ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ಶ್ರೀ ಪರ್ಷೋತ್ತಮ್ ರೂಪಾಲಾ ಇಂದು ದೇಶಾದ್ಯಂತದ ವಿವಿಧ ಪಶುಪಾಲಕ ಸಮುದಾಯದವರೊಂದಿಗೆ ಸಂವಾದ ನಡೆಸಿದರು.

Posted On: 27 JAN 2023 5:52PM by PIB Bengaluru
•    ಸಮುದಾಯಕ್ಕೆ ಸಕ್ರಿಯಗೊಳಿಸುವ ನೀತಿಗಳನ್ನು ಆದ್ಯತೆ ನೀಡಲು,  ಭವಿಷ್ಯದ ಚರ್ಚೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು, ಯುವಜನರನ್ನು ಹೇಗೆ ಪ್ರೇರೇಪಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ ಇಲಾಖೆಯು ಇತ್ತೀಚೆಗೆ ‘ಪಾಸ್ಟೋರಲ್ ಸೆಲ್’ ಅನ್ನು ರಚಿಸಿದೆ ಎಂದು ಸಚಿವರು ಹೇಳಿದರು.
•    ಚರ್ಚೆಯ ಸಮಯದಲ್ಲಿ ಪಶುಪಾಲಕ ಸಮುದಾಯಗಳು ಮುಖ್ಯ ಕಾಳಜಿಗಳಾದ ಗೋಮಾಳ ಜಮೀನುಗಳ ಕ್ರಮೇಣ ನಷ್ಟದಿಂದ ಹಿಡಿದು, ಪಶುಪಾಲಕರ ಅಧಿಕೃತ ಮನ್ನಣೆಯಿಂದ ಸಾಂಪ್ರದಾಯಿಕ ಜ್ಞಾನದ ದಾಖಲೀಕರಣ ಮತ್ತು ಸಮುದಾಯವು ಅನುಸರಿಸುವ ಜನಾಂಗೀಯ ಪಶುವೈದ್ಯಕೀಯ ಅಭ್ಯಾಸಗಳ ಬಗ್ಗೆ ವ್ಯಕ್ತಪಡಿಸಿದವು.

ಶ್ರೀ ಪರ್ಷೋತ್ತಮ್ ರೂಪಾಲಾ, ಕೇಂದ್ರ ಸಚಿವ, ಮೀನುಗಾರಿಕೆ ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಧಿಕಾರಿಗಳೊಂದಿಗೆ ಇಂದು ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರ (ಡಿಎಐಸಿ) ನವದೆಹಲಿಯಲ್ಲಿ ದೇಶಾದ್ಯಂತದ ವಿವಿಧ ಕುರುಬ ಸಮುದಾಯಗಳೊಂದಿಗೆ ಸಂವಾದ ನಡೆಸಿದರು.

ಚರ್ಚೆಯ ಸಮಯದಲ್ಲಿ ಪಶುಪಾಲಕ ಸಮುದಾಯಗಳು ಮುಖ್ಯ ಕಾಳಜಿಗಳಾದ ಗೋಮಾಳ ಜಮೀನುಗಳ ಕ್ರಮೇಣ ನಷ್ಟದಿಂದ ಹಿಡಿದು, ಪಶುಪಾಲಕರ ಅಧಿಕೃತ ಮನ್ನಣೆಯಿಂದ ಸಾಂಪ್ರದಾಯಿಕ ಜ್ಞಾನದ ದಾಖಲೀಕರಣ ಮತ್ತು ಸಮುದಾಯವು ಅನುಸರಿಸುವ ಜನಾಂಗೀಯ ಪಶುವೈದ್ಯಕೀಯ ಅಭ್ಯಾಸಗಳ ಬಗ್ಗೆ ವ್ಯಕ್ತಪಡಿಸಿದವು.

