂತಿಯ ದಿನವಾದ ಇಂದು ಶಿವಸೃಷ್ಟಿಯ ಮೊದಲನೇ ಹಂತ ಉದ್ಘಾಟನೆ ನಂತರ ಮಾತನಾಡಿ, ಈ ಪಾರ್ಕ್ ನಾಳೆಯಿಂದ ಸಾರ್ವಜನಿಕರ ಭೇಟಿಗೆ ಮುಕ್ತವಾಗಿರುತ್ತದೆ ಎಂದರು. ಇಂದು ಜಗತ್ತಿನ ಎಲ್ಲ ಜನರಿಗೆ ಐತಿಹಾಸಿಕ ದಿನವಾಗಿದೆ. ಅವರೆಲ್ಲರೂ ಶಿವಾಜಿಯ ಜೀವನದಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ. ದೇಶಾದ್ಯಂತ ಪ್ರವಾಸದ ಮೂಲಕ ಶಿವ ಶಹೀರ್ ಬಾಬಾ ಸಾಹೇಬ್ ಪುರಂದರೆ ಜಿ ಅವರು ಶಿವ ಚರಿತ್ರೆ ಸಂಪಾದಿಸಲು ಇಡೀ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ. ಇದರಿಂದಾಗಿ ಶಿವಾಜಿ ಮಹಾರಾಜರ ಶೌರ್ಯಗಾಥೆಗಳು ಜನಸಮೂಹವನ್ನು ತಲುಪುತ್ತವೆ. ಅವರ ಪ್ರಯತ್ನಗಳಿಂದಾಗಿ ಇಂದು ದೇಶದಲ್ಲಿ ಹೆಚ್ಚಿನ ಜನರಿಗೆ ಶಿವಾಜಿ ಮಹಾರಾಜ್ ಅವರ ಬಗ್ಗೆ ತಿಳಿಯುವಂತಾಗಿದೆ ಎಂದರು.  

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ನ ಪ್ರತಿಯೊಂದು ಜಿಲ್ಲೆಯಲ್ಲೂ “ಜನತಾ ರಾಜ” ಕಾರ್ಯಕ್ರಮವನ್ನು ಆಯೋಜಿಸುವಂತೆ ಬಾಬಾ ಸಾಹೇಬ್ ಅವರಲ್ಲಿ ಮನವಿ ಮಾಡಿದ್ದರು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಈ ಕಾರ್ಯಕ್ರಮ ವೀಕ್ಷಣೆ ನಂತರ ಯುವಕರು ಶಿವಾಜಿ ಮಹಾರಾಜ್ ಅವರ ಭಕ್ತಾದಿಗಳಾದರು. ಬಾಬಾ ಸಾಹೇಬ್ ಅವರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮತ್ತು ಅವರ ಕಾರ್ಯವನ್ನು ಮುಂದುವರಿಸಿಕೊಂಡು ಬರುತ್ತಿರುವ ಟ್ರಸ್ಟಿಗಳ ಪ್ರಯತ್ನಕ್ಕೆ ಶ್ರೀ ಅಮಿತ್ ಶಾ ಅಭಿನಂದಿಸಿದರು. ಶಿವಾಜಿ ಮಹಾರಾಜ್ ಅವರ ಜೀವನ ಸಂದೇಶಗಳು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಹಾಗೂ ದ್ವಾರಕದಿಂದ ಕಲ್ಕತ್ತಾದ ಗಂಗಾ ಸಾಗರದವರೆಗೆ ಇಂದಿಗೂ ಜನರಿಗೆ ಸ್ಫೂರ್ತಿ ನೀಡುವುದು ಮುಂದುವರಿದಿದೆ ಎಂದು ಅವರು ಹೇಳಿದರು. ಶಿವಾಜಿ ಮಹಾರಾಜರ ಜೀವನಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ಬಾಬಾ ಸಾಹೇಬ್  ಸಂಗ್ರಹಿಸಿದರು ಮತ್ತು ವಿಶ್ವದೆಲ್ಲೆಡೆಯಿಂದ ಅವರ ಕೃತಿಗಳನ್ನು ಸಂಗ್ರಹಿಸಿ, ಹೊಸ ಪೀಳಿಗೆಗೆ ಶಿವಾಜಿಯ ಐತಿಹಾಸಿಕ ವ್ಯಕ್ತಿತ್ವವನ್ನು ಸಿದ್ಧಪಡಿಸಿದರು. ಹಾಗಾಗಿ ಬಾಬಾ ಸಾಹೇಬ್ ಪುರಂದರೆ ಅವರ ಹೆಸರು ಶಿವ ಶಹೀರ್ ಬಾಬಾ ಸಾಹೇಬ್ ಪುರಂದರೆ ಎಂದು ಬದಲಾಯಿತು ಎಂದು ಅವರು ಹೇಳಿದರು. ಗೋವಾ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಾಮನ್ ಮತ್ತು ದಿಯು ವಿಮೋಚನಾ ಹೋರಾಟಕ್ಕೆ ಕೈಜೋಡಿಸುವ ಮೂಲಕ ಬಾಬಾ ಸಾಹೇಬ್ ಅವರು ಅವಿಸ್ಮರಣೀಯ ಕೊಡುಗೆಯನ್ನು ನೀಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 

