ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ನೋಂದಾಯಿತ ಭೌಗೋಳಿಕ ಸೂಚಕಗಳ (ಜಿ.ಐ.) ಒಟ್ಟು ಸಂಖ್ಯೆ 432 ಕ್ಕೆ ಏರಿಕೆ


ಅಸ್ಸಾಂನ ಪ್ರಸಿದ್ಧ ಗಮೋಸಾ, ತೆಲಂಗಾಣದ ತಾಂಡೂರ್ ರೆಡ್ಗ್ರಾಮ್, ಲಡಾಖ್ ನ ರಕ್ತ್ಸೆ ಕರ್ಪೊ ಅಪ್ರಿಕಾಟ್, ಮಹಾರಾಷ್ಟ್ರದ ಅಲಿಬಾಗ್ ಬಿಳಿ ಈರುಳ್ಳಿ ತಮ್ಮ ಜಿ.ಐ. ಟ್ಯಾಗ್ ಗಳನ್ನು ಪಡೆದಿವೆ

Posted On: 14 DEC 2022 5:44PM by PIB Bengaluru

ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಭಾರತವು ಹಲವಾರು ತಲೆಮಾರುಗಳಿಂದ ಕರಗತವಾದ ವಿವಿಧ ಕಲೆಗಳು ಮತ್ತು ಕರಕುಶಲತೆಗಳಿಗೆ ನೆಲೆಯಾಗಿದೆ. ಪ್ರಸ್ತುತ ಜಿ.ಐ.ಗಳ ಸಂಗ್ರಹಕ್ಕೆ ಸೇರ್ಪಡೆಯಾಗುವಂತೆ ಅಸ್ಸಾಂನ ಗಮೋಸಾ, ತೆಲಂಗಾಣದ ಟಂಡೂರ್ ರೆಡ್ಗ್ರಾಮ್, ಲಡಾಖ್ ನ ರಕ್ತ್ಸೆ ಕಾರ್ಪೊ ಏಪ್ರಿಕಾಟ್, ಮಹಾರಾಷ್ಟ್ರದ ಅಲಿಬಾಗ್ ಬಿಳಿ ಈರುಳ್ಳಿ ಮುಂತಾದ ಭಾರತದ ವಿವಿಧ ರಾಜ್ಯಗಳಿಂದ ಒಂಭತ್ತು ಹೊಸ ವಸ್ತುಗಳಿಗೆ ಪ್ರತಿಷ್ಠಿತ ಜಿ.ಐ. ಟ್ಯಾಗ್ ಗಳನ್ನು ನೀಡಲಾಗಿದೆ. ಇದರೊಂದಿಗೆ ಭಾರತದ ಒಟ್ಟು ಜಿ.ಐ. ಟ್ಯಾಗ್ ಗಳ ಸಂಖ್ಯೆ 432 ಕ್ಕೆ ಏರಿದೆ. ಕರ್ನಾಟಕ, ತಮಿಳುನಾಡು, ಉತ್ತರ ಪ್ರದೇಶ ಮತ್ತು ಕೇರಳ ಅತಿ ಹೆಚ್ಚು ಜಿ.ಐ.ಗಳನ್ನು ಹೊಂದಿರುವ ಅಗ್ರ ರಾಜ್ಯಗಳಾಗಿವೆ. 

ಡಿಪಿಐಐಟಿಯು ವಿವಿಧ ಮಧ್ಯಸ್ಥಗಾರರ ಸಹಯೋಗದೊಂದಿಗೆ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ವಿಶೇಷ ಜಿ.ಐ. ಉತ್ಪನ್ನಗಳು ಭಾರತೀಯ ಸಂಪ್ರದಾಯ, ಸಂಸ್ಕೃತಿ ಮತ್ತು ಉದ್ಯಮಶೀಲ ಚಟುವಟಿಕೆಗಳನ್ನು ಒಂದೇ ಸೂರಿನಯಡಿ ಪ್ರದರ್ಶಿಸುತ್ತವೆ.

ನವದೆಹಲಿಯ ಐಟಿಪಿಒನಲ್ಲಿ ಜಿ.ಐ. ಪೆವಿಲಿಯನ್ (ಆಹಾರ 2022) ಐದು ದಿನಗಳ ಕಾಲ (2022 ರ ಏಪ್ರಿಲ್ 26 -30 ನೇ ಏಪ್ರಿಲ್ 2022) ಮತ್ತು ಇಂಡಿಯಾ ಜಿ.ಐ. ಮೇಳವನ್ನು (2022 ರ ಆಗಸ್ಟ್ 26 - 28ನೇ ಆಗಸ್ಟ್ 2022) ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ಪೋ ಸೆಂಟರ್ ಮತ್ತು ಮಾರ್ಟ್ ನಲ್ಲಿ ಆಯೋಜಿಸಲಾಗಿತ್ತು. ವಾರಣಾಸಿಯ ಟ್ರೇಡ್ ಫೆಸಿಲಿಟೇಷನ್ ಸೆಂಟರ್ ನಲ್ಲಿ ಸಾಪ್ತಾಹಿಕ ಜಿ.ಐ. ಮಹೋತ್ಸವವನ್ನು (16 ನೇ ಅಕ್ಟೋಬರ್ ನಿಂದ 21 ನೇ ಅಕ್ಟೋಬರ್ 2022 ವರೆಗೆ) ನಡೆಸಲಾಯಿತು. ಐಐಟಿಎಫ್ 2022 ರಲ್ಲಿ ವಿಶೇಷ ಜಿ.ಐ. ಪೆವಿಲಿಯನ್ ಅನ್ನು ಸ್ಥಾಪಿಸಲಾಯಿತು. ಇದನ್ನು ಐಟಿಪಿಒ 2022 ರ ನವೆಂಬರ್ 14 ರಿಂದ 27 ರವರೆಗೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಇದಲ್ಲದೆ, ದೇಶದಲ್ಲಿ ಅಂತರ್-ಸಾಂಸ್ಕೃತಿಕ ಸಮಾಜವನ್ನು ನಿರ್ಮಿಸಲು ಉತ್ತೇಜನವನ್ನು ನೀಡುವ ಮೂಲಕ, ಇಂತಹ ಚಟುವಟಿಕೆಗಳು ರಾಜ್ಯಗಳ ನಡುವೆ ವೈವಿಧ್ಯಮಯ ಉತ್ಪನ್ನಗಳ ವರ್ಗಾವಣೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಉತ್ತಮ ರೋಮಾಂಚಕ ಸಾಂಸ್ಕೃತಿಕ ಸಮಾಜವನ್ನು ನಿರ್ಮಿಸಲು ಸಹ ಕೊಡುಗೆ ನೀಡುತ್ತವೆ.
ಇತ್ತೀಚೆಗೆ, ಸರ್ಕಾರವು ಜಾಗೃತಿ ಕಾರ್ಯಕ್ರಮಗಳಲ್ಲಿ ಇದರ ಪ್ರಚಾರಕ್ಕಾಗಿ ಮೂರು ವರ್ಷಗಳವರೆಗೆ 75 ಕೋಟಿ ರೂ.ಗಳ ವೆಚ್ಚವನ್ನು ಅನುಮೋದಿಸುವ ಮೂಲಕ ಜಿ.ಐ.ಗಳ ಉತ್ತೇಜನವನ್ನು ಬೆಂಬಲಿಸಿದೆ.

****



(Release ID: 1883631) Visitor Counter : 246


Read this release in: English , Urdu , Hindi , Marathi