ಕಲ್ಲಿದ್ದಲು ಸಚಿವಾಲಯ
azadi ka amrit mahotsav

ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿಗಾಗಿ ಕೇಂದ್ರ  ಕಲ್ಲಿದ್ದಲು ಸಚಿವಾಲಯದಿಂದ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆಯಲಿದೆ.

Posted On: 01 DEC 2022 4:59PM by PIB Bengaluru

ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜಿನಲ್ಲಿ ಭಾಗವಹಿಸುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಕೇಂದ್ರ ಕಲ್ಲಿದ್ದಲು ಸಚಿವಾಲಯವು ಡಿಸೆಂಬರ್ 03, 2022 ರಂದು ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುತ್ತಿದೆ. ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಸೋಮಪ್ಪ ಬೊಮ್ಮಾಯಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.  ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ರೈಲ್ವೇ ಖಾತೆಯ ರಾಜ್ಯ ಸಚಿವರಾದ ಶ್ರೀ ರಾವ್ ಸಾಹೇಬ ಪಾಟೀಲ್ ದಾನ್ವೆ, ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಸಚಿವರಾದ ಶ್ರೀ ಹಾಲಪ್ಪ ಬಸಪ್ಪ ಆಚಾರ್ ಮತ್ತು ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಶ್ರೀ ವಾಸುದೇವ್ ಸುನೀಲ್ ಕುಮಾರ್ ಅವರು ಗೌರವಾನ್ವಿತ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕೇಂದ್ರ ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮೃತ್ ಲಾಲ್ ಮೀನಾ ಮತ್ತು ಕೇಂದ್ರ ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಭಾರದ್ವಾಜ್ ಕೂಡ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಕಲ್ಲಿದ್ದಲು ಸಚಿವಾಲಯವು ಭಾರತದಾದ್ಯಂತ ಹಲವಾರು ಸ್ಥಳಗಳಲ್ಲಿ ಹೂಡಿಕೆದಾರರ ಸಮಾವೇಶವನ್ನು ನಡೆಸಲು ಯೋಜಿಸಿದೆ ಮತ್ತು ಈಗಾಗಲೇ ಇಂದೋರ್ ಮತ್ತು ಮುಂಬೈ ನಗರಗಳಲ್ಲಿ ಅಂತಹ ಸಮಾವೇಶಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದು ಪ್ರಸ್ತುತ ವಾಣಿಜ್ಯ ಕಲ್ಲಿದ್ದಲು ಗಣಿಗಳ ಹರಾಜಿನ ಬಗ್ಗೆ ಗಣಿವಲಯದಲ್ಲಿ ಉತ್ಸಾಹವನ್ನುಂಟುಮಾಡಿದೆ ಹಾಗೂ ನಿರೀಕ್ಷಿತ ಬಿಡ್ಡರ್‌ ಗಳಿಂದ ಉತ್ತಮ ರೀತಿಯ ಭಾಗವಹಿಸುವಿಕೆಯ ಸ್ಪಂದನಕ್ಕೆ ಕಾರಣವಾಗಿದೆ.

ಸಚಿವಾಲಯವು 6 ನೇ ಸುತ್ತಿನ ವಾಣಿಜ್ಯ ಹರಾಜಿನ ಅಡಿಯಲ್ಲಿ 133 ಕಲ್ಲಿದ್ದಲು ಗಣಿಗಳನ್ನು ಮತ್ತು 5 ನೇ ಹಂತದ ವಾಣಿಜ್ಯ ಹರಾಜಿನ 2 ನೇ ಪ್ರಯತ್ನದ ಅಡಿಯಲ್ಲಿ 8 ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ 141 ಕಲ್ಲಿದ್ದಲು ಗಣಿಗಳು ಮುಖ್ಯವಾಗಿ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಬಿಹಾರ, ಛತ್ತೀಸ್‌ ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ಪರಿಧಿಗೆ ಸೇರಿವೆ ಹಾಗೂ ಸಂಚಿತ ಪಿ.ಆರ್.ಸಿ. ~305 ಎಂ.ಟಿ.ಪಿ.ಎ. ಗಾತ್ರವನ್ನು ಹೊಂದಿವೆ. ವಿವರವಾದ ಚರ್ಚೆಯ ನಂತರ ಗಣಿಗಳನ್ನು ಅಂತಿಮಗೊಳಿಸಲಾಗಿದೆ. ಸಂರಕ್ಷಿತ ಪ್ರದೇಶಗಳು, ವನ್ಯಜೀವಿ ಅಭಯಾರಣ್ಯಗಳು, ಅಪರೂಪದ ಜೀವಜಂತುಗಳ ಆವಾಸಸ್ಥಾನಗಳು, 40% ಕ್ಕಿಂತ ಹೆಚ್ಚಿನ ಅರಣ್ಯವನ್ನು ಹೊಂದಿರುವ ಗಣಿಗಳು, ಸೂಕ್ಷ್ಮ ಪ್ರದೇಶ ಇತ್ಯಾದಿಗಳನ್ನು ಪ್ರಕ್ರಿಯೆಯಿಂದ ಹೊರಗಿಡಲಾಗಿದೆ. ದಟ್ಟವಾದ ಜನವಸತಿಯ ವಾಸಸ್ಥಾನ ಪ್ರದೇಶ, ಹೆಚ್ಚಿನ ಹಸಿರು ಹೊದಿಕೆ ಅಥವಾ ನಿರ್ಣಾಯಕ ಮೂಲಸೌಕರ್ಯ ಇತ್ಯಾದಿಗಳಿರುವ ಕೆಲವು ಕಲ್ಲಿದ್ದಲು ಗಣಿಗಳ ಬ್ಲಾಕ್ ಗಡಿಗಳನ್ನು ಪ್ರತ್ಯೇಕಿಸಲಾಗಿದೆ. ಈ ಕಲ್ಲಿದ್ದಲು ಬ್ಲಾಕ್‌ ಗಳಲ್ಲಿ ಬಿಡ್‌ ದಾರರ ಆಸಕ್ತಿ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮಧ್ಯಸ್ಥಗಾರರ ಸಮಾಲೋಚನೆಯ ಸಮಯದಲ್ಲಿ ಸ್ವೀಕರಿಸಿದ ಆಧಾರದ ಉಲ್ಲೇಖಗಳಲ್ಲಿ ಮಾರ್ಪಡು ಮಾಡಲಾಗಿದೆ.

