ಹಣಕಾಸು ಸಚಿವಾಲಯ
2022-23 ರ ಹಣಕಾಸು ವರ್ಷದಲ್ಲಿ ಒಟ್ಟು ನೇರ ತೆರಿಗೆ ಸಂಗ್ರಹ ಶೇಕಡಾ 25.90ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
2022-23ರ ಆರ್ಥಿಕ ವರ್ಷದಲ್ಲಿ ನಿವ್ವಳ ನೇರ ತೆರಿಗೆ ಸಂಗ್ರಹ ಶೇಕಡಾ 19.81ಕ್ಕಿಂತ ಹೆಚ್ಚಾಗಿವೆ.
2022-23ರ ಆರ್ಥಿಕ ವರ್ಷದಲ್ಲಿ ಮುಂಗಡ ತೆರಿಗೆ ಸಂಗ್ರಹ ಡಿಸೆಂಬರ್ 17ರಂತೆ 5,21,302 ಕೋಟಿಯಾಗಿದ್ದು, ಶೇಕಡಾ 12.83ರಷ್ಟು ಬೆಳವಣಿಗೆಯನ್ನು ತೋರಿಸುತ್ತದೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡಲಾದ ಮರುಪಾವತಿ ಮೊತ್ತ 2,27,896 ಕೋಟಿ ರೂಪಾಯಿ
Posted On:
18 DEC 2022 5:45PM by PIB Bengaluru
2022-23 ನೇ ಹಣಕಾಸು ವರ್ಷದ ನೇರ ತೆರಿಗೆ ಸಂಗ್ರಹದ ಅಂಕಿಅಂಶಗಳಂತೆ ನಿವ್ವಳ ಸಂಗ್ರಹ 11,35,754 ಕೋಟಿ ರೂಪಾಯಿಯಾಗಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇಕಡಾ 19.81ರಷ್ಟು ಹೆಚ್ಚಳವಾಗಿದೆ. 2021-22ರಲ್ಲಿ 9,47,959 ಕೋಟಿ ರೂಪಾಯಿ ಸಂಗ್ರಹವಾಗಿತ್ತು.
ನಿವ್ವಳ ನೇರ ತೆರಿಗೆ ಸಂಗ್ರಹ 11,35,754 ಕೋಟಿ ರೂಪಾಯಿಯಾಗಿದ್ದು, ಕಾರ್ಪೊರೇಷನ್ ತೆರಿಗೆ (CIT), 6,06,679 ಕೋಟಿ (ನಿವ್ವಳ ಮರುಪಾವತಿ) ರೂಪಾಯಿ. ಅದರಲ್ಲಿ 5,26,477 ಕೋಟಿ ರೂಪಾಯಿ ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) ಸೇರಿದಂತೆ ವೈಯಕ್ತಿಕ ಆದಾಯ ತೆರಿಗೆ (PIT) ಸೇರಿದೆ.
2022-23ರ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಸಂಗ್ರಹವು (ಮರುಪಾವತಿಗೆ ಸರಿಹೊಂದಿಸುವ ಮೊದಲು) 13,63,649 ಕೋಟಿಯಾಗಿದ್ದು, ಕಳೆದ ವರ್ಷ 10,83,150 ಕೋಟಿಯಾಗಿತ್ತು. ಕಳೆದ ವರ್ಷಕ್ಕಿಂತ ಶೇಕಡಾ 25.90ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ.