  

ನಾಲ್ಕು ಹಂತಗಳ ‘ಶಿವಸೃಷ್ಟಿ’ಯ ಪಾರ್ಕ್ ನಲ್ಲಿ ಇಂದು ಮೊದಲ ಹಂತ ಪೂರ್ಣಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಸುಮಾರು 438 ಕೋಟಿ ರೂ.ಗಳ ಈ ಯೋಜನೆ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಲಿದೆ ಎಂದು ಶ್ರೀ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು. ಸುಮಾರು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊದಲ ಹಂತದಲ್ಲಿ ಶಿವಾಜಿ ಮಹಾರಾಜರ ಜೀವನಕ್ಕೆ ಸಂಬಂಧಿಸಿದ ಹಲವು ಘಟನೆಗಳನ್ನು ಸಂರಕ್ಷಿಸುವ ಪ್ರಯತ್ನ ನಡೆಸಲಾಗಿದೆ ಎಂದು ಅವರು ಹೇಳಿದರು. ಶಿವಾಜಿಯ ಕೋಟೆಗಳ ಇತಿಹಾಸ, ಶಿವಾಜಿಯ ಪಟ್ಟಾಭಿಷೇಕ ಹಾಗೂ ಆಗ್ರಾದಲ್ಲಿ ಮೊಘಲರ ಹಿಡಿತದಿಂದ ತಪ್ಪಿಸಿಕೊಂಡ ಘಟನೆ ಸೇರಿದಂತೆ  ಹಲವು ಪ್ರಮುಖ ಘಟನೆಗಳನ್ನು 3ಡಿಯಲ್ಲಿ ಸಂರಕ್ಷಿಸಲಾಗಿದೆ. ಈ ಸ್ಥಳಕ್ಕೆ ಭೇಟಿ ನೀಡುವ ಮೂಲಕ ದೇಶದ ಯುವ ಪೀಳಿಗೆ ಶಿವಾಜಿ ಮಹಾರಾಜರ ಜೀವನದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಬಹುದು ಮತ್ತು ಅವರು “ಸ್ವಧರ್ಮ ಮತ್ತು ‘ಸ್ವಭಾಷೆ’ಗೆ ಹೇಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು ಹಾಗೂ ಸ್ವರಾಜ್ಯಕ್ಕಾಗಿ ತ್ಯಾಗ ಮಾಡಲು ತಮ್ಮ ಇಚ್ಛಾಶಕ್ತಿ ತೋರಿದ್ದರ ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಎಂದರು. 1967ರ ಏಪ್ರಿಲ್ ನಲ್ಲಿ ಸತಾರಾದ ರಾಜಮಾತಾ ಸುಮಿತ್ರಾ ರಾಜೆ ಬೋನ್ಸ್ ಲೆ ಮತ್ತು ಶ್ರೀಮಂತ ಛತ್ರಪತಿ ಪ್ರತಾಪ್ ಸಿಂಗ್ ಮಹಾರಾಜ್ ಅವರ ಮಾರ್ಗದರ್ಶನದಲ್ಲಿ ಬಾಬಾ ಸಾಹೇಬ್ ಅವರು ಸತಾರಾದಲ್ಲಿ ಈ ‘ಪ್ರತಿಷ್ಠಾನವನ್ನು ಸ್ಥಾಪಿಸಿದರು. ಆನಂತರ ಬಾಬಾ ಸಾಹೇಬ್ ಅವರು ದೇಶಾದ್ಯಂತ ಶಿವಾಜಿ ಕುರಿತಂತೆ 12 ಸಾವಿರಕ್ಕೂ ಅಧಿಕ ಉಪನ್ಯಾಸಗಳನ್ನು ನೀಡಿದ್ದಾರೆ ಮತ್ತು 1200ಕ್ಕೂ ಅಧಿಕ ‘ಜನತಾ ರಾಜ’ ನಾಟಕಗಳನ್ನು ಪ್ರದರ್ಶಿಸಿ ದೇಶಾದ್ಯಂತ ಶಿವಾಜಿ ಅವರ ಸಂದೇಶಗಳನ್ನು ಪಸರಿಸಿದ್ದಾರೆ ಎಂದರು.  