ಸಮುದಾಯಕ್ಕೆ ಅನುವು ಮಾಡಿಕೊಡುವ ನೀತಿಗಳನ್ನು ಆದ್ಯತೆ ನೀಡಲು, ಭವಿಷ್ಯದ  ಚರ್ಚೆಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಿ, ಯುವಕರನ್ನು ಹೇಗೆ ಪ್ರೇರೇಪಿಸಬಹುದು ಎಂಬುದರ ಮೇಲೆ ಕೇಂದ್ರೀಕರಿಸಿ ಇಲಾಖೆಯು ಇತ್ತೀಚೆಗೆ ‘ಪಾಸ್ಟೋರಲ್ ಸೆಲ್’ (ಪಶುಪಾಲಕರ ಕೋಶ) ಅನ್ನು ರಚಿಸಿದೆ ಎಂದು ಸಚಿವರು ತಿಳಿಸಿದರು. ಪಶುಪಾಲಕ ಸಮುದಾಯಗಳು ತಮ್ಮ ಸಂಪ್ರದಾಯಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಸಂರಕ್ಷಿಸಿಕೊಂಡು ಬರುತ್ತಿರುವುದನ್ನು ಅವರು ಶ್ಲಾಘಿಸಿದರು.

ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ, ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿಯನ್ನು ಪಶುಪಾಲಕರಿಗೆ ನೆರವು ನೀಡಬಹುದಾದ ಭಾರತದ ಎಲ್ಲಾ ರಾಜ್ಯ ಪಶುಸಂಗೋಪನಾ ಇಲಾಖೆಗಳಿಗೆ ರವಾನಿಸಲಾಗಿದೆ.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯವು 'ಕಿಸಾನ್ ಕ್ರೆಡಿಟ್ ಕಾರ್ಡ್'ಗಳ ಸೌಲಭ್ಯಗಳನ್ನು ಪಶುಪಾಲಕ ಸಮುದಾಯಗಳಿಗೆ ವಿಸ್ತರಿಸಿದೆ.

ನೀತಿಗಳನ್ನು ಸಕ್ರಿಯಗೊಳಿಸಲು ಆದ್ಯತೆ ನೀಡಲು ಸಚಿವಾಲಯವು ಇತ್ತೀಚೆಗೆ 'ಪಾಸ್ಟೋರಲ್ ಸೆಲ್' ಅನ್ನು ರಚಿಸಿದೆ.

2024ರಲ್ಲಿ ನಿಗದಿಯಾಗಿರುವ ಮುಂಬರುವ 21ನೇ ಜಾನುವಾರು ಗಣತಿಯಲ್ಲಿ ಪಶುಪಾಲಕ ಸಮುದಾಯಗಳ ವಿವರಗಳನ್ನು ಸೇರಿಸಲು ಸಚಿವಾಲಯ ನಿರ್ಧರಿಸಿದೆ.

2023ರ ಜನವರಿಯಲ್ಲಿ ಗುಜರಾತ್ನ ಭುಜ್ನಲ್ಲಿ ನಡೆದ ‘ಪಾಸ್ಟೋರಲ್ ಕನ್ವೆನ್ಷನ್’ (ಪಶುಪಾಲಕರ ಶೃಂಗಸಭೆ) ಗೆ ಕೇಂದ್ರ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು. ಸಮಾವೇಶದ ಸಮಯದಲ್ಲಿ ಮತ್ತು ನಿರ್ದಿಷ್ಟವಾಗಿ ‘ಪಾಸ್ಟೋರಲಿಸ್ಟ್ ಯೂತ್ ಕಾನ್ಕ್ಲೇವ್’ ಸಂದರ್ಭದಲ್ಲಿ ಪಶುಪಾಲಕ ಸಮುದಾಯಗಳು ವ್ಯಕ್ತಪಡಿಸಿದ ಮುಖ್ಯ ಕಾಳಜಿಗಳು ಈ ಕೆಳಗಿನಂತಿವೆ:

i. ಹಾಳಾಗುತ್ತಿರುವ ಹುಲ್ಲುಗಾವಲು ಭೂಮಿಗಳ ಪುನರುತ್ಪಾದನೆ, ಹುಲ್ಲುಗಾವಲು ಅಭಿವೃದ್ಧಿ ಮತ್ತು ಹುಲ್ಲುಗಾವಲುಗಳಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವುದು

ii ತಳಮಟ್ಟದಲ್ಲಿ ಅರಣ್ಯ ಹಕ್ಕುಗಳ ಕಾಯಿದೆ (ಎಫ್ಆರ್ಎ) ಅನುಷ್ಠಾನ. ಅರಣ್ಯಗಳು, ಹುಲ್ಲುಗಾವಲುಗಳು ಮತ್ತು ಹಳ್ಳಿಯ ಸಾಮಾನ್ಯ ಭೂಮಿಯಲ್ಲಿ ಸಾಕಷ್ಟು ಮೇಯಿಸುವ ಸ್ಥಳಗಳಿಗೆ ಪ್ರವೇಶವನ್ನು ಖಾತ್ರಿಪಡಿಸುವುದು