ಹರಾಜು ಪ್ರಕ್ರಿಯೆಯ ಮುಂಗಡ ಮೊತ್ತ ಮತ್ತು ಬಿಡ್ ಭದ್ರತಾ ಮೊತ್ತದಲ್ಲಿ ಕಡಿತ, ಕಲ್ಲಿದ್ದಲು ಗಣಿಗಳನ್ನು ಭಾಗಶಃ ಪರಿಶೋಧಿಸಿದ ಸಂದರ್ಭದಲ್ಲಿ ಕಲ್ಲಿದ್ದಲು ಗಣಿಯ ಭಾಗವನ್ನು ಬಿಟ್ಟುಕೊಡಲು ಅನುಮತಿ, ಯಾವುದೇ ಪ್ರವೇಶ ಅಡೆತಡೆಗಳಿಲ್ಲದೆ ಸುಲಭವಾಗಿ ಭಾಗವಹಿಸುವಿಕೆ, ಕಲ್ಲಿದ್ದಲು ಬಳಕೆಯಲ್ಲಿ ಸಂಪೂರ್ಣ ನಮ್ಯತೆ, ಆಪ್ಟಿಮೈಸ್ಡ್ ಪಾವತಿ ರಚನೆಗಳು, ಆರಂಭಿಕ ಉತ್ಪಾದನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನದ ಬಳಕೆಗೆ ಪ್ರೋತ್ಸಾಹ, ಇತ್ಯಾದಿಗಳು ಹರಾಜು ಪ್ರಕ್ರಿಯೆಯ ಪ್ರಮುಖ ಲಕ್ಷಣಗಳಾಗಿವೆ.

ಟೆಂಡರ್ ಡಾಕ್ಯುಮೆಂಟ್‌ ನ ಮಾರಾಟವು ನವೆಂಬರ್ 03, 2022 ರಂದು ಪ್ರಾರಂಭವಾಯಿತು. ಗಣಿಗಳ ವಿವರಗಳು, ಹರಾಜು ನಿಯಮಗಳು, ಅಂತಿವ ಸಮಯ(ಟೈಮ್‌ಲೈನ್‌) ಇತ್ಯಾದಿ ಮಾಹಿತಿಗಳು ಎಂ.ಎಸ್.ಟಿ.ಸಿ. ಹರಾಜು ವೇದಿಕೆಯಲ್ಲಿ ಲಭ್ಯವಿದೆ. ಶೇಕಡಾವಾರು ಆದಾಯದ ಹಂಚಿಕೆಯ ಆಧಾರದ ಮೇಲೆ ಪಾರದರ್ಶಕ ಎರಡು ಹಂತದ ಪ್ರಕ್ರಿಯೆಯ ರೀತಿಯಲ್ಲಿ ಅಂತರ್ಜಾಲ(ಆನ್‌ಲೈನ್‌) ಮೂಲಕ ಹರಾಜು ನಡೆಸಲಾಗುವುದು.

ಕೇಂದ್ರ ಕಲ್ಲಿದ್ದಲು ಸಚಿವಾಲಯದ ಏಕೈಕ ವಹಿವಾಟು ಸಲಹೆಗಾರರಾದ ಎಸ್.ಬಿ.ಐ. ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್ ಸಂಸ್ಥೆಯು, ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜನ್ನು ನಡೆಸಲು ಕೇಂದ್ರ ಕಲ್ಲಿದ್ದಲು ಸಚಿವಾಲಯಕ್ಕೆ ಸಹಾಯ ಮಾಡುತ್ತಿದೆ.

*****


(Release ID: 1880402) Visitor Counter : 161


Read this release in: English , Urdu , Hindi , Punjabi