ಕಲ್ಲಿದ್ದಲು ಸಚಿವಾಲಯ
ಇಂಡೋನೇಷ್ಯಾದಿಂದ 3.58 ಲಕ್ಷ ಟನ್ ಕಲ್ಲಿದ್ದಲು ಆಮದು
Posted On:
19 DEC 2022 4:05PM by PIB Bengaluru
ಕೋಲ್ ಇಂಡಿಯಾ ಲಿಮಿಟೆಡ್ (ಸಿ.ಐ.ಎಲ್.) ಈ ವರ್ಷದಲ್ಲಿ ಇಂಡೋನೇಷ್ಯಾದಿಂದ ಸುಮಾರು 3.58 ಲಕ್ಷ ಟನ್ ಕಲ್ಲಿದ್ದಲನ್ನು ಮೆಸರ್ಸ್ ಜಿ.ಹೆಚ್.ವಿ. -ಬಿ.ಡಿ.ಇ.-ಡಿ.ಐ.ಎಲ್. (ಜೆ.ವಿ.) ಎಂಬ ಮಾರಾಟಗಾರರ ಮೂಲಕ ವಿವಿಧ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಗಳು ಮತ್ತು ಸ್ವತಂತ್ರ ವಿದ್ಯುತ್ ಸ್ಥಾವರ (ಐ.ಪಿ.ಪಿ.) ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ (ಟಿ.ಪಿ.ಪಿ.) ಪರವಾಗಿ ಆಮದು ಮಾಡಿಕೊಂಡಿದೆ. 'ಸಂಸ್ಥೆಯ ಆದೇಶಗಳು' ಮತ್ತು ವಿವಿಧ ವಿದ್ಯುತ್ ಉತ್ಪಾದನಾ ಕಂಪನಿಗಳ ಮುಂಗಡ ಪಾವತಿಯ ಆಧಾರದ ಮೇಲೆ ಆಮದಾದ ಕಲ್ಲಿದ್ದಲು ಸರಬರಾಜಿಗೆ ಸಿ.ಐ.ಎಲ್. ಆದೇಶವನ್ನು ನೀಡಿತು.
ವಿದ್ಯುತ್ ಸಚಿವಾಲಯವು ಒದಗಿಸಿದ ಅಂಕಿಅಂಶಗಳ ಪ್ರಕಾರ, ಆಮದು ಮಾಡಿದ ಕಲ್ಲಿದ್ದಲಿನ 86% ಅನ್ನು ಬಳಸಲಾಗಿದೆ.
ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪರಿಗಣಿಸಿ, ಮಳೆಗಾಲ ಪ್ರಾರಂಭವಾಗುವ ಮೊದಲು ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನಿಗಾಗಿ, ವಿದ್ಯುತ್ ಸಚಿವಾಲಯವು (ಎಂ.ಒ.ಪಿ.) 28.04.2022ರಂದು ವಿದ್ಯುತ್ ಸ್ಥಾವರಗಳಿಗೆ ತಮ್ಮ ಕಲ್ಲಿದ್ದಲಿನ ಅಗತ್ಯದ 10% ಅನ್ನು ಪೂರೈಸಲು ಸಂಮಿಶ್ರಣ ಉದ್ದೇಶಕ್ಕಾಗಿ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳುವಂತೆ ವಿದ್ಯುತ್ ಸ್ಥಾವರಗಳಿಗೆ ಸಲಹೆ ನೀಡಿತ್ತು. ತದನಂತರ, ಕಲ್ಲಿದ್ದಲು ದಾಸ್ತಾನು ಸ್ಥಿತಿಯನ್ನು ಪರಿಶೀಲಿಸಿ, 01.08.2022ರಂದು ವಿದ್ಯುತ್ ಸಚಿವಾಲಯ, ದೇಶೀಯ ಕಲ್ಲಿದ್ದಲು ಪೂರೈಕೆಯ ಲಭ್ಯತೆಯನ್ನು ಮೌಲ್ಯಮಾಪನ ಮಾಡಿದ ನಂತರ ರಾಜ್ಯಗಳು ಮತ್ತು ಐ.ಪಿ.ಪಿ.ಗಳು ಮತ್ತು ಕಲ್ಲಿದ್ದಲು ಸಚಿವಾಲಯವು ಮಿಶ್ರಣದ ಶೇಕಡಾವಾರು ಪ್ರಮಾಣವನ್ನು ನಿರ್ಧರಿಸಬಹುದು ಎಂದು ತೀರ್ಮಾನಿಸಿತು.
ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದರು.
*****
(Release ID: 1884842)