ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಮಿಜೋರಾಂ ಮತ್ತು ಈಶಾನ್ಯ ರಾಜ್ಯಗಳ (NER) ಸಾವಯವ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು ಐಜ್ವಾಲ್‌ನಲ್ಲಿ ಕಾರ್ಯಾಗಾರ ಮತ್ತು ಗ್ರಾಹಕರು-ಮಾರಾಟಗಾರರ ಸಭೆ (BSM) ಆಯೋಜಿಸಲಾಗಿದೆ


ಮಿಜೋರಾಂನಿಂದ ಸ್ಥಳೀಯ ಸಿಟ್ರಸ್ ನ್ನು ಸರಕನ್ನು ಲಂಡನ್‌ಗೆ ರಫ್ತು ಮಾಡಲಾಗಿದೆ; ಮತ್ತೊಂದು ಸರಕನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಬೇಕಾಗಿದೆ

ಕಳೆದ ಆರು ವರ್ಷಗಳಲ್ಲಿ ಈಶಾನ್ಯ ಭಾಗಗಳಿಂದ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಶೇಕಡಾ 85.34ರಷ್ಟು ಬೆಳವಣಿಗೆಯನ್ನು ಕಂಡಿದೆ; 2016-17 ರಲ್ಲಿ  2.52 ಮಿಲಿಯನ್‌ ಡಾಲರ್ ನಿಂದ 2021-22 ರಲ್ಲಿ 17.2 ಮಿಲಿಯನ್‌ ಡಾಲರ್ ಗೆ ರಫ್ತು ಏರಿಕೆಯಾಗಿದೆ.

Posted On: 02 DEC 2022 3:52PM by PIB Bengaluru

ಮಿಜೋರಾಂ ಮತ್ತು ಈಶಾನ್ಯ ರಾಜ್ಯಗಳ(NER) ಸಾವಯವ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವ ತನ್ನ ಕಾರ್ಯತಂತ್ರದ ಭಾಗವಾಗಿ ಕೇಂದ್ರ ಸರ್ಕಾರ, ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಮೂಲಕ, ಐಜ್ವಾಲ್‌ನ ಮಿಜೋರಾಂ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರ ಹಾಗೂ ಗ್ರಾಹಕರು-ಮಾರಾಟಗಾರರ ಸಭೆ (BSM)ಯನ್ನು ಆಯೋಜಿಸಿದೆ. 

ಈ ಕಾರ್ಯಾಗಾರ ಮತ್ತು ಸಭೆಯ ನಂತರ, ಮಿಜೋರಾಂನ ಮಮಿತ್ ಜಿಲ್ಲೆಯ ರೈತರಿಂದ ಪಡೆದ ಹಟ್ಕೋರಾ ಎಂಬ ಸ್ಥಳೀಯ ಸಿಟ್ರಸ್ ಹಣ್ಣನ್ನು ಲಂಡನ್‌ಗೆ ರಫ್ತು ಮಾಡಲಾಯಿತು. ಹಟ್ಕೋರಾದ ಮತ್ತೊಂದು ಸಂಗ್ರಹವನ್ನು ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗುತ್ತಿದೆ.
ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಬರುವ ಅತ್ಯುನ್ನತ ಕೃಷಿ ಉತ್ಪನ್ನಗಳ ರಫ್ತು ಉತ್ತೇಜನಾ ಸಂಸ್ಥೆಯಾಗಿರುವ ಎಪಿಇಡಿಎ(APEDA), ಮಿಜೋರಾಂ ಸರ್ಕಾರದ ಕೃಷಿ, ವಾಣಿಜ್ಯ ಮತ್ತು ಕೈಗಾರಿಕೆಗಳ ಸಚಿವಾಲಯ ಮತ್ತು ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮ ನಿಯಮಿತ ಸಹಯೋಗದೊಂದಿಗೆ ಖರೀದಿದಾರರ ಮಾರಾಟಗಾರರ ಸಭೆಯನ್ನು(NERAMAC) ಆಯೋಜಿಸಿದೆ. 

ಮಿಜೋರಾಂನಿಂದ ಕೃಷಿ-ತೋಟಗಾರಿಕೆ ಉತ್ಪನ್ನಗಳ ರಫ್ತುಗಳನ್ನು ಉತ್ತೇಜಿಸಲು ಮತ್ತು ಈಶಾನ್ಯ ರಾಜ್ಯದಿಂದ ರೈತರು, ರೈತ ಉತ್ಪಾದಕ ಸಂಸ್ಥೆಗಳು (FPOs), ರೈತ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆ ಸಂಪರ್ಕವನ್ನು ಒದಗಿಸಲು ಕಾರ್ಯಾಗಾರ ಮತ್ತು ಗ್ರಾಹಕ-ಮಾರಾಟ ಸಭೆಯನ್ನು (BSM)ಆಯೋಜಿಸಲಾಗಿದೆ.