 

 ಏಷ್ಯಾದಲ್ಲಿ ಐತಿಹಾಸಿಕ ಥೀಮ್ ಪಾರ್ಕ್ ಗಳ ಪರಿಕಲ್ಪನೆ ವಿರಳವಾಗಿರುವುದರಿಂದ ಅಂಬೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಶಿವಶ್ರಿಷ್ಟಿ ಏಷ್ಯಾ ಪ್ರಾಂತ್ಯದ ಭವ್ಯ ಥೀಮ್ ಪಾರ್ಕ್ ಆಗಲಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಇಲ್ಲಿ ಐತಿಹಾಸಿಕ ಸಂಗತಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗಿದೆ ಮತ್ತು ಸಂರಕ್ಷಿಸಲಾಗಿದೆ, ಇದು ಶ್ಲಾಘನೀಯ ಕಾರ್ಯ ಎಂದರು, ಶಿವಸೃಷ್ಟಿಯ ನಿರ್ಮಾಣದಲ್ಲಿ ತಂತ್ರಜ್ಞಾನ ಮತ್ತು ಇತಿಹಾಸವನ್ನು ಅದ್ಭುತ ರೀತಿಯಲ್ಲಿ ಸಂಯೋಜಿಸಲಾಗಿದೆ. ಹಾಲೋಗ್ರಫಿ ಪ್ರಾಜೆಕ್ಟ್ ಮ್ಯಾಪಿಂಗ್, ಮಿನಿಯೇಚರ್ ಮೋಷನ್, ಸಿವಿಲೇಷನ್, 3ಡಿ-4ಡಿ ತಂತ್ರಜ್ಞಾನ ಹಾಗೂ ಧ್ವನಿ ಮತ್ತು ಬೆಳಕು ತಂತ್ರಜ್ಞಾನಗಳ ಸಂಯೋಜನೆ ಮೂಲಕ ಇತಿಹಾಸವನ್ನು ಜೀವಂತವಾಗಿ ತೋರಿಸಲು ಪ್ರಯತ್ನಿಸಲಾಗಿದೆ. ಇದರಿಂದ ಮಹಾರಾಷ್ಟ್ರದ ಮಾತ್ರ ಇಡೀ ದೇಶದ ಯುವಜನತೆಗೆ ಶಿವಾಜಿ ಮಹಾರಾಜರ ಸಂದೇಶ ಖಂಡಿತಾ ತಲುಪುತ್ತದೆ. ಈ ಸ್ಥಳ ಜಗತ್ತಿನ ಎಲ್ಲ ಇತಿಹಾಸಕಾರರಿಗೆ ಒಂದು ಪ್ರಮುಖ ಸ್ಥಳವಾಗಲಿದೆ ಎಂದರು. ಶಿವಾಜಿ ಮಹಾರಾಜರ ಜೀವನವು ಅಧಿಕಾರದ ಹಂಬಲದಿಂದ ಪ್ರೇರಿತವಾಗಿಲ್ಲ, ಆದರೆ ನೂರು ವರ್ಷಗಳಿಗೂ ಅಧಿಕ ಕಾಲ ನಡೆದ ದೌರ್ಜನ್ಯಗಳ ವಿರುದ್ಧದ ಹೋರಾಟದಿಂದ ಪ್ರೇರಿತವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿವಾಜಿ ಮಹಾರಾಜರು ಸ್ವಧರ್ಮ, ಸ್ವಭಾಷಾ ಮತ್ತು ಸ್ವರಾಜ್ಯ ಸ್ಥಾಪನೆಗಾಗಿ ಹೋರಾಡಿದರು. ಭಾರತವನ್ನು ದಮನಮಾಡಲು ಯಾರಿಂದಲೂ ಸಾಧ್ಯವಿಲ್ಲ, ಇಲ್ಲಿನ ಜನರನ್ನು ಅಪಮಾನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದರು. ಶಿವಾಜಿ ಮಹಾರಾಜರ ಈ ಸಂದೇಶವು 1857ರ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಪ್ರಚಲಿತವಾಗಿತ್ತು. ಸ್ವರಾಜ್ಯಕ್ಕಾಗಿ ನಡೆದ ಸಣ್ಣ ಯುದ್ಧದಿಂದ ಆರಂಭಿಸಿ, ಶಿವಾಜಿ ಮಹಾರಾಜರು ತಮ್ಮ 50ನೇ ವಯಸ್ಸಿನಲ್ಲಿ ಬೃಹತ್ ಸಾಮ್ರಾಜ್ಯದ ಛತ್ರಪತಿಯಾದರು. 1680ರ ನಂತರವೂ ಶಿವಾಜಿಯ ಈ ಹೋರಾಟದ ಪ್ರಯಾಣ ನಿಲ್ಲಲಿಲ್ಲ. ಅವನ ನಂತರ, ಅನೇಕ ಛತ್ರಪತಿಗಳು ಮತ್ತು ಪೇಶ್ವೆಗಳು ಬಂದರು ಮತ್ತು ಅವರು ಈ ಸಂಪ್ರದಾಯವನ್ನು 1818 ರವರೆಗೆ ಮುಂದುವರೆಸಿದರು

