ಸಂಸ್ಕೃತಿ ಸಚಿವಾಲಯ

ಸಂಸ್ಕೃತಿ ಸಚಿವಾಲಯವು ವಸ್ತುಸಂಗ್ರಹಾಲಯಗಳ ಮಾರ್ಪಾಡು ಮತ್ತು ಆಧುನೀಕರಣಕ್ಕಾಗಿ ಮ್ಯೂಸಿಯಂ (ವಸ್ತುಸಂಗ್ರಹಾಲಯ) ಅನುದಾನ ಯೋಜನೆ (MGS) ಮತ್ತು ವಿಜ್ಞಾನದ ಸಂಸ್ಕೃತಿಯನ್ನು ಉತ್ತೇಜಿಸುವ ಯೋಜನೆ (SPoCS) ಅನ್ನು ನಿರ್ವಹಿಸುತ್ತದೆ.

Posted On: 08 DEC 2022 4:31PM by PIB Bengaluru

ಪ್ರಮುಖ ಮುಖ್ಯಾಂಶಗಳು

ಕಳೆದ ಎರಡು ವರ್ಷಗಳಲ್ಲಿ (2020-21 ಮತ್ತು 2021-22), ಪ್ರಸ್ತುತ ವಸ್ತುಸಂಗ್ರಹಾಲಯಗಳ ಅಭಿವೃದ್ಧಿ/ಆಧುನೀಕರಣಕ್ಕಾಗಿ ಮ್ಯೂಸಿಯಂ (ವಸ್ತುಸಂಗ್ರಹಾಲಯ)ಅನುದಾನ ಯೋಜನೆಯಡಿಯಲ್ಲಿ 8 ವಸ್ತುಸಂಗ್ರಹಾಲಯಗಳಿಗೆ ಹಣ ನೀಡಲಾಗಿದೆ.

ಸಂಸ್ಕೃತಿ ಸಚಿವಾಲಯವು ಮ್ಯೂಸಿಯಂ ಗ್ರ್ಯಾಂಟ್ ಸ್ಕೀಮ್‌(ಮ್ಯೂಸಿಯಂ ಗ್ರ್ಯಾಂಟ್ ಸ್ಕೀಂ (MGS) ಮತ್ತು ವಿಜ್ಞಾನದ ಸಂಸ್ಕೃತಿಯನ್ನು ಉತ್ತೇಜಿಸುವ ಯೋಜನೆ (SPoCS) ಎಂಬ ಎರಡು ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ಒಂದು ಅಂಶವೆಂದರೆ ಅಸ್ತಿತ್ವದಲ್ಲಿರುವ ವಸ್ತುಸಂಗ್ರಹಾಲಯಗಳ ಅಭಿವೃದ್ಧಿ/ಮಾರ್ಪಾಡು ಮತ್ತು ಅಸ್ತಿತ್ವದಲ್ಲಿರುವ ವಿಜ್ಞಾನ ನಗರಗಳು/ವಿಜ್ಞಾನ ಕೇಂದ್ರಗಳ ಆಧುನೀಕರಣ/ಉನ್ನತೀಕರಣ/ ಕ್ರಮವಾಗಿ ಇನ್ನೋವೇಶನ್ ಹಬ್ಸ್‌ ಪ್ರಮುಖವಾಗಿದೆ.

ಈ ಯೋಜನೆಗಳು ಅಸ್ತಿತ್ವದಲ್ಲಿರುವ ವಸ್ತುಸಂಗ್ರಹಾಲಯಗಳು ಮತ್ತು ವಿಜ್ಞಾನ ನಗರಗಳು/ವಿಜ್ಞಾನ ಕೇಂದ್ರಗಳು/ಇನ್ನೋವೇಶನ್ ಹಬ್‌ಗಳಲ್ಲಿ ವೈವಿಧ್ಯಮಯ ಪ್ರದರ್ಶನಗಳು, ಗ್ಯಾಲರಿಗಳು ಮತ್ತು ಸಂದರ್ಶಕರ ಸೌಲಭ್ಯಗಳಿಗಾಗಿ ಆಧುನಿಕಗೊಳಿಸಲು/ ಕಾಲೋಚಿತಗೊಳಿಸಲು  ಮತ್ತು ಅನುಕೂಲಕರವಾದ ಪ್ರಾದೇಶಿಕ ಸೆಟ್ಟಿಂಗ್‌ಗಳನ್ನು ರಚಿಸಲು ಹಣಕಾಸಿನ ನೆರವು ಒದಗಿಸುವ ಗುರಿಯನ್ನು ಹೊಂದಿವೆ.  ಮ್ಯೂಸಿಯಂ ಗ್ರ್ಯಾಂಟ್ ಯೋಜನೆಯಡಿಯಲ್ಲಿ ಒಂದು ಅಂಶವೆಂದರೆ ಅದು  ಮ್ಯೂಸಿಯಂ ಸಂಗ್ರಹಣೆಗಳ ಡಿಜಿಟೈಸೇಶನ್. ಇದು ಪ್ರಾಥಮಿಕವಾಗಿ ಮ್ಯೂಸಿಯಂ ಸಂಗ್ರಹಣೆಯ ಡಿಜಿಟಲೀಕರಣದ ಮೇಲೆ ಕೇಂದ್ರೀಕರಿಸುತ್ತದೆ.

ಕಳೆದ ಎರಡು ವರ್ಷಗಳಲ್ಲಿ (2020-21 ಮತ್ತು 2021-22), ಪ್ರಸ್ತುತ ವಸ್ತುಸಂಗ್ರಹಾಲಯಗಳ ಅಭಿವೃದ್ಧಿ/ಆಧುನೀಕರಣಕ್ಕಾಗಿ ಮ್ಯೂಸಿಯಂ ಅನುದಾನ ಯೋಜನೆಯಡಿಯಲ್ಲಿ 8 ವಸ್ತುಸಂಗ್ರಹಾಲಯಗಳಿಗೆ ಹಣ ನೀಡಲಾಗಿದೆ.  ಅದೇ ರೀತಿ 13 ವಿಜ್ಞಾನ ನಗರಗಳು/ವಿಜ್ಞಾನ ಕೇಂದ್ರಗಳು/ಇನ್ನೋವೇಶನ್ ಹಬ್‌ಗಳನ್ನು ಆಧುನೀಕರಣ, ನವೀಕರಣ ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳ ಸುಧಾರಣೆಗಾಗಿ ವಿಜ್ಞಾನದ ಸಂಸ್ಕೃತಿಯ ಉತ್ತೇಜನಕ್ಕಾಗಿ ಯೋಜನೆಯಡಿಯಲ್ಲಿ ಧನಸಹಾಯ ಮಾಡಲಾಗಿದೆ.

ಇಂದು ರಾಜ್ಯಸಭೆಯಲ್ಲಿ ಈಶಾನ್ಯ ಪ್ರದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ ಅವರು  ಈ ಉತ್ತರವನ್ನು ನೀಡಿದರು.

*****



(Release ID: 1881985) Visitor Counter : 82


Read this release in: English , Urdu