ಕಾರ್ಪೊರೇಷನ್ ತೆರಿಗೆ (CIT) 7,25,036 ಮತ್ತು ವೈಯಕ್ತಿಕ ಆದಾಯ ತೆರಿಗೆ(PIT) ಸೇರಿ ಒಟ್ಟು ಸಂಗ್ರಹ 13,63,649 ಕೋಟಿ ರೂಪಾಯಿಯಾಗಿದ್ದು, ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (STT) (PIT) 6,35,920 ಕೋಟಿ ರೂಪಾಯಿಯಾಗಿದೆ. ಸಣ್ಣ ತಲೆವಾರು ಸಂಗ್ರಹವು 5,21,302 ಕೋಟಿ ರೂಪಾಯಿಗಳ ಮುಂಗಡ ತೆರಿಗೆಯನ್ನು ಒಳಗೊಂಡಿರುತ್ತದೆ. ಮೂಲದಲ್ಲಿ 6,44,761 ಕೋಟಿ ರೂಪಾಯಿ ತೆರಿಗೆ ಕಡಿತಗೊಳಿಸಲಾಗಿದೆ. ಸ್ವ-ಮೌಲ್ಯಮಾಪನ ತೆರಿಗೆ 1,40,105 ಕೋಟಿ ರೂಪಾಯಿಯಾಗಿದ್ದು, ನಿಯಮಿತ ಮೌಲ್ಯಮಾಪನ ತೆರಿಗೆ 46,244 ಕೋಟಿ ರೂಪಾಯಿ ಮತ್ತು ಇತರ ಸಣ್ಣ ತಲೆವಾರು ತೆರಿಗೆಗಳು 11,237 ಕೋಟಿ ರೂಪಾಯಿಯಾಗಿದೆ.
2022-23ನೇ ಸಾಲಿನ ಮುಂಗಡ ತೆರಿಗೆ ಸಂಗ್ರಹವು ಮೊದಲ, ಎರಡನೇ ಮತ್ತು ಮೂರನೇ ತ್ರೈಮಾಸಿಕಕ್ಕೆ 5,21,302 ಕೋಟಿ ರೂಪಾಯಿಯಾಗಿದ್ದು, ಶೇಕಡಾ 12.83ರಷ್ಟು ಬೆಳವಣಿಗೆಯನ್ನು ಹೊಂದಿದೆ. 2021-22 ರ ಅವಧಿಗೆ 4,62,038 ಕೋಟಿ ರೂಪಾಯಿ ಮುಂಗಡ ತೆರಿಗೆ ಸಂಗ್ರಹವಾಗಿದೆ. 2022-23ರಲ್ಲಿ ಇಂದಿನ ಲೆಕ್ಕಚಾರದಂತೆ 5,21,302 ಕೋಟಿ ರೂಪಾಯಿಯಲ್ಲಿ ಕಾರ್ಪೊರೇಷನ್ ತೆರಿಗೆ (CIT)3,97,364 ಕೋಟಿ ಮತ್ತು ವೈಯಕ್ತಿಕ ಆದಾಯ ತೆರಿಗೆ (ಪಿಐಟಿ) 1,23,936 ಕೋಟಿ ರೂಪಾಯಿಯಾಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸಲ್ಲಿಸಲಾದ ಆದಾಯ ತೆರಿಗೆ ರಿಟರ್ನ್‌ಗಳ ಪ್ರಕ್ರಿಯೆಯ ವೇಗದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ, ಇಂದಿನವರೆಗೆ ಪರಿಶೀಲಿಸಿದ ಐಟಿಆರ್‌ಗಳಲ್ಲಿ ಸುಮಾರು ಶೇಕಡಾ 96.5 ರಷ್ಟು ಪ್ರಕ್ರಿಯೆಗೊಳಿಸಲಾಗಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ನೀಡಲಾದ ಮರುಪಾವತಿಗಳ ಸಂಖ್ಯೆಯಲ್ಲಿ ಸುಮಾರು ಶೇಕಡಾ 109ರಷ್ಟು ಹೆಚ್ಚಳದೊಂದಿಗೆ ಮರುಪಾವತಿಗಳ ತ್ವರಿತ ವಿತರಣೆಗೆ ಕಾರಣವಾಗಿದೆ. ಮರುಪಾವತಿ ಮೊತ್ತ 2022-23 ರ ಹಣಕಾಸು ವರ್ಷದಲ್ಲಿ 2,27,896 ಕೋಟಿ ರೂಪಾಯಿ, 2021-22 ರಲ್ಲಿ 1,35,191 ಕೋಟಿಗಳ ಮರುಪಾವತಿಯಾಗಿದ್ದು, ಈ ವರ್ಷ ಶೇಕಡಾ 68.57ರಷ್ಟು ಬೆಳವಣಿಗೆ ಕಂಡಿದೆ.
*****
(Release ID: 1884636)
Visitor Counter : 262