ಹಣಕಾಸು ಸಚಿವಾಲಯ

​​​​​​​2021 -22 ಸಾಲಿನಲ್ಲಿ ಭಾರತ ಆಹಾರೋತ್ಪಾದನೆಯಲ್ಲಿ ದಾಖಲೆ ನಿರ್ಮಿಸಿದ್ದು, 315.7 ದಶಲಕ್ಷ ಟನ್ ಗೆ ಉತ್ಪಾದನೆ ಏರಿಕೆ


2021 -22 ರಲ್ಲಿ 342.3 ದಶಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳು ಉತ್ಪಾದನೆಯಾಗಿ ದಾಖಲೆ ನಿರ್ಮಾಣ

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಗೆ 20.050 ಕೋಟಿ ರೂಪಾಯಿ ನಿಗದಿ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 ರ ಅನ್ವಯ 81.35 ಕೋಟಿ ಫಲಾನುಭವಿಗಳಿಗೆ 2023 ಜನವರಿ 1 ರಿಂದ ಒಂದು ವರ್ಷ ಉಚಿತ ಆಹಾರ ಧಾನ್ಯಗಳ ವಿತರಣೆ

ಒಂದು ರಾಷ್ಟ್ರ – ಒಂದು ಪಡಿತರ ಚೀಟಿ [ಒಎನ್ಒಆರ್ ಸಿ] ಯೋಜನೆ ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿ

13,618 ಕೋಟಿ ರೂಪಾಯಿ ಕೃಷಿ ಮೂಲ ಸೌಕರ್ಯಕ್ಕಾಗಿ ಮಂಜೂರು

ಇ-ನಾಮ್ ಪೋರ್ಟಲ್ ನಲ್ಲಿ 1.7 ಕೋಟಿಗೂ ಹೆಚ್ಚು ರೈತರು ಮತ್ತು 2.3 ಕೋಟಿ ವ್ಯಾಪಾರಿಗಳು ನೋಂದಣಿ 

ಸಿರಿಧಾನ್ಯ ಮೌಲ್ಯವರ್ಧನೆ ಸರಣಿಯಲ್ಲಿ ಭಾರತದ 500 ಕ್ಕೂ ನವೋದ್ಯಮಗಳು ಸಕ್ರಿಯ

Posted On: 31 JAN 2023 1:20PM by PIB Bengaluru

ಹವಾಮಾನ ಬದಲಾವಣೆಯ ಸವಾಲುಗಳ ನಡುವೆಯೂ ಭಾರತದ ಆಹಾರೋತ್ಪಾದನೆ 2021 -22 ರಲ್ಲಿ ದಾಖಲೆ ಮಟ್ಟದಲ್ಲಿದ್ದು, 315.7 ದಶಲಕ್ಷ ಟನ್ ಗೆ ಏರಿಕೆಯಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿಂದು ಮಂಡಿಸಿದ 2022 – 23 ನೇ ಸಾಲಿನ ಆರ್ಥಿಕ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.  2022 – 23 [ಮುಂಗಾರು ಮಾತ್ರ] ನೇ ಸಾಲಿನ ಮೊದಲ ಅಂದಾಜು ಪ್ರಕಾರ ದೇಶದಲ್ಲಿ 149.9 ದಶಲಕ್ಷ ಟನ್ ಆಹಾರ ಧಾನ್ಯಗಳು ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ಇದು ಕಳೆದ ಐದು ವರ್ಷಗಳ (2016-17 ರಿಂದ 2020-21) ಅವಧಿಯ ಸರಾಸರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ್ದಾಗಿದೆ. ಬೇಳೆಕಾಳುಗಳ ಉತ್ಪಾದನೆ ಸರಾಸರಿ 23.9 ರಷ್ಟಿದ್ದು, ಐದು ವರ್ಷಗಳ ಸರಾಸರಿಗೆ ತುಲನೆ ಮಾಡಿದರೆ ಹೆಚ್ಚಿನ ಉತ್ಪಾದನೆಯಾಗಿದೆ.

.

ಸಮಗ್ರ ತೋಟಗಾರಿಕೆ ಅಭಿವೃದ್ಧಿ ಅಭಿಯಾನ [ಎಂ.ಐ.ಡಿ.ಎಚ್]  

