ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಅಹ್ಮದಾಬಾದ್ ನ ಅರ್ಬನ್-20 ಸಿಟಿ ಶೆರ್ಪಾ ಸಭೆಯ ಮುಖ್ಯಾಂಶಗಳು

Posted On: 10 FEB 2023 7:06PM by PIB Bengaluru

ಅರ್ಬನ್-20 (ಯು-20) ಎಂಬುದು ಜಿ-20ಯ ಅಡಿಯಲ್ಲಿನ, ಜಿ-20 ದೇಶಗಳ ನಗರ ಶೆರ್ಪಾಗಳು, ಮೇಯರ್ ಗಳು ಮತ್ತು ಪ್ರತಿನಿಧಿಗಳನ್ನು ಒಟ್ಟುಗೂಡಿಸಿ ನಗರದ ಪ್ರಮುಖ ಸವಾಲುಗಳನ್ನು ಸಾಮೂಹಿಕವಾಗಿ ಚರ್ಚಿಸಿ, ಜಿ-20ರ ಮಾತುಕತೆಗಳಿಗೆ ಮಾಹಿತಿ ನೀಡುವ ಎಂಗೇಜ್ಮೆಂಟ್ ಗ್ರೂಪ್ ಆಗಿದೆ. ಆರನೇ ಅರ್ಬನ್-20 ಆವರ್ತನದ ಆರಂಭಿಕ ಸಭೆ ಸಿಟಿ ಶೆರ್ಪಾ ಮೀಟಿಂಗ್ ಆಗಿದ್ದು, ಇದನ್ನು ಫೆಬ್ರವರಿ 9, 2023ರಂದು ಅಹಮದಾಬಾದ್ ನಲ್ಲಿ ಉದ್ಘಾಟಿಸಲಾಯಿತು. ಅಹ್ಮದಾಬಾದ್ ಅರ್ಬನ್-20ರ ಚೇರ್ ಸಿಟಿಯಾಗಿದೆ. 

2023ರ ಫೆಬ್ರವರಿ 9 ಮತ್ತು 10ರಂದು ಅಹಮದಾಬಾದ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 40 ನಗರಗಳಿಂದ 70ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವೀಕ್ಷಕ ನಗರಗಳಿಂದ 200ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು, ಅರ್ಬನ್-20ರ ಸಂಚಾಲಕರು, ಜಿ-20ರ ವಿವಿಧ ಕಾರ್ಯ ಗುಂಪುಗಳು ಮತ್ತು ಎಂಗೇಜ್ಮೆಂಟ್ ಗುಂಪುಗಳ ಪ್ರತಿನಿಧಿಗಳು, ಸರ್ಕಾರದ ಹಿರಿಯ ಅಧಿಕಾರಿಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಮತ್ತು ಇತರ ಆಹ್ವಾನಿತ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಅರ್ಬನ್-20 ಸಿಟಿ ಶೆರ್ಪಾ ಸಭೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

i. ಅರ್ಬನ್-20 ಇನ್ಸೆಪ್ಷನ್ ಸಭೆಯಲ್ಲಿ ಪ್ರಪಂಚದಾದ್ಯಂತದ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.

ii. ಸಿಟಿ ಶೆರ್ಪಾ ಸಭೆಯಲ್ಲಿ 42 ನಗರಗಳ ಪ್ರತಿನಿಧಿಗಳು ಮತ್ತು ಶೆರ್ಪಾಗಳು ಭಾಗವಹಿಸಿದ್ದರು, ಇದು ಅರ್ಬನ್-20ರ ಎಂಗೇಜ್ಮೆಂಟ್ ಗ್ರೂಪ್ ಪ್ರಾರಂಭವಾದಾಗಿನಿಂದ ಅರ್ಬನ್-20ರಲ್ಲಿ ಭಾಗವಹಿಸುವ ಮತ್ತು ವೀಕ್ಷಕ ನಗರಗಳಿಂದ ದಾಖಲಾದ ಅತಿದೊಡ್ಡ ಭಾಗವಹಿಸುವಿಕೆಯಾಗಿದೆ.

iii. ಉದ್ಘಾಟನಾ ಸಮಾರಂಭದಲ್ಲಿ ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರದ ಹಿರಿಯ ಗಣ್ಯರು ಭಾಗವಹಿಸಿದ್ದರು.

