ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಪ್ರಸ್ತುತ 959 ತರಬೇತುದಾರರು ಕೆಲಸ ಮಾಡುತ್ತಿದ್ದಾರೆ: ಶ್ರೀ ಅನುರಾಗ್ ಠಾಕೂರ್
Posted On:
15 DEC 2022 2:56PM by PIB Bengaluru
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್.ಎ.ಐ.) ಮತ್ತು ಮಾನ್ಯತೆ ಪಡೆದ ವಿವಿಧ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ (ಎನ್.ಎಸ್.ಎಫ್.) ವಿವಿಧ ಕ್ರೀಡಾ ವಿಭಾಗಗಳಿಗೆ ತರಬೇತುದಾರರ ನೇಮಕವು ನಿರಂತರ ಮತ್ತು ಕ್ರಿಯಾತ್ಮಕ ಪ್ರಕ್ರಿಯೆಯಾಗಿದೆ. ತರಬೇತಿ ಮತ್ತು ಸ್ಪರ್ಧೆಯ (ಎ.ಸಿ.ಟಿ.ಸಿ) ಹಂಚಿಕೆಗಳ ಸಂಬಂಧಿತ ವಾರ್ಷಿಕ ಕ್ಯಾಲೆಂಡರ್ ನೊಳಗೆ ಒಕ್ಕೂಟಗಳು ತಾವಾಗಿಯೇ ವಿದೇಶಿ ತಜ್ಞರನ್ನು ನೇಮಿಸಿಕೊಳ್ಳಲು ಎನ್.ಎಸ್.ಎಫ್.ಗಳಿಗೆ ಅನುಮತಿ ನೀಡಲಾಗಿದೆ. ಆದರೆ, ಎಸ್.ಎ.ಐ.ನೊಂದಿಗೆ ಸಮಾಲೋಚಿಸಿ ಪ್ರಮುಖ ಫಲಿತಾಂಶ ಆಧಾರಿತ ಕ್ರೀಡಾ ಅವಕಾಶಗಳನ್ನು ರೂಪಿಸಿ ತರಬೇತುದಾರರನ್ನು ನೇಮಕಗೊಳಿಸಲು ಎನ್.ಎಸ್.ಎಫ್.ಗಳಿಗೆ ಕಡ್ಡಾಯ ಸೂಚನೆ ನೀಡಲಾಗಿದೆ. ಪ್ರಸ್ತುತ, ಎಸ್.ಎ.ಐ. ನಲ್ಲಿ ಒಟ್ಟು 959 ತರಬೇತುದಾರರು ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಇವರೆಲ್ಲರೂ ಭಾರತೀಯ ಪ್ರಜೆಗಳಾಗಿದ್ದಾರೆ.
ಭಾರತೀಯ ತರಬೇತುದಾರರಿಗೆ ಮತ್ತು ಅಂತಾರಾಷ್ಟ್ರೀಯ ತರಬೇತುದಾರರಿಗೆ ವೇತನಗಳು ವಿಭಿನ್ನವಾಗಿವೆ. ಭಾರತೀಯ ತರಬೇತುದಾರರಿಗೆ ಒದಗಿಸಲಾದ ವೇತನಗಳು ಮತ್ತು ಸೌಲಭ್ಯಗಳು 7 ನೇ ಕೇಂದ್ರ ವೇತನ ಆಯೋಗದ (ಸಿಪಿಸಿ) ಶಿಫಾರಸುಗಳ ಪ್ರಕಾರ ಇರುತ್ತದೆ. ಒಪ್ಪಂದದ ತರಬೇತುದಾರರಿಗೆ ಸಂಬಂಧಿಸಿದಂತೆ ಅವರುಗಳ ಒಪ್ಪಂದಗಳಲ್ಲಿ ನಿಗದಿಪಡಿಸಿದ ನಿಯಮಗಳು ಅನ್ವಯಿಸುತ್ತದೆ. ವಿದೇಶಿ ತರಬೇತುದಾರರಿಗೆ ಸಂಬಂಧಿಸಿದಂತೆ, ಅಂತರರಾಷ್ಟ್ರೀಯ ತರಬೇತುದಾರರ ಬೇಡಿಕೆ-ಪೂರೈಕೆಗಳು, ಸನ್ನಿವೇಶಗಳು, ಹೋಲಿಸಬಹುದಾದ ಸಂದರ್ಭಗಳು, ಚಾಲ್ತಿಯಲ್ಲಿರುವ ಮಾರುಕಟ್ಟೆ ಶುಲ್ಕ/ದರಗಳು, ಅರ್ಹತೆಗಳು/ಅನುಭವಗಳು ಮತ್ತು ಅವರ ಈ ಹಿಂದಿನ ಕೊನೆಯ ಪಾವತಿಗಳು, ಮುಂತಾದವುಗಳ ಆಧಾರದ ಮೇಲೆ ಸಂಬಂಧಪಟ್ಟ ಎನ್.