ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಭಾರತ ಆಸ್ಟ್ರೇಲಿಯಾ ಆರ್ಥಿಕ ಮತ್ತು ಸಹಕಾರ ವ್ಯಾಪಾರ ಒಪ್ಪಂದ ಜಾರಿಗೆ
ಶೂನ್ಯ ಸುಂಕ ತೆರಿಗೆಯೊಂದಿಗೆ ಆಸ್ಟ್ರೇಲಿಯಾದ ಮಾರುಕಟ್ಟೆಗೆ ಪ್ರವೇಶಿಸಲು ಎಲ್ಲಾ ಸುಂಕ ಮಾರ್ಗಗಳಲ್ಲಿ ಭಾರತೀಯ ಸರಕುಗಳು
ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ(ECTA)ಅಡಿಯಲ್ಲಿ ಭಾರತದಲ್ಲಿ ಹೆಚ್ಚುವರಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು: ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್
ಭಾರತೀಯ ಯೋಗ ಶಿಕ್ಷಕರು ಮತ್ತು ಬಾಣಸಿಗರು ವಾರ್ಷಿಕ ವೀಸಾ ಕೋಟಾದಿಂದ ಪ್ರಯೋಜನ ಪಡೆಯುತ್ತಾರೆ
1 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನೋತ್ತರ ಕೆಲಸ ವೀಸಾದಿಂದ ಪ್ರಯೋಜನ ಪಡೆಯುತ್ತಾರೆ
Posted On:
29 DEC 2022 1:38PM by PIB Bengaluru
ಭಾರತವು ಈ ವರ್ಷ ಎರಡು ವ್ಯಾಪಾರ ಒಪ್ಪಂದಗಳನ್ನು ಕಾರ್ಯಗತಗೊಳಿಸುವ ವೈಶಿಷ್ಟ್ಯತೆಯನ್ನು ಸಾಧಿಸಿದೆ. ಈ ವರ್ಷದ ಆರಂಭ ಮೇ 1 ರಂದು ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ ಜಾರಿಗೆ ಬಂದ ನಂತರ, ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (#IndAusECTA) ಇಂದಿನಿಂದ ಜಾರಿಗೆ ಬಂದಿದೆ, ಅಂದರೆ, ಡಿಸೆಂಬರ್ 29, 2022ರಂದು ECTA ಗೆ ಸಹಿ ಹಾಕಲಾಯಿತು. ಇದನ್ನು ಏಪ್ರಿಲ್ 2, 2022 ರಂದು ಸಹಿ ಹಾಕಿ ನವೆಂಬರ್ 21 ರಂದು ಅಂಗೀಕರಿಸಲಾಯಿತು, ನವೆಂಬರ್ 29 ರಂದು ಲಿಖಿತ ಅಧಿಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. 30 ದಿನಗಳ ನಂತರ, ಒಪ್ಪಂದವು ಇಂದು ಜಾರಿಗೆ ಬಂದಿದೆ.
ಇಂದು ಮುಂಬೈನಲ್ಲಿ ಉದ್ಯಮ ಪ್ರತಿನಿಧಿಗಳು ಮತ್ತು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, "ಬ್ರೆಟ್ ಲೀ ಅವರ ವೇಗ ಮತ್ತು ಸಚಿನ್ ತೆಂಡೂಲ್ಕರ್ ಅವರ ಪರಿಪೂರ್ಣತೆಯ ರೀತಿ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ'' ಎಂದು ಹಾಸ್ಯಚಟಾಕಿ ಹಾರಿಸಿದರು.
ಹಾಗಾದರೆ, ಒಪ್ಪಂದವು ಎರಡೂ ದೇಶಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ? ಸಚಿವರು ಹೇಳುವುದನ್ನು ಕೇಳೋಣ.