ಅನಾನಸ್, ಸಿಟ್ರಸ್, ಡ್ರ್ಯಾಗನ್ ಹಣ್ಣು, ಕಿತ್ತಳೆ, ಪ್ಯಾಶನ್ ಹಣ್ಣು, ಸ್ಕ್ವ್ಯಾಷ್, ಆಂಥೂರಿಯಂ ಹೂವು, ಮಿಜೋ ಶುಂಠಿ, ಮಿಜೋ ಚಿಲ್ಲಿ ಮತ್ತು ದ್ರಾಕ್ಷಿ ವೈನ್ ಮೊದಲಾದ ಬೆಳೆಗಳನ್ನು ಮಿಜೋರಾಂನಿಂದ ಸಾಮಾನ್ಯವಾಗಿ ರಫ್ತು ಮಾಡಲಾಗುತ್ತದೆ.

ಬಿಎಸ್‌ಎಂನಲ್ಲಿ, ಹದಿನೇಳು ರಫ್ತುದಾರರು ಮತ್ತು 58 ಎಫ್‌ಪಿಒಗಳು, ರಾಜ್ಯ ಸರ್ಕಾರ, ಕಾಫಿ ಮಂಡಳಿ, ಮಸಾಲೆ ಪದಾರ್ಥಗಳ ಮಂಡಳಿ, ನಬಾರ್ಡ್ ಮತ್ತು ನೆರಮಾಕ್ ಪ್ರತಿನಿಧಿಸುವ 14 ಪ್ರದರ್ಶಕರು ಸಭೆಯಲ್ಲಿ ಭಾಗವಹಿಸಿದ್ದರು.

ವಿಶೇಷವಾದ ಈ ಸಭೆ, ಮಿಜೋರಾಂನ ಉತ್ಪಾದಕರು ಮತ್ತು ಸಂಸ್ಕಾರಕರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು, ರಫ್ತು ಮತ್ತು ಅವರ ಸಗಟು ಮತ್ತು ಚಿಲ್ಲರೆ ಮಾರಾಟವನ್ನು ಉತ್ತೇಜಿಸಲು ಅವಕಾಶವನ್ನು ಒದಗಿಸಿದೆ. ಮಿಜೋರಾಂನ ಗೌರವಾನ್ವಿತ ಕೃಷಿ ಸಚಿವ ಪಿಯು ಸಿ ಲಾಲ್ರಿನ್‌ಸಂಗ ಅವರು ಬಿಎಸ್ ಸಭೆಯನ್ನು ಉದ್ಘಾಟಿಸಿದರು.

ಕೃಷಿ ಉತ್ಪನ್ನಗಳ ರಫ್ತು ಉತ್ತೇಜನಾ ಸಂಸ್ಥೆಯಾಗಿರುವ ಎಪಿಇಡಿಎ ಮಧ್ಯಪ್ರವೇಶದಿಂದ, ಸಿಕ್ಕಿಂ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅರುಣಾಚಲ ಪ್ರದೇಶ ಮತ್ತು ಮೇಘಾಲಯದಂತಹ ಈಶಾನ್ಯ ರಾಜ್ಯಗಳಿಂದ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಭಾರಿ ಹೆಚ್ಚಳವಾಗಿದೆ. ಈಶಾನ್ಯ ಪ್ರದೇಶವು ಕಳೆದ ಆರು ವರ್ಷಗಳಲ್ಲಿ ಕೃಷಿ ಉತ್ಪನ್ನಗಳ ರಫ್ತಿನಲ್ಲಿ ಶೇಕಡಾ 85.34ರಷ್ಟು ಬೆಳವಣಿಗೆಯನ್ನು ಕಂಡಿದೆ.  ಇದು 2016-17 ರಲ್ಲಿ 2.52 ಮಿಲಿಯನ್‌ ಡಾಲರ್ ನಿಂದ 2021-22 ರಲ್ಲಿ 17.2 ಮಿಲಿಯನ್‌ ಡಾಲರ್ ಗೆ ಏರಿದೆ.

ಪ್ರಮುಖವಾಗಿ ಈ ಬೆಳೆಗಳು ಬಾಂಗ್ಲಾದೇಶ, ಭೂತಾನ್, ಮಧ್ಯ ಪ್ರಾಚ್ಯ, ಇಂಗ್ಲೆಂಡ್ ಮತ್ತು ಯುರೋಪ್ ದೇಶಗಳಿಗೆ ರಫ್ತಾಗುತ್ತವೆ. 