“ಸಮೀಕ್ಷೆಯು ತೋಟಗಾರಿಕೆ ವಲಯವನ್ನು “ಹೆಚ್ಚಿನ ಬೆಳವಣಿಗೆಯ ಪ್ರದೇಶ” ಮತ್ತು “ರೈತರಿಗೆ ಹಗುರವಾದ ಬೆಳವಣಿಗೆ” ಹಾಗೂ “ಸುಧಾರಿತ ಬದಲಾವಣೆಯ ಮೂಲ” ಎಂದು ಸಮೀಕ್ಷಾ ವರದಿ ವಿಶ್ಲೇಷಿಸಿದೆ. ಮೂರನೇ ಮುಂಗಡ ಅಂದಾಜು ಪ್ರಕಾರ (2021-22) ರಲ್ಲಿ 28.0 ದಶಲಕ್ಷ ಹೆಕ್ಟೇರ್ ನಲ್ಲಿ 342.3 ದಶಲಕ್ಷ ಟನ್  ಉತ್ಪಾದನೆಯಾಗಿದ್ದು, ದಾಖಲೆ ನಿರ್ಮಿಸಿದೆ. ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ [ಸಿಡಿಪಿ]ದಡಿ 55 ತೋಟಗಾರಿಕಾ ಕ್ಲಸ್ಟರ್ ಗಳನ್ನು ಗುರುತಿಸಿದ್ದು, 12 ಕ್ಲಸ್ಟರ್ ಗಳಲ್ಲಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿದೆ. ಎಂ.ಐ.ಡಿ.ಎಚ್ ನಡಿ ತೋಟಗಾರಿಕಾ ಕ್ಲಸ್ಟರ್ ಗಳ ಭೌಗೋಳಿಕ ವಿಶೇಷತೆಯನ್ನು ಹತೋಟಿಗೆ ತರಲು ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಪೂರೈಕೆ ಸರಪಳಿಯಲ್ಲಿ ಪೂರ್ವ ಉತ್ಪಾದನೆ ಮತ್ತು ಉತ್ಪಾದನೆ ಮತ್ತು ಸುಗ್ಗಿಯ ನಂತರದ ಚಟುವಟಿಕೆಗಳ ಸಮಗ್ರ ಮಾರುಕಟ್ಟೆ ನೇತೃತ್ವದ ಅಭಿವೃದ್ಧಿಯನ್ನು ಉತ್ತೇಜಿಸಲು ವಿನ್ಯಾಸಗೊಳಿಸಲಾಗಿದೆ.  

ಪಶು ಸಂಗೋಪನೆ, ಡೈರಿ ಮತ್ತು ಮೀನುಗಾರಿಕೆ

ಭಾರತೀಯ ಕೃಷಿ ಸಂಬಂಧಿತ ವಲಯಗಳು, ಜಾನುವಾರು, ಅರಣ್ಯ ಮತ್ತು ಅರಣ್ಯ ಉತ್ಪನ್ನಗಳು, ಮೀನುಗಾರಿಕೆ ಮತ್ತು ಜಲಚರಗಳು ಕ್ರಮೇಣ ದೃಢವಾದ ಬೆಳವಣಿಗೆಯ ಕ್ಷೇತ್ರಗಳಾಗಿ ಮಾರ್ಪಟ್ಟಿವೆ. ಉತ್ತಮ ಕೃಷಿ ಆದಾಯದ ಸಂಭವನೀಯ ಮೂಲವಾಗಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