"ಆಸ್ಟ್ರೇಲಿಯಾಕ್ಕೆ ಸಿದ್ಧಪಡಿಸಿದ ಸರಕುಗಳನ್ನು ರಫ್ತು ಮಾಡಲು ಸಾಕಷ್ಟು ಸಾಮರ್ಥ್ಯವಿದೆ, ಅವರು ಏನನ್ನೂ ತಯಾರಿಸುವುದಿಲ್ಲ, ಅವು ಹೆಚ್ಚಾಗಿ ಕಚ್ಚಾ ವಸ್ತು ಮತ್ತು ತಕ್ಷಣಕ್ಕೆ ಉತ್ಪಾದಿಸುವ ದೇಶ, ನಾವು ಅಗ್ಗದ ಕಚ್ಚಾ ವಸ್ತುಗಳನ್ನು ಪಡೆಯುತ್ತೇವೆ, ಅದು ನಮ್ಮನ್ನು ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಮಾತ್ರವಲ್ಲದೆ ಭಾರತೀಯ ಗ್ರಾಹಕರಿಗೆ ಉತ್ತಮ ಸೇವೆ ನೀಡಲು; ಹೆಚ್ಚು ಗುಣಮಟ್ಟದ ಸರಕುಗಳನ್ನು ಕೈಗೆಟುಕುವ ಬೆಲೆಯಲ್ಲಿ ಒದಗಿಸಲು ನಮಗೆ ಅವಕಾಶ ಮಾಡಿಕೊಡುತ್ತದೆ.
"ಹೆಚ್ಚಾಗಿ ಆಮದುಗಳ ಮೇಲೆ ಅವಲಂಬಿತವಾಗಿರುವ ಆಸ್ಟ್ರೇಲಿಯಾವು ಈ ಒಪ್ಪಂದದಿಂದ ಹೆಚ್ಚಿನ ಲಾಭವನ್ನು ಪಡೆಯುತ್ತದೆ, ಆಸ್ಟ್ರೇಲಿಯನ್ನರು ಭಾರತದಿಂದ ಬರುತ್ತಿರುವ ಹೆಚ್ಚಿನ ಸಿದ್ಧಪಡಿಸಿದ ಸರಕುಗಳನ್ನು ನೋಡಲು ಪ್ರಾರಂಭಿಸುತ್ತಾರೆ, ಭಾರತೀಯ ಪ್ರತಿಭೆಗಳಿಂದ ಒದಗಿಸಲಾದ ಸರಕು ಮತ್ತು ಸೇವೆಗಳೆರಡರಲ್ಲೂ ದೊಡ್ಡ ಪ್ರಮಾಣದ ಕೆಲಸ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುತ್ತಾರೆ."
"ಒಪ್ಪಂದವು ಐಟಿ ಸೇವೆಗಳ ಮೇಲಿನ ದ್ವಿಗುಣ ತೆರಿಗೆಯನ್ನು ಸಹ ತೆಗೆದುಹಾಕುತ್ತದೆ, ದ್ವಿಗುಣ ತೆರಿಗೆಯಿಂದ ನಮ್ಮನ್ನು ಕಡಿಮೆ ಸ್ಪರ್ಧಾತ್ಮಕವಾಗಿ ಮತ್ತು ಐಟಿ ವಲಯದಲ್ಲಿ ಕಡಿಮೆ ಲಾಭದಾಯಕವಾಗಿಸುತ್ತದೆ, ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ಈಗ ಡಬಲ್ ತೆರಿಗೆಯನ್ನು ತೆಗೆದುಹಾಕಲಾಗಿದೆ, ಏಪ್ರಿಲ್ 1 ರಿಂದ, ಐಟಿ ವಲಯಕ್ಕೆ ಡಬಲ್ ತೆರಿಗೆ ಕೊನೆಗೊಳ್ಳುತ್ತದೆ. ತೆರಿಗೆ ತೆಗೆದುಹಾಕುವುದರಿಂದ ಲಕ್ಷಾಂತರ ಮತ್ತು ಮಿಲಿಯನ್ ಡಾಲರ್‌ಗಳನ್ನು ಉಳಿಸಬಹುದು. ಒಂದು ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಮುಂದೆ ಹೋಗಲು ಸಾಧ್ಯವಿದ್ದು ಬಹುಶಃ 5 - 7 ವರ್ಷಗಳಷ್ಟು ಮುಂದೆ ಹೋಗಬಹುದು, ನಮ್ಮಲ್ಲಿ ಸ್ಪರ್ಧಾತ್ಮಕತೆ ಸ್ವಭಾವ ಉಂಟಾಗಿ ಸಾಕಷ್ಟು ಉದ್ಯೋಗಗಳನ್ನು ಸೃಷ್ಟಿಸುತ್ತೇವೆ.
