ಇಂಧನ ಸಚಿವಾಲಯ

ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಸಾಧಿಸುವತ್ತ ಮತ್ತೊಂದು ದೊಡ್ಡ ಹೆಜ್ಜೆ ಇಟ್ಟಿದೆ

Posted On: 07 DEC 2022 5:24PM by PIB Bengaluru


 
1.       ವಿದ್ಯುತ್ ಸಚಿವಾಲಯವು 2030 ರ ವೇಳೆಗೆ ಯೋಜಿತ ನವೀಕರಿಸಬಹುದಾದ ಸಾಮರ್ಥ್ಯದಿಂದ ವಿದ್ಯುತ್ ಉತ್ಪಾದನೆಗೆ ಸಮಗ್ರ ಯೋಜನೆಯನ್ನು ರೂಪಿಸಿದೆ.
2.      ಯೋಜನೆಯು ಹೆಚ್ಚುವರಿ ಪ್ರಸರಣ ವ್ಯವಸ್ಥೆ ಮತ್ತು ಬ್ಯಾಟರಿ ಶಕ್ತಿಯ ಶೇಖರಣಾ ಸಾಮರ್ಥ್ಯದ ಸ್ಥಾಪನೆಯನ್ನು ಯೋಜಿಸಿದೆ.
3.      2030 ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಆಧಾರಿತ ಸ್ಥಾಪಿತ ಸಾಮರ್ಥ್ಯವನ್ನು ಹೊಂದಲು ಅಗತ್ಯವಿರುವ ಪ್ರಸರಣ ವ್ಯವಸ್ಥೆಯನ್ನು ಯೋಜಿಸಲು ವಿದ್ಯುತ್ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
4.      ಸಮಿತಿಯು "2030 ರ ವೇಳೆಗೆ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ ಪ್ರಸರಣ ವ್ಯವಸ್ಥೆ" ಎಂಬ ಶೀರ್ಷಿಕೆಯ ವಿವರವಾದ ಯೋಜನೆಯನ್ನು ಸಿದ್ಧಪಡಿಸಿದೆ.

“2030 ರ ವೇಳೆಗೆ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣ ಪ್ರಸರಣ ವ್ಯವಸ್ಥೆ” ಯೋಜನೆಗೆ ಕೇಂದ್ರ ಇಂಧನ ಮತ್ತು ಹೊಸ ನವೀಕರಿಸಬಹುದಾ ಇಂಧನ ಸಚಿವ ಶ್ರೀ ಆರ್ ಕೆ ಸಿಂಗ್ ಅವರು ಚಾಲನೆ ನೀಡಿದರು. ಕೇಂದ್ರ ಇಂಧನ ಖಾತೆ ವಿದ್ಯುತ್ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜರ್, ಹೊಸ ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ಭಗವಂತ ಖೂಬಾ, ಇಂಧನ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್ ಮತ್ತು ಎನ್‌ ಆರ್‌ ಇ ಕಾರ್ಯದರ್ಶಿ ಶ್ರೀ ಭೂಪಿಂದರ್ ಸಿಂಗ್ ಭಲ್ಲಾ, ಸಿಇಎ ಅಧ್ಯಕ್ಷ ಶ್ರೀ ಘನಶ್ಯಾಮ್ ಪ್ರಸಾದ್ ಮತ್ತು ಎನ್‌ ಆರ್‌ ಇ ಜಂಟಿ ಕಾರ್ಯದರ್ಶಿ ಶ್ರೀ ಅಜಯ್ ಯಾದವ್ ಉಪಸ್ಥಿತರಿದ್ದರು..

2030 ರ ವೇಳೆಗೆ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣ ಪ್ರಸರಣ ವ್ಯವಸ್ಥೆ ಯೋಜನೆಗೆ ಕೇಂದ್ರ ಇಂಧನ ಮತ್ತು ಹೊಸ ನವೀಕರಿಸಬಹುದಾದ ಇಂಧನ ಸಚಿವರ ಶ್ರೀ ಆರ್‌ ಕೆ ಸಿಂಗ್ ಅವರು ಇಂದು ಇಲ್ಲಿ ಚಾಲನೆ ನೀಡಿದರು. 

