ಕೃಷಿ ಸಚಿವಾಲಯ
azadi ka amrit mahotsav

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಜಸ್ಥಾನದ ಕೋಟಾದಲ್ಲಿ ಎರಡು ದಿನಗಳ “ಕೃಷಿ-ಮಹೋತ್ಸವ: ಪ್ರದರ್ಶನ ಮತ್ತು ಪ್ರಶಿಕ್ಷಣ” ವನ್ನು ನಾಳೆ ಆಯೋಜಿಸಲಿದೆ.


ಸುಮಾರು 35,000 ರೈತರು ಭಾಗವಹಿಸುವ ನಿರೀಕ್ಷೆಯಿದ್ದು, ಸುಧಾರಿತ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ತರಬೇತಿಯನ್ನು ನಡೆಸಲಾಗುವುದು

ಉದ್ಘಾಟನಾ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಉಪಸ್ಥಿತರಿರುವರು; ಸಮಾರೋಪ ಸಮಾರಂಭದಲ್ಲಿ ಶ್ರೀ ಓಂ ಬಿರ್ಲಾ ಅವರ ಜೊತೆಗೆ ಕೇಂದ್ರ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಶ್ರೀ ಪುರುಷೋತ್ತಮ್ ರೂಪಾಲಾ ಸಹ ಉಪಸ್ಥಿತರಿರುವರು. 

Posted On: 23 JAN 2023 4:51PM by PIB Bengaluru

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ರಾಜಸ್ಥಾನದ ಕೋಟಾ ವಿಭಾಗವನ್ನು ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕ್ಷೇತ್ರದಲ್ಲಿ ಮುಂದುವರಿದ ವಿಭಾಗವಾಗಿ ಮತ್ತು ಮುಂಚೂಣಿಯಲ್ಲಿರುವಂತೆ ಮಾಡಲು, ಎರಡು ದಿನಗಳ ಕೃಷಿ ಮಹೋತ್ಸವ-ಪ್ರದರ್ಶನ ಮತ್ತು ತರಬೇತಿಯನ್ನು 24 ಮತ್ತು 25 ಜನವರಿ 2023ರಂದು ರಾಜ್ಯದ ದಸರಾ ಮೈದಾನ, ಕೋಟಾದಲ್ಲಿ ಆಯೋಜಿಸಲಾಗಿದೆ.  

ಲೋಕಸಭೆಯ ಸ್ಪೀಕರ್ ಶ್ರೀ ಓಂ ಬಿರ್ಲಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ, ಕೇಂದ್ರ ಪಶುಸಂಗೋಪನೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಡಾ. ಸಂಜೀವ್ ಬಲ್ಯಾನ್, ರಾಜಸ್ಥಾನ ರಾಜ್ಯ ಕೃಷಿ ಮತ್ತು ಪಶುಸಂಗೋಪನೆ ಸಚಿವ ಶ್ರೀ ಲಾಲಚಂದ್ ಕಟಾರಿಯಾ, ಮತ್ತು ಉದ್ಘಾಟನಾ ಸಮಾರಂಭದಲ್ಲಿ ರಾಜಸ್ಥಾನದ ರಾಜ್ಯ ಸಚಿವ, ಸಹಕಾರ ಇಲಾಖೆ, ಶ್ರೀ ಉದಯಲಾಲ್ ಅಂಜನಾ ಉಪಸ್ಥಿತರಿರುವರು. ಇವರಲ್ಲದೆ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಹಿರಿಯ ಅಧಿಕಾರಿಗಳು ಮತ್ತು ಸುಮಾರು 35,000 ರೈತರು, ಕೃಷಿಗೆ ಸಂಬಂಧಪಟ್ಟ ನವೋದ್ಯಮಗಳು, ಕಾರ್ಪೊರೇಟ್ ಬ್ಯಾಂಕರ್ಗಳು, ವಿಸ್ತರಣಾ ಕಾರ್ಯಕರ್ತರು ಮತ್ತು ಖಾಸಗಿ ಕೃಷಿ ಸಂಸ್ಥೆಗಳ ಉದ್ಯೋಗಿಗಳು ಭಾಗವಹಿಸಲಿದ್ದಾರೆ.