"ಆಸ್ಟ್ರೇಲಿಯನ್ ಸರ್ಕಾರವು ಅತ್ಯಂತ ಸೂಕ್ಷ್ಮ ಮತ್ತು ಪರಿಗಣನೆಯಿಂದ ಕೂಡಿದೆ, ಒಪ್ಪಂದವುದ್ದಕ್ಕೂ ನಮಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ, ವಿಶೇಷವಾಗಿ ಭಾರತದ ರೈತರು ಮತ್ತು ಡೈರಿ ವಲಯದ ಹಿತಾಸಕ್ತಿಗಳನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಕೃಷಿ ಉತ್ಪನ್ನಗಳು ಮತ್ತು ಡೈರಿ ವಲಯದಂತಹ ಉತ್ಪನ್ನಗಳು - ಭಾರತಕ್ಕೆ ಬಹಳ ಸೂಕ್ಷ್ಮವಾಗಿದ್ದವು. ಆಸ್ಟ್ರೇಲಿಯಾವು ಹಿಂದೆಂದೂ ಒಪ್ಪಂದ ಮಾಡಿಕೊಂಡಿಲ್ಲ, ಇದಕ್ಕಾಗಿ ನಾನು ಆಸ್ಟ್ರೇಲಿಯಾ ಸರ್ಕಾರಕ್ಕೆ ಕೃತಜ್ಞನಾಗಿದ್ದೇನೆ.
ಶೂನ್ಯ ಸುಂಕ ತೆರಿಗೆಯೊಂದಿಗೆ ಆಸ್ಟ್ರೇಲಿಯಾದ ಮಾರುಕಟ್ಟೆಗೆ ಎಲ್ಲಾ ಸುಂಕದ ಮಾರ್ಗಗಳಲ್ಲಿ ಭಾರತೀಯ ಸರಕುಗಳು Ind-Aus ECTA ಎರಡು ದೇಶಗಳ ನಡುವಿನ ವ್ಯಾಪಾರವನ್ನು ಉತ್ತೇಜಿಸಲು ಮತ್ತು ಸುಧಾರಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಒದಗಿಸುತ್ತದೆ. ಇದು ಭಾರತ ಮತ್ತು ಆಸ್ಟ್ರೇಲಿಯಾದಿಂದ ವ್ಯವಹರಿಸುವ ಬಹುತೇಕ ಎಲ್ಲಾ ಸುಂಕದ ಮಾರ್ಗಗಳನ್ನು ಒಳಗೊಂಡಿದೆ.
