ಸಹಕಾರ ಸಚಿವಾಲಯ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ 'ಸಹಕಾರದಿಂದ ಸಮೃದ್ಧಿ' ಸರ್ಕಾರದ ಮಂತ್ರವನ್ನು ಅನುಸರಿಸಿ ಸಹಕಾರಿ ಸಂಸ್ಥೆಗಳ ಮೂಲಕ ಕೋಟ್ಯಂತರ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಸಂಕಲ್ಪ ಮಾಡಲಾಗಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ  ಅವರು  ಹೇಳಿದರು.


ಸಹಕಾರಿ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಇಂದು ಬಜೆಟ್ ನಲ್ಲಿ ಕೈಗೊಂಡಿರುವ ಅಭೂತಪೂರ್ವ ನಿರ್ಧಾರಗಳು ಈ ಸಂಕಲ್ಪದ ಪ್ರತೀಕ

ವಿಶ್ವದ ಅತಿದೊಡ್ಡ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸುವ ಯೋಜನೆಯೊಂದಿಗೆ, ಸಹಕಾರ ಸಂಘಗಳಿಗೆ ಸಂಬಂಧಿಸಿದ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಸಮಯದಲ್ಲಿ ಮಾರಾಟ ಮಾಡುವ ಮೂಲಕ ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ, ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ರೈತರ ಆದಾಯ ಹೆಚ್ಚಳದ ಸಂಕಲ್ಪದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 

ಸರ್ಕಾರವು ಮುಂದಿನ 5 ವರ್ಷಗಳಲ್ಲಿ ಪ್ರತಿ ಪಂಚಾಯತ್‌ನಲ್ಲಿ ಹೊಸ ವಿವಿಧೋದ್ದೇಶ ಸಹಕಾರ ಸಂಘಗಳು, ಪ್ರಾಥಮಿಕ ಮೀನುಗಾರಿಕಾ ಸಂಘಗಳು ಮತ್ತು ಡೈರಿ ಸಹಕಾರ ಸಂಘಗಳನ್ನು ಸ್ಥಾಪಿಸುತ್ತದೆ.

2016-17ರ ಮೊದಲು ರೈತರಿಗೆ ಪಾವತಿಸಿದ ಹಣವನ್ನು ತಮ್ಮ ವೆಚ್ಚದಲ್ಲಿ ತೋರಿಸಲು ಸಕ್ಕರೆ ಸಹಕಾರಿ ಸಂಘಗಳಿಗೆ ಸೌಲಭ್ಯವನ್ನು ನೀಡಲಾಗಿದ್ದು, ಇದಕ್ಕಾಗಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸುಮಾರು ರೂ. 10,000 ಕೋಟಿ ಪರಿಹಾರ ಪಡೆಯಲಿವೆ

Posted On: 01 FEB 2023 6:19PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ 'ಸಹಕಾರ ಸೇ ಸಮೃದ್ಧಿ' ಸರ್ಕಾರದ ಮಂತ್ರವನ್ನು ಅನುಸರಿಸಿ ಸಹಕಾರಿ ಸಂಸ್ಥೆಗಳ ಮೂಲಕ ಕೋಟ್ಯಂತರ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಸಂಕಲ್ಪ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ಹೇಳಿದರು.

ಸಹಕಾರಿ ಕ್ಷೇತ್ರವನ್ನು ಬಲಪಡಿಸಲು ಇಂದು ಬಜೆಟ್‌ನಲ್ಲಿ ತೆಗೆದುಕೊಂಡಿರುವ ಅಭೂತಪೂರ್ವ ನಿರ್ಧಾರಗಳು ಈ ಸಂಕಲ್ಪದ ಸಂಕೇತವಾಗಿದೆ. ವಿಶ್ವದ ಅತಿದೊಡ್ಡ ವಿಕೇಂದ್ರೀಕೃತ ಶೇಖರಣಾ ಸಾಮರ್ಥ್ಯವನ್ನು ಸ್ಥಾಪಿಸುವ ಯೋಜನೆಯೊಂದಿಗೆ, ಸಹಕಾರಿ ಸಂಘಗಳಿಗೆ ಸಂಬಂಧಿಸಿದ ರೈತರು ತಮ್ಮ ಉತ್ಪನ್ನಗಳಿಗೆ ಸೂಕ್ತ ಸಮಯದಲ್ಲಿ ಮಾರಾಟ ಮಾಡುವ ಮೂಲಕ ನ್ಯಾಯಯುತ ಬೆಲೆಯನ್ನು ಪಡೆಯಲು ಸಾಧ್ಯವಾಗುತ್ತದೆ. ರೈತರ ಆದಾಯ ಹೆಚ್ಚಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಂಕಲ್ಪದಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ ಎಂದು ಶ್ರೀ ಅಮಿತ್ ಶಾ ಅವರು ತಮ್ಮ ಟ್ವೀಟ್‌ಗಳಲ್ಲಿ ಹೇಳಿದ್ದಾರೆ.