iii ಪಶುಪಾಲಕರಿಗೆ ಸಾಮಾಜಿಕ ಮನ್ನಣೆ; ಅಧಿಕೃತ ಗುರುತಿಸುವಿಕೆ ಮತ್ತು ಗುರುತು

iv. ಉತ್ಪನ್ನಗಳಿಗೆ (ಹಾಲು, ಮಾಂಸ ಮತ್ತು ಉಣ್ಣೆ) ಉತ್ತಮ ರಚನೆಯ ಮಾರುಕಟ್ಟೆ ಸೌಲಭ್ಯಗಳನ್ನು ಸ್ಥಾಪಿಸುವುದು ಇದರಿಂದ ಉತ್ಪನ್ನದ ಸರಿಯಾದ ಮೌಲ್ಯವನ್ನು ನಿಜವಾದ ಗ್ರಾಮೀಣ ಸಮುದಾಯಗಳಿಗೆ ತಲುಪುವುದನ್ನು ಖಚಿತಪಡಿಸುವುದು. ಬೇಗ ನಾಶವಾಗುವ ಉತ್ಪನ್ನಗಳ (ಹಾಲು) ಮಾರುಕಟ್ಟೆಗೆ ಸಕಾಲಕ್ಕೆ ಸಾಗಿಸುವ ಸೌಲಭ್ಯ. ಮಾರುಕಟ್ಟೆಗೆ ಅನುಕೂಲವಾಗುವಂತೆ ಸಹಕಾರ ಸಂಘಗಳ ರಚನೆ

v. ಜಾನುವಾರು ತಳಿಗಳ ಸಂರಕ್ಷಣೆ

vi. ಪಶುಪಾಲಕ ಸಮುದಾಯಗಳು ಅನುಸರಿಸುವ ಸಾಂಪ್ರದಾಯಿಕ ಜ್ಞಾನ ಮತ್ತು ಜನಾಂಗೀಯ ಪಶುವೈದ್ಯಕೀಯ ಅಭ್ಯಾಸಗಳ ದಾಖಲಾತಿ

vii. ಪಶುಪಾಲಕರಿಗೆ ಸಂಚಾರಿ ಶಾಲೆಗಳನ್ನು ಸ್ಥಾಪಿಸುವುದು

viii. ವಲಸೆ ಹೋಗುವ ಮಾರ್ಗದಲ್ಲಿ ಎತ್ತರದ ಭೂಮಿ ಮತ್ತು ಕಡಿಮೆ ಹುಲ್ಲುಗಾವಲುಗಳಲ್ಲಿ ಎಲ್ಲರಿಗೂ  ಸೇವಾ ವಿತರಣೆಯನ್ನು ಖಚಿತಪಡಿಸಿಕೊಳ್ಳುವುದು

 
ಹಿನ್ನೆಲೆ:

ಅಲೆಮಾರಿ ಪಶುಪಾಲನೆಯು ಪಶುಪಾಲನೆಯ ಒಂದು ರೂಪವಾಗಿದ್ದು, ಜಾನುವಾರುಗಳನ್ನು ಗೋಮಾಳ, ಹುಲ್ಲುಗಾವಲುಗಳಲ್ಲಿ ಮೇಯಿಸುವುದರ ಮೂಲಕ ಸಾಕಲಾಗುತ್ತದೆ, ಚಾರಿತ್ರಿಕವಾಗಿ ಅಲೆಮಾರಿ ಜನರು ತಮ್ಮ ಹಿಂಡುಗಳೊಂದಿಗೆ ತಿರುಗಾಡುತ್ತಾರೆ.  ಸಾಕು ಪ್ರಾಣಿಗಳಲ್ಲಿ ಕುರಿ, ಮೇಕೆ, ಒಂಟೆಗಳು, ದನ, ಎಮ್ಮೆ, ಯಾಕ್ಸ್ ಮತ್ತು ಕತ್ತೆ ಸೇರಿವೆ.