ರತ್ನಗಳು ಮತ್ತು ಆಭರಣಗಳು, ಜವಳಿ, ಚರ್ಮ, ಪಾದರಕ್ಷೆಗಳು, ಪೀಠೋಪಕರಣಗಳು, ಆಹಾರ ಮತ್ತು ಕೃಷಿ ಉತ್ಪನ್ನಗಳು,ಎಂಜಿನಿಯರಿಂಗ್ ಉತ್ಪನ್ನಗಳು, ವೈದ್ಯಕೀಯ ಸಾಧನಗಳು ಮತ್ತು ಆಟೋಮೊಬೈಲ್‌ಗಳಂತಹ ಭಾರತಕ್ಕೆ ರಫ್ತು ಆಸಕ್ತಿಯ ಎಲ್ಲಾ ಕಾರ್ಮಿಕ-ತೀವ್ರ ವಲಯಗಳನ್ನು ಒಳಗೊಂಡಂತೆ ಶೇಕಡಾ 100ರ ಸುಂಕದ ಮಾರ್ಗಗಳಲ್ಲಿ ಆಸ್ಟ್ರೇಲಿಯಾ ಒದಗಿಸಿದ ಆದ್ಯತೆಯ ಮಾರುಕಟ್ಟೆ ಪ್ರವೇಶದಿಂದ ಭಾರತವು ಪ್ರಯೋಜನ ಪಡೆಯುತ್ತದೆ. ಮತ್ತೊಂದೆಡೆ, ಭಾರತವು ತನ್ನ ಶೇಕಡಾ 70 ಕ್ಕಿಂತ ಹೆಚ್ಚಿನ ಸುಂಕದ ಮಾರ್ಗಗಳಲ್ಲಿ ಆಸ್ಟ್ರೇಲಿಯಾಕ್ಕೆ ಆದ್ಯತೆಯ ಪ್ರವೇಶವನ್ನು ನೀಡುತ್ತದೆ, ಇದರಲ್ಲಿ ಆಸ್ಟ್ರೇಲಿಯಾಕ್ಕೆ ರಫ್ತು ಆಸಕ್ತಿಯ ಸಾಲುಗಳು ಸೇರಿವೆ, ಇವು ಪ್ರಾಥಮಿಕವಾಗಿ ಕಚ್ಚಾ ವಸ್ತುಗಳು ಮತ್ತು ಕಲ್ಲಿದ್ದಲು, ಖನಿಜ ಅದಿರು ಮತ್ತು ವೈನ್‌ಗಳಂತಹ ಮಧ್ಯವರ್ತಿಗಳಾಗಿವೆ.
ಸೇವೆಗಳಲ್ಲಿನ ವ್ಯಾಪಾರಕ್ಕೆ ಸಂಬಂಧಿಸಿದಂತೆ, ಆಸ್ಟ್ರೇಲಿಯಾವು ಸುಮಾರು 135 ಉಪ-ವಲಯಗಳಲ್ಲಿ ವ್ಯಾಪಕವಾದ ಬದ್ಧತೆಗಳನ್ನು ಮತ್ತು ಭಾರತದ ಆಸಕ್ತಿಯ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 120 ಉಪ-ವಲಯಗಳಲ್ಲಿ ಅತಿ ಆಸಕ್ತಿಯ ದೇಶಗಳು(MFN) ಸ್ಥಾನಮಾನವನ್ನು ನೀಡಿದೆ.
ಮತ್ತೊಂದೆಡೆ, ಭಾರತವು ಸುಮಾರು 103 ಉಪ-ವಲಯಗಳಲ್ಲಿ ಆಸ್ಟ್ರೇಲಿಯಾಕ್ಕೆ ಮಾರುಕಟ್ಟೆ ಪ್ರವೇಶವನ್ನು ಮತ್ತು 31 ಉಪ-ವಲಯಗಳಲ್ಲಿ ಅತ್ಯಂತ ಒಲವುಳ್ಳ ರಾಷ್ಟ್ರದ ಸ್ಥಾನಮಾನವನ್ನು 11 ವಿಶಾಲ ಸೇವಾ ವಲಯಗಳಾದ 'ವ್ಯಾಪಾರ ಸೇವೆಗಳು', 'ಸಂವಹನ ಸೇವೆಗಳು', 'ನಿರ್ಮಾಣ ಮತ್ತು ಸಂಬಂಧಿತವಾಗಿದೆ. ಎಂಜಿನಿಯರಿಂಗ್ ಸೇವೆಗಳು', ಇತ್ಯಾದಿಗಳಲ್ಲಿ ಸೇವೆಗಳನ್ನು ಒದಗಿಸುತ್ತದೆ.