ಕೃಷಿ ಉತ್ಸವದಲ್ಲಿ ಆಯೋಜಿಸಿರುವ ವಸ್ತುಪ್ರದರ್ಶನದ ಮೂಲಕ ಕೇಂದ್ರ ಹಾಗೂ ರಾಜ್ಯ ಸರಕಾರ ರೈತರಿಗಾಗಿ ನಡೆಸುತ್ತಿರುವ ಯೋಜನೆಗಳ ಕುರಿತು ಮಳಿಗೆಗಳ ಮೂಲಕ ಮಾಹಿತಿ ನೀಡಲಾಗುವುದು. ಇದರೊಂದಿಗೆ, ಖಾಸಗಿ ವಲಯದ ಕಂಪನಿಗಳು  ಕೃಷಿಗೆ ವಿವಿಧ ಒಳಹರಿವಿನ ಪೂರೈಕೆಗೆ ಸಂಬಂಧಿಸಿದ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮಳಿಗೆಗಳ ಮೂಲಕ ಪ್ರದರ್ಶಿಸುತ್ತವೆ. ಈ ಪ್ರದರ್ಶನದಲ್ಲಿ ರೈತರಿಗೆ ಕೃಷಿಗೆ ಸಂಬಂಧಿಸಿದ ನವೀಕೃತ ಮಾಹಿತಿ ನೀಡಲು 150 ಮಳಿಗೆಗಳನ್ನು ಸ್ಥಾಪಿಸಲಾಗುವುದು. ಕೃಷಿ ಕ್ಷೇತ್ರದಲ್ಲಿ ನವೋದ್ಯಮಗಳ  ಅಗತ್ಯವನ್ನು ಗಮನದಲ್ಲಿಟ್ಟುಕೊಂಡು 75 ನವೋದ್ಯಮಗಳ  ಮಳಿಗೆಗಗಳನ್ನು ಹಾಕಲಾಗುವುದು, ಇದು ಈ ಪ್ರದರ್ಶನದ ಪ್ರಮುಖ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

ಈ ಕೃಷಿ ಮಹೋತ್ಸವದಲ್ಲಿ ಕೃಷಿ, ತೋಟಗಾರಿಕೆ ಮತ್ತು ಪಶುಸಂಗೋಪನೆಗೆ ಸಂಬಂಧಿಸಿದ ವಿಷಯಗಳ ಕುರಿತು ಸುಮಾರು 5,000 ರೈತರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಎರಡು ಅವಧಿಗಳಲ್ಲಿ ಆಯೋಜಿಸಲಾಗಿದೆ. ರೈತರ ಅನುಕೂಲಕ್ಕಾಗಿ ಕೃಷಿ ಮೂಲಸೌಕರ್ಯ ನಿಧಿಯ ಕುರಿತು ವಿಶೇಷ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ. ಕೃಷಿ ಸಂಶೋಧನಾ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ವಲಯ ಕೇಂದ್ರಗಳ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಹಾಗೂ ಸುಮಾರು 35,000 ರೈತರು ಈ ಎರಡು ದಿನಗಳ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಕೃಷಿಯಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ರೈತರು ಹೆಚ್ಚು ಹೆಚ್ಚು ಭಾಗವಹಿಸುವುದು ಈ ಕಾರ್ಯಕ್ರಮದ ವಿಶೇಷತೆಯಾಗಿದೆ. ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಲು ಸುಧಾರಿತ ಕೃಷಿ ಉತ್ಪಾದನಾ ವ್ಯವಸ್ಥೆ, ಹೊಸ ಕೃಷಿ ತಂತ್ರಜ್ಞಾನ ಮತ್ತು ಸುಧಾರಿತ ಕೃಷಿ ಯಂತ್ರೋಪಕರಣಗಳನ್ನು ಅಳವಡಿಸಿಕೊಳ್ಳಲು ಎಲ್ಲಾ ರೈತರಿಗೆ ಪ್ರೋತ್ಸಾಹ ಮತ್ತು ತರಬೇತಿ ನೀಡಲಾಗುತ್ತಿದೆ.

ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ, ಶ್ರೀ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ, ಶ್ರೀ ಪರಶೋತ್ತಮ್ ರೂಪಾಲಾ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವ, ಶ್ರೀಮತಿ ಶೋಭಾ ಕರಂದ್ಲಾಜೆ ಮತ್ತು ರಾಜಸ್ಥಾನ ರಾಜ್ಯದ ಕೃಷಿ ಮತ್ತು ಪಶುಸಂಗೋಪನಾ ಸಚಿವರಾದ ಶ್ರೀ ಲಾಲಚಂದ್ ಕಟಾರಿಯಾ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿರುವರು. ಕಾಲಕಾಲಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿಯನ್ನು ಸುಸ್ಥಿರಗೊಳಿಸಲು ಸಹಾಯ ಮಾಡಲು ಈ ಪ್ರದೇಶದ ರೈತರಿಗೆ ಸರಿಯಾದ ನಿರ್ದೇಶನವನ್ನು ನೀಡುವುದು ಮುಖ್ಯವಾಗಿದೆ.

*****


(Release ID: 1893116) Visitor Counter : 144


Read this release in: English , Urdu , Hindi , Telugu