2014-15 ರಿಂದ 2020-21 [ಸ್ಥಿರ ಬೆಲೆಗಳು] ವರೆಗೆ ಜಾನುವಾರು ವಲಯ ಸಿಎಜಿಆರ್ ನಲ್ಲಿ ಶೇ 7.9 ರಷ್ಟು ಬೆಳವಣಿಗೆಯಾಗಿದೆ ಮತ್ತು ಒಟ್ಟು ಕೃಷಿ ಜಿವಿಎ ಗೆ ಅದರ ಕೊಡುಗೆ [ಸ್ಥಿರ ಬೆಲೆಯಲ್ಲಿ] 2014 – 15 ರಲ್ಲಿ ಶೇ 24.3 ರಷ್ಟಿದ್ದು, 2020-21 ರಲ್ಲಿ ಶೇ 30.1 ಕ್ಕೆ ಹೆಚ್ಚಾಗಿದೆ. ಇದೇ ರೀತಿ 2016 – 17 ರಿಂದ ಮೀನುಗಾರಿಕಾ ವಲಯದಲ್ಲಿ ವಾರ್ಷಿಕ ಸರಾಸರಿ ಬೆಳವಣಿಗೆ ಶೇ 7 ರಷ್ಟಿದೆ ಮತ್ತು ಕೃಷಿ ವಲಯದ ಜಿವಿಎಗೆ ಸುಮಾರು ಶೇ 6.7 ರಷ್ಟು ಪಾಲು ಕೊಡುಗೆ ನೀಡುತ್ತಿದೆ. ಡೈರಿ ವಲಯದಲ್ಲಿ ಮೊಟ್ಟೆ ಮತ್ತು ಮಾಂಸ ಉತ್ಪನ್ನಗಳು ಒಳಗೊಂಡಂತೆ ನೇರವಾಗಿ ಎಂಟು ಕೋಟಿ ರೈತರಿಗೆ ಉದ್ಯೋಗ ದೊರೆತಿದೆ. ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಶ್ರೇಯಾಂಕದಲ್ಲಿದ್ದು, ಜಾಗತಿಕವಾಗಿ ಮೊಟ್ಟೆ ಉತ್ಪಾದನೆಯಲ್ಲಿ ಎರಡು ಮತ್ತು ಮಾಂಸ ಉತ್ಪಾದನೆಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಕೃಷಿ ವಲಯದ ಮಹತ್ವದ ಬಗ್ಗೆ ಅರಿತಿರುವ ಸರ್ಕಾರ ಮೂಲ ಸೌಕರ್ಯ ಹೆಚ್ಚಳ, ಉತ್ಪಾದನೆ ವೃದ್ದಿ ಹಾಗೂ ರೋಗ ನಿಯಂತ್ರಣದಂತಹ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಪಶು ಸಂಗೋಪನೆ ಮೂಲ ಸೌಕರ್ಯ ನಿಧಿಯಡಿ 3,731.4 ಕೋಟಿ ರೂಪಾಯಿ ಮೊತ್ತದ 116 ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. 15,000 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಜಾರಿಗೊಳಿಸಲಾಗಿದೆ. ರಾಷ್ಟ್ರೀಯ ಜಾನುವಾರು ಅಭಿವೃದ್ಧಿ ಅಭಿಯಾನ ಮತ್ತು ವಾಣಿಜ್ಯೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದರೆ ಆರ್ಥಿಕ ಮತ್ತು ತಳಿಯ ಪ್ರಾಮುಖ್ಯತೆಯ ಪ್ರಾಣಿಗಳ ರೋಗಗಳನ್ನು ತಡೆಗಟ್ಟಲು, ಜಾನುವಾರುಗಳ ಆರೋಗ್ಯ, ಕಾಲು ಬಾಯಿ, ಜಾನುವಾರುಗಳಲ್ಲಿ ಕಂಡು ಬರುವ ಗರ್ಭಪಾತವಾಗುವ ರೋಗಗಳನ್ನು ತಡೆಗಟ್ಟಲು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ.   

ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ [ಪಿಎಂಎಂಎಸ್ ವೈ]ಯನ್ನು ಒಟ್ಟು 20,050 ಕೋಟಿ ರೂಪಾಯಿ ವೆಚ್ಚದಲ್ಲಿ ಜಾರಿಗೊಳಿಸಲಾಗಿದೆ.  ಪಿಎಂಎಂಎಸ್ ವೈ ನಡಿ ಮೀನುಗಾರಿಕೆ ವಲಯಕ್ಕೆ ಭಾರತದಲ್ಲಿ ಹಿಂದೆಂದೂ ಇಲ್ಲದಷ್ಟು ಆರ್ಥಿಕ ಸಂಪನ್ಮೂಲ ನಿಗದಿಮಾಡಲಾಗಿದೆ. ಈ ಯೋಜನೆಯನ್ನು 21 ರ ಹಣಕಾಸು ವರ್ಷದಿಂದ 25 ರ ಹಣಕಾಸು ವರ್ಷದವರೆಗೆ ಮೀನುಗಾರಿಕೆ ವಲಯವನ್ನು ಸುಸ್ಥಿರ ಮತ್ತು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಅನುಷ್ಠಾನಕ್ಕೆ ತರಲಾಗಿದೆ. ಮೀನುಗಾರರು, ಮೀನುಗಾರಿಕೆ ರೈತರು ಹಾಗೂ ಮೀನುಗಾರಿಕೆ ವಲಯದ ಕಾರ್ಮಿಕರ ಸಾಮಾಜಿಕ – ಆರ್ಥಿಕಾಭಿವೃದ‍್ದಿಯನ್ನು ಖಾತರಿಪಡಿಸುವ ಯೋಜನೆ ಇದಾಗಿದೆ.  ಮೀನುಗಾರಿಕೆ ಮತ್ತು  ಜಲಚರ ಸಾಕಾಣೆ ಮೂಲ ಸೌಕರ್ಯ ಅಭಿವೃದ್ದಿ ನಿಧಿ [ಎಫ್ಐಡಿಎಫ್]ಯಡಿ 4,923.9 ಕೋಟಿ ರೂಪಾಯಿ ಮೊತ್ತದ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದ್ದು, 9.4 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗಾವಕಾಶ ದೊರೆಯಲಿದೆ. 2022 ರ ಅಕ್ಟೋಬರ್ 17 ರಿಂದ ಮೀನುಗಾರಿಕೆ ಮತ್ತು ಸಂಬಂಧಿತ ವಲಯದ ಚಟುವಟಿಕೆಗಳು ಆರಂಭಗೊಂಡಿವೆ.

