ಗೃಹ ವ್ಯವಹಾರಗಳ ಸಚಿವಾಲಯ
ಬಂಧೀಖಾನೆ ಅಥವಾ ಕಾರಾಗೃಹ ಸುಧಾರಣೆಗಳು
Posted On:
21 DEC 2022 5:51PM by PIB Bengaluru
ಇಂದು ರಾಜ್ಯಸಭೆಯಲ್ಲಿ 'ಬಂಧೀಖಾನೆ ಸುಧಾರಣೆಗಳು' ಕುರಿತು ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ, ಗೃಹ ಸಚಿವಾಲಯ (MHA) ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಿದ ಹಣಕಾಸು ವಿವರಗಳನ್ನು ನೀಡಿದರು. ಕಾರಾಗೃಹ ಗಣಕೀಕರಣಕ್ಕಾಗಿ ಇರುವ 'ಇ-ಪ್ರಿಸನ್ಸ್' ಪೋರ್ಟಲ್ ನ್ನು ಬಲಪಡಿಸಲು ಮತ್ತು ಕಳೆದ ಐದು ವರ್ಷಗಳಲ್ಲಿ ಕಾರಾಗೃಹಗಳಲ್ಲಿನ ಭದ್ರತಾ ಮೂಲಸೌಕರ್ಯಗಳನ್ನು ಹೆಚ್ಚಿಸಲು 'ಬಂಧೀಖಾನೆಯ ಆಧುನೀಕರಣ'ಕ್ಕೆ ಸಂಬಂಧಿಸಿದಂತೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ (UTs)ಬಿಡುಗಡೆ ಮಾಡಿರುವ ಹಣಕಾಸಿನ ವಿವರ ಈ ಕೆಳಗಿನಂತಿದೆ:
ಹಣಕಾಸು ವರ್ಷ (FY)
|
ಬಿಡುಗಡೆಯಾದ ಹಣ (ಕೋಟಿಗಳಲ್ಲಿ ಅಂಕಿಅಂಶ)
|
2017-18
|
32.49
|
2018-19
|
33.00
|
2019-20
|
34.00
|
2020-21
|
0
|
2021-22
|
50.00
|
2016 ರ ಮಾದರಿ ಬಂಧೀಖಾನೆ ಕೈಪಿಡಿಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 2016 ರಲ್ಲಿ ಆಯಾ ನ್ಯಾಯವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲು ಗೃಹ ವ್ಯವಹಾರಗಳ ಸಚಿವಾಲಯ ರವಾನಿಸಿದೆ. ಗೃಹ ವ್ಯವಹಾರಗಳ ಸಚಿವಾಲಯ ನಿರಂತರವಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳೊಂದಿಗೆ ಮಾದರಿ ಕೈಪಿಡಿಯ ವಿಶೇಷ ಮಹತ್ವವನ್ನು ಒತ್ತಿಹೇಳುತ್ತಿದೆ. ಅಲ್ಲದೆ ಅದನ್ನು ಅಳವಡಿಸಿಕೊಳ್ಳಲು ಮತ್ತು ದಕ್ಷ ಕಾರಾಗೃಹ ಆಡಳಿತಕ್ಕಾಗಿ ಕೈಪಿಡಿಯಲ್ಲಿ ಒದಗಿಸಲಾದ ಮಾರ್ಗದರ್ಶನವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದು ಅಜಯ್ ಕುಮಾರ್ ಮಿಶ್ರಾ ಹೇಳಿದರು.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ವರದಿ ಮಾಡಿದ ಬಂಧೀಖಾನೆ ಅಂಕಿಅಂಶಗಳನ್ನು ಸಂಗ್ರಹಿಸಿ ಅದನ್ನು ತನ್ನ ವಾರ್ಷಿಕ ಪ್ರಕಟಣೆಯಾದ “ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ ಇಂಡಿಯಾ” ನಲ್ಲಿ ಪ್ರಕಟಿಸುತ್ತದೆ. ಈ ಮಾಹಿತಿಯನ್ನು ಎನ್‌ಸಿಆರ್‌ಬಿ ನಿರ್ವಹಿಸುವುದಿಲ್ಲ ಎಂದು ಮಿಶ್ರಾ ಹೇಳಿದರು.
ಬಂಧೀಖಾನೆ'/'ಅದರಲ್ಲಿರುವ ವ್ಯಕ್ತಿಗಳು' ಭಾರತದ ಸಂವಿಧಾನದ ಏಳನೇ ಶೆಡ್ಯೂಲ್‌ನ ಪಟ್ಟಿ II ರ ಅಡಿಯಲ್ಲಿ "ರಾಜ್ಯ ಪಟ್ಟಿ" ವಿಷಯವಾಗಿದೆ. ಆದ್ದರಿಂದ, ಕೈದಿಗಳ ಆಡಳಿತ ಮತ್ತು ನಿರ್ವಹಣೆಯು ಪ್ರಾಥಮಿಕವಾಗಿ ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ, ಅವರು ಸ್ಥಳೀಯ ಅಗತ್ಯ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಕಾರಾಗೃಹಗಳಿಗೆ ಬಜೆಟ್ ಹಂಚಿಕೆಯನ್ನು ಹೆಚ್ಚಿಸಲು ಸಮರ್ಥರಾಗಿದ್ದಾರೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವರು ಹೇಳಿದರು.
*****
(Release ID: 1885547)
Visitor Counter : 145