ಇಂಧನ ಸಚಿವಾಲಯ
ಹಸಿರು ಮೆಥನಾಲ್ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಅನ್ವೇಷಿಸಲು ಎನ್ ಟಿ ಪಿ ಸಿ ಮತ್ತು ಟೆಸಿಮಾಂಟ್ ತಿಳವಳಿಕೆ ಪತ್ರಕ್ಕೆ ಸಹಿ
Posted On:
26 DEC 2022 6:26PM by PIB Bengaluru
1. ಭಾರತದಲ್ಲಿ ಎನ್ ಟಿ ಪಿ ಸಿ ಯೋಜನೆಯಡಿ ವಾಣಿಜ್ಯ ಪ್ರಮಾಣದ ಹಸಿರು ಮೆಥನಾಲ್ ಉತ್ಪಾದನಾ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಜಂಟಿಯಾಗಿ ಮೌಲ್ಯಮಾಪನ ಮಾಡುವುದು ಮತ್ತು ಅನ್ವೇಷಿಸುವುದು ತಿಳವಳಿಕೆ ಪತ್ರದ ಉದ್ದೇಶವಾಗಿದೆ.
2. ಹಸಿರು ಮೆಥನಾಲ್ ಯೋಜನೆಯು ಎನ್ ಟಿ ಪಿ ಸಿ ವಿದ್ಯುತ್ ಸ್ಥಾವರಗಳಿಂದ ಇಂಗಾಲವನ್ನು ಹೀರಿಕೊಳ್ಳುವುದು ಮತ್ತು ಅದನ್ನು ಹಸಿರು ಇಂಧನವಾಗಿ ಪರಿವರ್ತಿಸುವುದನ್ನು ಒಳಗೊಂಡಿರುತ್ತದೆ
|
NTPC signs MoU with Tecnimont Private Limited
ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಕಂಪನಿಯಾದ ಎನ್ ಟಿ ಪಿ ಸಿ, ಇಟಲಿಯ ಮೈರ್ ಟೆಕ್ನಿಮಾಂಟ್ ಗ್ರೂಪ್‌ನ ಭಾರತೀಯ ಅಂಗ ಸಂಸ್ಥೆಯಾದ ಟೆಕ್ನಿಮಾಂಟ್ ಪ್ರೈವೇಟ್ ಲಿಮಿಟೆಡ್‌ನೊಂದಿಗೆ ಬಾಧ್ಯತೆರಹಿತ ತಿಳುವಳಿಕೆ (MOU) ಪತ್ರಕ್ಕೆ ಸಹಿ ಹಾಕಿದೆ. ಭಾರತದಲ್ಲಿ ಎನ್ ಟಿ ಪಿ ಸಿ ಯೋಜನೆಯಡಿ ವಾಣಿಜ್ಯ ಪ್ರಮಾಣದಲ್ಲಿ ಹಸಿರು ಮೆಥನಾಲ್ ಉತ್ಪಾದನಾ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಜಂಟಿಯಾಗಿ ಮೌಲ್ಯಮಾಪನ ಮಾಡುವುದು ಮತ್ತು ಅನ್ವೇಷಿಸುವುದು ತಿಳುವಳಿಕೆ ಪತ್ರದ ಉದ್ದೇಶವಾಗಿದೆ.
ಹಸಿರು ಮೆಥನಾಲ್ ಯೋಜನೆಯು ಎನ್ ಟಿ ಪಿ ಸಿ ವಿದ್ಯುತ್ ಸ್ಥಾವರಗಳಿಂದ ಇಂಗಾಲವನ್ನು ಹೀರಿಕೊಳ್ಳುವುದು ಮತ್ತು ಅದನ್ನು ಹಸಿರು ಇಂಧನವಾಗಿ ಪರಿವರ್ತಿಸುವ ಪ್ರಕ್ರಿಯೆ ಒಳಗೊಂಡಿರುತ್ತದೆ. ಹಸಿರು ಮೆಥನಾಲ್ ರಾಸಾಯನಿಕ ಉದ್ಯಮಕ್ಕೆ ಕಚ್ಚಾ ವಸ್ತುವಿನ ರೂಪದಲ್ಲಿ, ನವೀಕರಿಸಬಹುದಾದ ವಿದ್ಯುತ್ ಅನ್ನು ಸಂಗ್ರಹಾಗಾರದ ರೂಪದಲ್ಲಿ ಮತ್ತು ಸಾರಿಗೆ ಇಂಧನವಾಗಿಯೂ ಸಹ ವ್ಯಾಪಕ ಶ್ರೇಣಿಯ ಅನ್ವಯಿಕೆಗಳನ್ನು ಹೊಂದಿದೆ. ಕಡಲ ಇಂಧನ ಅನುಪ್ರಯೋಗಗಳ ಬದಲಿ ಇಂಧನವಾಗಿಯೂ ಇದನ್ನು ಪರಿಗಣಿಸಲಾಗಿದೆ.
ಈ ಯೋಜನೆಯು ಎನ್ ಟಿ ಪಿ ಸಿ ಗಳ ಜೊತೆಗೆ ಕಾರ್ಯಗತಗೊಳಿಸುವಿಕೆಯ ಅಡಿಯಲ್ಲಿ ಪ್ರಾಯೋಗಿಕ ಸ್ಕೇಲ್ ಗ್ರೀನ್ ಮೆಥೆನಾಲ್ ಯೋಜನೆಯು ಎನ್ ಟಿ ಪಿ ಸಿ ಯ ಸುಸ್ಥಿರತೆ ಮತ್ತು ನವೀಕರಿಸಬಹುದಾದ ಶಕ್ತಿಯ ಬದ್ಧತೆಗೆ ಹೊಂದಿಕೆಯಾಗುತ್ತದೆ ಮತ್ತು ಭಾರತದ ವಿದ್ಯುತ್ ಪರಿವರ್ತನೆಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಎನ್ ಟಿ ಪಿ ಸಿ ನಿರ್ದೇಶಕ (ವಾಣಿಜ್ಯ), ಸಿ ಕೆ ಮಂಡಲ್ ಪ್ರತಿಪಾದಿಸಿದ್ದಾರೆ.
(Release ID: 1886782)
Visitor Counter : 187