ಶಿವಾಜಿ ಮಹಾರಾಜರ ಸ್ವರಾಜ್ ಪಯಣ ಅಟ್ಟಾಕ್ ನಿಂದ ಕಟಕ್ ವರೆಗೆ ಮತ್ತು ಗುಜರಾತ್ ನಿಂದ ಬಂಗಾಳದವರೆಗೆ ತಲುಪಿತ್ತು, ಅದು ಇಡೀ ಭಾರತದಲ್ಲಿ ಸ್ವಾತಂತ್ರ್ಯದ ಪ್ರಜ್ಞೆಯನ್ನು ಜಾಗೃತಗೊಳಿಸುವ ಕೆಲಸ ಮಾಡಿತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಶಿವಾಜಿ ಮಹಾರಾಜರು ಆರಂಭಿಸಿದ ಸ್ವರಾಜ್ ಹೋರಾಟ ಇಂದಿಗೂ ಮುಂದುವರಿದಿದೆ ಎಂದು ಅವರು ಹೇಳಿದರು. ಅವರ ಸ್ವರಾಜ್, ಸ್ವಧರ್ಮ ಮತ್ತಯ ಸ್ವಭಾಷೆ ಅವರ ಪ್ರತಿಯೊಂದು ಕಾರ್ಯಗಳಲ್ಲೂ ಪ್ರತಿಫಲನಗೊಂಡವು. ಅವರು ಪಂಚಾಂಗವನ್ನು ಶುದ್ಧೀಕರಿಸಿದರು ಮತ್ತು ಮಾತೃಭಾಷೆಗೆ ಅಧಿಕೃತ ನಿಂಘಟು ಸಿದ್ಧಪಡಿಸಿದರು ಮತ್ತು ಸಪ್ತಕೋಟೇಶ್ವರ ದೇವಾಲಯವನ್ನು ನಿರ್ಮಿಸಿದರು ಮತ್ತು  ಹಲವು ದೇವಾಲಯಗಳಲ್ಲಿ ದೊಡ್ಡ ಬಾಗಿಲುಗಳನ್ನು ನಿರ್ಮಿಸಿದರು. ಇದರಿಂದ ಹಲವು ದೇವಾಲಯಗಳ ಮರು ನಿರ್ಮಾಣ ಕಾರ್ಯ ಆರಂಭವಾಯಿತು. ಶಿವಾಜಿ ಮಹಾರಾಜರ ಪರಂಪರೆಯನ್ನು ಮುಂದುವರಿಸುತ್ತಾ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ನವೀಕರಣ ಕಾರ್ಯ ಕೈಗೊಂಡಿದ್ದಾರೆ ಎಂದು ಶ್ರೀ ಅಮಿತ್ ಶಾ ಹೇಳಿದರು. 

