ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಭಾರತದಿಂದ ಮಾಹಿತಿ ತಂತ್ರಜ್ಞಾನ ರಫ್ತು

Posted On: 08 FEB 2023 1:46PM by PIB Bengaluru

`ನ್ಯಾಷನಲ್ ಅಸೋಸಿಯೇಷನ್ ಆಫ್ ಸಾಫ್ಟ್‌ವೇರ್‌ ಆಂಡ್ ಸರ್ವಿಸ್ ಕಂಪನೀಸ್ʼ(ನಾಸ್ಕಾಮ್) ಒದಗಿಸಿದ ಮಾಹಿತಿಯ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ದೇಶದಿಂದ ಒಟ್ಟು ಐಟಿ ರಫ್ತು ಪ್ರಮಾಣ ಈ ಕೆಳಗಿನಂತಿದೆ:

ಹಣಕಾಸು ವರ್ಷ 2019-20

150 ಶತಕೋಟಿ ಡಾಲರ್‌  

ಹಣಕಾಸು ವರ್ಷ 2020-21  

 151 ಶತಕೋಟಿ ಡಾಲರ್‌

ಹಣಕಾಸು ವರ್ಷ 2021-22

178 ಶತಕೋಟಿ ಡಾಲರ್‌  

ದೇಶದಿಂದ ಮಾಹಿತಿ ತಂತ್ರಜ್ಞಾನ ರಫ್ತನ್ನು ಹೆಚ್ಚಿಸಲು ಸರ್ಕಾರವು ಈ ಕೆಳಗಿನಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ:

ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿ) ಯೋಜನೆ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿನ ಸ್ವಾಯತ್ತ ಸಂಸ್ಥೆಯಾದ ʻಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾʼ(ಎಸ್‌ಟಿಪಿಐ), ʻಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾʼ(ಎಸ್‌ಟಿಪಿ) ಯೋಜನೆಯನ್ನು ಜಾರಿಗೆ ತರುತ್ತಿದೆ.  ಇದೊಂದು 100% ರಫ್ತು ಆಧಾರಿತ ಯೋಜನೆಯಾಗಿದೆ. ಕಂಪ್ಯೂಟರ್ ಸಾಫ್ಟ್‌ವೇರ್‌ ಅಭಿವೃದ್ಧಿ ಮತ್ತು ರಫ್ತಿನ ಜೊತೆಗೆ ಸಂವಹನ ಲಿಂಕ್‌ಗಳು ಅಥವಾ ಭೌತಿಕ ಮಾಧ್ಯಮವನ್ನು ಬಳಸಿಕೊಂಡು ವೃತ್ತಿಪರ ಸೇವೆಗಳ ರಫ್ತನ್ನು ಇದು ಗುರಿಯಾಗಿಸಿಕೊಂಡಿದೆ. ʻಎಸ್‌ಟಿಪಿಐʼನಲ್ಲಿ ನೋಂದಾಯಿತಗೊಂಡ ಐಟಿ / ಐಟಿ ಆಧರಿತ ಸೇವಾ ಕಂಪನಿಗಳ(ಐಟಿಇಎಸ್) ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಇದು 80.3 ಶತಕೋಟಿ ಡಾಲರ್ಗೆ ತಲುಪಿದೆ. 

