ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಸ್ವಾತಂತ್ರ್ಯ ಯೋಧರ ಕುಟುಂಬಗಳ ಸನ್ಮಾನ

प्रविष्टि तिथि: 20 DEC 2022 5:32PM by PIB Bengaluru

ಇಂದು ಲೋಕಸಭೆಯಲ್ಲಿ 'ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳಿಗೆ ಸನ್ಮಾನ' ಎಂಬ ಲಿಖಿತ ಪ್ರಶ್ನೆಗೆ ಉತ್ತರ ನೀಡಿದ ಗೃಹ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಅಜಯ್ ಕುಮಾರ್ ಮಿಶ್ರಾ ಅವರು, 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸ್ಕೃತಿ ಸಚಿವಾಲಯ ( MoC),  ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಮತ್ತು ನಾಗರಿಕ ಸಮಾಜದ ಸಹಯೋಗದೊಂದಿಗೆ ಭಾರತ ಸರ್ಕಾರವು ದೇಶ ಮತ್ತು ವಿದೇಶಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಸುಮಾರು 18,000 ಕಾರ್ಯಕ್ರಮಗಳನ್ನು ಆಯೋಜಿಸಿದೆ.

ನಮ್ಮ ದೇಶದ ವೀರ ಸ್ವಾತಂತ್ರ್ಯಯೋಧರನ್ನು ಸನ್ಮಾನಿಸಲು ಸಂಸ್ಕೃತಿ ಸಚಿವಾಲಯ ಅವಿಸ್ಮರಿತ ಯೋಧರು (https://amritmahotsav.nic.in/unsung-heroes.htm) ಮತ್ತು ಡಿಜಿಟಲ್ ಡಿಸ್ಟ್ರಿಕ್ಟ್ ರೆಪೊಸಿಟರಿ (https://amritmahotsav.nic.in/digital-district-repository.htm) ಅಡಿಯಲ್ಲಿ ಅಪ್‌ಲೋಡ್ ಮಾಡಿದೆ. .in/digital-district-repository.htm). ಸಂಸ್ಕೃತಿ ಸಚಿವಾಲಯವು ಅಮರ ಚಿತ್ರ ಕಥಾ ಸಹಯೋಗದೊಂದಿಗೆ 3 ಪುಸ್ತಕಗಳನ್ನು ಪ್ರಕಟಿಸಿದೆ ಅವುಗಳೆಂದರೆ: 

1.ಭಾರತದ ಅವಿಸ್ಮರಿತ ವೀರರು: ನಮ್ಮ ಸ್ವಾತಂತ್ರ್ಯ ಹೋರಾಟದ ಕೆಚ್ಚೆದೆಯ ಮಹಿಳೆಯರು - 20 ವ್ಯಕ್ತಿತ್ವಗಳನ್ನು ಒಳಗೊಂಡಿದೆ (https://amritmahotsav.nic.in/flip-  book/Unsung-Heroes-Comic.html).

2.ಅಧಿಕಾರದಲ್ಲಿರುವ ಮಹಿಳೆಯರು: ಸಾಂವಿಧಾನಿಕ ಸ್ಥಾನಗಳಿಗೆ ಆಯ್ಕೆಯಾದವರು – 15 ವ್ಯಕ್ತಿತ್ವಗಳನ್ನು ಒಳಗೊಂಡಿದೆ  (https://amritmahotsav.nic.in/flip-book/women-in-power.html).

3.ಸ್ವಾತಂತ್ರ್ಯ ಸಂಗ್ರಾಮದ ಬುಡಕಟ್ಟು ಯೋಧರು  – 19 ವ್ಯಕ್ತಿತ್ವಗಳನ್ನು ಒಳಗೊಂಡಿದೆ  (https://amritmahotsav.nic.in/flip-book/Tribal-Freedom-Fighters.html).

******


(रिलीज़ आईडी: 1885259) आगंतुक पटल : 159
इस विज्ञप्ति को इन भाषाओं में पढ़ें: English , Urdu