ಎಸ್.ಎಫ್.ಗಳ ಶಿಫಾರಸುಗಳ ಪ್ರಕಾರ ಅವರನ್ನು ನೇಮಿಸಲಾಗುತ್ತದೆ. ಆ ಕ್ರೀಡೆಯಲ್ಲಿನ ಬೇಡಿಕೆ-ಪೂರೈಕೆ-ಶಿಸ್ತು-ಸನ್ನಿವೇಶವನ್ನು ಅವಲಂಬಿಸಿ ಅವರುಗಳ ವೇತನಗಳು ಬದಲಾಗಬಹುದು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಈಗಾಗಲೇ ಫೆಬ್ರವರಿ, 2022 ರಲ್ಲಿ ವಿದೇಶಿ ತರಬೇತುದಾರರು/ ತಜ್ಞರಿಗೆ ವೇತನ/ ಸೌಲಭ್ಯಗಳನ್ನು ಪರಿಷ್ಕರಿಸಿದೆ, ಇದು ಬೇಡಿಕೆ-ಪೂರೈಕೆ ಸನ್ನಿವೇಶ ಮತ್ತು ಚಾಲ್ತಿಯಲ್ಲಿರುವ ಮಾರುಕಟ್ಟೆ ದರಗಳನ್ನು ಆಧರಿಸಿದೆ. ಆದರೆ ಅದು ಪ್ರತಿ ಎನ್.ಎಸ್.ಎಫ್.ಗಳ ಅನುಮೋದಿತ ಒಟ್ಟಾರೆ ಬಜೆಟ್ ನ 30%ಕ್ಕಿಂತ ಅಧಿಕವಾಗಬಾರದು. ಭಾರತೀಯ ತರಬೇತುದಾರರಿಗೆ ಸಂಬಂಧಿಸಿದಂತೆ, ಅವರಿಗೆ 7ನೇ ಸಿ.ಪಿ.ಸಿ.ಯ ಶಿಫಾರಸು/ಮಾರ್ಗದರ್ಶನಗಳ ಪ್ರಕಾರ ನಿಯಂತ್ರಿಸಿ ವೇತನ/ ಸೌಲಭ್ಯಗಳನ್ನು ನೀಡಲಾಗುತ್ತದೆ. ನಿಯಮಿತ ಒಪ್ಪಂದಗಳಾಧಾರದಲ್ಲಿ, ಆಯಾ ವೇತನ ಹಂತಗಳಲ್ಲಿ ಕೆಲಸ ಮಾಡುವ ತರಬೇತುದಾರರಿಗೆ 7 ನೇ ಸಿ.ಪಿ.ಸಿ.ಯ ಚೌಕಟ್ಟು(ಮ್ಯಾಟ್ರಿಕ್ಸ್)ಗಳಲ್ಲಿ ಉಲ್ಲೇಖಿಸಿದಂತೆ ವಾರ್ಷಿಕ ಇನ್‌ಕ್ರಿಮೆಂಟ್ ಗಳನ್ನು ನೀಡಲಾಗುತ್ತದೆ ಮತ್ತು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ತರಬೇತುದಾರರಿಗೆ ವಾರ್ಷಿಕವಾಗಿ 10% ರಷ್ಟು ವೇತನಬಡ್ತಿಯನ್ನು ನೀಡಲಾಗುತ್ತದೆ.
ತರಬೇತುದಾರರ ಸಂಭಾವನೆ ವಿವರಗಳನ್ನು ಕೆಳಗೆ ನೀಡಲಾಗಿದೆ:-
i. ಗುತ್ತಿಗೆ ಆಧಾರದ ಸಹಾಯಕ ಕೋಚ್ - ₹50,300;
ii ಕೋಚ್ - ₹ 1,05,000;
iii ಹಿರಿಯ ಕೋಚ್ - ₹1,25,000;
iv. ಮುಖ್ಯ ಕೋಚ್ - ₹1,65,000.
ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.
*****
(Release ID: 1883810)