ಬಾಹ್ಯಾಕಾಶ ವಿಭಾಗ
ಇಸ್ರೋ ಸೌಲಭ್ಯಗಳನ್ನು ಬಳಸಲು ಬಾಹ್ಯ ಸಂಸ್ಥೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ ಹಾಗು ಸರ್ಕಾರೇತರ ಭಾರತೀಯ ಘಟಕಗಳಿಗೆ (NGEs) ಮಾತ್ರ ಇಸ್ರೋ ಸೌಲಭ್ಯಗಳು ಮತ್ತು ತಾಂತ್ರಿಕ ಬೆಂಬಲವನ್ನು ಒದಗಿಸಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ಸಚಿವ ಡಾ ಜಿತೇಂದ್ರ ಸಿಂಗ್ ಹೇಳಿದ್ದಾರೆ.
प्रविष्टि तिथि:
02 FEB 2023 6:32PM by PIB Bengaluru
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ); ಕೇಂದ್ರ ಭೂ ವಿಜ್ಞಾನ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ) ; ಪ್ರಧಾನ ಮಂತ್ರಿ ಕಾರ್ಯಾಲಯ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಪಿಂಚಣಿಗಳು, ಅಣುಶಕ್ತಿ ಮತ್ತು ಬಾಹ್ಯಾಕಾಶ ಇಲಾಖೆಯ ರಾಜ್ಯ ಸಚಿವರಾದ ಡಾ ಜಿತೇಂದ್ರ ಸಿಂಗ್ ಅವರು, ಇಸ್ರೋ ಸೌಲಭ್ಯಗಳನ್ನು ಬಳಸಲು ಬಾಹ್ಯ ಸಂಸ್ಥೆಗಳಿಗೆ ಸರ್ಕಾರ ಅನುಮತಿ ನೀಡಿಲ್ಲ ಮತ್ತು ಸರ್ಕಾರೇತರ ಭಾರತೀಯ ಘಟಕಗಳಿಗೆ (NGEs) ಮಾತ್ರ ಇಸ್ರೋ ಸೌಲಭ್ಯ ಹಾಗು ತಾಂತ್ರಿಕ ಬೆಂಬಲವನ್ನು ಒದಗಿಸಲು IN-SPAce ಮೂಲಕ ಅನ್ವಯವಾಗುವಂತೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಇಂದು ಬಜೆಟ್ ಅಧಿವೇಶನ ವೇಳೆ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವ ಡಾ ಜಿತೇಂದ್ರ ಸಿಂಗ್, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(SHAR)ದಲ್ಲಿ ಸೌಂಡಿಂಗ್ ರಾಕೆಟ್ ಲಾಂಚ್ ಕಾಂಪ್ಲೆಕ್ಸ್ ನ್ನು ಒಳಗೊಂಡಂತೆ ತಿರುವನಂತಪುರಂನ ತುಂಬ ಈಕ್ವೆಟೋರಿಯಲ್ ರಾಕೆಟ್ ಉಡಾವಣಾ ಕೇಂದ್ರದಲ್ಲಿ (TERLS) ವರ್ಟಿಕಲ್ ಟೆಸ್ಟ್ ಸೌಲಭ್ಯ ಮತ್ತು ಮಿಷನ್ ಪ್ರಾರಂಭ್ (PRARAMBH) ಗೆ Skyroot, ಅಗ್ನಿಕುಲ್ ಕಾಸ್ಮೋಸ್ ಪ್ರೈ ಲಿಮಿಟೆಡ್ ತನ್ನ ಎಂಜಿನ್-ಅಗ್ನಿಲೆಟ್ ಸೌಲಭ್ಯಗಳನ್ನು ಇತ್ತೀಚೆಗೆ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಕೊನೆಯವರೆಗೂ ಚಟುವಟಿಕೆಗಳನ್ನು ನಡೆಸುವಲ್ಲಿ ಖಾಸಗಿ ವಲಯದ ವರ್ಧಿತ ಭಾಗವಹಿಸುವಿಕೆಗೆ ಸರ್ಕಾರ ಅನುವು ಮಾಡಿಕೊಟ್ಟಿದೆ. ಶೈಕ್ಷಣಿಕ ಸಂಸ್ಥೆಗಳು, ಸ್ಟಾರ್ಟ್-ಅಪ್‌ಗಳು ಮತ್ತು ಕೈಗಾರಿಕೆಗಳು ಸೇರಿದಂತೆ ಖಾಸಗಿ ವಲಯದ ಭಾಗವಹಿಸುವಿಕೆಯು ಕೊನೆಯವರೆಗೂ ಬಾಹ್ಯಾಕಾಶ ಚಟುವಟಿಕೆಗಳಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ಆರ್ಥಿಕತೆಯನ್ನು ವಿಸ್ತರಿಸುತ್ತದೆ, ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ಬಾಹ್ಯಾಕಾಶ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ. ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತೀಯ ಪಾಲು ಹೆಚ್ಚಾಗುತ್ತದೆ.
****
(रिलीज़ आईडी: 1895880)
आगंतुक पटल : 186