ಚುನಾವಣಾ ಆಯೋಗ
azadi ka amrit mahotsav

ಅಂತಾರಾಷ್ಟ್ರೀಯ ಅಂಗವಿಕಲರ ದಿನದ ಅಂಗವಾಗಿ 'ಟಿ20 ಚಾಂಪಿಯನ್ಸ್ ಟ್ರೋಫಿ ವಿಜೇತ' ಭಾರತೀಯ ಕಿವುಡರ ಕ್ರಿಕೆಟ್ ತಂಡವನ್ನು ಸನ್ಮಾನಿಸಿದ ಇಸಿಐ


 
ಪ್ರಚಲಿತ ಕ್ರಿಕೆಟ್ ತಂಡಗಳೊಂದಿಗೆ ಐಡಿಸಿಎ ತಂಡದ ಪಂದ್ಯವನ್ನು ಪ್ರಾಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿರುವ ಇಸಿಐ
 
ಇಸಿಐ ಅಧಿಕಾರಿಗಳಿಗೆ ಆಯೋಜಿಸಲಾದ ಸಂವೇದನಾಶೀಲ ಕಾರ್ಯಾಗಾರ
 
ಚುನಾವಣಾ ಪ್ರಕ್ರಿಯೆಯಲ್ಲಿ ವಿಕಲಚೇತನರ ಪಾಲ್ಗೊಳ್ಳುವಿಕೆಯನ್ನು ಸಕ್ರಿಯಗೊಳಿಸಲು ಸಕ್ಷಮ್ ಆ್ಯಪ್

Posted On: 02 DEC 2022 6:52PM by PIB Bengaluru

ಅಂತಾರಾಷ್ಟ್ರೀಯ ವಿಕಲಚೇತನರ ದಿನಾಚರಣೆಯ ಮುನ್ನಾದಿನವಾದ ಇಂದು, ಭಾರತದ ಚುನಾವಣಾ ಆಯೋಗವು ನಿರ್ವಾಚನ್ ಸದನದಲ್ಲಿ ಭಾರತೀಯ ಕಿವುಡರ ಕ್ರಿಕೆಟ್ ತಂಡವನ್ನು ಸನ್ಮಾನಿಸಿತು. ತಂಡವನ್ನು ಸ್ವಾಗತಿಸಿದ ಮುಖ್ಯ ಚುನಾವಣಾ ಆಯುಕ್ತ ಶ್ರೀ ರಾಜೀವ್ ಕುಮಾರ್ ಅವರು, ಚುನಾವಣಾ ಆಯೋಗವು ಆಟಗಾರರು ಪ್ರದರ್ಶಿಸಿದ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಗೌರವಿಸುತ್ತದೆ ಎಂದು ಹೇಳಿದರು. ಕಿವುಡ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಯುಎಇಯಲ್ಲಿ ಆಯೋಜಿಸಿದ್ದ ಟಿ20 ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲುವ ಮೂಲಕ ತಂಡವು ದೇಶಕ್ಕೆ ಕೀರ್ತಿ ತಂದಿದೆ. ವಿಜೇತರಿಗೆ ಸೂಕ್ತ ಪ್ರಚಾರ ಮತ್ತು ಗೋಚರತೆಯನ್ನು ನೀಡುವುದು ಮುಖ್ಯ. ಮುಖ್ಯವಾಹಿನಿಯ ಕ್ರಿಕೆಟ್ ತಂಡಗಳೊಂದಿಗೆ ಭಾರತೀಯ ಕಿವುಡರ ಕ್ರಿಕೆಟ್ ಅಸೋಸಿಯೇಷನ್ ತಂಡದ ಪಂದ್ಯವನ್ನು ಪ್ರಾಯೋಜಿಸುವ ಸಾಧ್ಯತೆಯನ್ನು ಭಾರತ ಚುನಾವಣಾ ಆಯೋಗವು ಅನ್ವೇಷಿಸಲಿದೆ ಎಂದು ಶ್ರೀ ಕುಮಾರ್ ಹೇಳಿದರು.

