ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

​​​​​​​ಮಹಾತ್ಮಾ ಗಾಂಧಿ ನ್ರೇಗಾ (ಎಂ.ಜಿ.ಎನ್.ಆರ್.ಇ.ಜಿ.ಎ.) ಯೋಜನೆಗೆ ಬಜೆಟ್ ಕಡಿತದ ಕುರಿತು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸ್ಪಷ್ಟೀಕರಣಗಳು

Posted On: 03 FEB 2023 5:08PM by PIB Bengaluru

ವಿವಿಧ ಮಾಧ್ಯಮ ವರದಿಗಳಲ್ಲಿ, ಕೇಂದ್ರ ಬಜೆಟ್ 2023-24 ರ ಮಹಾತ್ಮಾ ಗಾಂಧಿ ನ್ರೇಗಾ (ಎಂ.ಜಿ.ಎನ್.ಆರ್.ಇ.ಜಿ.ಎ.) ಯೋಜನೆಗೆ ಕೇವಲ ರೂ. 60,000 ಕೋಟಿಗಳನ್ನು ಮಾತ್ರ ಮೀಸಲಿಡಲಾಗಿದೆ ಎಂಬ ಕಳವಳ ವ್ಯಕ್ತಪಡಿಸಲಾಗಿದೆ, ಇದು 2022-23 ರ ರೂ 73,000 ಕೋಟಿ ಬಜೆಟ್ ಅಂದಾಜುಗಳಿಗಿಂತ 18% ಕಡಿಮೆಯಾಗಿದೆ. ಗ್ರಾಮೀಣ ಮನೆಗಳ ಬೇಡಿಕೆಯ ಕೂಲಿ ಉದ್ಯೋಗವನ್ನು ಒದಗಿಸುವ ಉದ್ದೇಶವನ್ನು ಸಾಧಿಸಲು ಇರುವ ಗ್ರಾಮೀಣ ಉದ್ಯೋಗ ಉದ್ಯೋಗ ಯೋಜನೆಯಾದ ಮಹಾತ್ಮ ಗಾಂಧಿ ನ್ರೇಗಾ ಯೋಜನೆ ಮೇಲೆ ಪರಿಣಾಮ ಬೀರಬಹುದು ಎಂದು ಬಿಂಬಿಸಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ.

ಮಹಾತ್ಮಾ ಗಾಂಧಿ ನ್ರೇಗಾ (ಎಂ.ಜಿ.ಎನ್.ಆರ್.ಇ.ಜಿ.ಎ.) ಒಂದು ಬೇಡಿಕೆ ಆಧಾರಿತ ಯೋಜನೆಯಾಗಿದೆ. ಉದ್ಯೋಗದ ಬೇಡಿಕೆಯಿರುವ ಯಾವುದೇ ಕುಟುಂಬಕ್ಕೆ ಯೋಜನೆಯ ಅನುಸಾರವಾಗಿ ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ ಕೌಶಲ್ಯರಹಿತ ಹಸ್ತಚಾಲಿತ ( ಕೈಯಿಂದ  ಮಾಡಿದ) ಕೆಲಸವನ್ನು ಒದಗಿಸಬೇಕು. ಪ್ರಸಕ್ತ ಹಣಕಾಸು ವರ್ಷ 2022-23 ರಲ್ಲಿ, ಒಟ್ಟು 99.81% ಗ್ರಾಮೀಣ ಕುಟುಂಬಗಳಿಗೆ ಅವರ ಕೆಲಸದ ಬೇಡಿಕೆಗೆ ಆಧಾರದಲ್ಲಿ ಉದ್ಯೋಗ ಮತ್ತು ವೇತನವನ್ನು ನೀಡಲಾಗಿದೆ. ಯೋಜನೆಯಡಿ ಉದ್ಯೋಗಕ್ಕಾಗಿ ಅರ್ಜಿದಾರರು ರಶೀದಿ ಮಾಡಿದ ಹದಿನೈದು ದಿನಗಳಲ್ಲಿ ಅಂತಹ ಉದ್ಯೋಗವನ್ನು ಅವರಿಗೆ ಒದಗಿಸದಿದ್ದರೆ, ಅವರು ದೈನಂದಿನ ನಿರುದ್ಯೋಗ ಭತ್ಯೆಗೆ ಅರ್ಹರಾಗಿರುತ್ತಾರೆ.

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗಿನ ಸೃಷ್ಟಿಸಲಾದ ವ್ಯಕ್ತಿಯ ದಿನಗಳ  ಮಾಹಿತಿ ಕೆಳಕಂಡಂತಿದೆ:

ಹಣಕಾಸು ವರ್ಷ

2022-2023

2021-2022

2020-2021

2019-2020

ಸೃಷ್ಠಿಸಲಾದ ವ್ಯಕ್ತಿ ದಿನಗಳು (ಕೋಟಿ ಗಳಲ್ಲಿ)

248.08

363.33

389.09

265.35

 

ವ್ಯಕ್ತಿಯ ದಿನಗಳ ಸೃಷ್ಟಿಯು ಕೆಲಸಗಳ ಬೇಡಿಕೆಯನ್ನು ಅವಲಂಬಿಸಿರುತ್ತದೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.

