ಇಂಧನ ಸಚಿವಾಲಯ
ಬಿಇಇಯಿಂದ "ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಲ್ಲಿ ಇಂಧನ ದಕ್ಷತೆಯ ವೇಗವರ್ಧನೆ ಕುರಿತ ರಾಷ್ಟ್ರೀಯ ಸಮಾವೇಶ" ಆಯೋಜನೆ
Posted On:
09 DEC 2022 1:46PM by PIB Bengaluru
1. ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್ ಮತ್ತು ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಅವರಿಂದ ಎಂಎಸ್ ಎಂಇಗಳಲ್ಲಿ ಇಂಧನ ದಕ್ಷತೆ ವೇಗವರ್ಧಕಗೊಳಿಸುವ ರಾಷ್ಟ್ರೀಯ ಸಮಾವೇಶ ಉದ್ಘಾಟನೆ
2. ಭಾರತವು ಎಂಎಸ್‌ಎಂಇಗಳಿಗೆ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ನೆಲೆ ಹೊಂದಿದೆ ಮತ್ತು ಜಿಡಿಪಿಗೆ ಅತಿ ದೊಡ್ಡ ಕೊಡುಗೆ ನೀಡುತ್ತಿದೆ
3. ತಂತ್ರಜ್ಞಾನ ಪ್ರದರ್ಶನ, ನೀತಿ-ನಿರೂಪಕರು ಮತ್ತು ಎಂಎಸ್‌ಎಂಇ ವಲಯದ ಇತರ ಪ್ರಮುಖ ನಾಯಕರೊಂದಿಗೆ ಚಿಂತನೆಯ ಚರ್ಚಾಗೋಷ್ಠಿಗಳು ಮುಖ್ಯಾಂಶಗಳಲ್ಲಿ ಸೇರಿವೆ
4. ನಾನಾ ವಲಯಗಳಿಂದ 200 ಕ್ಕೂ ಅಧಿಕ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗಿ
|
ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜಾರ್ ಮತ್ತು ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಇಂಧನ ದಕ್ಷತೆಯ ತಂತ್ರಜ್ಞಾನಗಳು ಮತ್ತು ನವೀನ ಮಾದರಿಗಳ ಪ್ರದರ್ಶನವನ್ನು ಉದ್ಘಾಟಿಸಿದರು
ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಗುರ್ಜರ್ ಮತ್ತು ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ ಅವರು ಇಂಧನ ದಕ್ಷತೆಯ ಮೇಲೆ ಏಕೀಕೃತ ನ್ಯಾವಿಗೇಷನ್ ಸಾಧನ(ಯುಎನ್‌ಎನ್ ಎಟಿಇಇ)ಗೆ ಚಾಲನೆ ನೀಡಿದರು.
ಎಂಎಸ್ ಎಂಇ ಗಳಿಗೆ ನೀತಿ ಮತ್ತು ನಿಯಂತ್ರಣ ಚೌಕಟ್ಟಿನ ಕರಡು ವರದಿ ಬಿಡುಗಡೆ
ಇಂಧನ ಸಚಿವಾಲಯದ ಅಡಿಯಲ್ಲಿ ಬರುವ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಇಂಧನ ದಕ್ಷತೆಯ ಬ್ಯೂರೋ) ಇಂದು "ಎಂಎಸ್‌ಎಂಇಗಳಲ್ಲಿ ಇಂಧನ ದಕ್ಷತೆಯನ್ನು ವೇಗಗೊಳಿಸುವ ರಾಷ್ಟ್ರೀಯ ಸಮಾವೇಶ" ವನ್ನು ಆಯೋಜಿಸಿತ್ತು. ವಿವಿಧ ಕ್ಲಸ್ಟರ್ ಸಂಘಗಳು, ಎಂಎಸ್‌ಎಂಇ ಉದ್ಯಮಿಗಳು ಮತ್ತು ಬಾಧ್ಯಸ್ಥಗಾರರು