ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

'ಐಟಿ ನಿಯಮಗಳಿಗೆ' ಪ್ರಸ್ತಾಪಿಸಲಾದ ತಿದ್ದುಪಡಿಯ ಬಗ್ಗೆ ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದ ಎಂ.ಇ.ಐ.ಟಿ.ವೈ.

Posted On: 19 JAN 2023 5:29PM by PIB Bengaluru

ಸಾಮಾಜಿಕ ಮಾಧ್ಯಮ ಮತ್ತು ಇತರ ಮಧ್ಯವರ್ತಿ ವೇದಿಕೆಗಳಲ್ಲಿ ತಪ್ಪು ಮಾಹಿತಿ ಅಥವಾ ಸುಳ್ಳು ಮತ್ತು ಅಸತ್ಯ ಅಥವಾ ದಾರಿತಪ್ಪಿಸುವ ಮಾಹಿತಿಗೆ ಸಂಬಂಧಿಸಿದಂತೆ ಐಟಿ ನಿಯಮಗಳ ಪ್ರಸ್ತಾವಿತ ತಿದ್ದುಪಡಿಯ ಬಗ್ಗೆ ಸರ್ಕಾರ ಸಾರ್ವಜನಿಕರ ಜೊತೆ ಸಮಾಲೋಚನೆ ನಡೆಸಲಿದೆ.

ನಾಗರಿಕರಿಗೆ ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಇಂಟರ್ನೆಟ್ ಅನ್ನು (ಡಿಜಿಟಲ್ ನಾಗರಿಕರು) ಒದಗಿಸುವ ಸರ್ಕಾರದ ಬದ್ಧತೆಗೆ ಅನುಸಾರವಾಗಿ, ಸಂಪೂರ್ಣವಾಗಿ ಸುಳ್ಳು ಮತ್ತು ಅಸತ್ಯ ಅಥವಾ ತಪ್ಪುದಾರಿಗೆಳೆಯುವ ಸ್ವರೂಪದಲ್ಲಿರುವ ಮಾಹಿತಿಗೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ) ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು 2021ರ ("ಐಟಿ ನಿಯಮಗಳು") ನಿಯಮ 3 (1) (ಬಿ) (ವಿ) ಗೆ ಪ್ರಸ್ತಾಪಿಸಲಾದ ತಿದ್ದುಪಡಿಯ ಬಗ್ಗೆ ಮಧ್ಯಸ್ಥಗಾರರು ಮತ್ತು ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿದೆ. 

ಈ ಹಿಂದೆ, ಸಚಿವಾಲಯವು ಐಟಿ ನಿಯಮಗಳು, 2021ನ್ನು ಅಧಿಸೂಚಿಸಿದ್ದು, ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಮಧ್ಯವರ್ತಿಗಳಿಗೆ ತಮ್ಮ ಬಳಕೆದಾರರು ಅನುಚಿತ ಆತಿಥ್ಯ, ಪ್ರದರ್ಶನ, ಅಪ್ಲೋಡ್, ಮಾರ್ಪಡಿಸುವುದು, ಪ್ರಕಟಿಸುವುದು, ಪ್ರಸಾರ ಮಾಡುವುದು, ಸಂಗ್ರಹಿಸುವುದು, ನವೀಕರಿಸುವುದು ಅಥವಾ ಹಂಚಿಕೊಳ್ಳದಂತೆ ಮಾಡಲು ಸಮಂಜಸವಾದ ಪ್ರಯತ್ನಗಳನ್ನು ಮಾಡುವ ಮೂಲಕ ಸೂಕ್ತ ಶ್ರದ್ಧೆಯನ್ನು ಪಾಲಿಸಬೇಕು ಎಂದು ತಿಳಿಸಿತ್ತು. ಪ್ರಸ್ತಾವಿತ ತಿದ್ದುಪಡಿಯ ಅಡಿಯಲ್ಲಿ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋನ (https://factcheck.pib.gov.in/ ಮತ್ತು ಟ್ವಿಟರ್ ಹ್ಯಾಂಡಲ್ @PIBFactcheck) ಫ್ಯಾಕ್ಟ್ ಚೆಕ್ ಯುನಿಟ್ ನಕಲಿ ಅಥವಾ ಸುಳ್ಳು ಎಂದು ಗುರುತಿಸಲಾದ ಮಾಹಿತಿಯನ್ನು ಅಪ್ಲೋಡ್ ಮಾಡದಂತೆ, ಪ್ರಕಟಿಸದಂತೆ, ಪ್ರಸಾರ ಮಾಡದಂತೆ ಅಥವಾ ಹಂಚಿಕೊಳ್ಳದಂತೆ ಮಧ್ಯವರ್ತಿಗಳು ಪ್ರಯತ್ನ ಮಾಡಬೇಕು. ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ಸರ್ಕಾರಕ್ಕೆ ಸಂಬಂಧಿಸಿದ ನಕಲಿ ಮಾಹಿತಿಯನ್ನು ಸ್ವಯಂಪ್ರೇರಿತವಾಗಿ ಮತ್ತು ನಾಗರಿಕರು ತನ್ನ ಪೋರ್ಟಲ್ ನಲ್ಲಿ ಅಥವಾ ಇ-ಮೇಲ್ ಮತ್ತು ವಾಟ್ಸಾಪ್ ಮೂಲಕ ಕಳುಹಿಸುವ ಪ್ರಶ್ನೆಗಳ ಮೂಲಕ ಪರಿಗಣಿಸಿ ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ. ಇದಲ್ಲದೆ, ಇದು ಸರ್ಕಾರಿ ವ್ಯವಹಾರಕ್ಕೆ ಸಂಬಂಧಿಸಿದ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಸುಳ್ಳು ಎಂದು ಗುರುತಿಸಲ್ಪಟ್ಟ ಮಾಹಿತಿಯನ್ನು ಸಹ ಒಳಗೊಳ್ಳುತ್ತದೆ. ಇದಲ್ಲದೆ, ಭವಿಷ್ಯದಲ್ಲಿ ಸರ್ಕಾರವು ಅಂತಹ ಸತ್ಯ ಪರಿಶೀಲನೆಗಾಗಿ ಅಧಿಕೃತ ಏಜೆನ್ಸಿಗಳ ಪಟ್ಟಿಯಲ್ಲಿ ಇತರ ಪ್ರತ್ಯೇಕ ಏಜೆನ್ಸಿಗಳನ್ನು ಕೂಡಾ ಸೇರಿಸಬಹುದು ಎಂದು ನಿಯಮಗಳು ಉಲ್ಲೇಖಿಸುತ್ತವೆ.