iv. ತಮ್ಮ ಉದ್ಘಾಟನಾ ಭಾಷಣದಲ್ಲಿ, ಜಿ-20ರ ಶೆರ್ಪಾ, ಶ್ರೀ ಅಮಿತಾಭ್ ಕಾಂತ್ ಅವರು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಸುಸ್ಥಿರ ನಗರೀಕರಣದ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಯೋಜಿತ ಮತ್ತು ವೈಜ್ಞಾನಿಕವಾಗಿ ಚಾಲಿತ ಬೆಳವಣಿಗೆಯ ಅಗತ್ಯವನ್ನು ಒತ್ತಿ ಹೇಳಿದರು. ನಗರಗಳನ್ನು ಜಾಗತೀಕರಣಗೊಳಿಸುವ, ಡಿಕಾರ್ಬನೈಸ್ ಮಾಡುವ ಮತ್ತು ಡಿಜಿಟಲೀಕರಣಗೊಳಿಸುವತ್ತ ಗಮನ ಹರಿಸುವ ವಿಶ್ವದ ರಾಯಭಾರಿಗಳಾಗುವಂತೆ ನೆರೆದಿದ್ದ ಎಲ್ಲ ಪ್ರತಿನಿಧಿಗಳಿಗೆ ಅವರು ಕರೆ ನೀಡಿದರು. ಜಿ-20ರ ನಾಯಕರು ಪರಿಗಣಿಸಬಹುದಾದ ಸ್ಪಷ್ಟ, ನಿಖರ ಮತ್ತು ಕ್ರಿಯಾತ್ಮಕ ಶಿಫಾರಸುಗಳನ್ನು ಒದಗಿಸುವಂತೆ ಅವರು ಅರ್ಬನ್-20 ಎಂಗೇಜ್ಮೆಂಟ್ ಗುಂಪನ್ನು ಒತ್ತಾಯಿಸಿದರು. ಪರಿಣಾಮಕಾರಿ ಪರಿವರ್ತನೆಯನ್ನು ತರುವಲ್ಲಿ ನಗರಗಳ ಮಹತ್ವವನ್ನು ಜಿ-20ರ ಕಾರ್ಯಸೂಚಿ ಖಂಡಿತವಾಗಿಯೂ ಪ್ರತಿಬಿಂಬಿಸುತ್ತದೆ ಎಂದು ಅವರು ಭರವಸೆ ನೀಡಿದರು.

v. ಭಾರತ ಸರ್ಕಾರದ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರು ತಮ್ಮ ವರ್ಚುವಲ್ ಭಾಷಣದಲ್ಲಿ ಜಾಗತಿಕ ಆಡಳಿತದ ಪ್ರಮುಖ ವಿಷಯಗಳ ಕುರಿತು ಸಂವಾದ ಮತ್ತು ಕ್ರಮವನ್ನು ಮುನ್ನಡೆಸುವಲ್ಲಿ ಭಾರತದ ಪಾತ್ರವನ್ನು ಎತ್ತಿ ಹಿಡಿದರು. ಅರ್ಬನ್-20ರ ಗುಂಪನ್ನು ಜಾಗತಿಕ ಸಮಾನಮನಸ್ಕ ಕಲಿಕೆಗೆ ಒಂದು ಅವಕಾಶವೆಂದು ಪರಿಗಣಿಸಿ, ಜಿ 20ರ ಕಾರ್ಯಸೂಚಿಯನ್ನು ಮುನ್ನಡೆಸಬಲ್ಲ ದೂರದೃಷ್ಟಿಯ ಮಾರ್ಗಸೂಚಿಯನ್ನು ರಚಿಸಲು ನೆರವಾಗುವುದನ್ನು ಅವರು ಪ್ರತಿಪಾದಿಸಿದರು.

vi. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಅವರು ಶೆರ್ಪಾ ಸಭೆಯ ಮಹತ್ವವನ್ನು ಮತ್ತು ಜಿ-20ರ ನಾಯಕರಿಗೆ ತಾವು ನೀಡಲು ಬಯಸುವ ಪ್ರಮುಖ ಆದ್ಯತೆಗಳ ಬಗ್ಗೆ ಚರ್ಚಿಸಿ ತಮ್ಮ ಜಂಟಿ ನಿಲುವನ್ನು ಅಭಿವೃದ್ಧಿಪಡಿಸುವುದನ್ನು ಅವರು ಒತ್ತಿ ಹೇಳಿದರು.

vii. ಎಂ.ಓ.ಎಚ್.ಯು.ಎ. ಕಾರ್ಯದರ್ಶಿ ಶ್ರೀ ಮನೋಜ್ ಜೋಶಿಯವರು ನಗರ ಯೋಜನಾ ಚೌಕಟ್ಟುಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿ, ಸುಸ್ಥಿರ ಸಾರ್ವಜನಿಕ ಸಾರಿಗೆ, ಹವಾಮಾನ ಬದಲಾವಣೆ ಪರಿವರ್ತನೆಗಳು ಮತ್ತು ಸುಸ್ಥಿರ ನೀರು ಮತ್ತು ತ್ಯಾಜ್ಯ ನಿರ್ವಹಣೆಗೆ ಮೂಲಸೌಕರ್ಯದ ಹಣಕಾಸು ಅಗತ್ಯವನ್ನು ಒತ್ತಿ ಹೇಳಿದರು.

