ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಬೆಂಗಳೂರು ಅರಮನೆಯಲ್ಲಿ 2022ರ ಡಿಸೆಂಬರ್ 16ರಂದು ಮೊದಲ ಆವೃತ್ತಿಯ "ಭಾರತ ಇಂಧನ ಸಪ್ತಾಹ-2023" ಅಂಗವಾಗಿ ನಡೆದ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ


ಭಾರತ ಇಂಧನ ಸಪ್ತಾಹವು ಇಂಧನ ಆವಿಷ್ಕಾರಕರಿಗೆ ಅಭೂತಪೂರ್ವ ಅವಕಾಶವನ್ನು ಒದಗಿಸುತ್ತದೆ: ಶ್ರೀ ಹರ್ದೀಪ್ ಎಸ್. ಪುರಿ.

Posted On: 16 DEC 2022 8:40PM by PIB Bengaluru

ಭಾರತದ ಮಹತ್ವಾಕಾಂಕ್ಷೆಯ ಇಂಧನ ಕಾರ್ಯಕ್ರಮ "ಭಾರತ ಇಂಧನ ಸಪ್ತಾಹ-2023" (ಐಇಡಬ್ಲ್ಯೂ-2023)ದ ಮೊದಲ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ ಬೆಂಗಳೂರಿನಲ್ಲಿಂದು ಆಯೋಜನೆಗೊಂಡಿತ್ತು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಹರ್ದೀಪ್ ಎಸ್. ಪುರಿ ಅವರು, ಬೆಂಗಳೂರಿನ ಅರಮನೆಯಲ್ಲಿ ಇಂಧನ ಸಪ್ತಾಹ-2023ಯ  ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದಲ್ಲಿ ಜಾಗತಿಕ ಇಂಧನ ವಲಯದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಇಂಧನ, ಮಾಹಿತಿ ತಂತ್ರಜ್ಞಾನ ಹಣಕಾಸು ಕಂಪನಿಗಳು ಸೇರಿದಂತೆ ಕರ್ನಾಟಕದಲ್ಲಿನ ಪ್ರಮುಖ ಭಾರತೀಯ ಕಂಪನಿಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮುದಾಯದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು. ಕರ್ನಾಟಕದ ಮುಖ್ಯಮಂತ್ರಿ ಗೌರವಾನ್ವಿತ ಶ್ರೀ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಈ ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮ "ಭಾರತ ಇಂಧನ ಸಪ್ತಾಹ-2023" ಅಂಗವಾಗಿ ಆಯೋಜಿಸಲಿರುವ ಹಲವು ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮಗಳಿಗೆ ಮುನ್ನುಡಿ ಬರೆಯುವ ಕಾರ್ಯಕ್ರಮವಾಗಿದೆ. 2022ರ ಡಿಸೆಂಬರ್ 23ರಂದು ನವದೆಹಲಿಯ ಕರ್ತವ್ಯಪಥದಲ್ಲಿ ನಡೆಯಲಿರುವ "ಡ್ಯಾನ್ಸಿಂಗ್ ಚಾರ್ಜ್ ಎಲೆಕ್ಟ್ರಿಕ್ ವಾಹನಗಳು”, 2023ರ ಜನವರಿ 8 ರಂದು ನವದೆಹಲಿಯಿಂದ ಮಾನೆಸರ್ ವರೆಗೆ ನಡೆಯಲಿರುವ ಸುಸ್ಥಿರ ಇಂಧನ ವಾಹನಗಳಿಗಾಗಿ ಕಾರ್ ರ್‍ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳು ಒಳಗೊಂಡಿದ್ದು, ಇವುಗಳ ಮೂಲಕ ಭವಿಷ್ಯದ ಶುದ್ಧ ಹಾಗೂ ಹಸಿರು ಇಂಧನಕ್ಕಾಗಿ ಭಾರತ ಕೈಗೊಂಡಿರುವ ಹಲವು ಹಾದಿಗಳನ್ನು ಬಿಂಬಿಸಲಾಗುವುದು.