ಅಂತಾರಾಷ್ಟ್ರೀಯ ವಿಕಲಚೇತನರ ದಿನದ ಅಂಗವಾಗಿ ಆಯೋಗವು, ಇಸಿಐ ರಾಷ್ಟ್ರೀಯ ಐಕಾನ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಡಾ. ನಿರು ಕುಮಾರ್ ಅವರ ನೇತೃತ್ವದಲ್ಲಿ 'ವೈವಿಧ್ಯತೆ ಮತ್ತು ಐಕ್ಯತೆಯ' ಕುರಿತು ಆಯೋಗದ ಅಧಿಕಾರಿಗಳಿಗೆ ಸಂವೇದನಾಶೀಲ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕುಮಾರ್ ಅವರು, ಇಸಿಐ ಮುಖ್ಯವಾಹಿನಿಗೆ ಬದ್ಧವಾಗಿದೆ. ಅದು ನೋಂದಣಿಯಿಂದ ಮತದಾನದವರೆಗೆ ಇಡೀ ಚುನಾವಣಾ ಪ್ರಕ್ರಿಯೆಯ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸುವ ಹೊಸ ಮಾನದಂಡವನ್ನು ಖಚಿತಪಡಿಸಿಕೊಳ್ಳಲು ಪ್ರವೇಶಾರ್ಹತೆಯ ಪರಿಕಲ್ಪನೆಯನ್ನು ಆಳವಾಗಿ ಅಂತರ್ಗತಗೊಳಿಸಿದೆ ಎಂದು ಹೇಳಿದರು.

ಆಡಳಿತಾತ್ಮಕ ಮತ್ತು ತಾಂತ್ರಿಕ ಆವಿಷ್ಕಾರಗಳೊಂದಿಗೆ, ವಿಕಲಚೇತನರಿಗೆ ನೋಂದಣಿಯಿಂದ ಮತದಾನದ ದಿನದವರೆಗಿನ ಸೌಲಭ್ಯಗಳನ್ನು ಅನುವು ಮಾಡಿಕೊಟ್ಟು, ಅದನ್ನು ಸುಗಮಗೊಳಿಸಲು ಇಸಿಐ 'ಸಕ್ಷಮ್ ಆ್ಯಪ್' ಎಂಬ ಏಕಮಾತ್ರ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ ಎಂದು ಶ್ರೀ ಕುಮಾರ್ ವಿವರಿಸಿದರು. ವಿಕಲಚೇತನರು ಚುನಾವಣಾ ಆಯೋಗವು ಒದಗಿಸಿದ ವಿವಿಧ ಸೇವೆಗಳನ್ನು ಇದರ ಮೂಲಕ ಪಡೆಯಬಹುದಾಗಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಅವರ ಪಾಲ್ಗೊಳ್ಳುವಿಕೆಗೆ ಇದು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಅವರನ್ನು ಸಕ್ಷಮರಾಗುತ್ತಾರೆ. ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್ ನಿಂದ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದಾಗಿದೆ.

