ಪ್ರಧಾನ ಮಂತ್ರಿಯವರ ಕಛೇರಿ

17ನೇ ಪ್ರವಾಸಿ ಭಾರತೀಯ ದಿವಸದ ನೇಪಥ್ಯದಲ್ಲಿ ಸುರಿನಾಮ್ ಅಧ್ಯಕ್ಷರೊಂದಿಗೆ ಪ್ರಧಾನ ಮಂತ್ರಿಯವರ ಸಭೆ

Posted On: 09 JAN 2023 8:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂದೋರ್ ನಲ್ಲಿ ನಡೆದ 17ನೇ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾರಂಭದ ಸಂದರ್ಭದಲ್ಲಿ ಸುರಿನಾಮ್ ಅಧ್ಯಕ್ಷ ಘನತೆವೆತ್ತ ಶ್ರೀ ಚಂದ್ರಿಕಾಪರ್ಸಾದ್ ಸಂತೋಖಿ ಅವರನ್ನು ಭೇಟಿಯಾದರು. ಅಧ್ಯಕ್ಷ ಸಂತೋಖಿ ಅವರು 2023 ರ ಜನವರಿ 7 ರಿಂದ 14 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡುತ್ತಿದ್ದಾರೆ ಮತ್ತು 17 ನೇ ಪಿಬಿಡಿಯಲ್ಲಿ ವಿಶೇಷ ಅತಿಥಿಯಾಗಿದ್ದಾರೆ.

ತಮ್ಮ ಸಭೆಯಲ್ಲಿ, ಹೈಡ್ರೋಕಾರ್ಬನ್ ಗಳು, ರಕ್ಷಣೆ, ಸಾಗರ ಭದ್ರತೆ, ಡಿಜಿಟಲ್ ಉಪಕ್ರಮಗಳು ಮತ್ತು ಐಸಿಟಿ ಹಾಗು  ಸಾಮರ್ಥ್ಯ ವರ್ಧನೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಕ್ಷೇತ್ರಗಳಲ್ಲಿನ ಸಹಕಾರದ ಬಗ್ಗೆ ಇಬ್ಬರೂ ನಾಯಕರು ಚರ್ಚಿಸಿದರು.

ಸುರಿನಾಮ್ ಲೈನ್ಸ್ ಆಫ್ ಕ್ರೆಡಿಟ್ ನಿಂದ ಪಡೆದ ಸಾಲದ ಪುನಾರಚನೆಯ ನಿಟ್ಟಿನಲ್ಲಿ ಭಾರತದ ಕ್ರಮವನ್ನು ಸುರಿನಾಮೆ  ಶ್ಲಾಘಿಸಿದರು.

2023 ರ ಜನವರಿ 10 ರಂದು ನಡೆಯುವ ಸಮಾರೋಪ ಅಧಿವೇಶನ ಮತ್ತು ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಧ್ಯಕ್ಷ ಸಂತೋಖಿ ಅವರು ರಾಷ್ಟ್ರಪತಿ  ಶ್ರೀಮತಿ ದ್ರೌಪದಿ ಮುರ್ಮು ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇಂದೋರ್ ನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಅವರು ಭಾಗವಹಿಸಲಿದ್ದಾರೆ. ನಂತರ ಅವರು ಅಹಮದಾಬಾದ್ ಮತ್ತು ಹೊಸದಿಲ್ಲಿಗೆ ಭೇಟಿ ನೀಡಲಿದ್ದಾರೆ.

*****



(Release ID: 1889887) Visitor Counter : 115


Read this release in: Hindi , Gujarati , Tamil , Malayalam