ಇಂಧನ ಸಚಿವಾಲಯ

ಶಕ್ತಿ ನೀತಿಯ ಬಿ(ವಿ) ಅಡಿಯಲ್ಲಿ ಐದು ವರ್ಷಗಳವರೆಗೆ 4,500 ಮೆಗಾವ್ಯಾಟ್ ವಿದ್ಯುತ್ ಸಂಗ್ರಹಣೆಗೆ ಇಂಧನ ಸಚಿವಾಲಯದಿಂದ ಯೋಜನೆ ಆರಂಭ


ವಿದ್ಯುತ್ ಅಥವಾ ಇಂಧನ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಸಹಾಯ ಮಾಡುವ ಯೋಜನೆ ಇದಾಗಿದ್ದು ಉತ್ಪಾದನಾ ಘಟಕಗಳು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ

Posted On: 28 NOV 2022 4:01PM by PIB Bengaluru

* ಯೋಜನೆಯಡಿ, ಪಿಎಫ್ ಸಿ ಕನ್ಸಲ್ಟಿಂಗ್ ಲಿಮಿಟೆಡ್ 4,500 ಮೆಗಾವ್ಯಾಟ್ ಪೂರೈಕೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ.
* 2023ರ ಏಪ್ರಿಲ್ ನಿಂದ ವಿದ್ಯುತ್ ಸರಬರಾಜು ಪ್ರಾರಂಭ
* ಇದಕ್ಕಾಗಿ ಸುಮಾರು 27 ಎಂಟಿಪಿಎ ಮಂಜೂರು ಮಾಡುವಂತೆ ಕಲ್ಲಿದ್ದಲು ಸಚಿವಾಲಯಕ್ಕೆ ಮನವಿ ಮಾಡಲಾಗಿದೆ.
* ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 21, 2022.

ಶಕ್ತಿ ನೀತಿಯ ಬಿ(ವಿ) ಅಡಿಯಲ್ಲಿ ಐದು ವರ್ಷಗಳ ಹಣಕಾಸು, ಸ್ವಂತ ಮತ್ತು ಕಾರ್ಯನಿರ್ವಹಿಸುವ (FOO) ಆಧಾರದ ಮೇಲೆ ಅಥವಾ ಸ್ಪರ್ಧಾತ್ಮಕ ಆಧಾರದ ಮೇಲೆ 4,500 ಮೆಗಾವ್ಯಾಟ್ ವಿದ್ಯುತ್ ಸಂಗ್ರಹಣೆಗಾಗಿ ವಿದ್ಯುತ್ ಸಚಿವಾಲಯವು ಯೋಜನೆಯೊಂದನ್ನು ಆರಂಭಿಸುತ್ತಿದೆ.

ಪಿಎಫ್ ಸಿ ಕನ್ಸಲ್ಟಿಂಗ್ ಲಿಮಿಟೆಡ್ (ಪಿಎಫ್ ಸಿ ಲಿಮಿಟೆಡ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ)ನ್ನು ವಿದ್ಯುತ್ ಸಚಿವಾಲಯವು ನೋಡಲ್ ಏಜೆನ್ಸಿ ಎಂದು ಗೊತ್ತುಪಡಿಸಿದೆ. ಯೋಜನೆಯಡಿ, ಪಿಎಫ್ ಸಿ ಕನ್ಸಲ್ಟಿಂಗ್ ಲಿಮಿಟೆಡ್ 4,500 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಪೂರೈಕೆಗಾಗಿ ಬಿಡ್‌ಗಳನ್ನು ಆಹ್ವಾನಿಸಿದೆ. ಬರುವ ವರ್ಷ ಏಪ್ರಿಲ್ 2023 ರಿಂದ ವಿದ್ಯುತ್ ಸರಬರಾಜು ಪ್ರಾರಂಭವಾಗುತ್ತದೆ. ಇದಕ್ಕಾಗಿ ಸುಮಾರು 27 ಎಂಟಿಪಿಎಯನ್ನು ಹಂಚಿಕೆ ಮಾಡಲು ಕಲ್ಲಿದ್ದಲು ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. 

ಗುಜರಾತ್ ಉರ್ಜಾ ವಿಕಾಸ್ ನಿಗಮ ನಿಯಮಿತ, ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪನಿ ನಿಯಮಿತ, ಮಧ್ಯಪ್ರದೇಶ ವಿದ್ಯುತ್ ವ್ಯವಸ್ಥಾಪಕ ಕಂಪನಿ ನಿಯಮಿತ, ನವದೆಹಲಿ ಮಹಾನಗರ ಪಾಲಿಕೆ ಮತ್ತು ತಮಿಳುನಾಡು ಜನರೇಷನ್ ಅಂಡ್ ಡಿಸ್ಟ್ರಿಬ್ಯೂಷನ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳು ಈ ಯೋಜನೆಗೆ ಆಸಕ್ತಿ ತೋರಿಸಿವೆ. ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 21, 2022 ಆಗಿದೆ. 

 ಇದೇ ಮೊದಲ ಬಾರಿಗೆ ಶಕ್ತಿ ಯೋಜನೆಯ ಬಿ(ವಿ) ಅಡಿಯಲ್ಲಿ ಬಿಡ್ಡಿಂಗ್ ನಡೆಸಲಾಗುತ್ತಿದೆ. ಅಲ್ಲದೆ, ಈ ಬಿಡ್ಡಿಂಗ್‌ನಲ್ಲಿ ಮಧ್ಯಮ ಅವಧಿಗೆ ಪರಿಷ್ಕೃತ ಪಿಪಿಎ ಬಳಸಲಾಗುತ್ತಿದೆ. ಈ ಯೋಜನೆಯಿಂದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿರುವ ರಾಜ್ಯಗಳಿಗೆ ಸಹಾಯವಾಗುತ್ತದೆ ಮತ್ತು ಉತ್ಪಾದನಾ ಘಟಕಗಳು ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಶಕ್ತಿ ನೀತಿಯ ಬಿ (ವಿ) ಅಡಿಯಲ್ಲಿ ಹಣಕಾಸು, ಸ್ವಂತ ಮತ್ತು ಕಾರ್ಯನಿರ್ವಹಿಸುವ (FOO) ಆಧಾರದ ಮೇಲೆ ವಿದ್ಯುತ್ ಸಂಗ್ರಹಣೆಗಾಗಿ ಮಾರ್ಗಸೂಚಿಗಳನ್ನು ಇಂಧನ ಸಚಿವಾಲಯವು ಕಳೆದ ತಿಂಗಳು ಅಕ್ಟೋಬರ್ ನಲ್ಲಿ ಸೂಚಿಸಿದೆ. ಶಕ್ತಿ ನೀತಿಯ ಬಿ (ವಿ) ಯ ನಿಬಂಧನೆಗಳ ಪ್ರಕಾರ ಕಲ್ಲಿದ್ದಲು ಹಂಚಿಕೆಯ ವಿಧಾನವನ್ನು ಕಳೆದ ಮೇ 11ರಂದು ಹೊರಡಿಸಲಾಗಿತ್ತು.

*****(Release ID: 1879585) Visitor Counter : 153