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಈ ನಿಟ್ಟಿನಲ್ಲಿ: "ಐಟಿ ನಿಯಮಗಳ ಕರಡು ತಿದ್ದುಪಡಿಗಳು ಮುಕ್ತ, ಸುರಕ್ಷಿತ ಮತ್ತು ವಿಶ್ವಾಸಾರ್ಹ ಮತ್ತು ಉತ್ತರದಾಯಿತ್ವದ ಅಂತರ್ಜಾಲದ ನಮ್ಮ ಬದ್ಧತೆಗೆ ಅನುಸಾರವಾಗಿವೆ. ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಲು ನಾವು ತಿದ್ದುಪಡಿಗಳನ್ನು ಅವರಿಗೆ ವಿತರಿಸಿದ್ದೇವೆ. ಸರ್ಕಾರವು ನಿಖರವಾಗಿ ಅನುಸರಿಸುವ ಅಭ್ಯಾಸದಂತೆ, ಈ ತಿದ್ದುಪಡಿಗಳನ್ನು ಮುಕ್ತ ಸಮಾಲೋಚನೆಗಳ ಮೂಲಕವೂ ಇಡಲಾಗುವುದು - ಈ ತಿದ್ದುಪಡಿಗಳು ಅಥವಾ ಇತರ ಯಾವುದೇ ಪರಿಣಾಮಕಾರಿ ವಿಧಾನಗಳ ಬಗ್ಗೆ ಅವುಗಳನ್ನು ಪ್ರತಿಬಿಂಬಿಸಲು, ಚರ್ಚಿಸಲು ಮತ್ತು ಆಲೋಚಿಸಲು, ಇದರ ಮೂಲಕ ರಾಜ್ಯ / ರಾಜ್ಯೇತರ ಪಾಲುದಾರರು ಅಂತರ್ಜಾಲದಲ್ಲಿ ಪ್ರಸಾರವಾಗುವ ತಪ್ಪು ಮಾಹಿತಿ / ಪೇಟೆಂಟ್ ತಪ್ಪು ಮಾಹಿತಿಯನ್ನು ನಾವು ತಡೆಯಬಹುದು" ಎಂದು ಹೇಳಿದ್ದಾರೆ.

ಆನ್ ಲೈನ್ ಗೇಮಿಂಗ್ ಗೆ ಸಂಬಂಧಿಸಿದಂತೆ ಈ ನಿಯಮಗಳಿಗೆ ಪ್ರಸ್ತಾಪಿಸಲಾದ ತಿದ್ದುಪಡಿಗಳ ಬಗ್ಗೆ ಸಚಿವಾಲಯವು ಈ ಹಿಂದೆ ಸಾರ್ವಜನಿಕ ಸಮಾಲೋಚನೆಯನ್ನು ಪ್ರಾರಂಭಿಸಿತ್ತು, ಇದಕ್ಕಾಗಿ ಕೊನೆಯ ದಿನಾಂಕ 17 ಜನವರಿ 2023 ಆಗಿತ್ತು. ಈಗ ಈ ಕೊನೆಯ ದಿನಾಂಕವನ್ನು 25 ಜನವರಿ 2023ರವರೆಗೆ ವಿಸ್ತರಿಸಲಾಗಿದೆ.

ಸಚಿವಾಲಯವು 2023ರ ಜನವರಿ 24ರಂದು ಮಧ್ಯಸ್ಥಗಾರರೊಂದಿಗೆ ಐಟಿ ನಿಯಮಗಳ ನಿಯಮ 3 (1) (ಬಿ) (ವಿ) ಗೆ ಪ್ರಸ್ತಾವಿತ ತಿದ್ದುಪಡಿಯ ಬಗ್ಗೆ ಸಮಾಲೋಚನೆ ನಡೆಸಲಿದೆ.

ಸದರಿ ಎರಡೂ ತಿದ್ದುಪಡಿಗಳ ಬಗ್ಗೆ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು 25 ಜನವರಿ 2023ರೊಳಗೆ ಸಾರ್ವಜನಿಕರಿಂದ ಆಹ್ವಾನಿಸಲಾಗಿದೆ. ತಮ್ಮ ಅನಿಸಿಕೆಗಳನ್ನು MyGov ವೇದಿಕೆಯ ಮೂಲಕhttp://https://innovateindia.mygov.in/online-gaming-rules/ ನಲ್ಲಿ ಕೂಡಾ ಸಲ್ಲಿಸಬಹುದು

****


(Release ID: 1892332) Visitor Counter : 165


Read this release in: English , Urdu , Urdu , Tamil