ಅಲೆಮಾರಿ ಪಶುಪಾಲನೆಯನ್ನು ಜಾತಿ ಅಥವಾ ಜನಾಂಗೀಯ ಗುಂಪುಗಳ ಜನರು ಮಾಡುತ್ತಾರೆ, ಗಾಢ ಜಾನುವಾರುಗಳನ್ನು ಸಾಕುವುದರ ಬಗ್ಗೆ ಗಾಢ ಸಾಂಪ್ರದಾಯಿಕ ಸಂಬಂಧವನ್ನು ಹೊಂದಿರುವ ಇವರು ಹುಲ್ಲುಗಾವಲು ಹುಡುಕುತ್ತಾ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುತ್ತಿರುತ್ತಾರೆ. ಅಲೆಮಾರಿ ಪಶುಪಾಲನೆಯನ್ನು ದೇಶದಾದ್ಯಂತ ಪರ್ವತಗಳಿಂದ ಬಯಲು ಸೀಮೆಯವರೆಗೆ ಮಾಡಲಾಗುತ್ತದೆ - ಇದು ಸ್ಥಳೀಯವಾಗಿ ವಿವಿಧ ಸ್ಥಳೀಯ ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳಲ್ಲಿ ಕಾಣಿಸುತ್ತದೆ ಸಮತಲದ ಪಶುಪಾಲನೆಯು ಒಣಮತ್ತು ಶುಷ್ಕ ಭಾಗಗಳಲ್ಲಿ ಅಸ್ತಿತ್ವದಲ್ಲಿದೆ, ಲಂಬವಾದ ಪಶುಪಾಲನೆಯು ಹಿಮಾಲಯ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಮೇವು ಮತ್ತು ನೀರಿನ ಹುಡುಕಾಟದಲ್ಲಿ ಹೆಚ್ಚಿನ ಸಂಖ್ಯೆಯ ಸಾಂಪ್ರದಾಯಿಕ ಒಳ ಮತ್ತು ಅಂತರ-ರಾಜ್ಯ  ವಲಸೆ ಮಾರ್ಗಗಳು ದೇಶಾದ್ಯಂತ ಅಸ್ತಿತ್ವದಲ್ಲಿವೆ.  ಪಶುಪಾಲಕರು ಸಾಮಾನ್ಯವಾಗಿ ಅದೇ ವಲಸೆ ಮಾರ್ಗಗಳನ್ನು ಸಾಂದರ್ಭಿಕವಾಗಿ ಕೆಲವು  ಬದಲಾವಣೆಗಳೊಂದಿಗೆ ಅನುಸರಿಸುತ್ತಾರೆ. ಒಣ, ಶುಷ್ಕ ಮತ್ತು ಅರೆ ಶುಷ್ಕ ಬಯಲು ಪ್ರದೇಶಗಳಲ್ಲಿ (ರಾಜಸ್ಥಾನ, ಗುಜರಾತ್, ಕರ್ನಾಟಕ, ಒರಿಸ್ಸಾ, ಆಂಧ್ರ ಪ್ರದೇಶ ಇತ್ಯಾದಿ) ಸಮತಲ ಮಾರ್ಗಗಳನ್ನು ಕೈಗೊಳ್ಳಲಾಗುತ್ತದೆ. ಹಿಮಾಲಯ ಪ್ರದೇಶಗಳಲ್ಲಿ (ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಮತ್ತು ಅರುಣಾಚಲ ಪ್ರದೇಶ) ಲಂಬ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಆದಾಗ್ಯೂ ಎಲ್ಲಾ ವಲಸೆ ಮಾರ್ಗಗಳನ್ನು ಇನ್ನೂ ದಾಖಲಿಸಲಾಗಿಲ್ಲ.