ಶಿವಾಜಿ ಮಹಾರಾಜರ ಸ್ವರಾಜ್ ಧ್ಯೇಯ ಅತ್ಯಂತ ಸ್ಪಷ್ಟವಾಗಿತ್ತು ಎಂದು ಶ್ರೀ ಅಮಿತ್ ಶಾ ಹೇಳಿದರು. ಭಾರತೀಯ ಆಡಳಿತ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಶಿವಾಜಿ ಮಹಾರಾಜ್ ಅವರ ಅಷ್ಟಪ್ರಧಾನ ಮಂಡಲ ಕಲ್ಪನೆಯನ್ನು ಆಧರಿಸಿ, ಆಡಳಿತ ನಿಯಮಗಳನ್ನು ರೂಪಿಸಲಾಗಿದೆ. ಹಲವು ಯುದ್ಧಗಳಲ್ಲಿ ಶಿವಾಜಿ ಮಹಾರಾಜರು ಅಪ್ರತಿಮ ಶೌರ್ಯವನ್ನು ಪ್ರದರ್ಶಿಸಿದ್ದರು. ಕೆಲವೇ ಕೆಲವು ಸ್ವರಾಜ್ಯ ಹೋರಾಟಗಾರರು ಮಾತ್ರ ಮುಂದೆ ನಿಂತು ಸ್ವರಾಜ್ಯಕ್ಕಾಗಿ ಹೋರಾಡಿದ್ದರು. ಶಿವಾಜಿ ಮಹಾರಾಜರು ಆಗ್ರಾದ ಮೊಘಲ್ ದರ್ಬಾರಿಗೆ ತೆರಳಿ, ಶಾಂತಿಗಾಗಿ ಮನವಿ ಸಲ್ಲಿಸದ್ದರು. ಆದರೆ ಔರಂಗಜೇಬ್, ಹಿಂದ್ ಸ್ವರಾಜ್ ಗೆ ಅಪಮಾನ ಮಾಡಿದ್ದನ್ನು ಶಿವಾಜಿ ಬಲವಾಗಿ ವಿರೋಧಿಸಿದ್ದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿವಾಜಿ ಮಹಾರಾಜರನ್ನು ಸೆರೆಹಿಡಿದು, ಜೈಲಿನಲ್ಲಿಡಲಾಗಿತ್ತು. ಆದರೆ ಅವರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಹೇಳಿದರು. 

