ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವೈಜ್ಞಾನಿಕ ಲೇಖನ ಪ್ರಕಟಣೆಗಳಲ್ಲಿ ಭಾರತವು ಏಳನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ರ ಹೇಳಿದರು. ಭಾರತದ ವೈಜ್ಞಾನಿಕ ಭ್ರಾತೃತ್ವದ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಒದಗಿಸಿದ ಸಶಕ್ತ ಪರಿಸರ ಮತ್ತು ಕೆಲಸದ ಸ್ವಾತಂತ್ರ್ಯಕ್ಕೆ ಎಲ್ಲಾ ಶ್ರೇಯಸ್ಸನ್ನು ನೀಡುತ್ತಾರೆ.
ಡಿ.ಎಸ್.ಟಿ. ಹಿರಿಯ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ, ಡಾ. ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮತ್ತು ಎಂಜಿನಿಯರಿಂಗ್ ಪಿ.ಹೆಚ್.ಡಿ ಗಳ ಸಂಖ್ಯೆಯಲ್ಲಿ ಭಾರತವು ಈಗ 3 ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು
ಯುನೈಟೆಡ್ ಸ್ಟೇಟ್ಸ್ ನ ನ್ಯಾಷನಲ್ ಸೈನ್ಸ್ ಫೌಂಡೇಶನ್ -2022 ರ ವರದಿಯ ಪ್ರಕಾರ, ಭಾರತದ ವಿದ್ವತ್ಪೂರ್ಣ ಉತ್ಪಾದನೆಯು 2010ರಲ್ಲಿ 60,555ರಷ್ಟಿದ್ದ ಲೇಖನಗಳಿಂದ 2020ರಲ್ಲಿ 1,49,213 ಲೇಖನಗಳಿಗೆ ಏರಿದೆ.
ಮುಂಬರುವ ಕೇಂದ್ರ ಬಜೆಟ್ 2023-24 ರಲ್ಲಿ ಡಿ.ಎಸ್.ಟಿ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಹೆಚ್ಚು ಹಣವನ್ನು ಪಡೆಯುವ ಸಾಧ್ಯತೆಯಿದೆ.
Posted On:
18 DEC 2022 5:30PM by PIB Bengaluru
ಭಾರತವು ವೈಜ್ಞಾನಿಕ ಪ್ರಕಟಣೆಗಳಲ್ಲಿ ಏಳನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ.) ಕಾರ್ಯದರ್ಶಿ ಡಾ. ಎಸ್. ಚಂದ್ರಶೇಖರ್ ಅವರೊಂದಿಗೆ ಪರಿಶೀಲನೆಯ ನಂತರ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಈ ವಿಷಯವನ್ನು ಬಹಿರಂಗಪಡಿಸಿದರು.
ಭಾರತದ ವೈಜ್ಞಾನಿಕ ಭ್ರಾತೃತ್ವದ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದ ಡಾ. ಜಿತೇಂದ್ರ ಸಿಂಗ್ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಒದಗಿಸಿದ ಸಶಕ್ತ ಪರಿಸರ ಮತ್ತು ಕೆಲಸದ ಸ್ವಾತಂತ್ರ್ಯಕ್ಕೆ ಎಲ್ಲಾ ಶ್ರೇಯಸ್ಸನ್ನು ನೀಡಿದರು. ಕಳೆದ ಕೆಲವು ವರ್ಷಗಳಲ್ಲಿ ಮಾತ್ರ ನಮ್ಮ ವೈಜ್ಞಾನಿಕ ಅನ್ವೇಷಣೆಗಳಲ್ಲಿ ಇಂತಹ ದೊಡ್ಡ ಜಿಗಿತಗಳು ನಡೆಯುತ್ತಿವೆ ಎಂಬ ಅಂಶವು ನೀತಿಯ ಸುಲಭತೆ ಮತ್ತು ಅವರ ವೈಯಕ್ತಿಕ ಸಹನೆ ಮತ್ತು ಆದ್ಯತೆ ಎರಡರಲ್ಲೂ ಪ್ರಧಾನಿ ಮೋದಿಯವರು ನೀಡಿದ ವೈಜ್ಞಾನಿಕ ಭ್ರಾತೃತ್ವ ಉತ್ತೇಜನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.