2030 ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ  ಇಂಧನ ಆಧಾರಿತ ಸ್ಥಾಪಿತ ಸಾಮರ್ಥ್ಯವನ್ನು ಹೊಂದಲು ಅಗತ್ಯವಿರುವ ಪ್ರಸರಣ ವ್ಯವಸ್ಥೆಯನ್ನು ಯೋಜಿಸಲು ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಭಾರತೀಯ ಸೌರಶಕ್ತಿ ನಿಗಮ, ಸೆಂಟ್ರಲ್ ಟ್ರಾನ್ಸ್‌ಮಿಷನ್ ಯುಟಿಲಿಟಿ ಆಫ್ ಇಂಡಿಯಾ ಲಿಮಿಟೆಡ್, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್, ರಾಷ್ಟ್ರೀಯ ಸೌರಶಕ್ತಿ ಸಂಸ್ಥೆ ಮತ್ತು ರಾಷ್ಟ್ರೀಯ ಪವನಶಕ್ತಿ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ವಿದ್ಯುತ್ ಸಚಿವಾಲಯವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು. 

ಸಮಿತಿಯು ರಾಜ್ಯಗಳು ಮತ್ತು ಇತರ ಪಾಲುದಾರರೊಂದಿಗೆ ಸಮಾಲೋಚಿಸಿ "2030 ರ ವೇಳೆಗೆ 500 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಏಕೀಕರಣಕ್ಕಾಗಿ ಪ್ರಸರಣ ವ್ಯವಸ್ಥೆ" ಎಂಬ ಶೀರ್ಷಿಕೆಯ ವಿವರವಾದ ಯೋಜನೆಯನ್ನು ಸಿದ್ಧಪಡಿಸಿದೆ. 2030 ರ ವೇಳೆಗೆ 537 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಲು ಅಗತ್ಯವಿರುವ ಪ್ರಸರಣ ವ್ಯವಸ್ಥೆಯ ವಿಶಾಲ ಯೋಜನೆಯನ್ನು ಒದಗಿಸುವ ಮೂಲಕ 2030 ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ಸಾಮರ್ಥ್ಯವನ್ನು ಸಂಯೋಜಿಸುವ ಗುರಿ ಸಾಧನೆಯತ್ತ ಈ ಯೋಜನೆಯು ಪ್ರಮುಖ ಹೆಜ್ಜೆಯಾಗಿದೆ.

500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನವನ್ನು ಹೊಂದಲು ಅಗತ್ಯವಿರುವ ಯೋಜಿತ ಹೆಚ್ಚುವರಿ ಪ್ರಸರಣ ವ್ಯವಸ್ಥೆಗಳಲ್ಲಿ 8120 ckm ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್ ಟ್ರಾನ್ಸ್‌ಮಿಷನ್ ಕಾರಿಡಾರ್‌ಗಳು (+800 ಕೆವಿ ಮತ್ತು +350 ಕೆವಿ), 25,960 ckm 765 ಕೆವಿ ಎಸಿ ಲೈನ್‌ಗಳು, 15,750 ckm 400 ಕೆವಿ ಲೈನ್‌ಗಳು ಮತ್ತು 1052 ckm 200 ಕೆವಿ ಲೈನ್‌ಗಳು 2.44 ಲಕ್ಷ ಕೋಟಿ ರೂ. ಅಂದಾಜು ವೆಚ್ಚದ ಈ ಯೋಜನೆಯಲ್ಲಿ ಸೇರಿವೆ.  

ಪ್ರಸರಣ ಯೋಜನೆಯು ಗುಜರಾತ್ ಮತ್ತು ತಮಿಳುನಾಡಿನಲ್ಲಿರುವ 10 ಗಿಗಾವ್ಯಾಟ್‌ ಆಫ್-ಶೋರ್ ಪವನಶಕ್ತಿಯನ್ನು 0.28 ಲಕ್ಷ ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಾಗಾಟಕ್ಕೆ ಅಗತ್ಯವಿರುವ ಪ್ರಸರಣ ವ್ಯವಸ್ಥೆಯನ್ನು ಒಳಗೊಂಡಿದೆ. ಯೋಜಿತ ಪ್ರಸರಣ ವ್ಯವಸ್ಥೆಯೊಂದಿಗೆ, ಅಂತರ-ಪ್ರಾದೇಶಿಕ ಸಾಮರ್ಥ್ಯವು ಪ್ರಸ್ತುತ 1.12 ಲಕ್ಷ ಮೆಗಾವ್ಯಾಟ್‌ನಿಂದ 2030 ರ ವೇಳೆಗೆ ಸುಮಾರು 1.50 ಲಕ್ಷ ಮೆಗಾವ್ಯಾಟ್‌ಗೆ ಹೆಚ್ಚಾಗುತ್ತದೆ.