ಮುಂದಿನ 5 ವರ್ಷಗಳಲ್ಲಿ ಪ್ರತಿ ಪಂಚಾಯತ್‌ ಗಳಲ್ಲಿ ಹೊಸ ವಿವಿಧೋದ್ದೇಶ ಸಹಕಾರ ಸಂಘಗಳು, ಪ್ರಾಥಮಿಕ ಮೀನುಗಾರಿಕಾ ಸಂಘಗಳು ಮತ್ತು ಡೈರಿ ಸಹಕಾರ ಸಂಘಗಳನ್ನು ಸರ್ಕಾರ ಸ್ಥಾಪಿಸಲಿದೆ. ಇದು ಸಹಕಾರಿ ಆಂದೋಲನಕ್ಕೆ ಹೊಸ ದಿಕ್ಕು ಮತ್ತು ವೇಗವನ್ನು ನೀಡುತ್ತದೆ, ಇದು ಈ ಕ್ಷೇತ್ರವನ್ನು ಹೆಚ್ಚು ಸಶಕ್ತಗೊಳಿಸುತ್ತದೆ.

ಮಾರ್ಚ್ 31, 2024 ರವರೆಗೆ ಸ್ಥಾಪನೆಯಾಗುವ ಉತ್ಪಾದನಾ ವಲಯದ ಸಹಕಾರಿ ಸಂಘಗಳನ್ನು ಕೇವಲ 15% ತೆರಿಗೆ ನಿವ್ವಳದ ಒಳಗಡೆ ಇರಿಸಿದ್ದಕ್ಕಾಗಿ ಶ್ರೀ ಮೋದಿಯವರಿಗೆ ಶ್ರೀ ಅಮಿತ್ ಶಾ ಅವರು ಕೃತಜ್ಞತೆ ಸಲ್ಲಿಸಿದರು. ನಗದು ಹಿಂಪಡೆಯುವಿಕೆಯ ಮೇಲೆ ಟಿ.ಡಿ.ಎಸ್. ಅನ್ನು ರೂ 3 ಕೋಟಿಗೆ ಮಿತಿಗೊಳಿಸುವ ನಿರ್ಧಾರ ಮತ್ತು ಪ್ರಾಥಮಿಕ ಕೃಷಿ ಕ್ರೆಡಿಟ್ ಸೊಸೈಟಿ (ಪಿ.ಎಸಿ.ಎಸ್.) ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗಳಿಗೆ (ಪಿ.ಸಿ.ಆರ್‌.ಡಿ.ಬಿ.) ನಗದು ಠೇವಣಿ ಮತ್ತು ಸಾಲಗಳಿಗೆ ಪ್ರತಿ ಸದಸ್ಯರಿಗೆ ರೂ 2 ಲಕ್ಷದವರೆಗಿನ ಮಿತಿಯನ್ನು ಮಾಡುವ ನಿರ್ಧಾರವು ಶ್ಲಾಘನೀಯವಾಗಿದೆ.

2016-17ರ ಮೊದಲು ರೈತರಿಗೆ ಪಾವತಿಸಿದ ಹಣವನ್ನು ತಮ್ಮ ವೆಚ್ಚದಲ್ಲಿ ತೋರಿಸಲು ಸಕ್ಕರೆ ಸಹಕಾರಿ ಸಂಘಗಳಿಗೆ ಸೌಲಭ್ಯವನ್ನು ನೀಡಲಾಗಿದ್ದು, ಇದಕ್ಕಾಗಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸುಮಾರು ರೂ. 10,000 ಕೋಟಿ ಪರಿಹಾರ ಪಡೆಯಲಿವೆ. ಸಹಕಾರಿ ಕ್ಷೇತ್ರಕ್ಕಾಗಿ ತೆಗೆದುಕೊಂಡ ಇಂತಹ ಮಹತ್ವದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಕೇಂದ್ರ ಸಹಕಾರ ಸಚಿವರು ಹೇಳಿದರು.

*****


(Release ID: 1895581) Visitor Counter : 174