ಆಹಾರ ಭದ್ರತೆ

ಭಾರತದಲ್ಲಿನ ಆಹಾರ ನಿರ್ವಹಣಾ ಕಾರ್ಯಕ್ರಮದಡಿ ರೈತರಿಂದ ಲಾಭದಾಯಕ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವುದು, ಗ್ರಾಹಕರಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು, ವಿಶೇಷವಾಗಿ ಸಮಾಜದ ದುರ್ಬಲ ವರ್ಗದ ಜನರಿಗೆ ಕೈಗೆಟುವ ದರದಲ್ಲಿ ಆಹಾರ ಧಾನ್ಯ ಪೂರೈಸಲು ಮತ್ತು ಆಹಾರ ಭದ್ರತೆ ಮತ್ತು ಬೆಲೆ ಸ್ಥಿರತೆಗಾಗಿ ಆಹಾರ ಕಾಪು ದಾಸ್ತಾನು ನಿರ್ವಹಣೆ ಮಾಡುವುದನ್ನು ಈ ಯೋಜನೆ ಒಳಗೊಂಡಿದೆ ಎಂದು ಸಮೀಕ್ಷೆ ಹೇಳಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 [ಎನ್.ಎಫ್.ಎಸ್.ಎ] ಅನ್ವಯ 81.35 ಕೋಟಿ ಫಲಾನುಭವಿಗಳಿಗೆ 2023 ಜನವರಿ 1 ರಿಂದ ಒಂದು ವರ್ಷ ಉಚಿತ ಆಹಾರ ಧಾನ್ಯಗಳ ಪೂರೈಕೆ ಮಾಡಲು ಸರ್ಕಾರ ಇತ್ತೀಚೆಗೆ ತೀರ್ಮಾನ ಕೈಗೊಂಡಿದೆ. ಎನ್.ಎಫ್.ಎಸ್.ಎ ಅಡಿ ಬಡವರಿಗೆ ಆರ್ಥಿಕ ಹೊರೆ ತಪ್ಪಿಸಲು ಸರ್ಕಾರ ಈ ಅವಧಿಯಲ್ಲಿ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಆಹಾರ ಸಬ್ಸಿಡಿ ಮತ್ತು ಇತರೆ ಕಲ್ಯಾಣ ಕಾರ್ಯಕ್ರಮಗಳಿಗಾಗಿ ವೆಚ್ಚಮಾಡಿದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. 2021-22 ರ ಮುಂಗಾರು ಹಂಗಾಮು [ಕೆ.ಎಂ.ಎಸ್] ಅವಧಿಯಲ್ಲಿ 532.7 ಲಕ್ಷ ಮೆಟ್ರಿನ್ ಅಕ್ಕಿ ಖರೀದಿಸುವ ಗುರಿ ಹೊಂದಲಾಗಿತ್ತು. ಆದರೆ ಗುರಿ ಮೀರಿ 581.7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲಾಗಿದೆ. 2022 – 23 ನೇ ಸಾಲಿನಲ್ಲಿ 2022 ರ ಡಿಸೆಂಬರ್ 31 ರ ವರೆಗೆ ಒಟ್ಟು 355 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಸಲಾಗಿದೆ.

 

ಕೋವಿಡ್ – 19 ಸಾಂಕ್ರಾಮಿಕ ಸಂದರ್ಭದಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಬಡವರು ತೊಂದರೆ ಅನುಭವಿಸುವುದನ್ನು ತಪ್ಪಿಸಲು 1,118 ಲಕ್ಷ ಮೆಟ್ರಿನ್ ಟನ್ ಆಹಾರ ಧಾನ್ಯಗಳನ್ನು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪೂರೈಸಲಾಗಿದೆ. ಆಹಾರ ವಸ್ತುಗಳು ಸುಲಭವಾಗಿ ದೊರೆಯುವಂತೆ ಮಾಡಲು ಸರ್ಕಾರ ನಾಗರಿಕ ಕೇಂದ್ರಿತ ಮತ್ತು ತಂತ್ರಜ್ಞಾನ ಆಧಾರಿತ ಕಾರ್ಯಕ್ರಮವಾದ ಒಂದು ರಾಷ್ಟ್ರ – ಒಂದು ಪಡಿತರ ಚೀಟಿ [ಒಎನ್ಒಆರ್ ಸಿ] ಕಾರ್ಯಕ್ರಮವನ್ನು 2019 ರಿಂದ ಜಾರಿಗೊಳಿಸಿದೆ.  ಒಎನ್ಒಆರ್ ಸಿ ಯೋಜನೆಯಡಿ ಅಂತರ್ ರಾಜ್ಯ ಮತ್ತು ಅಂತರ್ ರಾಜ್ಯ ಪೋರ್ಟಬಿಲಿಟಿ ಪಡಿತರ ಚೀಟಿಗಳನ್ನು ಒದಗಿಸಲಾಗುತ್ತಿದೆ. ಪ್ರಸ್ತುತ ರಾಷ್ಟ್ರೀಯ/ ಅಂತರ್ ರಾಜ್ಯ ಪೋರ್ಟಬಿಲಿಟಿ ವ್ಯವಸ್ಥೆಯನ್ನು 36 ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳಲ್ಲಿ ಶೇ 100 ರಷ್ಟು ಫಲಾನುಭವಿಗಳಿಗೆ ಎನ್ಎಫ್ಎಸ್ಎ ಯೋಜನೆ ಮೂಲಕ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗಿದೆ.

ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ

2021 ಮಾರ್ಚ್ ನಲ್ಲಿ ನಡೆದ ವಿಶ್ವಸಂಸ್ಥೆಯ 75 ನೇ ಸಾಮಾನ್ಯ ಅಧಿವೇಶನದಲ್ಲಿ 2023 ನೇ ವರ್ಷವನ್ನು ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ [ಐವೈಎಂ] ಎಂದು ಪ್ರಕಟಿಸಲಾಗಿದೆ. ಭಾರತದಲ್ಲಿ ಏಷ್ಯಾದ ಶೇ 80 ರಷ್ಟು ಅಂದರೆ ಒಟ್ಟು 50.9 ದಶಲಕ್ಷ ಟನ್ [ನಾಲ್ಕನೇ ಮುಂಗಡ ಅಂದಾಜಿನ ಪ್ರಕಾರ] ಸಿರಿಧಾನ್ಯಗಳನ್ನು ಉತ್ಪಾದಿಸಲಾಗುತ್ತಿದೆ ಮತ್ತು ಜಗತ್ತಿನ ಶೇ 20 ರಷ್ಟು ಸಿರಿಧಾನ್ಯವನ್ನು ಭಾರತದಲ್ಲಿ ಬೆಳೆಯಲಾಗುತ್ತಿದೆ. ಜಾಗತಿಕವಾಗಿ ಸರಾಸರಿ ಇಳುವರಿ 1229 ಕೆ.ಜೆ/ಪ್ರತಿ ಹೆಕ್ಟೇರ್ ಗೆ, ಆದರೆ ಭಾರತದ ಸರಾಸರಿ ಇಳುವರಿ 1239 ಕೆ.ಜಿ/ಪ್ರತಿಹೆಕ್ಟೇರ್ ಗೆ ಬೆಳೆಯಲಾಗುತ್ತಿದೆ. ಸಿರಿ ಧಾನ್ಯಗಳಿಗೆ ಸರ್ಕಾರ ಪೌಷ್ಟಿಕತೆಯ ಮೌಲ್ಯವನ್ನು ನೀಡಿದ್ದು, 2018 ರ ಏಪ್ರಿಲ್ ನಲ್ಲಿ ಸಿರಿಧಾನ್ಯಗಳು ಪೌಷ್ಟಿಕ ಧಾನ್ಯಗಳು ಎಂದು ಹೇಳಿದೆ. ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ [ಎನ್.ಎಫ್.ಎಸ್.ಎಂ] ನಡಿ ಸಿರಿಧಾನ್ಯಗಳು ಪೌಷ್ಟಿಕ ಬೆಂಬಲದ ಉತ್ಪನ್ನಗಳು ಎಂದು ಅಧಿಸೂಚನೆ ಹೊರಡಿಸಲಾಗಿದೆ. 2018 – 19 ರಿಂದ 14 ರಾಜ್ಯಗಳ 212 ಜಿಲ್ಲೆಗಳಲ್ಲಿ ಪೌಷ್ಟಿಕ ಧಾನ್ಯಗಳ ಉಪ ಅಭಿಯಾನವನ್ನು ಜಾರಿಗೊಳಿಸಲಾಗಿದೆ. ಸಿರಿಧಾನ್ಯಗಳ ಮೌಲ್ಯ ವರ್ಧನೆಯ ಸರಣಿಯಲ್ಲಿ 500 ಕ್ಕೂ ಹೆಚ್ಚು ನವೋದ್ಯಮಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಆಹಾರ ಸಂಸ್ಕರಣಾ ವಲಯ

