ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ನಾಳೆ ಕೇರಳಕ್ಕೆ ಭೇಟಿ
ಯುವಭಾರತಕ್ಕೆ ನವಭಾರತ ಅಭಿಯಾನದಡಿ ತ್ರಿಶೂರ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ - ಅವಕಾಶಗಳ ಟೆಕೇಡ್
ನವಭಾರತದ ಟೆಕೇಡ್ ನಲ್ಲಿ ಯುವಜನತೆಗೆ ಲಭ್ಯವಿರುವ ವ್ಯಾಪಕ ಶ್ರೇಣಿಯ ಕೌಶಲ್ಯ ಅವಕಾಶಗಳ ಮೇಲೆ ಟೆಕೇಡ್ ನಲ್ಲಿ ಚರ್ಚೆ; ತ್ರಿಶೂರ್ ನ ತಮ್ಮ ಹಳೆಯ ಶಾಲೆಗೆ ಸಚಿವರ ಭೇಟಿ
Posted On:
02 DEC 2022 5:07PM by PIB Bengaluru
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ನಾಳೆ ಕೇರಳ ರಾಜ್ಯದ ತ್ರಿಶೂರ್‌ಗೆ ಒಂದು ದಿನದ ಭೇಟಿಗಾಗಿ ತೆರಳಲಿದ್ದಾರೆ.
ನಾಳೆ ಬೆಳಗ್ಗೆ ಕೊಚ್ಚಿ ತಲುಪಲಿರುವ ಸಚಿವರು, ಅಲ್ಲಿಂದ ತ್ರಿಶೂರ್‌ಗೆ ತೆರಳಿ ಅಲ್ಲಿ ಸೇಂಟ್ ಪಾಲ್ಸ್ ಶಾಲೆ ಮತ್ತು ಅದರ ಹಿರಿಯ ಮಾಧ್ಯಮಿಕ ವಿಭಾಗಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಚಿವರು ಐದು ವರ್ಷದವರಿದ್ದಾಗ ಈ ಶಾಲೆಯಲ್ಲಿ ಓದಿದ್ದರು. ಶಾಲಾ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ತಮ್ಮ ಹಳೆಯ ವಿಶೇಷ ವಿದ್ಯಾರ್ಥಿಯ ಭೇಟಿಗಾಗಿ ಇದಿರು ನೋಡುತ್ತಿದ್ದಾರೆ, ಬಾಲಕನಿದ್ದಾಗ ತ್ರಿಶೂರ್ ನಲ್ಲಿ ಕಳೆದ ರಾಜೀವ್ ಚಂದ್ರಶೇಖರ್ ಅವರು ನಂತರ ಬೆಳೆದು ದೊಡ್ಡವರಾದ ಮೇಲೆ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ - Intel ನಲ್ಲಿ ಚಿಪ್ ಡಿಸೈನರ್ ಆಗಿ ಬೆಳೆದರು. ರಾಜೀವ್ ಚಂದ್ರಶೇಖರ್ ಅವರನ್ನು ಗುರುತಿಸಿದ್ದು ಶ್ರೀ ವಿನೋದ್ ಧಾಮ್ ಅವರು. (ಪೆಂಟಿಯಮ್ ಪ್ರೊಸೆಸರ್ ಪಿತಾಮಹ ಎಂದು ಖ್ಯಾತರು). ಶ್ರೀ ರಾಜೀವ್ ಚಂದ್ರಶೇಖರ್ ಅವರು ಕೆಲವು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿ ಅದರ ಆರಂಭಿಕ ಮತ್ತು ದೊಡ್ಡ ಸೆಲ್ಯುಲರ್ ನೆಟ್‌ವರ್ಕ್ ನ್ನು ನಿರ್ಮಿಸಿದರು. ಬಳಿಕ ತಮ್ಮನ್ನು ಸಾರ್ವಜನಿಕ ಸೇವೆ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.