ಪೂರ್ವಭಾವಿ ಸಿದ್ಧತಾ ಕಾರ್ಯಕ್ರಮದ ವೇಳೆ ಶ್ರೀ ಹರ್ದೀಪ್ ಪುರಿ ಅವರು, ಇಂಧನ ಮೂಲಸೌಕರ್ಯ, ಉತ್ಪಾದನಾ ವಲಯ ಮತ್ತು ಶೋಧನೆಯಲ್ಲಿ ಭಾರತವನ್ನು ಹೂಡಿಕೆಸ್ನೇಹಿಯಾಗಿ ಮಾಡಿರುವುದು ಸೇರಿದಂತೆ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಯನ್ನು ಪ್ರದರ್ಶಿಸಿದೆ ಮತ್ತು  ಭಾರತವನ್ನು ಉತ್ಪಾದನಾ ತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದೆ  ಎಂದರು.  ನೊ ಗೋ ಪ್ರದೇಶಗಳನ್ನು( ಯಾರೂ ಹೋಗಲಾದತಂಹ ಪ್ರದೇಶ) ಶೇಕಡ 99ರಷ್ಟು ತಗ್ಗಿಸುವುದು, ರಾಷ್ಟ್ರೀಯ ದತ್ತಾಂಶ ಭಂಡಾರ(ಎನ್ ಡಿ ಆರ್) ಯೋಜನೆ ಮೂಲಕ ಸುಲಭವಾಗಿ ದತ್ತಾಂಶ ಲಭ್ಯವಾಗುವಂತೆ ಮಾಡುವುದು. ಹೈಡ್ರೋಜನ್ ಸಂಪನ್ಮೂಲ ಮೌಲ್ಯಮಾಪನ(ಎಚ್ ಆರ್ ಎ) ಯೋಜನೆ, ಶ್ರೇಣಿವ್ಯವಸ್ಥೆಯ ಬಾವಿಗಳ ಉಪಕ್ರಮ ಆರಂಭ, ಉತ್ಕೃಷ್ಟ ನಗರ ಅನಿಲ ವಿತರಣಾ ಯೋಜನೆ, ಅನಿಲ ಮೂಲಸೌಕರ್ಯಕ್ಕೆ ಗಣನೀಯ ಒತ್ತು ಮತ್ತಿತರ ಕ್ರಮಗಳು ಸೇರಿವೆ ಎಂದರು.

ಪ್ರತಿ ದಿನ ಸರಾಸರಿ 60 ಮಿಲಿಯನ್ ಗ್ರಾಹಕರು ಪೆಟ್ರೋಲ್ ಪಂಪ್ ಗಳಿಗೆ ಭೇಟಿ ನೀಡುತ್ತಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಂಡುಬರುವ ತೀವ್ರ ಚಂಚಲತೆಯಿಂದ ರಕ್ಷಿಸಲ್ಪಡುತ್ತಾರೆ ಎಂಬುದನ್ನು ಖಾತ್ರಿಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು  ಸಚಿವರು ಪುನರುಚ್ಛರಿಸಿದರು.

ಭಾರತ-ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ "ಭಾರತ ಇಂಧನ ಸಪ್ತಾಹ-2023" ಅನ್ನು ಆಯೋಜಿಸುತ್ತಿದೆ. ಬೆಂಗಳೂರಿನಲ್ಲಿ 2023ರ ಫೆಬ್ರವರಿ 6 ರಿಂದ 8ರ ವರೆಗೆ ನಡೆಯಲಿರುವ ಈ ಸಪ್ತಾಹಕ್ಕೆ "ಪ್ರಗತಿ, ಸಹಭಾಗಿತ್ವ ಮತ್ತು ಪರಿವರ್ತನೆ" ಎಂಬುದು ಘೋಷವಾಕ್ಯವಾಗಿದೆ. "ಭಾರತ ಇಂಧನ ಸಪ್ತಾಹ-2023" ರಲ್ಲಿ 30ಕ್ಕೂ ಅಧಿಕ ಇಂಧನ ಸಚಿವರು, ಜಾಗತಿಕ ಕಂಪನಿಗಳ 50ಕ್ಕೂ ಅಧಿಕ ಮುಖ್ಯ ಕಾರ್‍ಯ ನಿರ್ವಹಣಾಧಿಕಾರಿ (ಸಿಇಒ)ಗಳು, 30 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ಜಾಗತಿಕ ಆರ್ಥಿಕ ಪ್ರಗತಿಯ ಇಂಜಿನ್ ಮತ್ತು ಜಾಗತಿಕ ಬಳಕೆಯ ಚಾಲಕಶಕ್ತಿ ಎರಡೂ ಆಗಿರುವ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಅನನ್ಯ ಅವಕಾಶ ಒದಗಿಸುತ್ತದೆ. ಇದಕ್ಕೆ ಪೂರಕ ಮತ್ತು ಹೂಡಿಕೆ ಸ್ನೇಹಿ ವಾತಾವರಣ ಮತ್ತು ಕೌಶಲ್ಯದ ದುಡಿಯುವ ಪಡೆ ಇದೆ.