ವಲಸೆ ಪಶುಪಾಲನೆಯ ಪ್ರಾಮುಖ್ಯತೆ ಈ ಕೆಳಗಿನಂತಿದೆ:

i. ಅಲೆಮಾರಿ ದನಗಾಹಿಗಳು ನೈಸರ್ಗಿಕ ತಳಿಗಾರರಾಗಿದ್ದು, ಕಠಿಣ ಪರಿಸ್ಥಿತಿಗಳಲ್ಲಿ ಬದುಕಬಲ್ಲ ಅತ್ಯಂತ ಗಟ್ಟಿಮುಟ್ಟಾದ ಪ್ರಾಣಿಗಳನ್ನು ಉತ್ಪಾದಿಸುತ್ತಾರೆ.

ii ಹವಾಮಾನ ಸ್ಥಿತಿಸ್ಥಾಪಕ: ಈ ಹವಾಮಾನ ಮತ್ತು ಸಂಪನ್ಮೂಲ-ಆಧಾರಿತ ರೂಪಾಂತರಕ್ಕೆ ಯಾವುದೇ ಬಾಹ್ಯ ವಿವರಗಳ ಅಗತ್ಯವಿಲ್ಲ: ಹೆಚ್ಚು ವೆಚ್ಚಕ್ಕೆ ತಕ್ಕ ಮತ್ತು ಮಿತವ್ಯಯ. ಸಂಚಾರದಲ್ಲಿ ಸಂಪತ್ತು ಉತ್ಪತ್ತಿಯಾಗುತ್ತದೆ.

iii ಪಶುಪಾಲಕ ಹಿಂಡುಗಳು ಉತ್ಪಾದಿಸುವ ಹಾಲು, ಮಾಂಸ ಮತ್ತು ಉಣ್ಣೆಯು ನೈಸರ್ಗಿಕವಾಗಿರುತ್ತದೆ.

iv. ಈ ಆಚರಣೆಯು ಮಣ್ಣನ್ನು ಫಲವತ್ತಾಗಿಸುತ್ತದೆ

v. ಜಾನುವಾರುಗಳು ಹುಲ್ಲು ಮತ್ತು ಪೊದೆಯನ್ನು ಮೇಯುವುದು , ಪರಿಸರ ವ್ಯವಸ್ಥೆಯ ಆರೋಗ್ಯ ಮತ್ತು ಉತ್ಪಾದಕತೆಗೆ ಅತ್ಯಗತ್ಯ (ಐಯುಸಿಎನ್ ವರದಿ), ಜೀವವೈವಿಧ್ಯತೆಯನ್ನು ಸಂರಕ್ಷಿಸುತ್ತದೆ, ಮರುಭೂಮಿಯ ವಿಸ್ತರಣೆಯನ್ನು ತಡೆಹಿಡಿಯುತ್ತದೆ, ಇಂಗಾಲ ಶೇಖರಣೆ ಮತ್ತು ಮಣ್ಣಿನ ಸವೆತವನ್ನು ತಡೆಯುತ್ತದೆ. ಇದು ಅರಣ್ಯ ಪುನರುತ್ಥಾನಕ್ಕೆ ಸಹಾಯ ಮಾಡುತ್ತದೆ.

vi. ಅವುಗಳ ಸಂಚಾರವು  ಅತಿಯಾಗಿ ಮೇಯಿಸುವುದನ್ನು ತಡೆಯುತ್ತದೆ, ನೈಸರ್ಗಿಕ ಸಸ್ಯವರ್ಗವನ್ನು ಮತ್ತೆ ಬೆಳೆಯಲು ಅನುವು ಮಾಡಿಕೊಡುತ್ತದೆ – ಇದು  ಫಲವತ್ತತೆ ಕಳೆದುಕೊಂಡ ಭೂಮಿಯನ್ನು ನಿರ್ವಹಿಸುವ ಪ್ರಮುಖ ಉತ್ತಮ ಅಭ್ಯಾಸ.

vii. ಪಶುಪಾಲಕರು ಸ್ವತಂತ್ರರು: ಆದ್ದರಿಂದ ಮಳೆಯ ಕೊರತೆಯ ಸಮಯದಲ್ಲಿಯೂ ಸಹ ಕೃಷಿಕರು ಸಾಮಾನ್ಯವಾಗಿ  ಅನುಭವಿಸುವ ಮರುಪಾವತಿಸಲಾಗದ ಸಾಲಗಳ ಒತ್ತಡವನ್ನು ಎದುರಿಸುವುದಿಲ್ಲ. ಆದ್ದರಿಂದ ಈ ರೀತಿಯ ಅಭ್ಯಾಸವು ಇತರ ಪಶುಸಂಗೋಪನೆಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿದೆ.

*****



(Release ID: 1894225) Visitor Counter : 147


Read this release in: English , Urdu , Hindi