ಶಿವ ಮುದ್ರದ ಕೊನೆಯ ಸಾಲಿನಲ್ಲಿ “ಈ ಮುದ್ರಾ (ಕರೆನ್ಸಿ)ಇದನ್ನು ಸಾರ್ವಜನಿಕ ಕಲ್ಯಾಣಕ್ಕೆ ಬಳಸಬೇಕು” ಎಂದು ಉಲ್ಲೇಖವಾಗಿದೆ. ಇದರ ಸಂಕೇತ ರಾಜ್ಯ ಸಾರ್ವಜನಿಕ ಕಲ್ಯಾಣದ ಉದ್ದೇಶವೇ ಹೊರತು, ಸ್ವಂತ ಬಳಕೆಗಲ್ಲ ಎಂಬುದಾಗಿತ್ತು ಎಂದು ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ನಿಸ್ವಾರ್ಥ ರಾಜ ಹೇಗಿರಬೇಕು ಮತ್ತು ದೊರೆ ರಾಜ್ಯದ ಸಂಪತ್ತನ್ನು ಎಂದಿಗೂ ತಮ್ಮ ಸ್ವಂತಕ್ಕೆ ಬಳಸಬಾರದು ಎಂಬುದಕ್ಕೆ ತಮ್ಮ ಕ್ರಿಯೆಗಳ ಮೂಲಕ ಶಿವಾಜಿ ಮಹಾರಾಜರು ಇಡೀ ವಿಶ್ವಕ್ಕೆ ಮಾದರಿ ರಾಜರಾಗಿದ್ದರು. ಶಿವಾಜಿ ಮಹಾರಾಜರು ಜನರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದಲ್ಲಿ ಗ್ರಾಮ ಆಧರಿತ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ್ದರು ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿವಾಜಿ ಮಹಾರಾಜರ ಕಾಲದಲ್ಲಿ ಬ್ರಿಟೀಷರು ಅದಾಗಲೇ ದೇಶಕ್ಕೆ ಆಗಮಿಸಿದ್ದರು ಎಂದರು. ಪಶ್ವಿಮ ಕರಾವಳಿಯನ್ನು ಬ್ರಿಟೀಷರಿಂದ ರಕ್ಷಿಸಲು ಶಿವಾಜಿ ನೌಕಾಪಡೆಯನ್ನು ಸ್ಥಾಪಿಸಿದ್ದರು. ಶಿವಾಜಿ ಅವರು ಬಹುದೊಡ್ಡ ಸಂಖ್ಯೆಯ ಜನರ ಸೇನೆಯನ್ನು ಕಟ್ಟಿ, ಸ್ವರಾಜ್ಯಕ್ಕಾಗಿ ಹೋರಾಡಿದ್ದರು. ಆ ಸೇನೆ ಮೊಘಲ್ ರಾಜ್ಯಕ್ಕೆ ಸ್ಪರ್ಧೆಯೊಡ್ಡಿತ್ತು ಮತ್ತು 1771ರಲ್ಲಿ ಮಹಾರಾಜ್ ಜಿ ಸಿಂಧಿಯಾ ಅವರ ನಾಯಕತ್ವದಲ್ಲಿ ದೆಹಲಿಯನ್ನು ವಶಪಡಿಸಿಕೊಂಡಿತ್ತು ಹಾಗೂ ಅವರ ಸಾಮ್ರಾಜ್ಯ ಅಟೋಕ್ ನಿಂದ ಕಟಕ್ ವರೆಗೆ ವಿಸ್ತರಣೆಯಾಗಿತ್ತು.  

 

ಶಿವಾಜಿ ಜಯಂತಿಯ ದಿನವಾದ ಭವ್ಯ ಶಿವಸೃಷ್ಠಿಯ ಮೊದಲನೇ ಹಂತ ಮುಕ್ತಾಯಗೊಂಡಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಶಿವಸೃಷ್ಠಿಯ ನಾಲ್ಕು ಹಂತಗಳು ಪೂರ್ಣಗೊಂಡ ಬಳಿಕ ಶಿವಾಜಿ ಅವರ ಯಶೋಗಾಥೆ ಇಡೀ ವಿಶ್ವದ ಮುಂದೆ ಹೆಮ್ಮೆಯಿಂದ ಪ್ರದರ್ಶಿಸಲಾಗುವುದು. ಶಿವಾಜಿಯ ಚಿಂತನೆಗಳಲ್ಲಿ ನಂಬಿಕೆ ಇರುವ ಹಲವು ಜನರು ಶಿವಸೃಷ್ಠಿಯನ್ನು ಬೆಂಬಲಿಸುತ್ತಾರೆ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಅವರು ಭಾರತವನ್ನು ತನ್ನ ಹಳೆಯ ವೈಭವದತ್ತ ಕೊಂಡೊಯ್ಯುತ್ತಾರೆ ಎಂದರು. ದೇಶ ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತವನ್ನು ಪ್ರತಿಯೊಂದು ವಲಯದಲ್ಲೂ ಇಡೀ ವಿಶ್ವದಲ್ಲೇ ಮೊದಲನೇ ಸ್ಥಾನದಲ್ಲಿರುವಂತೆ ಮಾಡುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೀಡಿರುವ ಗುರಿಯನ್ನು ಖಂಡಿತ ಸಾಧಿಸುತ್ತೇವೆ ಎಂದು ಅವರು ಹೇಳಿದರು. 


****



(Release ID: 1900707) Visitor Counter : 224


Read this release in: English , Urdu , Marathi , Tamil