ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಆಮದಾದ ಕಚ್ಚಾ ತೈಲ

Posted On: 08 DEC 2022 2:42PM by PIB Bengaluru

ತೈಲ ಮತ್ತು ಅನಿಲದ ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದು, ಇಂಧನ ದಕ್ಷತೆ ಮತ್ತು ಸಂರಕ್ಷಣಾ ಕ್ರಮಗಳನ್ನು ಉತ್ತೇಜಿಸವುದು ಹಾಗೆಯೇ ಬೇಡಿಕೆಯ ಬದಲಿ ವ್ಯವಸ್ಥೆಗೆ ಒತ್ತು ನೀಡುವುದು. ಜೈವಿಕ ಇಂಧನಗಳು ಮತ್ತು ಇತರ ಪರ್ಯಾಯ ಇಂಧನಗಳು/ ನವೀಕರಿಸಬಹುದಾದ ಇಂಧನ ಉತ್ತೇಜಿಸಲು ಮತ್ತು ಆಮದು ಮಾಡಿದ ಕಚ್ಚಾ ತೈಲದ ಮೇಲಿನ ದೇಶದ ಅವಲಂಬನೆಯನ್ನು ತಗ್ಗಿಸಲು ಶುದ್ಧೀಕರಣ ಪ್ರಕ್ರಿಯೆಯ ಸುಧಾರಣೆಯಂತಹ ಐದು ಅಂಶಗಳ ಕಾರ್ಯತಂತ್ರವನ್ನು ಸರ್ಕಾರ ಅಳವಡಿಸಿಕೊಂಡಿದೆ.

ದೇಶೀಯ ಕಚ್ಚಾ ತೈಲದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಆಮದನ್ನು ಕಡಿಮೆ ಮಾಡಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಅನ್ವೇಷಿತ ಸಣ್ಣ ಕ್ಷೇತ್ರ ನೀತಿ, ಹೈಡ್ರೋಕಾರ್ಬನ್ ಅನ್ವೇಷಣೆ ಮತ್ತು ತೈಲ ಮತ್ತು ಅನಿಲದ ದೇಶೀಯ ಪರಿಶೋಧನೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಲು ಪರವಾನಗಿ ನೀತಿ 2019, ನೈಸರ್ಗಿಕ ಅನಿಲ ಮಾರುಕಟ್ಟೆ ಸುಧಾರಣೆಗಳು 2020, ತೈಲ ಮತ್ತು ಅನಿಲಕ್ಕಾಗಿ ವರ್ಧಿತ ಚೇತರಿಕೆ ವಿಧಾನಗಳನ್ನು ಉತ್ತೇಜಿಸುವ ಮತ್ತು ಪ್ರೋತ್ಸಾಹಿಸುವ ನೀತಿ, ಅಸ್ತಿತ್ವದಲ್ಲಿರುವ ಪ್ರಬುದ್ಧ ಕ್ಷೇತ್ರಗಳ ಪುನರಾಭಿವೃದ್ಧಿ ಮತ್ತು ಹೊಸ / ಮೂಲೆಗುಂಪಾದ ಕ್ಷೇತ್ರಗಳ ಅಭಿವೃದ್ಧಿ, ರೋಗಗ್ರಸ್ತ ಬಾವಿಗಳ ಪುನಶ್ಚೇತನ,  ಸುಧಾರಿತ ತೈಲ ಮರುಪಡೆಯುವಿಕೆ (ಐಒಆರ್) ಮತ್ತು ವರ್ಧಿತ ತೈಲ ಮರುಪಡೆಯುವಿಕೆ (ಇಒಆರ್) ತಂತ್ರಗಳ ಅನುಷ್ಠಾನದ ಮೂಲಕ ಚೇತರಿಕೆ ಅಂಶಗಳನ್ನು ಸುಧಾರಿಸುವುದು ಸೇರಿದೆ. ಸರ್ಕಾರವು ರಾಷ್ಟ್ರೀಯ ತೈಲ ಕಂಪನಿಗಳಿಗೆ ನೆರವಾಗುವ ಉದ್ದೇಶದೊಂದಿಗೆ ವಿದ್ಯುನ್ಮಾನ ಏಕಗವಾಕ್ಷಿ ಕಾರ್ಯವಿಧಾನದ ಮೂಲಕ ಅನುಮೋದನೆ ಪ್ರಕ್ರಿಯೆಗಳನ್ನು ಸುವ್ಯವಸ್ಥಿತಗೊಳಿಸುವ ಮೂಲಕ ವ್ಯಾಪಕ ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸಿದೆ.

ದೇಶವು ಮಧ್ಯಪ್ರಾಚ್ಯ, ಆಫ್ರಿಕಾ, ಯುರೋಪ್, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಮತ್ತು ಆಗ್ನೇಯ ಏಷ್ಯಾದ ದೇಶಗಳು ಸೇರಿದಂತೆ ವಿವಿಧ ಭೌಗೋಳಿಕ ಪ್ರದೇಶಗಳಿಂದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಶ್ರೀ ರಾಮೇಶ್ವರ್ ತೇಲಿ ಅವರಿಂದು ಈ ಮಾಹಿತಿಯನ್ನು ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

*****
 


(Release ID: 1881854)
Read this release in: English , Urdu , Tamil