ಕೃಷಿ ಮಾರುಕಟ್ಟೆ ಸಂಪರ್ಕಗಳನ್ನು ಒದಗಿಸಲು, ನೆರೆಯ ದೇಶಗಳು, ಮಧ್ಯಪ್ರಾಚ್ಯ, ಯುರೋಪಿಯನ್ ರಾಷ್ಟ್ರಗಳು ಮತ್ತು ಆಸ್ಟ್ರೇಲಿಯಾ ಇತ್ಯಾದಿ ದೇಶಗಳಿಂದ ಆಮದುದಾರರನ್ನು ಆಹ್ವಾನಿಸುವ ಮೂಲಕ ರೈತರು ಅನುಸರಿಸುತ್ತಿರುವ ಗುಣಾತ್ಮಕ ಕೃಷಿ ಪದ್ಧತಿಗಳ ಬಗ್ಗೆ ಮಾಹಿತಿ ಪಡೆಯಲು APEDA ಆಮದುದಾರರ ಕ್ಷೇತ್ರ ಭೇಟಿಗಳನ್ನು ಆಯೋಜಿಸಿತು. ಈಶಾನ್ಯ ಭಾಗಗಳ ಎಲ್ಲಾ ಎಂಟು ರಾಜ್ಯಗಳಲ್ಲಿ ಕ್ಷೇತ್ರ ಭೇಟಿಗಳನ್ನು ನಡೆಸಲಾಗಿತ್ತು.

ಎಪಿಇಡಿಎ, ಅಸ್ಸಾಂ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದೊಂದಿಗೆ, ಕಳೆದ ವರ್ಷ ಮಾರ್ಚ್ 2021 ರಲ್ಲಿ ಮಿಜೋರಾಂನ ಐಜ್ವಾಲ್‌ನಲ್ಲಿ ರಫ್ತು ಪ್ರಚಾರ ಸಮ್ಮೇಳನ ಮತ್ತು ಗ್ರಾಹಕರು- ಮಾರಾಟಗಾರರ ಸಭೆಯನ್ನು ಆಯೋಜಿಸಿತ್ತು.

ಇದಲ್ಲದೆ, ಎಪಿಇಡಿಎ ಕಳೆದ ಮಾರ್ಚ್ 10ರಂದು ಅಸ್ಸಾಂನ ಗುವಾಹಟಿಯಲ್ಲಿ ಅಂತಾರಾಷ್ಟ್ರೀಯ ಖರೀದಿದಾರರ ಮಾರಾಟಗಾರರ ಸಭೆಯನ್ನು (BSM) ಆಯೋಜಿಸಿತ್ತು. ಇದರಲ್ಲಿ ರಾಜ್ಯದಾದ್ಯಂತ ಪ್ರದರ್ಶಕರು ತಾಜಾ ಹಣ್ಣು- ತರಕಾರಿಗಳು, ಸಂಸ್ಕರಿಸಿದ ಆಹಾರ ಉತ್ಪನ್ನಗಳಂತಹ GI ಉತ್ಪನ್ನಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕೃಷಿ-ತೋಟಗಾರಿಕಾ ಉತ್ಪನ್ನಗಳನ್ನು ಪ್ರದರ್ಶಿಸಿದ್ದರು. ಕಪ್ಪು ಅಕ್ಕಿ, ಕೆಂಪು ಅಕ್ಕಿ, ಜೋಹಾ ಅಕ್ಕಿ, ಮಸಾಲೆ ಪದಾರ್ಥಗಳು, ಚಹಾ, ಕಾಫಿ, ಜೇನುತುಪ್ಪ, ಸಂಸ್ಕರಿಸಿದ ಮಾಂಸ, ಮಸಾಲೆಗಳು ಮತ್ತು ಸಾವಯವ ಉತ್ಪನ್ನಗಳ ಪ್ರದರ್ಶನಗಳಿದ್ದವು. ಶ್ರೀಲಂಕಾ, ದುಬೈ, ಬಾಂಗ್ಲಾದೇಶ, ಓಮನ್, ನೆದರ್ಲ್ಯಾಂಡ್ಸ್, ಸಿಂಗಾಪುರ್ ಮತ್ತು ಗ್ರೀಸ್‌ ದೇಶಗಳ ಆಮದುದಾರರು ಈಶಾನ್ಯ ಭಾಗಗಳು ಮತ್ತು ಇತರ ರಾಜ್ಯಗಳ ರಫ್ತುದಾರರು ಈ ಮೇಳದಲ್ಲಿ ಭಾಗವಹಿಸಿದ್ದರು.