ಮತದಾನ ಕೇಂದ್ರಗಳಲ್ಲಿ ಲಭ್ಯವಿರುವ ಸೌಲಭ್ಯವನ್ನು ಖಚಿತಪಡಿಸಿಕೊಳ್ಳಲು, ಇಸಿಐ ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆ. ಇದರಿಂದ ವಿಕಲಚೇತನರು ಯಾವುದೇ ತೊಂದರೆಯಿಲ್ಲದೆ ತಮ್ಮ ಮತವನ್ನು ಚಲಾಯಿಸಲು ಅನುಕೂಲಕರವಾಗಿದೆ. ನೆಲಮಹಡಿಯ ಮತಗಟ್ಟೆಗಳು, ಪ್ರಮಾಣೀಕರಿಸಿದ ರಾಂಪ್ ಗಳು, ಗಾಲಿಕುರ್ಚಿಗಳು, ಸ್ವಯಂಸೇವಕರು, ಬ್ರೈಲ್ ಮತ್ತು ಬ್ಯಾಲೆಟ್ ಪೇಪರ್ ಹೊಂದಿರುವ ಇವಿಎಂ, ಬ್ರೈಲ್ ಎಪಿಕ್, ಸುಲಭವಾಗಿ ಪ್ರವೇಶಿಸಬಹುದಾದ ಶೌಚಾಲಯಗಳು, ಸ್ಪರ್ಶ ಸೂಚನಾ ಫಲಕಗಳು, ಸನ್ನೆ ಭಾಷೆ ಭಾಷಾಂತರಕಾರರು ಮತ್ತು ಕೊಂಡೊಯ್ದು ತಂದು ಬಿಡುವ ಸೌಲಭ್ಯದಂತಹ ಸೌಲಭ್ಯಗಳು ಅಧಿಸೂಚಿತ ಚೆಕ್ ಲಿಸ್ಟ್ ಮತಗಟ್ಟೆಗಳಲ್ಲಿ ಲಭ್ಯವಿರುತ್ತದೆ. ಶೇ.40ರಷ್ಟು ಅಂಗವೈಕಲ್ಯ ಹೊಂದಿರುವ ವಿಕಲಚೇತನರಿಗೆ ತಮ್ಮ ಮನೆಗಳಲ್ಲಿಯೇ ಮತದಾನ ಮಾಡಲು ಆಯೋಗವು ಅಂಚೆ ಮತಪತ್ರ ಸೌಲಭ್ಯದ ಆಯ್ಕೆಯನ್ನು ಒದಗಿಸಿದೆ.

ಆಯೋಗವು ಈ ಕೆಳಗಿನ ಮಹತ್ವಪೂರ್ಣ ಉಪಕ್ರಮಗಳನ್ನು ಕೈಗೊಂಡಿದೆ:

1. ಪ್ರವೇಶಿತ ಚುನಾವಣೆಗಳ ಬಗ್ಗೆ ರಾಷ್ಟ್ರೀಯ ಸಲಹಾ ಸಮಿತಿಯನ್ನು ಸ್ಥಾಪಿಸುವುದು.
2. ಚುನಾವಣಾ ಸಿಬ್ಬಂದಿಯ ಸಂವೇದನಾಶೀಲತೆಯ ಒಂದು ಮಾದರಿ ರಚನೆ.
3. ಚುನಾವಣೆಗಳ ಸಮಯದಲ್ಲಿ ಪ್ರವೇಶಿತ ವೀಕ್ಷಕರನ್ನು ನಿಯೋಜಿಸುವುದು.
4. ವಿಕಲಚೇತನ ಸಾಧಕರನ್ನು ಚುನಾವಣಾ ರಾಯಭಾರಿ/ಐಕಾನ್ ಗಳಾಗಿ ನೇಮಿಸುವುದು
5. ಅಂಗವೈಕಲ್ಯ ಹೊಂದಿರುವ ಸಾಧಕರು ಸೇರಿದಂತೆ ಸಮಗ್ರ ಚುನಾವಣೆಗಳ ಬಗ್ಗೆ ಜಾಗೃತಿ ಚಿತ್ರಗಳನ್ನು ನಿರ್ಮಿಸುವುದು.
 
ಆಯೋಗವು 'ವೈವಿಧ್ಯತೆ ಮತ್ತು ಐಕ್ಯತೆಯ' ಚುನಾವಣಾ ಗುರಿಗೆ ಸಮರ್ಪಿತವಾದ್ದು, ನಿಜವಾದ ಪ್ರಾತಿನಿಧಿಕ ಮತ್ತು ಸದೃಢ ಪ್ರಜಾಪ್ರಭುತ್ವಕ್ಕಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ವಿಕಲಚೇತನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಇದುವರೆಗೆ, ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ 83 ಲಕ್ಷಕ್ಕೂ ಹೆಚ್ಚು ಮತದಾರರನ್ನು ವಿಕಲಚೇತನರೆಂದು ಗುರುತಿಸಲಾಗಿದೆ.

*****


(Release ID: 1880599) Visitor Counter : 240