ನ್ಯಾಷನಲ್ ಸೈನ್ಸ್ ಫೌಂಡೇಶನ್ (ಎನ್.ಎಸ್.ಎಫ್.) ಯುನೈಟೆಡ್ ಸ್ಟೇಟ್ಸ್ ನ ವಿಜ್ಞಾನ ಮತ್ತು ಎಂಜಿನಿಯರಿಂಗ್ ಸೂಚಕಗಳು 2022ರ ವರದಿಯ ಪ್ರಕಾರ, ವೈಜ್ಞಾನಿಕ ಪ್ರಕಟಣೆಗಳಲ್ಲಿ ಜಾಗತಿಕವಾಗಿ ಭಾರತದ ಸ್ಥಾನವು 2010ರಲ್ಲಿದ್ದ ಏಳನೇ ಸ್ಥಾನದಿಂದ 2020ರಲ್ಲಿ ಮೂರನೇ ಸ್ಥಾನಕ್ಕೆ ಏರಿದೆ ಎಂದು ಡಾ. ಜಿತೇಂದ್ರ ಸಿಂಗ್ ಮಾಹಿತಿ ನೀಡಿದರು. 2010ರಲ್ಲಿ 60,555 ಲೇಖನಗಳಿಂದ 2020ರಲ್ಲಿ 1,49,213 ಲೇಖನಗಳಿಗೆ ಭಾರತದ ವಿದ್ವತ್ಪೂರ್ಣ ಪ್ರಕಟಣೆ ಹೆಚ್ಚಾಗಿದೆ ಎಂದು ಅವರು ಹೇಳಿದರು.
ಕಳೆದ 8 ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಉಪಕ್ರಮಗಳು ಮತ್ತು ಯೋಜನೆಗಳನ್ನು ಬೆಂಬಲಿಸುವ ಮತ್ತು ಉತ್ತೇಜಿಸುವಲ್ಲಿ ಅಗ್ರಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಂದ ಮಾತ್ರ ಇದು ಸಾಧ್ಯವಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. "ಆತ್ಮನಿರ್ಭರ ಭಾರತ"ವನ್ನು ನಿರ್ಮಿಸುವಲ್ಲಿ ಭಾರತದ ವೈಜ್ಞಾನಿಕ ಪರಾಕ್ರಮವು ಪ್ರಮುಖ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದರು.
ಕಳೆದ ಕೆಲವು ವರ್ಷಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಂಶೋಧನಾ ಸಾಧನೆಯು ಗಮನಾರ್ಹವಾಗಿ ಸುಧಾರಿಸಿದೆ, ಇದು ಸಂಶೋಧನಾ ಪ್ರಕಟಣೆಗಳು, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಆವಿಷ್ಕಾರಗಳ ಮೂಲಕ ಹೆಚ್ಚಿನ ಪ್ರಮಾಣದ ವೈಜ್ಞಾನಿಕ ಜ್ಞಾನದ ಮೂಲಕ ಗೋಚರಿಸುತ್ತದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು.
ವಿಜ್ಞಾನ ಮತ್ತು ಎಂಜಿನಿಯರಿಂಗ್ ನಲ್ಲಿ ಪಿ.ಹೆಚ್.ಡಿ. ಗಳ ಸಂಖ್ಯೆಯಲ್ಲಿ ಭಾರತವು ಈಗ ಮೂರ ನೇ ಸ್ಥಾನದಲ್ಲಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೆಮ್ಮೆ ವ್ಯಕ್ತಪಡಿಸಿದರು. ಕಳೆದ ಮೂರು ವರ್ಷಗಳಲ್ಲಿ ಭಾರತದ ಪೇಟೆಂಟ್ ಕಚೇರಿಯಲ್ಲಿ (ಐ.ಪಿ.ಒ.) ಭಾರತೀಯ ವಿಜ್ಞಾನಿಗಳಿಗೆ ನೀಡಲಾದ ಪೇಟೆಂಟ್ ಗಳ ಸಂಖ್ಯೆ 2018-19ರಲ್ಲಿದ್ದ 2511 ರಿಂದ 2019-20ರಲ್ಲಿ 4003ಕ್ಕೆ ಮತ್ತು 2020-21ರಲ್ಲಿ 5629ಕ್ಕೆ ಏರಿಕೆಯಾಗಿದೆ ಎಂಬ ಅಂಶವನ್ನು ಸಹ ಅವರು ತಿಳಿಸಿದರು.
ನ್ಯಾಷನಲ್ ಸೈನ್ಸ್ ಫೌಂಡೇಶನ್, ಯುನೈಟೆಡ್ ಸ್ಟೇಟ್ಸ್ ಎಂಬುದು ಸರ್ಕಾರದ ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ವಿಜ್ಞಾನ ಮತ್ತು ಎಂಜಿನಿಯರಿಂಗ್ ನ ಎಲ್ಲಾ ವೈದ್ಯಕೀಯೇತರ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆ ಮತ್ತು ಶಿಕ್ಷಣವನ್ನು ಬೆಂಬಲಿಸುತ್ತದೆ.
ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (ಡಬ್ಲ್ಯು.ಐ.ಪಿ.ಒ.) ಹೊರತಂದಿರುವ ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ (ಜಿ.ಐ.ಐ.) 2022ರ ಪ್ರಕಾರ, ಭಾರತದ ಜಿ.ಐ.ಐ. ಶ್ರೇಯಾಂಕವು 2014ರಲ್ಲಿನ 81 ನೇ ಸ್ಥಾನದಿಂದ 2022ರಲ್ಲಿ 40 ನೇ ಸ್ಥಾನಕ್ಕೆ ಗಮನಾರ್ಹವಾಗಿ ವೃದ್ಧಿಸಿದೆ.
