ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

​​​​​​​ಬೆಂಗಳೂರಿನಲ್ಲಿ ನಾಳೆ ಅಂತರರಾಷ್ಟ್ರೀಯ ತಾಂತ್ರಿಕ ಕಾನೂನು ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಲಿರುವ ಸಚಿವ ಶ್ರೀ ರಾಜೀವ್ ಚಂದ್ರಶೇಖರ್


ಎನ್.ಎಕ್ಸ್.ಪಿ ಸೆಮಿಕಂಡಕ್ಟರ್ಸ್ ಗಳು ಮತ್ತು ಸಮಿಕಂಡಕ್ಟರ್ ವಿನ್ಯಾಸ ವಲಯದ ನವೋದ್ಯಮಿಗಳೊಂದಿಗೆ ಸಂವಾದ

ಜಾಗತಿಕ ಸಾಮರ್ಥ್ಯ ಕೇಂದ್ರ [ಜಿಸಿಸಿ]ದ ಅಂತರರಾಷ್ಟ್ರೀಯ ನಿಗಮಗಳ ಮುಖ್ಯಸ್ಥರನ್ನು ಭೇಟಿ ಮಾಡಲಿರುವ ಸಚಿವರು

Posted On: 18 JAN 2023 6:16PM by PIB Bengaluru

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ನಾಳೆ ‘ಟೆಕ್ ಇಂಟರ್ ನ್ಯಾಷನಲ್ ಇಂಡಿಯಾ’ ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಲಿದ್ದಾರೆ.

ಅಂತರರಾಷ್ಟ್ರೀಯ ತಂತ್ರಜ್ಞಾನ ಕಾನೂನು ಸಂಘ ಆಯೋಜಿಸಿರುವ ಸಮ್ಮೇಳನದಲ್ಲಿ ಸಚಿವರು “ಭಾರತದ ಡಿಜಿಟಲ್ ಇಂಡಿಯಾದ ದೃಷ್ಟಿಕೋನ” ಕುರಿತು ಮಾತನಾಡಲಿದ್ದಾರೆ. ಈ ವಾರ್ಷಿಕ ಸಮ್ಮೇಳನ ತಂತ್ರಜ್ಞಾನ ನೀತಿ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಚರ್ಚಿಸಲು ಜಗತ್ತಿನಾದ್ಯಂತ ವಕೀಲರನ್ನು ಒಟ್ಟುಗೂಡಿಸುತ್ತದೆ ಮತ್ತು ಇದು ಈ ಕ್ಷೇತ್ರದ ಮೇರು ಸಮ್ಮೇಳನಗಳಲ್ಲಿ ಒಂದಾಗಿದೆ.

ಸಚಿವರು ಜಾರ್ಖಂಡ್ ನ ರಾಂಚಿಯಿಂದ ಇಂದು ಸಂಜೆ ಬೆಂಗಳೂರಿಗೆ ಅಧಿಕೃತ ಭೇಟಿಗಾಗಿ ಆಗಮಿಸಲಿದ್ದಾರೆ.

ತಂತ್ರಜ್ಞಾನ ಸಮ್ಮೇಳನದ ನಂತರ ಸಚಿವರು ಎನ್.ಎಕ್.ಪಿ ಸೆಮಿಕಂಡಕ್ಟರ್ ಕಚೇರಿಗೆ ಭೇಟಿ ಕೊಡಲಿದ್ದಾರೆ. ಈ ಸಂದರ್ಭದಲ್ಲಿ ಎನ್.ಎಕ್.ಪಿ ವಿನ್ಯಾಸ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ ಮತ್ತು ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ಕುರಿತು ಚರ್ಚಿಸಲಿದ್ದಾರೆ. ಇದೇ ವೇಳೆ ಸಚಿವರು ಎಐ-5ಜಿ ಮತ್ತು ಸ್ವಯಂ ಚಾಲಿತ ಡಿ.ಆರ್.ಎಂ ವಲಯದಲ್ಲಿ ವಿವಿಧ ಎನ್.ಎಕ್ಸ್.ಪಿ ವಿನ್ಯಾಸ ಮಾರ್ಗದರ್ಶಕರು ಮತ್ತು ನವೋದ್ಯಮ ವ್ಯವಸ್ಥೆಯ ಪ್ರಮುಖರನ್ನು ಭೇಟಿ ಮಾಡಲಿದ್ದಾರೆ.

ಜಾಗತಿಕ ಸಾಮರ್ಥ್ಯ ಕೇಂದ್ರ [ಜಿಸಿಸಿ]ದ ಗೋಲ್ಡ್ ಮನ್ ಸ್ಯಾಚ್ಸ್, ಜೆ.ಪಿ. ಮೋರ್ಗನ್ ಚೇಸ್, ಸ್ಯಾಮ್ಸಂಗ್, ಸೋನಿ ಮತ್ತಿತರ ಅಂತರರಾಷ್ಟ್ರೀಯ ನಿಗಮಗಳ ಮುಖ್ಯಸ್ಥರನ್ನು ಶ್ರೀ ರಾಜೀವ್ ಚಂದ್ರಶೇಖರ್ ಭೇಟಿ ಮಾಡಲಿದ್ದಾರೆ. ಜಿಸಿಸಿ ಭಾರತದಲ್ಲಿ ಹೇಗೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಜಿಸಬಹುದು, ತಳಮಟ್ಟದಲ್ಲಿ ಕೌಶಲ್ಯ ವೃದ್ಧಿಸಬಹುದು ಎನ್ನುವ ಕುರಿತ ಚರ್ಚೆಯನ್ನು ಈ ಸಭೆ ಕೇಂದ್ರೀಕರಿಸಿದೆ.  

ಎರಡನೇ ದಿನದಂದು ಸಚಿವರು ಉದ್ಯೋಗ ಮೇಳಕ್ಕೂ ಭೇಟಿ ನೀಡಲಿದ್ದಾರೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ಸಭೆಯನ್ನು ತ್ವರಿತವಾಗಿ ನಡೆಸುವ ಉದ್ದೇಶದಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲಾಗುತ್ತದೆ. ಬಳಿಕ ಬೆಂಗಳೂರಿನ ಉತ್ತರ ಹಳ್ಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ.

******
 


(Release ID: 1892069) Visitor Counter : 279


Read this release in: English , Urdu , Hindi