21 ನೇ ಹಣಕಾಸು ವರ್ಷ ಕೊನೆಗೊಂಡಂತೆ ಆಹಾರ ಸಂಸ್ಕರಣಾ ವಲಯ ವಾರ್ಷಿಕ ಸರಾಸರಿ ಶೇ 8.3 ರಷ್ಟು ಬೆಳವಣಿಗೆ ಕಾಣುತ್ತಿದೆ. ಆಹಾರ ಸಂಸ್ಕರಣಾ ಕ್ಷೇತ್ರ ಭಾರತದ ಅಭಿವೃದ್ಧಿಗೆ ಅಗಾಧವಾಗಿ ಮಹತ್ವ ಪಡೆದುಕೊಂಡಿದ್ದು, ಇದು ಉದ್ಯಮ ಮತ್ತು ಕೃಷಿ ನಡುವೆ ಬಲವಾದ ಸಂಪರ್ಕ ಒದಗಿಸುತ್ತದೆ ಮತ್ತು ಪರಸ್ಪರ ಚಟುವಟಿಕೆಗಳನ್ನು ಉತ್ತೇಜಿಸುತ್ತದೆ.  ಕೃಷಿ – ಆಹಾರ ರಫ್ತು ಚಟುವಟಿಕೆಯ ಮೌಲ್ಯ ವೃದ್ಧಿಸಲಿದ್ದು, ಆಹಾರ ರಫ್ತು ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. 2021-22 ರಲ್ಲಿ ಭಾರತದಿಂದ ಶೇ 10.9 ರಷ್ಟು ಪ್ರಮಾಣದ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ.  

ಈ ಕ್ಷೇತ್ರದಲ್ಲಿರುವ ಅಪಾರ ಸಾಮರ್ಥ್ಯವನ್ನು ಗುರುತಿಸಿರುವ ಸರ್ಕಾರ, ದೇಶದಲ್ಲಿ ಆಹಾರ ಸಂಸ್ಕರಣೆಯ ಅಭಿವೃದ್ಧಿ ಗುರಿಯನ್ನು ಹೊಂದಿರುವ ವಿವಿಧ ಪಾಲುದಾರರೊಂದಿಗೆ ಮಂಚೂಣಿಯಲ್ಲಿದೆ.  ಪ್ರಧಾನಮಂತ್ರಿ ಕಿಸಾನ್ ಸಂಪದ ಯೋಜನೆಯಡಿ [ಪಿಎಂಕೆಎಸ್ ವೈ] ಆಹಾರ ಸಂಸ್ಕರಣೆಯ ಒಟ್ಟಾರೆ ಬೆಳವಣಿಗೆ ಮತ್ತು ಪ್ರಗತಿಯ ದೃಷ್ಟಿಯಿಂದ 2022 ರ ಡಿಸೆಂಬರ್ 31 ರವರೆಗೆ 677 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಇದಲ್ಲದೇ ಅಸಂಘಟಿತ ವಿಭಾಗದಲ್ಲಿ ವೈಯಕ್ತಿಕ ಸೂಕ್ಷ್ಮ ಉದ್ಯಮಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಮತ್ತು ಈ ವಲಯದ ವಿಶೇಷತೆಯನ್ನು ಪ್ರೋತ್ಸಾಹ ಮಾಡಲು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣೆ ಉದ್ಯಮ [ಪಿಎಂಎಫ್ಎಂಇ] ಯೋಜನೆಯಡಿ 2022 ರ ಡಿಸೆಂಬರ್ 31 ರ ವರೆಗೆ 15,095 ಮಂದಿಗೆ 1,402 ಕೋಟಿ ರೂಪಾಯಿ ಸಾಲ ಮಂಜೂರಾಗಿದೆ. ಈ ಯೋಜನೆಯು ಒಂದು ಜಿಲ್ಲೆ ಒಂದು ಉತ್ಪನ್ನ [ಒಡಿಒಪಿ] ವಿಧಾನವನ್ನು ಅಳವಡಿಸಿಕೊಂಡಿದ್ದು, ಪ್ರೋತ್ಸಾಹ ಧನವನ್ನು ಬಳಸಿಕೊಂಡು, ಸೇವೆಗಳು ಮತ್ತು ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಮೂಲಕ ಪೂರ್ಣ ಪ್ರಮಾಣದ ಲಾಭವನ್ನು ಪಡೆದುಕೊಳ್ಳುತ್ತಿವೆ.  35 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ವರೆಗೆ 713 ಜಿಲ್ಲೆಗಳಲ್ಲಿ 137 ವಿನೂತನ ಉತ್ಪನ್ನಗಳಿಗೆ ಒಡಿಒಪಿ ಕಾರ್ಯಕ್ರಮದಡಿ ಮಂಜೂರಾತಿ ನೀಡಲಾಗಿದೆ.  ಆಹಾರ ಸಂಸ್ಕರಣಾ ಕೈಗಾರಿಕೆಗೆ [ಪಿಎಲ್ಐಎಸ್ಎಫ್ ಪಿಐ] ಉತ್ಪಾದನೆ ಸಂಪರ್ಕಿತ ಯೋಜನೆಯನ್ನು 2022 ರ ಮಾರ್ಚ್ ನಲ್ಲಿ ಜಾರಿಗೊಳಿಸಲಾಗಿದ್ದು, ಇದು ಜಾಗತಿಕ ಆಹಾರ ವಲಯದ ಸಾಧಕರನ್ನು ರಚಿಸಲು, ಹೂಡಿಕೆ ಉತ್ತೇಜಿಸಲು ನಿರ್ದಿಷ್ಟವಾದ ಕ್ರಮಗಳನ್ನು ಒಳಗೊಂಡಿದೆ. ಸಾಗರ ಉತ್ಪನ್ನಗಳು, ಸಂಸ್ಕರಿಸಿದ ಹಣ್ಣುಗಳು ಮತ್ತು ತರಕಾರಿಗಳು, ಸೇವಿಸಲು ಸಿದ್ಧವಾದ/ಅಡುಗೆ ಮಾಡಲು ಸಿದ್ಧವಾದ. ಉತ್ಪನ್ನಗಳಂತಹ  ವಲಯದಲ್ಲಿ ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ಬಗ್ಗೆ ಸಮೀಕ್ಷೆಯು ಬೆಳಕು ಚೆಲ್ಲಿದೆ.

