ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಪಿ.ಎಂ.ಎ.ವೈ.-ಯು ಯೋಜನೆಯ ಪ್ರಗತಿ

Posted On: 12 DEC 2022 6:40PM by PIB Bengaluru

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು  ಪ್ರಧಾನ ಮಂತ್ರಿ ಆವಾಸ್ ಯೋಜನೆ -ಅರ್ಬನ್ (ಪಿ.ಎಂ.ಎ.ವೈ.-ಯು) ಅಡಿಯಲ್ಲಿ ಜೂನ್ 25, 2015 ರಿಂದ ನಾಲ್ಕು ಉಪಕ್ರಮಗಳ ಮೂಲಕ ಎಲ್ಲಾ ಅರ್ಹ ನಗರ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳೊಂದಿಗೆ ಪಕ್ಕಾ ಮನೆಯನ್ನು ಒದಗಿಸಲು ಕೇಂದ್ರ ಸರ್ಕಾರದ ಸಹಾಯವನ್ನು ಒದಗಿಸುತ್ತಿದೆ.

ಆ ನಾಲ್ಕು ಉಪಕ್ರಮಗಳೆಂದರೆ, ಫಲಾನುಭವಿ ನೇತೃತ್ವದ ನಿರ್ಮಾಣ (ಬಿ.ಎಲ್.ಸಿ.), ಸಹಭಾಗಿತ್ವದಲ್ಲಿ ಕೈಗೆಟುಕುವ ವಸತಿ (ಎ.ಹೆಚ್.ಪಿ.), ಇನ್-ಸಿಟು ಸ್ಲಂ ಪುನರಾಭಿವೃದ್ಧಿ (ಐ.ಎಸ್.ಎಸ್.ಆರ್.) ಮತ್ತು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಯೋಜನೆ (ಸಿ.ಎಲ್.ಎಸ್.ಎಸ್.) ಗಳಾಗಿವೆ 

31ನೇ ಮಾರ್ಚ್ 2022 ರವರೆಗೆ ದೇಶದಾದ್ಯಂತ ಒಟ್ಟು 122.69 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ.

ಆನಂತರ, 31ನೇ ಮಾರ್ಚ್, 2022 ರವರೆಗೆ ಮಂಜೂರಾದ ಈ ಮನೆಗಳನ್ನು ಪೂರ್ಣಗೊಳಿಸಲು ಯೋಜನೆಯನ್ನು 31ನೇ ಡಿಸೆಂಬರ್, 2024 ರವರೆಗೆ ವಿಸ್ತರಿಸಲಾಗಿದೆ.  

ವಿಸ್ತೃತ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಮನೆಗಳನ್ನು ಮಂಜೂರು ಮಾಡಲಾಗುವುದಿಲ್ಲ.  ಜೊತೆಗೆ, 122.69 ಲಕ್ಷ ಮನೆಗಳ ಒಟ್ಟಾರೆ ಗರಿಷ್ಠ ಮಿತಿಯಲ್ಲಿ, ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಮಂಜೂರಾದ ನಾನ್-ಸ್ಟಾರ್ಟರ್ ಬಿ.ಎಲ್.ಸಿ. /ಎ.ಹೆಚ್.ಸಿ. /ಐ.ಎಸ್.ಎಸ್.ಆರ್.  ಮನೆಗಳನ್ನು ಹೊಸ ಬಿ.ಎಲ್.ಸಿ. ಮನೆಗಳೊಂದಿಗೆ ಬದಲಾಯಿಸಲು ಅನುಮತಿಸಲಾಗಿದೆ.  

ಮನೆಗಳನ್ನು ಪೂರ್ಣಗೊಳಿಸುವ ಸಮಯವು ಸಾಮಾನ್ಯವಾಗಿ ಬಿ.ಎಲ್.ಸಿ. ಮನೆಗಳಿಗೆ 12 ರಿಂದ 18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಎ.ಹೆಚ್.ಸಿ./ಐ.ಎಸ್.ಎಸ್.ಆರ್.  ಯೋಜನೆಯಗಳ ಸಂದರ್ಭದಲ್ಲಿ 24 ರಿಂದ 36 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ.

ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆಯ ರಾಜ್ಯ ಸಚಿವ ಶ್ರೀ ಕೌಶಲ್ ಕಿಶೋರ್ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

*****


(Release ID: 1882954) Visitor Counter : 252


Read this release in: English , Urdu , Marathi