ಡಾ. ಜಿತೇಂದ್ರ ಸಿಂಗ್ ಅವರು ವಿಜ್ಞಾನ ಮತ್ತು ತಂತ್ರಜ್ಞಾನ ವಲಯವನ್ನು ಉತ್ತೇಜಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ, ಇದರಲ್ಲಿ ವೈಜ್ಞಾನಿಕ ಇಲಾಖೆಗಳಿಗೆ ಹಂಚಿಕೆಯಲ್ಲಿ ನಿರಂತರ ಹೆಚ್ಚಳ; ಜಿ.ಇ.ಆರ್.ಡಿ. ಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಖಾಸಗಿ ವಲಯದಿಂದ ಹೂಡಿಕೆಯನ್ನು ಉತ್ತೇಜಿಸುವುದು; ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (ಎಸ್.ಟಿ.ಐ.)ಯ ಚಟುವಟಿಕೆಗಳಲ್ಲಿ ಸುಲಭ ವ್ಯಾಪಾರ; ಸಾರ್ವಜನಿಕ ಸಂಗ್ರಹಣೆಗಾಗಿ ಹೊಂದಿಕೊಳ್ಳುವ ಸಾಧನಗಳನ್ನು ಪರಿಚಯಿಸುವುದು; ಸಾರ್ವಜನಿಕ-ಖಾಸಗಿ-ಪಾಲುದಾರಿಕೆಗಳು ಮತ್ತು ಇತರ ನವೀನ ಮಿಶ್ರ ಧನಸಹಾಯ ಕಾರ್ಯವಿಧಾನಗಳಂತಹ ಪೋರ್ಟ್ಫೋಲಿಯೋ-ಆಧಾರಿತ ಹಣಕಾಸು ಕಾರ್ಯವಿಧಾನಗಳ ಮೂಲಕ ಸಹಯೋಗದ ಎಸ್.ಟಿ.ಐ. ಧನಸಹಾಯಕ್ಕೆ ಮಾರ್ಗಗಳನ್ನು ಸೃಷ್ಟಿಸುವುದು ಸೇರಿವೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಮುಂಬರುವ 2023-24 ರ ಕೇಂದ್ರ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 20 ರಷ್ಟು ಹೆಚ್ಚಿನ ಹಣವನ್ನು ಪಡೆಯುವ ಸಾಧ್ಯತೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕಳೆದ ಬಜೆಟ್ ನಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು 6,002 ಕೋಟಿ ರೂ.ಗಳನ್ನು ಸ್ವೀಕರಿಸಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಕ್ಕೆ ಹಂಚಿಕೆ ಮಾಡಲಾದ ಒಟ್ಟು 14,217 ಕೋಟಿ ರೂ.ಗಳ ಒಟ್ಟು ನಿಧಿಯ ಶೇಕಡಾ 42 ರಷ್ಟಿದೆ. ಡಿ.ಎಸ್.ಐ.ಆರ್. 5,636 ಕೋಟಿ ರೂ.ಗಳನ್ನು (40%) ಪಡೆದರೆ, ಡಿ.ಬಿ.ಟಿ. 2,581 ಕೋಟಿ ರೂ.ಗಳನ್ನು (18%) ಪಡೆದುಕೊಂಡಿದೆ.
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್.) ನಿಬಂಧನೆಯ ಅಡಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೂಡಿಕೆಗಳನ್ನು ಮಾಡಲು ಕಾರ್ಪೊರೇಟ್ ವಲಯಕ್ಕೆ ಸರ್ಕಾರ ಅನುಮತಿ ನೀಡಿದೆ. ತಮ್ಮ ಸಿ.ಎಸ್.ಆರ್.ನ ಭಾಗವಾಗಿ ಸಂಸ್ಥೆಗಳು ಮತ್ತು ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳು ನಡೆಸುವ ಸಂಶೋಧನಾ ಪ್ರಯತ್ನಗಳಲ್ಲಿ ಸಂಸ್ಥೆಗಳು ಕೊಡುಗೆ ನೀಡಬಹುದು ಅಥವಾ ತಂತ್ರಜ್ಞಾನ ವ್ಯವಹಾರ ಪೋಷಣೆಗಳಲ್ಲಿ ಹೂಡಿಕೆ ಮಾಡಬಹುದು. ಭಾರತದ ಈಶಾನ್ಯ ರಾಜ್ಯಗಳಲ್ಲಿ ವ್ಯವಹಾರವನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸುವುದರಿಂದ ಬರುವ ಲಾಭದ 100% ಕಡಿತಗಳನ್ನು ಸಕ್ರಿಯಗೊಳಿಸುವ ಸ್ಥಳ-ಆಧಾರಿತ ತೆರಿಗೆ ಪ್ರೋತ್ಸಾಹಕಗಳಂತಹ ನಿರ್ದಿಷ್ಟ ಹೂಡಿಕೆ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ.
*****
(Release ID: 1884748)
Visitor Counter : 212