ಅಸ್ಸಾಂನಲ್ಲಿ ಬೆಳೆದ ಸಾವಯವ ಉತ್ಪನ್ನಗಳ ರಫ್ತು ಉತ್ತೇಜಿಸಲು ಕಳೆದ ಜೂನ್ 24ರಂದು ಗುವಾಹಟಿಯಲ್ಲಿ ಎಪಿಇಡಿಎಯಿಂದ ರಾಷ್ಟ್ರೀಯ ಖರೀದಿದಾರ-ಮಾರಾಟಗಾರರ ಸಭೆಯನ್ನು ಆಯೋಜಿಸಲಾಗಿತ್ತು. ಕೊಯ್ಲಿಗಿಂತ ಮೊದಲು ಮತ್ತು ಕೊಯ್ಲು ನಂತರ ಇತರ ಸಂಶೋಧನಾ ಚಟುವಟಿಕೆಗಳ ಕುರಿತು ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನಡೆಸಲು ಈ ಪ್ರದೇಶದಲ್ಲಿ ರಫ್ತು ಉತ್ತೇಜಿಸಲು ಎಪಿಇಡಿಎ, ಜೋರ್ಹತ್‌ನ ಅಸ್ಸಾಂ ಕೃಷಿ ವಿಶ್ವವಿದ್ಯಾಲಯ ಜೊತೆ ಸಹಿ ಹಾಕಿದೆ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿಯೂ ಸಹ, ಎಪಿಇಡಿಎ ತನ್ನ ರಫ್ತನ್ನು ಹೆಚ್ಚಿಸಲು ಕ್ರಮ ಕೈಗೊಂಡಿತ್ತು. ವರ್ಚುವಲ್ ಸಭೆಯ ಮೂಲಕ ವಿವಿಧ ದೇಶಗಳಲ್ಲಿ ರಫ್ತುದಾರರೊಂದಿಗೆ ಮತ್ತು ಈಶಾನ್ಯ ಭಾಗಗಳ ಎಫ್ ಪಿಒ/ಎಫ್ ಪಿಸಿಗಳೊಂದಿಗೆ ಅನಾನಸ್, ಶುಂಠಿ, ನಿಂಬೆ, ಕಿತ್ತಳೆಗಳ ಸಂಗ್ರಹಗಳಿಗೆ ಸಂಬಂಧಿಸಿದಂತೆ ಭಾರತದ ರಾಯಭಾರ ಕಚೇರಿಯ ಸಹಯೋಗದೊಂದಿಗೆ ಮುಂದುವರೆಸಿತ್ತು. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ವರ್ಚುವಲ್ ವ್ಯಾಪಾರ ಮೇಳಗಳನ್ನು ಸಹ ಆಯೋಜಿಸಿತ್ತು. ಇದರಿಂದ ವಿದೇಶಗಳಿಗೆ ರಫ್ತು ಮಾಡಲು ಅನುಕೂಲವಾಗಿತ್ತು.

ರೈತ ಉತ್ಪಾದಕ ಸಂಸ್ಥೆಗಳು (FPOs) ಮತ್ತು ರೈತ ಉತ್ಪಾದಕ ಕಂಪನಿಗಳು (FPCs) ರಾಜ್ಯ ಸರ್ಕಾರ ಈಶಾನ್ಯ ರಾಜ್ಯಗಳಿಂದ 80 ಉದಯೋನ್ಮುಖ ಉದ್ಯಮಿಗಳು ಮತ್ತು ರಫ್ತುದಾರರ ಸಾಮರ್ಥ್ಯ ನಿರ್ಮಾಣದಂತಹ ಯೋಜನೆಗಳನ್ನು ಕೈಗೊಳ್ಳಲು APEDA ಯೋಜನೆ ಹಾಕಿಕೊಂಡಿದೆ. ಅಧಿಕಾರಿಗಳು, ಆಹಾರ ಸಂಸ್ಕರಣೆಯಲ್ಲಿ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಆಯೋಜಿಸಿ, ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ ಇತ್ಯಾದಿಗಳನ್ನು ಮಾಡುತ್ತಾರೆ.