viii. ಹಣಕಾಸು ಮೂಲಸೌಕರ್ಯ, ವಿಪತ್ತು ಹೊಂದಾಣಿಕೆ ಸುಧಾರಣೆ, ಮತ್ತು ನಗರಗಳಲ್ಲಿ ಡಿಜಿಟಲ್ ಆಡಳಿತವನ್ನು ಮುಖ್ಯವಾಹಿನಿಗೆ ತರುವ ಸಂಭಾವ್ಯ ಕ್ಷೇತ್ರಗಳ ಬಗ್ಗೆ ಮೂರು ಜಿ-20ರ ಕಾರ್ಯಕಾರಿ ಗುಂಪುಗಳ ಅಧ್ಯಕ್ಷರು ಚರ್ಚಿಸಿದರು. ಅವರುಗಳೆಂದರೆ ಮೂಲಸೌಕರ್ಯ ಕಾರ್ಯಕಾರಿ ಗುಂಪು, ವಿಪತ್ತುಗಳ ಅಪಾಯವನ್ನು ತಗ್ಗಿಸುವ ಕಾರ್ಯಕಾರಿ ಗುಂಪು ಮತ್ತು ಡಿಜಿಟಲ್ ಆರ್ಥಿಕ ಕಾರ್ಯಕಾರಿ ಗುಂಪು.

ix. ಅರ್ಬನ್-20 ಮತ್ತು ಜಿ-20ರ ಇತರ ತೊಡಗಿಸಿಕೊಳ್ಳುವಿಕೆಯ ಗುಂಪುಗಳ ನಡುವಿನ ಒಮ್ಮತದ ಕ್ಷೇತ್ರಗಳಾದ, ವಿಶೇಷವಾಗಿ ಯುವಕರನ್ನು ತೊಡಗಿಸಿಕೊಳ್ಳುವಲ್ಲಿ ಮತ್ತು ಅವರಿಗೆ ಅವಕಾಶಗಳನ್ನು ಸೃಷ್ಟಿಸುವಲ್ಲಿ ನಗರಗಳು ವಹಿಸಬಹುದಾದ ಪಾತ್ರ, ದೃಢವಾದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಸುಗಮಗೊಳಿಸುವುದು ಮತ್ತು ಪರಿಸರ, ಹವಾಮಾನ ಹಣಕಾಸು, ನೀರಿನ ಭದ್ರತೆ ಮತ್ತು ಡಿಜಿಟಲ್ ಆಡಳಿತ ಕ್ಷೇತ್ರಗಳಲ್ಲಿ ನವೀನ ಕಾರ್ಯತಂತ್ರಗಳನ್ನು ಉತ್ತೇಜಿಸುವ ಬಗ್ಗೆ ಸ್ಟಾರ್ಟ್ ಅಪ್-20ರ ಅಧ್ಯಕ್ಷರು ಮತ್ತು ಯೂತ್-20ರ ಮತ್ತು ಥಿಂಕ್-20ರ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು.

x. ಅಹ್ಮದಾಬಾದ್ ನಗರದ ಶೆರ್ಪಾ ಶ್ರೀ ಪ್ರವೀಣ್ ಚೌಧರಿ ಅವರು ಚೇರ್ ಸಿಟಿ ಪ್ರಸ್ತಾಪಿಸಿದ ಆರು ಆದ್ಯತೆಯ ಕ್ಷೇತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಶೂನ್ಯ ಕರಡು ಪ್ರಕಟಣೆಯ ಬಗ್ಗೆಯೂ ಚರ್ಚಿಸಿದರು. ಹಿಂದಿನ ಅರ್ಬನ್-20 ಆವರ್ತನಗಳ ಅಡಿಯಲ್ಲಿ ಮಾಡಿದ ಕೆಲಸವನ್ನು ಸಮ್ಮತಿಸಿ, ಆರನೇ ಆವರ್ತನದಲ್ಲಿ 'ಉದ್ದೇಶದಿಂದ ಕ್ರಿಯೆಗೆ' ಚಲಿಸುವ ಅಗತ್ಯವನ್ನು ಒತ್ತಿ ಹೇಳಿದರು.