ಚರ್ಚಿಸಿದರು ಮತ್ತು ಎಂಎಸ್‌ಎಂಇ ವಲಯದಲ್ಲಿ ಇಂಧನ ದಕ್ಷತೆಯ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ಮಾಹಿತಿಯನ್ನು ನೀಡಿದರು. ರಾಷ್ಟ್ರೀಯ ಸಮಾವೇಶ ಪ್ರಸ್ತುತ ಮಾನದಂಡಗಳ ಕಾರ್ಯಾಚರಣೆ ಮತ್ತು ಅನುಷ್ಠಾನವನ್ನು ಬಲಪಡಿಸಲು ಮತ್ತು ಎಂಎಸ್‌ಎಂಇ ಗಳಲ್ಲಿ ಇಂಧನ ದಕ್ಷತೆಗೆ ಅಂತರ್ಗತ ಮತ್ತು ಸುಸ್ಥಿರ ವಿಧಾನವನ್ನು ಹೆಚ್ಚಿಸಲು ಭವಿಷ್ಯದ ಕಾರ್ಯಕ್ರಮಗಳಿಗೆ ಕೊಡುಗೆ ನೀಡುತ್ತದೆ. ಎಂಎಸ್‌ಎಂಇ ವಲಯದಲ್ಲಿ ಇಂಧನ ದಕ್ಷತೆಯನ್ನು ಉತ್ತೇಜಿಸಲು ಕಾರ್ಯತಂತ್ರಗಳು ಮತ್ತು ಮಾರ್ಗಸೂಚಿಯನ್ನು ಚರ್ಚಿಸುವ, ವಿವಿಧ ಬಾಧ್ಯಸ್ಥಗಾರರಿಗೆ ಯೋಜನೆಗಳು ಮಾಡಿದ ಪ್ರಯತ್ನಗಳ ಜ್ಞಾನವನ್ನು ಒಗ್ಗೂಡಿಸಲು ಮತ್ತು ಸಮನ್ವಯಗೊಳಿಸಲು ರಾಷ್ಟ್ರೀಯ ಸಮಾವೇಶವು ಒಂದು ಸಾಮಾನ್ಯ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
ಉದ್ಘಾಟನಾ ಗೋಷ್ಠಿಯಲ್ಲಿ, ಜಿಇಎಫ್-ಯುಎನ್‌ಐ ಡಿಒ ಬಿಇಇ ಯೋಜನೆಯ ಯಶೋಗಾಥೆಯನ್ನು ಪ್ರದರ್ಶಿಸಲಾಯಿತು, ನಂತರ 7 ಅಧಿಕ ಇಂಧನ ಬಳಸುವ ಎಂಎಸ್ ಎಂಇ ವಲಯಗಳಿಗೆ ನೀತಿ ಕೇಂದ್ರೀಕೃತ ಕರಡು ಇಂಧನ
ದಕ್ಷತೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. ಎಂಎಸ್ ಎಂಇ ವಲಯಗಳಲ್ಲಿ ಇಂಧನ ದಕ್ಷತೆಯ ಯೋಜನೆಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಯುಎನ್ ಎನ್ ಎಟಿಇಇಇ ಸಾಧನವನ್ನು ಆರಂಭಿಸಲಾಗಿದೆ, ಇದನ್ನು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ ಮತ್ತು ಎಸ್‌ಐಡಿಬಿಐ ಮತ್ತು ಪರ್ಫಾರ್ಮ್ ಅಚೀವ್ ಅಂಡ್ ಎರ್ನ್ (ಪಿಎಇ) ಯೋಜನೆಯ ಕರಡು ಪರಿಕಲ್ಪನೆಯ ಟಿಪ್ಪಣಿಯಿಂದ ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ, ಇದು ಎಂಎಸ್ ಎಂಇ ಗಳ ಸಮಾಲೋಚನೆಗೆ ಸ್ವಯಂಪ್ರೇರಿತ ಮಾರುಕಟ್ಟೆ ಆಧಾರಿತ ಕಾರ್ಯವಿಧಾನವಾಗಿದೆ.
ಸಮಾವೇಶದ ಇತರೆ ಮುಖ್ಯಾಂಶಗಳೆಂದರೆ, ತಂತ್ರಜ್ಞಾನದ ಪ್ರದರ್ಶನ, ನೀತಿ-ನಿರೂಪಕರು ಮತ್ತು ಎಂಎಸ್‌ಎಇ ವಲಯದ ಇತರ ಪ್ರಮುಖ ನಾಯಕರೊಂದಿಗೆ ಏಕರೂಪ ನೀತಿ, ಹಣಕಾಸು ಮತ್ತು ನವೀನ ಮತ್ತು ಹೊಸ ತಂತ್ರಜ್ಞಾನಗಳ ಕುರಿತು ಚಿಂತನೆ ಪೂರಕ ಕ್ರಮಗಳ ಚರ್ಚೆಗಳ ಕುರಿತು ಗೋಷ್ಠಿ ಸೇರಿವೆ.