ವಿಶೇಷ ಆರ್ಥಿಕ ವಲಯಗಳು (ಎಸ್ಇಝಡ್‌):  ಸರಕು ಮತ್ತು ಸೇವೆಗಳ ರಫ್ತನ್ನು ಉತ್ತೇಜಿಸಲು, ಉದ್ಯೋಗಾವಕಾಶಗಳ ಸೃಷ್ಟಿ ಮತ್ತು ಹೆಚ್ಚುವರಿ ಆರ್ಥಿಕ ಚಟುವಟಿಕೆಗಳ ಸೃಷ್ಟಿಗಾಗಿ ʻಎಸ್ಇಝಡ್ʼ ನಿಯಮಗಳ ಬೆಂಬಲದೊಂದಿಗೆ ಫೆಬ್ರವರಿ 10, 2006 ರಂದು ʻಎಸ್ಇಝಡ್ ಕಾಯ್ದೆ-2005ʼ ಅನ್ನು ಜಾರಿಗೆ ತರಲಾಯಿತು.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ʻಐಟಿ/ಐಟಿಇಎಸ್ ಸೆಕ್ಟರ್ ಸ್ಕಿಲ್ಸ್ ಕೌನ್ಸಿಲ್ʼ ಮತ್ತು ʻನಾಸ್ಕಾಮ್ʼ ಜೊತೆ ಸಹಯೋಗದೊಂದಿಗೆ ʻಫ್ಯೂಚರ್ ಸ್ಕಿಲ್ಸ್ ಪ್ರೈಮ್ʼ (ಉದ್ಯೋಗಾರ್ಹತೆಗಾಗಿ ಐಟಿ ಮಾನವಶಕ್ತಿಯ ಮರು-ಕೌಶಲ್ಯ / ಅಪ್-ಸ್ಕಿಲ್ಲಿಂಗ್ ಕಾರ್ಯಕ್ರಮ) ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ʻಫ್ಯೂಚರ್ ಸ್ಕಿಲ್ಸ್‌ ಪ್ರೈಮ್‌ʼ ಎಂಬುದು ರಾಷ್ಟ್ರೀಯ ಮಟ್ಟದಲ್ಲಿ ಆನ್ಲೈನ್ ಮೂಲಕ ಡಿಜಿಟಲ್ ಕೌಶಲ್ಯ ತರಬೇತಿಗಾಗಿ ವಿವಿಧ ಅನ್‌ಲೈನ್‌ ಕೌಶಲ್ಯ ಪೂರೈಕೆದಾರರನ್ನು ಒಳಗೊಂಡ 'ಅಗ್ರಿಗೇಟರ್‌ಗಳ ಅಗ್ರಿಗೇಟರ್' ವೇದಿಕೆಯಾಗಿದೆ. ʻಎಐʼ, ʻಬಿಡಿಎʼ, ಆರ್‌ಪಿಎʼ ʻಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ʼ/ ʻ3ಡಿ ಪ್ರಿಂಟಿಂಗ್ʼ, ʻಕ್ಲೌಡ್ ಕಂಪ್ಯೂಟಿಂಗ್ʼ, ʻಸೋಷಿಯಲ್ ಅಂಡ್ ಮೊಬೈಲ್ʼ, ʻಸೈಬರ್ ಸೆಕ್ಯುರಿಟಿʼ, ʻಆಗ್ಮೆಂಟೆಡ್/ ವರ್ಚುವಲ್ ರಿಯಾಲಿಟಿʼ, ʻಇಂಟರ್ನೆಟ್ ಆಫ್ ಥಿಂಗ್ಸ್ʼ ಮತ್ತು ʻಬ್ಲಾಕ್‌ಚೈನ್‌ʼ ಎಂಬ 10 ಹೊಸ/ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಐಟಿ ವೃತ್ತಿಪರರನ್ನು ಮರು-ಕೌಶಲ್ಯಗೊಳಿಸುವ / ಉನ್ನತ ಕೌಶಲ್ಯಗೊಳಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ದೇಶದ ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ನಾವೀನ್ಯತೆ, ನವೋದ್ಯಮಗಳು ಮತ್ತು ಖಾಸಗಿ ಹೂಡಿಕೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಇದಕ್ಕಾಗಿ ಸರಕಾರವು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ದೇಶಾದ್ಯಂತ ವಿವಿಧ ʻಕ್ಷೇತ್ರ ನಿರ್ದಿಷ್ಟ ಉದ್ಯಮಶೀಲತಾ ಕೇಂದ್ರʼಗಳನ್ನು ಸ್ಥಾಪಿಸಿದೆ.