ದಿನದಲ್ಲಿ ಸೀಮಿತ ಅವಧಿಗೆ ನವೀಕರಿಸಬಹುದಾದ ಇಂಧನ ಆಧಾರಿತ ಉತ್ಪಾದನೆಯ ಲಭ್ಯತೆಯನ್ನು ಪರಿಗಣಿಸಿ, 2030 ರ ವೇಳೆಗೆ 51.5 ಗಿಗಾವ್ಯಾಟ್‌ ಪೂರೈಕೆಯ ಬ್ಯಾಟರಿ ಶಕ್ತಿಯ ಶೇಖರಣಾ ಸಾಮರ್ಥ್ಯದ ಯೋಜನೆಯು ಗ್ರಾಹಕರಿಗೆ ದಿನದ 24 ಗಂಟೆಯೂ ವಿದ್ಯುತ್‌ ಒದಗಿಸಲು ಯೋಜಿಸಿದೆ.

ಯೋಜನೆಯು ದೇಶದಲ್ಲಿ ಮುಂಬರುವ ಪ್ರಮುಖ ಪಳೆಯುಳಿಕೆಯೇತರ ಇಂಧನ ಆಧಾರಿತ ಉತ್ಪಾದನಾ ಕೇಂದ್ರಗಳನ್ನು ಗುರುತಿಸಿದೆ, ಇದರಲ್ಲಿ ಫತೇಘರ್, ಭದ್ಲಾ, ರಾಜಸ್ಥಾನದ ಬಿಕಾನೇರ್, ಗುಜರಾತ್‌ನ ಖಾವ್ಡಾ, ಆಂಧ್ರಪ್ರದೇಶದ ಅನಂತಪುರ, ಕರ್ನೂಲ್ ಆರ್‌ಇ ವಲಯಗಳು, ತಮಿಳುನಾಡು ಮತ್ತು ಗುಜರಾತ್‌ನಲ್ಲಿ ಆಫ್‌ ಶೋರ್‌ ಗಾಳಿಯ ಸಾಮರ್ಥ್ಯಗಳು,. ಲಡಾಖ್ ನಲ್ಲಿ ಆರ್‌ಇ ಪಾರ್ಕ್ ಮುಂತಾದ  ಸಂಭಾವ್ಯ ಉತ್ಪಾದನಾ ಕೇಂದ್ರಗಳನ್ನು ಆಧರಿಸಿ, ಪ್ರಸರಣ ವ್ಯವಸ್ಥೆಗಳನ್ನು ಯೋಜಿಸಲಾಗಿದೆ.

ಯೋಜಿತ ಪ್ರಸರಣ ವ್ಯವಸ್ಥೆಯು ನವೀಕರಿಸಬಹುದಾದ ಇಂಧನ ಸೌಕರ್ಯ ಅಭಿವೃದ್ಧಿದಾರರಿಗೆ ಸಂಭಾವ್ಯ ಉತ್ಪಾದನಾ ತಾಣಗಳು ಮತ್ತು ಹೂಡಿಕೆಯ ಅವಕಾಶದ ಪ್ರಮಾಣದ ಬಗ್ಗೆ ಸ್ಪಷ್ಟತೆಯನ್ನು ಒದಗಿಸುತ್ತದೆ. ಇದಲ್ಲದೆ, ಇದು ಪ್ರಸರಣ ಸೇವಾ ಪೂರೈಕೆದಾರರಿಗೆ ಸುಮಾರು 2.44 ಲಕ್ಷ ಕೋಟಿ ರೂ. ಹೂಡಿಕೆಯ ಅವಕಾಶದೊಂದಿಗೆ ಪ್ರಸರಣ ವಲಯದಲ್ಲಿ ಲಭ್ಯವಿರುವ ಬೆಳವಣಿಗೆಯ ಅವಕಾಶದ ಬಗ್ಗೆ ದೃಷ್ಟಿಕೋನವನ್ನು ಒದಗಿಸುತ್ತದೆ.