xi. ಆದ್ಯತೆಯ ಕ್ಷೇತ್ರಗಳೆಂದರೆ (i) ಪರಿಸರಾತ್ಮಕ ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರೋತ್ಸಾಹಿಸುವುದು, (ii) ನೀರಿನ ಸುರಕ್ಷತೆಯನ್ನು ಖಚಿತಪಡಿಸುವುದು, (iii) ಹವಾಮಾನ ಹಣಕಾಸಿನ ವೇಗವರ್ಧನೆ, (iv) 'ಸ್ಥಳೀಯ' ಗುರುತನ್ನು ಎತ್ತಿಹಿಡಿಯುವುದು, (v) ನಗರ ಆಡಳಿತ ಮತ್ತು ಯೋಜನೆಗಾಗಿ ಚೌಕಟ್ಟುಗಳನ್ನು ಮರುಶೋಧಿಸುವುದು ಮತ್ತು (vi) ಡಿಜಿಟಲ್ ನಗರ ಭವಿಷ್ಯವನ್ನು ವೇಗವರ್ಧಿಸುವುದು.

xii. ವಿವಿಧ ವಿಭಾಗಗಳಲ್ಲಿ ಭಾಗವಹಿಸುವ ಮತ್ತು ವೀಕ್ಷಕ ನಗರದ ಪ್ರತಿನಿಧಿಗಳು, ಅಧ್ಯಕ್ಷ ನಗರವಾದ ಅಹ್ಮದಾಬಾದ್ ಪ್ರಸ್ತಾಪಿಸಿದ ಆರು ಆದ್ಯತೆಯ ಕ್ಷೇತ್ರಗಳ ಬಗ್ಗೆ ಚರ್ಚಿಸಿದರು. ನಗರದ ಶೆರ್ಪಾಗಳು ಆ ಎಲ್ಲಾ ಆರು ಆದ್ಯತೆಯ ಪ್ರದೇಶಗಳಿಗೆ ಅಪಾರ ಬೆಂಬಲವನ್ನು ವ್ಯಕ್ತಪಡಿಸಿ, ಅರ್ಬನ್-20ರ ಪ್ರಾರಂಭದ ಸಭೆಯಲ್ಲಿ ಸಹಯೋಗದ ಕಾರ್ಯಸೂಚಿಯನ್ನು ಮುಂದಕ್ಕೆ ತೆಗೆದುಕೊಳ್ಳುವಲ್ಲಿ ಒಗ್ಗಟ್ಟನ್ನು ವ್ಯಕ್ತಪಡಿಸಿದರು.

xiii. ಅಹ್ಮದಾಬಾದ್ ಮತ್ತು ಗುಜರಾತ್ ನ ಇತರ ನಗರಗಳಲ್ಲಿ ಜಾರಿಗೆ ತರಲಾದ ಹಲವಾರು ನವೀನ ಉಪಕ್ರಮಗಳನ್ನು ಗುಜರಾತ್ ಸರ್ಕಾರದ ಹಿರಿಯ ಅಧಿಕಾರಿಗಳು, ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ನ ಹಿರಿಯ ಅಧಿಕಾರಿಗಳು ಮತ್ತು ಹಿರಿಯ ವಿಷಯ ತಜ್ಞರು ಈ ಸಂದರ್ಭದಲ್ಲಿ ಹಂಚಿಕೊಂಡರು. ಇವುಗಳಲ್ಲಿ ಸಾಬರಮತಿ ನದಿಯ ಮುಂಭಾಗದ ಅಭಿವೃದ್ಧಿ, ಕೈಗೆಟುಕುವ ವಸತಿ ಉಪಕ್ರಮಗಳು, ಬಿಆರ್ ಟಿಎಸ್ ಮತ್ತು ಮೆಟ್ರೋ ರೈಲು, ಪಾರಂಪರಿಕ ನಿರ್ವಹಣೆ ಇತ್ಯಾದಿಗಳು ಸೇರಿವೆ.

xiv. ಪ್ರಮುಖ ಮೈಲಿಗಲ್ಲುಗಳನ್ನು ಹೊಂದಿರುವ ಅರ್ಬನ್-20ರ ಆವರ್ತನದಲ್ಲಿ ಯೋಜನೆಯನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಾಯಿತು. ಜಿ-20ರ ನಾಯಕರಿಗೆ ಅಂತಿಮ ಪ್ರಕಟಣೆಯನ್ನು ಪ್ರಸ್ತುತಪಡಿಸುವ ಮೇಯರ್ ಶೃಂಗಸಭೆ 2023ರ ಜುಲೈ 7 ಮತ್ತು 8ರಂದು ನಡೆಯಲಿದೆ ಎಂದು ಚೇರ್ ಸಿಟಿ ಘೋಷಿಸಿತು.

***



(Release ID: 1898162) Visitor Counter : 179


Read this release in: English , Urdu , Hindi , Gujarati