ಇಂಧನ ಮತ್ತು ಭಾರೀ ಕೈಗಾರಿಕೆಗಳ ರಾಜ್ಯ ಸಚಿವರಾದ ಶ್ರೀ ಕೃಷ್ಣ ಪಾಲ್ ಅವರು ಮುಖ್ಯ ಅತಿಥಿಗಳಾಗಿ ಸಮಾವೇಶದಲ್ಲಿ ಉಪಸ್ಥಿತರಿದ್ದರು. ಅವರು ಮಾತನಾಡಿ, ಸುರಕ್ಷಿತ ಭೂಗ್ರಹದ ಭಾರತದ ದೂರದೃಷ್ಟಿಯು ಒಂದು ಪದದ ಕೇಂದ್ರ ಮಂತ್ರವಾಗಿದೆ - ಪರಿಸರಕ್ಕಾಗಿ ಜೀವನಶೈಲಿ -ಇದನ್ನು ಸಿಒಪಿ ೨೬ನಲ್ಲಿನ ನಮ್ಮ ರಾಷ್ಟ್ರೀಯ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರಿಸಿದ್ದಾರೆ. ಮಿಷನ್ ಲೈಫ್ ಅನ್ನು ಪ್ರಧಾನ ಮಂತ್ರಿ ಚಾಲನೆ ನೀಡಿದ್ದರು. ಭಾರತವು 2023 ರಲ್ಲಿ "ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ" ಎಂಬ ಘೋಷವಾಕ್ಯದೊಂದಿಗೆ ಜಿ-20ರ ಅಧ್ಯಕ್ಷ ಸ್ಥಾನವನ್ನು ಸಹ ವಹಿಸಿಕೊಳ್ಳುತ್ತಿದೆ. ಇದು ನಮ್ಮ ಮಾರ್ಗದರ್ಶಿ ಸೂತ್ರಗಳಾಗಿ ಸಮಾನತೆ ಮತ್ತು ಹವಾಮಾನ ನ್ಯಾಯದೊಂದಿಗೆ ಕೈಗೊಳ್ಳಬೇಕಾದ ಸಾಮೂಹಿಕ ಪಯಣವಾಗಿದೆ. ತನ್ನ ದೃಢ ಬದ್ಧತೆಗಳು ಮತ್ತು ಕೇಂದ್ರೀಕೃತ ವಿಧಾನದ ಮೂಲಕ, ಹವಾಮಾನ ವೈಪರೀತ್ಯವನ್ನು ಎದುರಿಸಲು ಜಾಗತಿಕ ಆಯಾಮದ ಬದಲಾವಣೆಯಲ್ಲಿ ಭಾರತವು ಮಾದರಿಯಾಗಿ ಮುನ್ನಡೆಯಲು ಸಿದ್ಧವಾಗಿದೆ. ಭಾರತದಲ್ಲಿನ ಕೈಗಾರಿಕಾ ವಲಯವು ಇಂಧನದ ಪ್ರಮುಖ ಗ್ರಾಹಕರಲ್ಲಿ ಒಂದಾಗಿದೆ. ದೊಡ್ಡ ಕೈಗಾರಿಕೆಗಳಿಗೆ ಸಾಧನೆ, ಗುರಿ ಮುಟ್ಟು ಮತ್ತು ವ್ಯಾಪಾರ ಯೋಜನೆ (ಫರ್ ಫಾರ್‍ಮೆನ್ಸ್, ಅಚೀವ್ ಮತ್ತು ಟ್ರೇಡ್ ಸ್ಕೀಮ್)ಯಶಸ್ವಿಯಾಗಿ ಜಾರಿಯಲ್ಲಿರುವಾಗ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಲ್ಲಿ ಇಂಧನ ದಕ್ಷತೆಯನ್ನು ಮುಖ್ಯವಾಹಿನಿಗೆ ತರಲು ಈಗ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಈ ವಲಯವು ಇಂಧನದ ದಕ್ಷತೆಯನ್ನು ಉತ್ತೇಜಿಸುವಲ್ಲಿ ಮತ್ತು ದಿನನಿತ್ಯದ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನಗಳ ಉನ್ನತೀಕರಣದಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಶ್ರೀ ಗುರ್ಜರ್ ಅವರು ಹೇಳಿದರು. ಅದೇನೇ ಇದ್ದರೂ, ಸಮಗ್ರ ಕ್ರಮಗಳ ವಿಷಯದಲ್ಲಿ ಸುಧಾರಣೆಗೆ ಇನ್ನೂ ಸಾಕಷ್ಟು ಅವಕಾಶವಿದೆ, ಹೆಚ್ಚಿನ ಎಂಎಸ್ ಎಂಇ ಉದ್ಯಮಿಗಳು ತಮ್ಮ ವ್ಯವಹಾರದಲ್ಲಿ ಯಾವುದೇ ಸಂಭಾವ್ಯ ಉಳಿತಾಯವನ್ನು ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಳ್ಳುತ್ತಾರೆ. ಎಂಎಸ್ ಎಂಇ ವಲಯದಲ್ಲಿ ಇಂಧನ-ಸಮರ್ಥ ತಂತ್ರಜ್ಞಾನಗಳನ್ನು ಉತ್ತೇಜಿಸಲು, ಪ್ರದರ್ಶಿಸಲು ಮತ್ತು ಪ್ರಚುರಪಡಿಸಲು ಬಿಇಇ ಭಾರತದಲ್ಲಿ ಎಂಎಸ್ ಎಂಇಗಳು ಎದುರಿಸುತ್ತಿರುವ ನಾನಾಸವಾಲುಗಳನ್ನು ಎದುರಿಸಲು "ಎಂಎಸ್‌ಎಂಇಗಳಲ್ಲಿ ಇಂಧನ ದಕ್ಷತೆ ಮತ್ತು ತಂತ್ರಜ್ಞಾನದ ಉನ್ನತೀಕರಣದ ರಾಷ್ಟ್ರೀಯ ಕಾರ್ಯಕ್ರಮ" ವನ್ನು ಅಭಿವೃದ್ಧಿಪಡಿಸಿದೆ.
ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ರಾಜ್ಯ ಸಚಿವ ಶ್ರೀ ಭಾನು ಪ್ರತಾಪ್ ಸಿಂಗ್ ವರ್ಮಾ, ರಾಷ್ಟ್ರೀಯ ಸಮಾವೇಶಕ್ಕೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ಅಂತರ ಸಚಿವಾಲಯದ ಸಹಯೋಗವು ಎಂಎಸ್‌ಎಂಇಗಳಿಗೆ ಸುಸ್ಥಿರ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಮತ್ತು ನಮ್ಮ ಹವಾಮಾನ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿಐ) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ (ಸಿಎಮ್‌ಡಿ) ಶ್ರೀ ಶಿವಸುಬ್ರಮಣಿಯನ್ ರಾಮನ್, ಯುಎನ್‌ಐಡಿಒದ ಕೈಗಾರಿಕಾ ಅಭಿವೃದ್ಧಿ ಅಧಿಕಾರಿ ಶ್ರೀ ಸಂಜಯ್ ಶ್ರೇಷ್ಠ, ಬಿಇಇ ಮಹಾನಿರ್ದೇಶಕ ಶ್ರೀ ಅಭಯ್ ಬಾಕ್ರೆ ಮತ್ತು ಬಿಇಇ ನಿರ್ದೇಶಕ ಶ್ರೀ ಮಿಲಿಂದ್ ಡಿಯೋರ್ ಮತ್ತಿತರರು ಭಾಗವಹಿಸಿದ್ದರು.