ಕೃಷಿ ಮೂಲ ಸೌಕರ್ಯ ನಿಧಿ [ಎಐಎಫ್]

ನವಭಾರತಕ್ಕಾಗಿ ನೀತಿ ಆಯೋಗದ ಕಾರ್ಯತಂತ್ರ ಹೆಚ್ಚಿನ ಮತ್ತು ಪರಿಣಾಮಕಾರಿ ಶೀತಲಗೃಹ ಸರಪಳಿಯಲ್ಲಿನ ಮೂಲ ಸೌಕರ್ಯಗಳ ಕೊರತೆಯನ್ನು ನಿರ್ಣಾಯಕವಾದ ಪೂರೈಕೆ ವಲಯದ ಅಡಚಣೆ ಎಂದು ಗುರುತಿಸುತ್ತದೆ. ವಾರ್ಷಿಕವಾಗಿ ಅಂದಾಜು 92,561 ಕೋಟಿ ರೂಪಾಯಿಯಷ್ಟು ಸುಗ್ಗಿ ನಂತರದ [ಬಹುತೇಕ ಹಾಳಾಗುವ ವಸ್ತುಗಳು] ನಷ್ಟಗಳು ಎಂದು ಅಂದಾಜಿಸಲಾಗಿದೆ. ಇದನ್ನು ನಿರ್ವಹಣೆ ಮಾಡಲು ಮತ್ತು ಕೃಷಿ, ಸಂಬಂಧಿತ ವಲಯಗಳ ಬೆಳವಣಿಗೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರ ಎಐಎಫ್ ಅನ್ನು ಪರಿಚಯಿಸಿದೆ. ಇದು 2020 – 21 ರಿಂದ 2032 – 33 ರ ವರೆಗೆ ಸುಗ್ಗಿಯ ನಂತರದ ನಿರ್ವಹಣಾ ಮೂಲ ಸೌಕರ್ಯ ಮತ್ತು ಸಮುದಾಯ ಆಧಾರಿತ ಕೃಷಿ ಸ್ವತ್ತುಗಳ ರಚನೆಗಾಗಿ ಕಾರ್ಯನಿರ್ವಹಿಸುವ ಹಣಕಾಸು ಸೌಲಭ್ಯವಾಗಿದ್ದು, ಇದು ಸಾಲದ ಖಾತರಿಗಳನ್ನು ಒಳಗೊಂಡಿರುವ ಯೋಜನೆಯಾಗಿದೆ. ದೇಶದಲ್ಲಿ ಈ ವರೆಗೆ ಈ ಯೋಜನೆಯಡಿ 18,133 ಯೋಜನೆಗಳಿಗೆ 13,681 ಕೋಟಿ ರೂಪಾಯಿ ಮೊತ್ತವನ್ನು ಮಂಜೂರು ಮಾಡಲಾಗಿದೆ. ಇದರಲ್ಲಿ 8,076 ಗೋದಾಮುಗಳು, 2,788 ಪ್ರಾಥಮಿಕ ಸಂಸ್ಕರಣಾ ಘಟಕಗಳು, 1,860 ಗ್ರಾಹಕ ಗ್ರಾಹಕ ಕೇಂದ್ರಗಳು, 937 ವಿಂಗಡಣೆ ಮತ್ತು ಶ್ರೇಣಿಕರಣ ಘಟಕಗಳು, 696 ಶೀಥಲಗೃಹ ಯೋಜನೆಗಳು, 163 ಮೌಲ್ಯಮಾಪನ ಘಟಕಗಳು ಮತ್ತು ಇತರೆ 3613 ಕೋಯ್ಲೋತ್ತರ ನಿರ್ವಹಣಾ ಯೋಜನೆಗಳು ಹಾಗೂ ಸಮುದಾಯ ಆಧಾರಿತ ಕೃಷಿ ಆಸ್ತಿ ನಿರ್ಮಾಣ ಮಾಡುವ ಯೋಜನೆಗಳು ಸೇರಿವೆ.