ಈ ಒಪ್ಪಂದದ ಅಡಿಯಲ್ಲಿ ಔಷಧೀಯ ಉತ್ಪನ್ನಗಳ ಪ್ರತ್ಯೇಕ ಪೀಠಿಕೆಗೆ ಎರಡೂ ಕಡೆಯವರು ಸಹ ಒಪ್ಪಿಕೊಂಡಿದ್ದಾರೆ, ಇದು ಪೇಟೆಂಟ್, ಜೆನೆರಿಕ್ ಮತ್ತು ಬಯೋಸಿಮಿಲರ್ ಔಷಧಿಗಳಿಗೆ ತ್ವರಿತ ಅನುಮೋದನೆಯನ್ನು ಒದಗಿಸುತ್ತದೆ.
ಇಸಿಟಿಎ ಅಡಿಯಲ್ಲಿ ಭಾರತದಲ್ಲಿ ಹೆಚ್ಚುವರಿಯಾಗಿ 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ. ಭಾರತೀಯ ಯೋಗ ಶಿಕ್ಷಕರು ಮತ್ತು ಬಾಣಸಿಗರು ವಾರ್ಷಿಕ ವೀಸಾ ಕೋಟಾದೊಂದಿಗೆ ಲಾಭ ಪಡೆಯಲು ಸಿದ್ಧರಾಗಿದ್ದಾರೆ. ECTA ಅಡಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಅಧ್ಯಯನ ಮುಗಿಸಿ ಕೆಲಸದ ವೀಸಾ (18 ತಿಂಗಳಿಂದ 4 ವರ್ಷಗಳವರೆಗೆ) ಪ್ರಯೋಜನ ಪಡೆಯುತ್ತಾರೆ. ಈ ಒಪ್ಪಂದವು ಹೂಡಿಕೆಯ ಅವಕಾಶಗಳನ್ನು ಹೆಚ್ಚಿಸಲು, ರಫ್ತುಗಳನ್ನು ಉತ್ತೇಜಿಸಲು, ಗಮನಾರ್ಹವಾದ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲು ಮತ್ತು ಉಭಯ ದೇಶಗಳ ನಡುವೆ ಬಲವಾದ ಬಾಂಧವ್ಯವನ್ನು ಸುಗಮಗೊಳಿಸುವ ಸಹಾಯ ಮಾಡುತ್ತದೆ.
ಆಸ್ಟ್ರೇಲಿಯಾ ಭಾರತದ ಪ್ರಮುಖ ಕಾರ್ಯತಂತ್ರದ ಪಾಲುದಾರ. ಅವರು ನಾಲ್ಕು ರಾಷ್ಟ್ರದ QUAD, ತ್ರಿಪಕ್ಷೀಯ ಪೂರೈಕೆ ಸರಪಳಿ ಅಭಿಯಾನ ಮತ್ತು ಇಂಡೋ-ಪೆಸಿಫಿಕ್ ಆರ್ಥಿಕ ವೇದಿಕೆ(IPEF)ಯ ಭಾಗವಾಗಿದೆ.
ಇಂದು ಭಾರತ-ಆಸ್ಟ್ರೇಲಿಯಾ ECTA ಜಾರಿಗೆ ಬರಲು ಅಗತ್ಯವಿರುವ ಎಲ್ಲಾ ಅಗತ್ಯ ಅಧಿಸೂಚನೆಗಳನ್ನು ಕಂದಾಯ ಇಲಾಖೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯವು ಹೊರಡಿಸಿದೆ.
ಇಂದು ಮುಂಬೈನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಕೆಲವು ಸಾಗಾಣಿಕೆಗಳು ಆದ್ಯತೆಯ ಪ್ರವೇಶ ಪ್ರಮಾಣಪತ್ರಗಳನ್ನು ನೀಡಿದ್ದಾರೆ.
******
(Release ID: 1887422)
Visitor Counter : 261