ಬೇಡಿಕೆಯ ಪ್ರಮಾಣ, ತಾಂತ್ರಿಕ ಬದಲಾವಣೆಗಳು ಮತ್ತು ಡಿಜಿಟಲ್ ನಾವಿನ್ಯತೆಯಿಂದಾಗಿ ಇಂಧನ, ಭಾರತದ ಅತ್ಯಂತ ಪ್ರಮುಖ ಕ್ರಿಯಾಶೀಲ ವಲಯವಾಗಿ ಮಾರ್ಪಟ್ಟಿದೆ. ಐಇಡಬ್ಲ್ಯೂ 2023 ಪ್ರಾದೇಶಿಕ, ಅಂತಾರಾಷ್ಟ್ರೀಯ ನಾಯಕರಿಗೆ ಮತ್ತು ಸಿಇಒಗಳಿಗೆ ಒಗ್ಗೂಡಿ ಕಾರ್ಯತಂತ್ರ, ನೀತಿ ನಿರೂಪಣೆ ಮತ್ತು ತಾಂತ್ರಿಕ ಜ್ಞಾನ ಹಂಚಿಕೆಗೆ ಅಭೂತಪೂರ್ವ ಅವಕಾಶಗಳನ್ನು ಒದಗಿಸಲಿದೆ.

ಐಇಡಬ್ಲ್ಯೂ2023ಯಲ್ಲಿ ಸ್ಥಾಪಿಸಲಿರುವ ಭಾರತದ ಪೆವಿಲಿಯನ್, ಅನುಪಮ ಡಿಜಿಟಲ್ ಅನುಭವದ ಮೂಲಕ ದೇಶದ ಅದ್ಭುತ ಇಂಧನ ವಲಯ ಗಾಥೆಯನ್ನು ಬಿಂಬಿಸಲಿದೆ.

2023ರ ಐಇಡಬ್ಲ್ಯೂ ವೇಳೆ 19 ಕಾರ್ಯತಾಂತ್ರಿಕ ಸಮಾವೇಶ ಗೋಷ್ಠಿಗಳಲ್ಲಿ, ಇಡೀ ಇಂಧನ ವಲಯಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳಲ್ಲಿ ಮತ್ತು ಹಲವು ದೇಶಗಳ ಇಂಧನ ಸಚಿವರು, ಸಿಇಒಗಳು/ಪ್ರಮುಖ ಇಂಧನ ಸಂಸ್ಥೆಗಳ ನಾಯಕರು ಮತ್ತಿತರರು ಚರ್ಚೆ ಮತ್ತು ಸಮಾಲೋಚನೆ ನಡೆಸುವರು. 

ಇಂಧನ ಸುರಕ್ಷತೆ, ಇಂಗಾಲ ಪ್ರಮಾಣ ತಗ್ಗಿಸುವ ಮಾರ್ಗೋಪಾಯಗಳು, ಸ್ಥಿತಿ ಸ್ಥಾಪಕತ್ವ ಇಂಧನ ಪೂರೈಕೆ ಸರಣಿ, ಜೈವಿಕ ಇಂಧನ ಮತ್ತು ಹೈಡ್ರೋಜನ್ ಸೇರಿದಂತೆ ಹೊಸ ಬಗೆಯ ಇಂಧನಗಳು, ಮೇಲ್ಮೈ ಮತ್ತು ಮಧ್ಯಮ ವಲಯದ ಹೂಡಿಕೆ ಮತ್ತಿತರ ವಿಷಯಗಳು ಕಾರ್ಯತಾಂತ್ರಿಕ ಸಮಾವೇಶದ ಕಾರ್ಯಸೂಚಿಯಲ್ಲಿ ಸೇರಿವೆ.

ಕಾರ್ಯತಾಂತ್ರಿಕ ಸಮಾವೇಶ ಮಾತ್ರವಲ್ಲದೆ, ಐಇಡಬ್ಲ್ಯೂ 2023ಯಲ್ಲಿ ತಾಂತ್ರಿಕ ಮತ್ತು ವಾಣಿಜ್ಯ ಸಮಾವೇಶ ಗೋಷ್ಠಿಗಳು ನಡೆಯಲಿದ್ದು, ಅಲ್ಲಿ ಇಂಧನ ಮಾರುಕಟ್ಟೆಯ ಚಿತ್ರಣದ ಕುರಿತಂತೆ ಸದ್ಯದ ಮತ್ತು ಭವಿಷ್ಯದ ಆಯಾಮಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು.

ಹೆಚ್ಚಿನ ವಿವರಗಳಿಗೆ ಇಲ್ಲಿ ಲಾಗ್ ಆನ್ ಆಗಿ.. www.indiaenergyweek.com

ತಾಜಾ ಮಾಹಿತಿಗಾಗಿ, ಐಇಡಬ್ಲೂ 2023 ಟ್ವಿಟರ್ ಅನ್ನು ಇಲ್ಲಿ ಅನುಕರಿಸಬಹುದು https://twitter.com/IndiaEnergyWeek

*****


(Release ID: 1884323) Visitor Counter : 252


Read this release in: Hindi , English , Urdu