ಸರ್ಕಾರ, ಬಹುಪಕ್ಷೀಯ/ದ್ವಿಪಕ್ಷೀಯ ಏಜೆನ್ಸಿಗಳು, ಕೈಗಾರಿಕೆಗಳು, ಕೈಗಾರಿಕಾ ಸಂಘಗಳು, ತಂತ್ರಜ್ಞಾನ ಪೂರೈಕೆದಾರರು ಮತ್ತು ಸಲಹೆಗಾರರನ್ನು ಒಳಗೊಂಡ 200 ಕ್ಕೂ ಅಧಿಕ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದರು. ಸಮಾವೇಶ ಕೈಗಾರಿಕೆಗಳ ಮೂಲವನ್ನು ಬಲವರ್ಧನೆಗೊಳಿಸುತ್ತದೆ ಮತ್ತು
ಎಂಎಸ್ ಎಂಇಗಳ ಇಂಧನ ದಕ್ಷತೆಯನ್ನು ಸುಧಾರಿಸುವ ಬಿಇಇ ಯ ಪ್ರಯತ್ನಗಳನ್ನು ಬೆಂಬಲಿಸುತ್ತದೆ. ನಾನಾ ವಲಯಗಳು ಮತ್ತು ವಿಶಿಷ ಭಾಧ್ಯಸ್ಥಗಾರರ ನಡುವೆ ಸುಸ್ಥಿರ ಕಾರ್ಯತಂತ್ರವನ್ನು ನಿರ್ಮಿಸಲು ಸಮಾವೇಶ ಸೇತುವೆಯಾಗಿ ಕಾರ್ಯನಿರ್ವಹಿಸಿತು.
ಹಿನ್ನೆಲೆ:
ವಿಶ್ವಸಂಸ್ಥೆಯ ಕೈಗಾರಿಕಾ ಅಭಿವೃದ್ಧಿ ಸಂಸ್ಥೆ (ಯುಎನ್ ಐಡಿಒ),ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಸಹಯೋಗದೊಂದಿಗೆ "ಭಾರತದಲ್ಲಿನ ಆಯ್ದ ಎಂಎಸ್ ಎಂಇ ಕ್ಲಸ್ಟರ್‌ಗಳಲ್ಲಿ ಇಂಧನ ದಕ್ಷತೆ ಮತ್ತು ನವೀಕರಿಸಬಹುದಾದ ಇಂಧನ ಬಳಕೆಯನ್ನು ಉತ್ತೇಜಿಸುವುದು" ಎಂಬ ಶೀರ್ಷಿಕೆಯ ಜಾಗತಿಕ ಪರಿಸರ ಸೌಕರ್ಯ (ಜಿಇಎಫ್)ಅನುದಾನಿತರಾಷ್ಟ್ರೀಯ ಯೋಜನೆ ಜಾರಿಗೊಳಿಸುತ್ತಿದೆ. ೨೦೧೧ರಲ್ಲಿ ಆರಂಭವಾದ ಈ ಯೋಜನೆಯು ತೀವ್ರ ಬಂಧನ ಬಳಕೆ ಮಾಡುವ ಆಯ್ದ ಸಣ್ಣ, ಅತಿ,ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ ಎಂಇ) ವಲಯಗಳಲ್ಲಿನ ಪ್ರಕ್ರಿಯೆ ಅನ್ವಯಗಳಲ್ಲಿ ಇಂಧನ ದಕ್ಷತೆ (ಇಇ) ಮತ್ತು ನವೀಕರಿಸಬಹುದಾದ ಇಂಧನ (ಆರ್‌ಇ) ತಂತ್ರಜ್ಞಾನಗಳ ವರ್ಧಿತ ಬಳಕೆಯನ್ನು ಪರಿಚಯಿಸಲು ಮಾರುಕಟ್ಟೆ ಪರಿಸರವನ್ನು ಅಭಿವೃದ್ಧಿಪಡಿಸಲು ಮತ್ತು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂಎಸ್ ಎಂಇ) ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್ ಆರ್ ಇ) ಬೆಂಬಲಿಸಿದೆ. ಯೋಜನೆಯು ತನ್ನ ವ್ಯವಸ್ಥಿತ ಮಧ್ಯಪ್ರವೇಶದ ಮೂಲಕ ಐದು ವಿಭಿನ್ನ ಇಂಧನ ವಲಯಗಳಲ್ಲಿ 26 ಕ್ಲಸ್ಟರ್‌ಗಳಲ್ಲಿ ಜಾರಿಗೆ ತಂದಿದೆ.