 ರಾಜ್ಯಗಳು/ಕೇಂದ್ರಾಡಳಿತ  ಪ್ರದೇಶಗಳಿಗೆ ಈ ಯೋಜನೆಯ ನಿಧಿಯ ಬಿಡುಗಡೆಯು ನಿರಂತರ ಪ್ರಕ್ರಿಯೆಯಾಗಿದೆ.

 ಕಳೆದ ವರ್ಷಗಳಲ್ಲಿ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕೆಳಗಿನ ಮೊತ್ತ ಬಿಡುಗಡೆಗಳನ್ನು ಮಾಡಲಾಗಿದೆ.

 

ಕ್ರ.ಸಂ

ಹಣಕಾಸು ವರ್ಷ

ಬಜೆಟ್ ಅಂದಾಜು

(ರೂ. ಕೋಟಿಯಲ್ಲಿ)

ಪರಿಷ್ಕೃತ ಅಂದಾಜು

 (ರೂ. ಕೋಟಿಯಲ್ಲಿ)

ಬಿಡುಗಡೆಯಾದ ನಿಧಿ
(ರೂ. ಕೋಟಿಯಲ್ಲಿ)

1

2014-15

34000.00

33000.00

32977.43

2

2015-16

34699.00

37345.95

37340.72

3

2016-17

38500.00

48220.26

48219.05

4

2017-18

48000.00

55167.06

55166.06

5

2018-19

55000.00

61830.09

61829.55

6

2019-20

60000.00

71001.81

71687.71

7

2020-21

61500.00

111500.00

111170.86

8

2021-22

73000.00

98000.00

98467.85

ಹಣಕಾಸು ವರ್ಷ 2019-20ರ ಬಜೆಟ್‌ ಅಂದಾಜಿನಲ್ಲಿ ರೂ. 60,000 ಕೋಟಿಗಳನ್ನು ರೂ. 71,001 ಕೋಟಿಗೆ ಪರಿಷ್ಕರಿಸಲಾಯಿತು, ಹಣಕಾಸು ವರ್ಷ 2020-21 ಬಜೆಟ್‌ ಅಂದಾಜಿನಲ್ಲಿ ರೂ. 61,500 ಕೋಟಿಗಳಷ್ಟಿತ್ತು, ಇದು ಪರಿಷ್ಕೃತ ಬಜೆಟ್‌ ನಲ್ಲಿ ರೂ.1,11,500 ಕೋಟಿಗೆ ಏರಿಸಲಾಯಿತು ಮತ್ತು ಹಣಕಾಸು ವರ್ಷ 2021-22ರಲ್ಲಿದ್ದ ರೂ.73,000 ಕೋಟಿಯ ಬಜೆಟ್‌ ಅಂದಾಜನ್ನು ರೂ.98,000 ಕೋಟಿಗೆ ಪರಿಷ್ಕರಿಸಲಾಗಿದೆ. ಆದ್ದರಿಂದ, ರಾಜ್ಯಗಳಿಗೆ ನಿಜವಾದ ಬಿಡುಗಡೆಗಳು ಬಜೆಟ್‌ ಅಂದಾಜಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನದಾಗಿದೆ ಎಂದು ಗುರುತಿಸಬಹುದು. ಪ್ರಸಕ್ತ ಹಣಕಾಸು ವರ್ಷ 2022-23 ರಲ್ಲಿಯೂ ಸಹ, ಬಜೆಟ್‌ ಅಂದಾಜಿನಲ್ಲಿ ರೂ.73,000 ಕೋಟಿಗಳಾಗಿದ್ದು, ಅದನ್ನು ರೂ.89,400 ಕೋಟಿಗೆ ಪರಿಷ್ಕರಿಸಲಾಗಿದೆ. ಮೇಲಿನ ಮಾಹಿತಿಗಳ ಪರಿಶೀಲನೆಯಿಂದ, ಹಿಂದಿನ ವರ್ಷದ ಬಿಡುಗಡೆಯು ಮುಂದಿನ ವರ್ಷಕ್ಕೆ ಇರುವ ನಿಧಿಯ ಅವಶ್ಯಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸುತ್ತದೆ.

 ಯಾವುದೇ ಸಂದರ್ಭಗಳಲ್ಲಿ ಹೆಚ್ಚುವರಿ ನಿಧಿಯ ಅಗತ್ಯವಿದ್ದಾಗ, ಕೇಂದ್ರ ಹಣಕಾಸು ಸಚಿವಾಲಯವು ಹಣವನ್ನು ಒದಗಿಸುವಂತೆ ಕೋರಲಾಗಿದೆ. ಸರಕಾರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ಅನ್ವಯವಾಗುವ ಕಾಯಿದೆ ಮತ್ತು ಮಾರ್ಗಸೂಚಿಗಳ ನಿಬಂಧನೆಗಳ ಪ್ರಕಾರ, ಯೋಜನೆಯ ಸರಿಯಾದ ಅನುಷ್ಠಾನಕ್ಕಾಗಿ ವೇತನ ಮತ್ತು ವಸ್ತು ಪಾವತಿಗಳಿಗೆ ಹಣವನ್ನು ಬಿಡುಗಡೆ ಮಾಡಲು ಭಾರತ ಸರ್ಕಾರ ಬದ್ಧವಾಗಿದೆ.

******

 


(Release ID: 1896326) Visitor Counter : 284


Read this release in: English , Urdu , Hindi , Marathi