ಸಾಫ್ಟ್‌ವೇರ್ ಉತ್ಪನ್ನಗಳ ರಾಷ್ಟ್ರೀಯ ನೀತಿ-2019: ನಾವೀನ್ಯತೆ, ಸುಧಾರಿತ ವಾಣಿಜ್ಯೀಕರಣ, ಸುಸ್ಥಿರ ಬೌದ್ಧಿಕ ಆಸ್ತಿಗಳಿಂದ(ಐಪಿ) ಮುನ್ನಡೆಸಲ್ಪಡುವ ಜಾಗತಿಕ ಸಾಫ್ಟ್‌ವೇರ್‌ ಉತ್ಪನ್ನ ಕೇಂದ್ರವನ್ನಾಗಿ ಭಾರತವನ್ನು ಅಭಿವೃದ್ಧಿಪಡಿಸಲು ʻಸಾಫ್ಟ್‌ವೇರ್ ಉತ್ಪನ್ನಗಳ ರಾಷ್ಟ್ರೀಯ ನೀತಿ-2019ʼ ಅನ್ನು ಭಾರತ ಸರಕಾರ ಅನುಮೋದಿಸಿದೆ. ʻಐಸಿಟಿʼ ಆಧರಿತವಾಗಿ ಈ ಕ್ಷೇತ್ರದ ಅಭಿವೃದ್ಧಿಗಾಗಿ ತಂತ್ರಜ್ಞಾನ ಸಂಬಂಧಿತ ನವೋದ್ಯಮಗಳ ಉತ್ತೇಜನ ಮತ್ತು ವಿಶೇಷ ಕೌಶಲ್ಯಗಳ ಉತ್ತೇಜನಕ್ಕೂ ಕ್ರಮ ವಹಿಸಲಾಗಿದೆ. ಸದೃಢ ಭಾರತೀಯ ಸಾಫ್ಟ್‌ವೇರ್ ಉತ್ಪನ್ನ ಅಭಿವೃದ್ಧಿ ಪರಿಸರ ವ್ಯವಸ್ಥೆಯನ್ನು ರಚಿಸುವುದು ಈ ನೀತಿಯ ಉದ್ದೇಶವಾಗಿದೆ.

ಸಾಫ್ಟ್‌ವೇರ್ ಉತ್ಪನ್ನ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು ಹಾಗೂ ʻಸಾಫ್ಟ್‌ವೇರ್ ಉತ್ಪನ್ನದ ರಾಷ್ಟ್ರೀಯ ನೀತಿʼಯ(ಎನ್‌ಪಿಎಸ್‌ಪಿ-2019) ಗಮನಾರ್ಹ ಭಾಗವನ್ನು ಗುರಿಯಾಗಿಸಿಕೊಂಡು ʻನೆಕ್ಸ್ಟ್‌ ಜನರೇಷನ್‌ ಇನ್‌ಕ್ಯುಬೇಷನ್ ಸ್ಕೀಮ್ʼ (ಎನ್‌ಜಿಐಎಸ್) ಅನ್ನು ಅನುಮೋದಿಸಲಾಗಿದೆ. ನಿರಂತರ ಬೆಳವಣಿಗೆ, ಹೊಸ ಉದ್ಯೋಗ ಸೃಷ್ಟಿ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದೃಢವಾದ ಐಟಿ ಉದ್ಯಮಕ್ಕೆ ಪೂರಕವಾಗಿ ಬಲಿಷ್ಠ ಸಾಫ್ಟ್‌ವೇರ್‌ ಉತ್ಪನ್ನ ಪರಿಸರ ವ್ಯವಸ್ಥೆಯನ್ನು ರಚಿಸಲು ಉದ್ದೇಶಿಸಲಾಗಿದೆ.

ಐಟಿ ವಲಯದ ರಫ್ತನ್ನು ಉತ್ತೇಜಿಸಲು ಸರಕಾರ ಮತ್ತಷ್ಟು ಉಪಕ್ರಮಗಳನ್ನು ಕೈಗೊಂಡಿದೆ. ಸಾಗರೋತ್ತರ ಮಾರುಕಟ್ಟೆಗಳಿಗೆ ರಫ್ತು ಹೆಚ್ಚಳಕ್ಕಾಗಿ ಮಾರುಕಟ್ಟೆ ಸಂಪರ್ಕಗಳನ್ನು ಸೃಷ್ಟಿಸಲು ಭಾರತೀಯ ಐಟಿ / ಐಟಿಇಎಸ್ ʻಎಸ್ಎಂಇʼಗಳಿಗೆ ವಿದೇಶಗಳಲ್ಲಿ ಸ್ಥಳೀಯ ಬೆಂಬಲ (ಸಾಫ್ಟ್ ಲ್ಯಾಂಡಿಂಗ್ ಬೆಂಬಲ) ಒದಗಿಸಲಾಗುತ್ತಿದೆ. ಇದರ ಭಾಗವಾಗಿ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಮಾರುಕಟ್ಟೆ ಔಟ್ರೀಚ್ ಉಪಕ್ರಮಗಳು, ನಾರ್ಡಿಕ್ಸ್ ಮತ್ತು ಆಫ್ರಿಕಾ ಪ್ರದೇಶದಲ್ಲಿ ಮಾರುಕಟ್ಟೆ ಅಭಿವೃದ್ಧಿ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. 

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದಾರೆ.

***



(Release ID: 1897386) Visitor Counter : 154


Read this release in: English , Urdu , Tamil