ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

17ನೇ ಪ್ರವಾಸಿ ಭಾರತೀಯ ದಿವಸ ಸಮಾವೇಶ ಮತ್ತು ಪ್ರವಾಸಿ ಭಾರತೀಯ ಸನ್ಮಾನ ಪ್ರಶಸ್ತಿ ಪ್ರಧಾನ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ನಾಳೆ ಉಪಸ್ಥಿತರಿರಲಿದ್ದಾರೆ

प्रविष्टि तिथि: 09 JAN 2023 7:32PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಮಧ್ಯಪ್ರದೇಶದ ಇಂದೋರ್ ನಲ್ಲಿ ನಾಳೆ (ಜನವರಿ 10, 2023) ನಡೆಯಲಿರುವ 17ನೇ ಪ್ರವಾಸಿ ಭಾರತೀಯ ದಿವಸ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಮತ್ತು ಪ್ರವಾಸಿ ಭಾರತೀಯ ಸನ್ಮಾನ ಪ್ರಶಸ್ತಿಗಳನ್ನು ಪ್ರಧಾನ ಮಾಡಲಿದ್ದಾರೆ.  ಈ ಸಮಾವೇಶದ ನೇಪಥ್ಯದಲ್ಲಿ ಸುರಿನಾಮ್ ಗಣರಾಜ್ಯದ ಅಧ್ಯಕ್ಷ ಎಚ್.ಇ. ಚಂದ್ರಿಕಾಪ್ರಸಾದ್ ಸಂತೋಖಿ ಮತ್ತು ಗಯಾನಾ ಸಹಕಾರಿ ಗಣರಾಜ್ಯದ ಅಧ್ಯಕ್ಷ ಎಚ್.ಇ.ಡಾ.ಮುಹಮ್ಮದ್ ಇರ್ಫಾನ್ ಅಲಿ ಅವರು ರಾಷ್ಟ್ರಪತಿಗಳನ್ನು ಭೇಟಿಯಾಗಲಿದ್ದಾರೆ. 

*****


(रिलीज़ आईडी: 1889889) आगंतुक पटल : 240
इस विज्ञप्ति को इन भाषाओं में पढ़ें: English , Marathi , Urdu