ತಾವು ಓದಿದ ಹಳೆಯ ಶಾಲಾ ಭೇಟಿಯ ನಂತರ ಸಚಿವರು ಪಂಜಾಲ್ ರಸ್ತೆಗೆ ತೆರಳಲಿದ್ದು, ಅಲ್ಲಿ ಜ್ಯೋತಿ ಹಿಲ್ಸ್‌ನ ಜ್ಯೋತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಅವರು ನವ ಭಾರತದ ಕನಸು-ಆಶಯ ಮತ್ತು ಉದ್ಯೋಗ ಮತ್ತು ಉದ್ಯಮಶೀಲತೆಯಲ್ಲಿ ಟೆಕೇಡ್ ಅವಕಾಶಗಳ ಕುರಿತು ವಿದ್ಯಾರ್ಥಿಗಳ ಮುಂದೆ ಬೆಳಕು ಚೆಲ್ಲಲಿದ್ದಾರೆ. ಭಾರತವು ವಿಶ್ವದ ಉನ್ನತ ಆರ್ಥಿಕ ದೇಶಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಬಗ್ಗೆ ಮತ್ತು ಅದರ ತಾಂತ್ರಿಕ ಸಾಮರ್ಥ್ಯಗಳ ಕುರಿತು ಪ್ರಸ್ತುತಪಡಿಸಲಿದ್ದಾರೆ.
'ಯುವ ಭಾರತಕ್ಕಾಗಿ ನವ ಭಾರತ: ಅವಕಾಶಗಳ ಟೆಕೇಡ್' ಉಪಕ್ರಮದಡಿಯಲ್ಲಿ ಸಚಿವರು ಯುವ ಭಾರತೀಯರೊಂದಿಗೆ ನಿರಂತರವಾಗಿ ತೊಡಗಿಸಿಕೊಂಡು ಬಂದಿದ್ದಾರೆ. ಅವರ ಜೊತೆ ವಿದ್ಯಾರ್ಥಿಗಳು, ಸ್ಟಾರ್ಟ್‌ಅಪ್ ಸಂಸ್ಥೆಗಳು ಮತ್ತು ಉದ್ಯಮಿಗಳು ಚೆನ್ನಾಗಿ ಸಂವಾದ-ಚರ್ಚೆ ನಡೆಸಿಕೊಂಡು ಬರುತ್ತಿದ್ದಾರೆ. ಉದಾಹರಣೆಗೆ ಗುಜರಾತ್ ನಲ್ಲಿ, ಕೈಗಾರಿಕೆ ಮತ್ತು ಉದ್ಯಮಿಗಳು ಮತ್ತು ಅಧಿಕ ಸಂಪತ್ತು ಹೊಂದಿರುವ ವ್ಯಕ್ತಿಗಳು(HNI) ತಮ್ಮ ರಾಜ್ಯದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸಲು 1,500 ಕೋಟಿ ರೂಪಾಯಿಗಳ ಸಾಹಸ ನಿಧಿಗಳನ್ನು ಸ್ಥಾಪಿಸಿದ್ದಾರೆ.
ನಂತರ ಸಚಿವರು ತ್ರಿಶೂರ್‌ನಿಂದ ಸುಮಾರು 25 ಕಿಲೋ ಮೀಟರ್ ದೂರದಲ್ಲಿರುವ ಮುಳ್ಳೂರ್ಕರಕ್ಕೆ ಭೇಟಿ ನೀಡಲಿದ್ದು, ಸ್ಥಳೀಯ ಮುಖಂಡರೊಂದಿಗೆ ಸಂವಾದ ನಡೆಸಲಿದ್ದಾರೆ. ಅವರು ಮುಳ್ಳೂರ್ಕರದಲ್ಲಿರುವ ತಿರುವಣಿಕಾವು (ದುರ್ಗಾದೇವಿ) ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
*****
(Release ID: 1880600)
Visitor Counter : 145