2030 ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಹೊಂದಲು ಮೇಲಿನ ಪ್ರಸರಣ ಯೋಜನೆಯೊಂದಿಗೆ, ಪಾರದರ್ಶಕ ಬಿಡ್ಡಿಂಗ್ ವ್ಯವಸ್ಥೆ, ಮುಕ್ತ ಮಾರುಕಟ್ಟೆ, ತ್ವರಿತ ವಿವಾದ ಪರಿಹಾರ ವ್ಯವಸ್ಥೆಯೊಂದಿಗೆ, ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆ ಮಾಡಲು ಭಾರತವು ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಮುಂದುವರಿಯುತ್ತದೆ.

ವಿಶ್ವದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯಗಳ ವೇಗದ ಬೆಳವಣಿಗೆಯೊಂದಿಗೆ ಭಾರತವು ಇಂಧನ ಪರಿವರ್ತನೆಯಲ್ಲಿ ವಿಶ್ವ ನಾಯಕರಲ್ಲಿ ಒಂದಾಗಿ ಹೊರಹೊಮ್ಮಿದೆ. ಭಾರತವು ಇಂಧನ ಪರಿವರ್ತನೆಯಲ್ಲಿ ಭಾರಿ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ ಮತ್ತು 2030 ರ ವೇಳೆಗೆ 500 ಗಿಗಾವ್ಯಾಟ್‌ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸ್ಥಾಪಿತ ಸಾಮರ್ಥ್ಯವನ್ನು ಹೊಂದಲು ಯೋಜಿಸಿದೆ, ಆದ್ದರಿಂದ 2030 ರ ವೇಳೆಗೆ ಶುದ್ಧ ಇಂಧನವು ಸ್ಥಾಪಿತ ಸಾಮರ್ಥ್ಯದ ಶೇ.50 ರಷ್ಟನ್ನು ಒಳಗೊಂಡಿರುತ್ತದೆ.

ಪ್ರಸ್ತುತ ದೇಶದಲ್ಲಿ ಸ್ಥಾಪಿಸಲಾದ ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 409 ಗಿಗಾವ್ಯಾಟ್‌ ಆಗಿದ್ದು, ಇದರಲ್ಲಿ ಪಳೆಯುಳಿಕೆಯೇತರ ಇಂಧನ ಮೂಲಗಳ 173 ಗಿಗಾವ್ಯಾಟ್‌ ಸೇರಿದೆ. ಇದು ಒಟ್ಟು ಸ್ಥಾಪಿತ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಸುಮಾರು ಶೇ.42 ರಷ್ಟಾಗಿದೆ. 2030 ರ ವೇಳೆಗೆ ಯೋಜಿತ ನವೀಕರಿಸಬಹುದಾದ ಸಾಮರ್ಥ್ಯದಿಂದ ವಿದ್ಯುತ್ ಸಾಗಿಸಲು, ಪವನ ಮತ್ತು ಸೌರ ಆಧಾರಿತ ಉತ್ಪಾದನಾ ಯೋಜನೆಗಳ ಆರಂಭಿಕ ಅವಧಿಯು ಸಂಬಂಧಿತ ಪ್ರಸರಣ ವ್ಯವಸ್ಥೆಗಿಂತ ಕಡಿಮೆ ಇರುವುದರಿಂದ ದೃಢವಾದ ಪ್ರಸರಣ ವ್ಯವಸ್ಥೆಯು ಮುಂಚಿತವಾಗಿಯೇ ಇರಬೇಕು. ಈ ಉದ್ದೇಶವನ್ನು ಪೂರೈಸಲು ಸಮಗ್ರ ಯೋಜನೆಯನ್ನು ಅಂತಿಮಗೊಳಿಸಲಾಗಿದೆ.

***



(Release ID: 1881614) Visitor Counter : 225


Read this release in: Marathi , English , Hindi , Punjabi