ಕಿವಿ(KIWI)ವೈನ್, ಸಂಸ್ಕರಿಸಿದ ಆಹಾರಗಳು, ಜೋಹಾ ರೈಸ್ ಪುಲಾವ್, ಕಪ್ಪು ಅಕ್ಕಿ ಪಾಯಸ ಇತ್ಯಾದಿಗಳ ಮಾದರಿಯನ್ನು ಕೈಗೊಳ್ಳುವ ಈಶಾನ್ಯ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಪ್ರಚಾರವನ್ನು ಕೈಗೊಳ್ಳಲು APEDA ಈಶಾನ್ಯ ರಾಜ್ಯಗಳಿಗೆ ತನ್ನ ಬೆಂಬಲವನ್ನು ವಿಸ್ತರಿಸಿತು.
ಸಾಮರ್ಥ್ಯ ವರ್ಧನೆಯ ಭಾಗವಾಗಿ, ಎಪಿಇಡಿಎ ತಯಾರಕರು, ರಫ್ತುದಾರರು ಮತ್ತು ಉದ್ಯಮಿಗಳಿಗೆ ಸ್ಥಳೀಯ ಉತ್ಪನ್ನಗಳನ್ನು ಮೌಲ್ಯವರ್ಧನೆ ಮತ್ತು ರಫ್ತಿಗೆ ಬಳಸಿಕೊಳ್ಳಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿದೆ. ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ (CFTRI) ಮತ್ತು ಭಾರತೀಯ ಆಹಾರ ಸಂಸ್ಕರಣಾ ತಂತ್ರಜ್ಞಾನ ಸಂಸ್ಥೆ (IIFPT) ಸಹಯೋಗದಲ್ಲಿ ಈಶಾನ್ಯದ ವಿವಿಧ ರಾಜ್ಯಗಳಲ್ಲಿ ಐದು ದಿನಗಳ ಕಾಲ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.

ಎಪಿಇಡಿಎ, ಅಸ್ಸಾಂ ಸರ್ಕಾರದ ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ ಸಹಯೋಗದೊಂದಿಗೆ ಕಳೆದ ವರ್ಷ ಫೆಬ್ರವರಿ 19ರಂದು ಗುವಾಹಟಿಯಲ್ಲಿ ರಫ್ತು ಸಮ್ಮೇಳನವನ್ನು ಆಯೋಜಿಸಿತ್ತು.

ಎಪಿಇಡಿಎಯ ಮಧ್ಯಸ್ಥಿಕೆಯೊಂದಿಗೆ, ತ್ರಿಪುರಾದ ಹಲಸು ಹಣ್ಣನ್ನು ಮತ್ತು ನಾಗಾಲ್ಯಾಂಡ್‌ನ ಕಿಂಗ್ ಚಿಲ್ಲಿಯನ್ನು ಲಂಡನ್‌ಗೆ ಮೊದಲ ಬಾರಿಗೆ ಸ್ಥಳೀಯ ರಫ್ತುದಾರರ ಮೂಲಕ ರಫ್ತು ಮಾಡಲಾಯಿತು. ಅಲ್ಲದೆ, ಅಸ್ಸಾಂನ ಸ್ಥಳೀಯ ಹಣ್ಣು ಲೆಟೆಕು (ಬರ್ಮೀಸ್ ದ್ರಾಕ್ಷಿ)ಯನ್ನು ದುಬೈಗೆ ರಫ್ತು ಮಾಡಲಾಗಿತ್ತು. ಅಸ್ಸಾಂನ ವೀಳ್ಯದೆಲೆಯನ್ನು ನಿಯಮಿತವಾಗಿ ಲಂಡನ್‌ಗೆ ರಫ್ತು ಮಾಡಲಾಗುತ್ತಿದೆ.

ಎಪಿಇಡಿಎ, ತನ್ನ ಕೃಷಿ ರಫ್ತು ನೀತಿಯ ಅಡಿಯಲ್ಲಿ ಕೃಷಿ ಉತ್ಪನ್ನ ರಫ್ತುಗಳ ಸಾಮರ್ಥ್ಯವನ್ನು ಬಳಸಿಕೊಳ್ಳಲು ರಾಜ್ಯಗಳನ್ನು ಪ್ರೋತ್ಸಾಹಿಸುತ್ತಿದೆ. ಉತ್ಪಾದಕರ ಗುಂಪು ಮತ್ತು ಸಂಸ್ಕರಣೆಕಾರರಿಂದ ಉತ್ಪನ್ನಗಳನ್ನು ನೇರವಾಗಿ ಪಡೆದುಕೊಳ್ಳಲು ಗ್ರಾಹಕರಿಗೆ ಒಂದು ಉತ್ತಮ ವೇದಿಕೆ ನಿರ್ಮಿಸಿಕೊಡುವುದು ಕೃಷಿ ಮತ್ತು ಸಂಸ್ಕರಿಸಿದ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರ(APEDA)ದ ಉದ್ದೇಶವಾಗಿದೆ.

*****


(Release ID: 1880596) Visitor Counter : 168


Read this release in: English , Urdu , Hindi