ರಾಷ್ಟ್ರೀಯ ಕೃಷಿ ಮಾರುಕಟ್ಟೆ [ಇ-ನ್ಯಾಮ್]

ಇ-ನಾಮ್ ಪೋರ್ಟಲ್ ನಲ್ಲಿ 2022 ರ ಡಿಸೆಂಬರ್ 31 ರ ವರೆಗೆ 1.7 ಕೋಟಿಗೂ ಹೆಚ್ಚು ರೈತರು ಮತ್ತು 2.3 ಕೋಟಿ ವ್ಯಾಪಾರಿಗಳು ನೋಂದಣಿಯಾಗಿದ್ದಾರೆ. ಆನ್ ಲೈನ್ ನಲ್ಲಿ ಪಾರದರ್ಶಕ, ಸ್ಪರ್ದಾತ್ಮಕ ಬಿಡ್ಡಿಂಗ್ ವ್ಯವಸ್ಥೆಯನ್ನು ರಚಿಸಲು ಈ ಯೋಜನೆ ಪ್ರಾರಂಭಿಸಲಾಗಿದೆ. ರೈತರು ತಮ್ಮ ಉತ್ಪನ್ನಗಳಿಗೆ ಲಾಭದಾಯಕ ಬೆಲೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇ-ನ್ಯಾಮ್ ಯೋಜನೆಯಡಿ ಗುಣಮಟ್ಟದ ಪರೀಕ್ಷೆ ಸೇರಿದಂತೆ ಸಂಬಂಧಪಟ್ಟ ಯಂತ್ರಾಂಶವನ್ನು ಸಜ್ಜುಗೊಳಿಸಲು ಸರ್ಕಾರ ಪ್ರತಿಯೊಂದು ಎಪಿಎಂಸಿ ಮಂಡಿಗಳಿಗೆ ಉಚಿತ ತಂತ್ರಾಂಶ ಮತ್ತು ಶುಚಿಗೊಳಿಸುವ ಯಂತ್ರಗಳು, ವಿಂಗಡಣೆ, ಪ್ಯಾಕೇಜಿಂಗ್, ಕಾಂಪೋಸ್ಟ್ ಘಟಕ ಮುಂತಾದ ಮೂಲ ಸೌಕರ್ಯ ಕಲ್ಪಿಸಲು 75 ಲಕ್ಷ ರೂಪಾಯಿ ಸಹಾಯ ನೀಡುತ್ತಿದೆ.

ದೇಶದ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಕೃಷಿ ಕ್ಷೇತ್ರದ ಕಾರ್ಯಕ್ಷಮತೆ ನಿರ್ಣಾಯಕವಾಗಿದೆ ಎಂಬುದನ್ನು ಸಮೀಕ್ಷೆ ಪರಿಗಣಿಸಿದೆ. ಕೈಗೆಟುವ, ಸಕಾಲದಲ್ಲಿ ಈ ವಲಯದಲ್ಲಿ ಹೂಡಿಕೆಯನ್ನು ಪ್ರೋತ್ಸಾಹಿಸುವ, ಎಲ್ಲವನ್ನೊಳಗೊಂಡ ರೀತಿಯಲ್ಲಿ ಸಾಲ ವಿತರಣೆ ಮಾಡಲಾಗುತ್ತಿದೆ. ತೋಟಗಾರಿಕಾ ವಲಯದ ಮೇಲೆ ಗಮನ ಕೇಂದ್ರೀಕರಣ ಮತ್ತು ಸಂಬಂಧಪಟ್ಟ ವಲಯದಲ್ಲಿ ರೈತರು ಒಲವು ಹೊಂದಿರುವ ಕಾರಣದಿಂದ ರೈತರ ಆದಾಯವನ್ನು ವೈವಿಧ್ಯಮಯವಾಗಿ ಮಾಡಲಾಗಿದೆ.  ಹವಾಮಾನ ಆಘಾತಗಳ ನಿಯಂತ್ರಣಕ್ಕಾಗಿ ಪುಟಿದೇಳುವ ಈ ಎಲ್ಲಾ ಉಪಕ್ರಮಗಳನ್ನು ಕೈಗೊಂಡಿದ್ದು, ಇದರ ಪರಿಣಾಮ ಈ ಕ್ಷೇತ್ರದಲ್ಲಿ ಸುಸ್ಥಿರ ಮತ್ತು ಎಲ್ಲವನ್ನೊಳಗೊಂಡ ಅಭಿವೃದ್ಧಿ ಹೊಂದಲು ಕಾರಣವಾಗಿದೆ.   



(Release ID: 1895204) Visitor Counter : 321