ವಿಶ್ವದಲ್ಲಿ ಎಂಎಸ್‌ಎಂಇಗಳಿಗೆ ಎರಡನೇ ಅತಿದೊಡ್ಡ ನೆಲೆಯನ್ನು ಭಾರತವು ಹೊಂದಿದೆ ಮತ್ತು ಜಿಡಿಪಿಗೆ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದೆ. ಎಂಎಸ್‌ಎಂಇ ಯ ಬಹುಪಾಲು ಇಂಧನ ದಕ್ಷತೆ (ಅಥವಾ) ತಂತ್ರಜ್ಞಾನದ ಉನ್ನತೀಕರಣ ಕ್ರಮಗಳನ್ನು ಇನ್ನೂ ಅಳವಡಿಸಿಕೊಂಡಿಲ್ಲ. ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಮತ್ತು ಇಂಧನ ಸಚಿವಾಲಯದ ಕೇಂದ್ರೀಕೃತ ಮಧ್ಯಸ್ಥಿಕೆಗಳ ಆಧಾರದ ಮೇಲೆ, ಬೃಹತ್ ಇಂಧನ ಸಂರಕ್ಷಣಾ ಸಾಮರ್ಥ್ಯ ಮತ್ತು ವಲಯದಲ್ಲಿ ಇಂಧನ-ಸಮರ್ಥ ಬಳಕೆ ತಂತ್ರಜ್ಞಾನಗಳಿಗೆ ಮಾರುಕಟ್ಟೆ ಇದೆ.
ಈ ಎಂಎಸ್ ಎಂಇ ಗಳ ದೊಡ್ಡ ವಿಭಾಗವು ಉತ್ತಮ ತಂತ್ರಜ್ಞಾನಗಳು, ಕ್ರಮಗಳು ಮತ್ತು ಕಾರ್ಯಾಚರಣಾ ಅಭ್ಯಾಸಗಳನ್ನು ಗುರುತಿಸಲು, ಹೊಂದಲು ಮತ್ತು ಅಳವಡಿಸಿಕೊಳ್ಳಲು ಸ್ಥಿರವಾದ ತಾಂತ್ರಿಕ ಸಾಮರ್ಥ್ಯವನ್ನು ಹೊಂದಿಲ್ಲ ಎಂಬುದನ್ನು ಬಿಇಇ ತನ್ನ ವ್ಯವಸ್ಥಿತ ಕಾರ್ಯಯೋಜನೆಗಳ ಮೂಲಕ ಗಮನಿಸಿದೆ. ಇಂಧನ ದಕ್ಷತೆಯನ್ನು ಉತ್ತೇಜಿಸುವಲ್ಲಿ ಎಂಎಸ್ ಎಂಇ ಗಳ ಪ್ರಾಮುಖ್ಯತೆಯನ್ನು ಗುರುತಿಸಿ, ಬಿಇಇ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಉತ್ತಮ ತಂತ್ರಜ್ಞಾನಗಳು ಮತ್ತು ಕಾರ್ಯಾಚರಣಾ ಅಭ್ಯಾಸಗಳನ್ನು ಗುರುತಿಸಲು, ಹೊಂದಲು ಮತ್ತು ಅಳವಡಿಸಿಕೊಳ್ಳಲು ಅದರ ತಾಂತ್ರಿಕ ಸಾಮರ್ಥ್ಯವನ್ನು ಸುಧಾರಿಸಲು ವಲಯವನ್ನು ಬೆಂಬಲಿಸುವ ಕಾರ್ಯ ಮಾಡುತ್ತಿದೆ. ಬಿಇಇ-ಎಸ್‌ಎಂಇ ಕಾರ್ಯಕ್ರಮವು ಇಂಧನ-ಸಮರ್ಥ ತಂತ್ರಜ್ಞಾನಗಳ ಅಳವಡಿಕೆ, ಜ್ಞಾನ ಹಂಚಿಕೆ, ಸಾಮರ್ಥ್ಯ ವೃದ್ಧಿ ಮತ್ತು ನವೀನ ಹಣಕಾಸು ಕಾರ್ಯವಿಧಾನಗಳ ಹಣಕಾಸು ಅಭಿವೃದ್ಧಿಯ ಮೂಲಕ ಭಾರತದಲ್ಲಿ ಎಂಎಸ್ ಎಂಇ ವಲಯದ ಇಂಧನ ದಕ್ಷತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
***
(Release ID: 1882197)
Visitor Counter : 153