ರಾಷ್ಟ್ರಪತಿಗಳ ಕಾರ್ಯಾಲಯ

ಜಿ. ನಾರಾಯಣಮ್ಮ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಮಹಿಳೆಯರಿಗಾಗಿ) ಮತ್ತು  ಮಹಿಳಾ ದಕ್ಷತಾ ಸಮಿತಿ ಕಾಲೇಜುಗಳ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾರತದ ರಾಷ್ಟ್ರಪತಿಯವರು ಭಾಷಣ ಮಾಡಿದರು


ತಂತ್ರಜ್ಞಾನದ ಪ್ರಯೋಜನಗಳು ದೂರದ ಪ್ರದೇಶಗಳಿಗೆ ಮತ್ತು ಬಡವರ ಬಡವರಿಗೆ ತಲುಪಬೇಕು; ಇದನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಬಳಸಬೇಕು: ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು

Posted On: 29 DEC 2022 2:38PM by PIB Bengaluru

ತಂತ್ರಜ್ಞಾನದ ಪ್ರಯೋಜನಗಳು ದೂರದ ಪ್ರದೇಶಗಳನ್ನು ಮತ್ತು ಬಡವರ ಬಡವರನ್ನು ತಲುಪಬೇಕು; ಇದನ್ನು ಸಾಮಾಜಿಕ ನ್ಯಾಯದ ಸಾಧನವಾಗಿ ಬಳಸಬೇಕು ಎಂದು ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು. ಇಂದು (ಡಿಸೆಂಬರ್ 29, 2022) ಹೈದರಾಬಾದ್‌ ನಲ್ಲಿರುವ ಜಿ. ನಾರಾಯಣಮ್ಮ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಫಾರ್ ವಿಮೆನ್ ಮತ್ತು ಬಿ.ಎಂ. ಮಲಾನಿ ನರ್ಸಿಂಗ್ ಕಾಲೇಜು ಮತ್ತು ಮಹಿಳಾ ದಕ್ಷತಾ ಸಮಿತಿಯ ಸುಮನ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು  ಭಾಷಣ ಮಾಡಿದರು

ಕಂಪ್ಯೂಟರ್‌ಗಳು, ವೈದ್ಯಕೀಯ ಉಪಕರಣಗಳು, ಇಂಟರ್ನೆಟ್, ಸ್ಮಾರ್ಟ್ ಸಾಧನಗಳು ಮತ್ತು ಡಿಜಿಟಲ್ ಪಾವತಿ ವ್ಯವಸ್ಥೆಗಳು ಸೇರಿದಂತೆ ತಾಂತ್ರಿಕ ಪ್ರಗತಿಯಲ್ಲಿ “ಎಂಜಿನಿಯರಿಂಗ್” ದೊಡ್ಡ ಪಾತ್ರವನ್ನು ವಹಿಸಿದೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು. ಊಹಿಸಲಾಗದ ಮತ್ತು ಅನನ್ಯ ಸಮಸ್ಯೆಗಳಿಗೆ ತ್ವರಿತ ಮತ್ತು ಸಮರ್ಥನೀಯ ಪರಿಹಾರಗಳ ಅಗತ್ಯವಿರುವ ಇಂದಿನ ಜಗತ್ತಿನಲ್ಲಿ ವೃತ್ತಿಯಾಗಿ ಎಂಜಿನಿಯರಿಂಗ್‌ ನ ಪಾತ್ರವು ಬಹಳ ನಿರ್ಣಾಯಕವಾಗಿದೆ.

ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಶಕ್ತಿ “ಎಂಜಿನಿಯರ್‌” ಗಳಿಗೆ ಇದೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು. “ಎಂಜಿನಿಯರು”ಗಳು ಕಂಡುಕೊಳ್ಳುವ ಪರಿಹಾರಗಳು ಮತ್ತು ಅವರು ಭವಿಷ್ಯದಲ್ಲಿ ರಚಿಸುವ ತಂತ್ರಜ್ಞಾನಗಳು ಜನ-ಆಧಾರಿತ ಮತ್ತು ಪರಿಸರ ಸ್ನೇಹಿ ಆಗಿರಬೇಕು. ಇತ್ತೀಚೆಗೆ ಸಿ.ಒ.ಪಿ. 27 ರಲ್ಲಿ, ಪರಿಸರಕ್ಕಾಗಿ ಜೀವನಶೈಲಿಯನ್ನು ಪ್ರತಿನಿಧಿಸುವ – ಲೈಫ್ ಎಂಬ ಒಂದು ಪದದ ಮಂತ್ರದಲ್ಲಿ ಸುರಕ್ಷಿತ ಗ್ರಹದ ದೃಷ್ಟಿಕೋನವನ್ನು ಭಾರತವು ಪುನರುಚ್ಚರಿಸಿತು. ನಾವು ನಮ್ಮ ಹವಾಮಾನ ಗುರಿಗಳನ್ನು ಸಾಧಿಸುತ್ತಿದ್ದೇವೆ ಮತ್ತು ಅವುಗಳನ್ನು ನವೀಕರಿಸುತ್ತಿದ್ದೇವೆ. ನವೀಕರಿಸಬಹುದಾದ ಶಕ್ತಿ, ಇ-ಮೊಬಿಲಿಟಿ, ಎಥೆನಾಲ್ ಮಿಶ್ರಿತ ಇಂಧನಗಳು ಮತ್ತು ಹಸಿರು ಹೈಡ್ರೋಜನ್‌ ಗಳಲ್ಲಿ ನಾವು ಹೊಸ ಉಪಕ್ರಮಗಳನ್ನು ಸೃಷ್ಟಿಸಿಕೊಳ್ಳುತ್ತಿದ್ದೇವೆ. ಈ ಉಪಕ್ರಮಗಳು ತಾಂತ್ರಿಕ ಆವಿಷ್ಕಾರಗಳ ಮೂಲಕ ನೆಲದ ಮೇಲೆ ಉತ್ತಮ ಫಲಿತಾಂಶಗಳನ್ನು ಮೂಡಿಸಲು ಪ್ರಾರಂಭಿಸಬಹುದು.  

ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನವು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಪರಿಸರ ಮತ್ತು ಭೌಗೋಳಿಕ-ರಾಜಕೀಯ ಆಯಾಮಗಳನ್ನು ಹೊಂದಿದೆ. ಇದು ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಪ್ರತಿ ರಂಗದ ಮೇಲೆ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮತ್ತು ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಎಂಜಿನಿಯರ್‌ಗಳು ನವೀನ ತಂತ್ರಜ್ಞಾನ ಸೃಷ್ಟಿಸುತ್ತಾರೆ. ಇದರ ಜೊತೆಗೆ, ಹಿಂದುಳಿದ ವರ್ಗಗಳು, ಹಿರಿಯ ನಾಗರಿಕರು, ದಿವ್ಯಾಂಗ ವ್ಯಕ್ತಿಗಳು ಮತ್ತು ವಿಶೇಷ ಬೆಂಬಲ ಅಗತ್ಯವಿರುವ ಇತರ ಜನರಿಗೆ ಎಂಜಿನಿಯರಿಂಗ್ ಪರಿಹಾರಗಳ ಬಗ್ಗೆ ಕೂಡಾ ಅವರು ಯೋಚಿಸಬೇಕು ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.  

“ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಮಹಿಳೆಯರ ಕೊಡುಗೆ ಕುರಿತು ಮಾತನಾಡಿದ ರಾಷ್ಟ್ರಪತಿಯವರು, ದೊಡ್ಡ ಕಂಪನಿಗಳ ಮುಖ್ಯಸ್ಥರಾಗಿರುವ, ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಿ ಮತ್ತು ಟೆಲಿಕಾಂ, ಐ.ಟಿ, ವಿಮಾನಯಾನ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಪ್ರಮುಖ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಅನೇಕ ಸ್ಪೂರ್ತಿದಾಯಕ ಮಹಿಳೆಯರು ನಮ್ಮಲ್ಲಿ ಉದಾಹರಣೆಗಳಿವೆ. ಯಂತ್ರ ವಿನ್ಯಾಸ, ನಿರ್ಮಾಣ ಕಾರ್ಯಗಳು, ಕೃತಕ ಬುದ್ಧಿಮತ್ತೆ ಮತ್ತು ಇತರ ಪ್ರದೇಶಗಳು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ವಿಜ್ಞಾನ ವಿಭಾಗಗಳನ್ನು ತೆಗೆದುಕೊಳ್ಳಲು ಮುಂದೆ ಬರಬೇಕಾಗಿದೆ. ಸ್ಟೆಮ್ - ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ - ಭಾರತೀಯ ಆರ್ಥಿಕತೆಗೆ ಅತ್ಯಗತ್ಯವಿದೆ. ಯುವತಿಯರನ್ನು ತಂತ್ರಜ್ಞರಾಗಿ ಮತ್ತು ನವೋದ್ಯಮಿಗಳಾಗಿ ಬೆಳೆಸುವುದರಿಂದ ದೇಶವನ್ನು ಸದೃಢ ಆರ್ಥಿಕತೆಯತ್ತ ಕೊಂಡೊಯ್ಯಬಹುದು. ಟೆಕ್ ಕ್ಷೇತ್ರಗಳಲ್ಲಿ ಮಹಿಳೆಯರು ವಿಭಿನ್ನ ದೃಷ್ಟಿಕೋನ ಮತ್ತು ಕೌಶಲ್ಯ-ಸೆಟ್‌ಗಳನ್ನು ಸೃಷ್ಟಿಸಿದ್ದಾರೆ. ಮಹಿಳೆಯರ ಅರಿವಿನ ಸಾಮರ್ಥ್ಯಗಳು ಜ್ಞಾನ ಮತ್ತು ತಂತ್ರಜ್ಞಾನಗಳನ್ನು ವಿವಿಧ ಹಂತಗಳಲ್ಲಿ ಗ್ರಹಿಸುವ ವಿಧಾನವನ್ನು ಬದಲಾಯಿಸಬಹುದು. ಮಹಿಳೆಯರು ತಮ್ಮ ದಾರಿಯಲ್ಲಿ ಬರುವ ಸವಾಲುಗಳನ್ನು ಮೆಟ್ಟಿನಿಂತು ತಮ್ಮ ವೃತ್ತಿಯಲ್ಲಿ ಮೇಲೇರಬೇಕು” ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

ವಿದ್ಯಾರ್ಥಿಗಳು ಸಬಲರಾಗಬೇಕು ಮತ್ತು ಇತರರಿಗೂ ಸಬಲರಾಗಬೇಕು ಎಂದು ರಾಷ್ಟ್ರಪತಿಯವರು ಸಲಹೆ ನೀಡಿದರು. ಎಂಜಿನೀಯರುಗಳು ಕೇವಲ ತಮ್ಮ ಯಶಸ್ಸು ಮತ್ತು ಸಂತೋಷದಿಂದ ತೃಪ್ತರಾಗಬಾರದು. ಅವರು ಇಡೀ ರಾಷ್ಟ್ರ ಮತ್ತು ಮಾನವೀಯತೆಯ ಕಡೆಗೆ ಕರ್ತವ್ಯವನ್ನು ಹೊಂದಿದ್ದಾರೆ. ಅವರು ತಮ್ಮ ಪ್ರತಿಭೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ದೊಡ್ಡ ಒಳಿತಿಗಾಗಿ ಬಳಸಬೇಕು ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

ಅನೇಕ ಯುವತಿಯರಿಗೆ ವೃತ್ತಿಪರರಾಗಿ ತಂತ್ರಜ್ಞಾನದ ಜಗತ್ತನ್ನು ಪ್ರವೇಶಿಸಲು ಜಿ.ಎನ್.ಐ.ಟಿ.ಎಸ್. ಅವಕಾಶಗಳನ್ನು ತೆರೆದಿದೆ ಎಂದು ರಾಷ್ಟ್ರಪತಿಯವರು ಶ್ಲಾಘಿಸಿದರು. ಮಹಿಳಾ ದಕ್ಷತಾ ಸಮಿತಿಯು ಮಹಿಳೆಯರಿಗೆ ಸರ್ವಾಂಗೀಣ ಬೆಂಬಲವನ್ನು ನೀಡುತ್ತಿದೆ. ಸಮಿತಿಯ ಅಡಿಯಲ್ಲಿರುವ ಕಾಲೇಜುಗಳು ಹಿಂದುಳಿದ ಮಹಿಳೆಯರನ್ನು ಅಭಿವೃದ್ಧಿ, ಕಾಳಜಿ, ಪೋಷಣೆ ಮತ್ತು ಸಬಲೀಕರಣಗೊಳಿಸುತ್ತವೆ ಎಂದು ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಹೇಳಿದರು.

ರಾಷ್ಟ್ರಪತಿಯವರ ಭಾಷಣವನ್ನು ವೀಕ್ಷಿಸಲು ದಯವಿಟ್ಟು ಇಲ್ಲಿ ‘ಕ್ಲಿಕ್’ ಮಾಡಿ -

*****

 



(Release ID: 1887424) Visitor Counter : 131