ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಭೋಟಿಯಾ ಭಾಷೆಯ ಚಲನಚಿತ್ರ ಪಾತಾಳ್-ಟೀ ಅನ್ನು ಐಎಫ್‍ಎಫ್‍ಐ-53ನೇ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು


ಪಾತಾಳ್-ಟೀ ಮನುಷ್ಯ ಮತ್ತು ಪ್ರಕೃತಿಯ ಕಥೆ: ಮುಕುಂದ್ ನಾರಾಯಣ್, ನಿರ್ಮಾಪಕರು ಮತ್ತು ನಿರ್ದೇಶಕರು

ಪರಿಸರ ಸಂರಕ್ಷಣೆಗೆ ಒತ್ತು ನೀಡಲು ಪಾತಾಳ್-ಟೀ ಯಲ್ಲಿ ನೀರನ್ನು ರೂಪಕವಾಗಿ ಬಳಸಲಾಗಿದೆ: ಸಂತೋಷ್ ಸಿಂಗ್, ಸಹ ನಿರ್ದೇಶಕ

#IFFIWood, 27 ನವೆಂಬರ್ 2022

"ಪಾತಾಳ್-ಟೀ  (Patal-Tee)  ಎನ್ನುವುದು ಮನುಷ್ಯ ಮತ್ತು ಪ್ರಕೃತಿಯ ಮತ್ತು ಪ್ರಕೃತಿಯನ್ನು ನಾಶಪಡಿಸುತ್ತಿರುವ ಪರಿಸರದ ಒತ್ತಡಗಳ ಕಥೆ" ಎಂದು ಗೋವಾದಲ್ಲಿ ನಡೆಯುತ್ತಿರುವ 53ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ '’ಐಎಫ್‌ಎಫ್‌ಎಫ್‌ ಐ ಟೇಬಲ್ ಟಾಕ್ಸ್'  ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಾತಾಳ್-ಟೀ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಮುಕುಂದ್ ನಾರಾಯಣ್ ಹೇಳಿದರು.. ಈ ಚಿತ್ರವು ನಮ್ಮ ದೇಶದಲ್ಲಿ ತಲೆಮಾರುಗಳಿಂದ ತಲೆಮಾರುಗಳಿಗೆ ಮೌಖಿಕವಾಗಿ ರವಾನೆಯಾಗುತ್ತಿರುವ ಜಾನಪದ ಕಥೆಗಳ ಶ್ರೀಮಂತ ಪರಂಪರೆಯ ಸುತ್ತ ಸುತ್ತುತ್ತದೆ ಮತ್ತು ಇದು ಚಿಕ್ಕವಯಸಿನಿಂದ ದೊಡ್ಡದಾಗುವವರೆಗಿನ  ಮಗುವಿಗೆ ಸಂಬಂಧಿಸಿದ ಕಥೆಯಾಗಿದೆ ಎಂದು ಅವರು ಹೇಳಿದರು.

ವಿವಿಧ ಸಾಮಾಜಿಕ ಪ್ರಭಾವಗಳಿಂದಾಗಿ ಅಳಿವಿನಂಚಿನಲ್ಲಿರುವ ಮತ್ತು ಕಣ್ಮರೆಯಾಗುತ್ತಿರುವ ಭೋಟಿಯದಂತಹ ಸ್ಥಳೀಯ ಆಡು ಭಾಷೆಗಳ ಸವಾಲುಗಳನ್ನು ಪಾತಾಳ್-ಟೀ ಎತ್ತಿ ತೋರಿಸುತ್ತದೆ ಎಂದು ಮುಕುಂದ್ ನಾರಾಯಣ್ ಹೇಳಿದರು.

ಚಿತ್ರದ ಬಗ್ಗೆ ಮತ್ತಷ್ಟು ವಿವರವಾಗಿ, ಸಹ-ನಿರ್ದೇಶಕ ಸಂತೋಷ್ ಸಿಂಗ್, ಚಿತ್ರವು ಭೋಟಿಯಾ ಬುಡಕಟ್ಟು ಜನಾಂಗದವರ ಬಗ್ಗೆ ಎಂದು ಹೇಳಿದರು. "ನಾವು ನೀರನ್ನು ಪರಿಸರ ಸಂವಾದಕ್ಕೆ ರೂಪಕವಾಗಿ ಬಳಸಿದ್ದೇವೆ" ಎಂದು ನಿರ್ದೇಶಕರು ಹೇಳಿದರು. ಅಂತರ್-ಪೀಳಿಗೆಯ, ಮೌಖಿಕವಾಗಿ ಹರಡುವ ಜಾನಪದ ಕಥೆಗಳು ಪವಿತ್ರ ನೀರಿನ ಅನ್ವೇಷಣೆಯ ಸಮಯದಲ್ಲಿ ಜೀವನ, ಸಾವು ಮತ್ತು ಅದರ ಇತರ ದೃಷ್ಟಿಕೋನಗಳ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸಂತೋಷ್ ಸಿಂಗ್ ಹೇಳಿದರು. ಜಾನಪದ ಕಥೆಗಳನ್ನು ಸಮಾಜದ ಮಾತು ಎಂದು ಕರೆದ ಅವರು, ಅವುಗಳ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಅವು ನಮ್ಮ ಸಂಸ್ಕೃತಿಯ ಬೇರುಗಳ ಒಳನೋಟವನ್ನು ನೀಡುತ್ತವೆ ಎಂದು ಹೇಳಿದರು.

"ಸ್ವತಂತ್ರ ನಿರ್ಮಾಪಕರಿಗೆ ಬಜೆಟ್ ನಿರ್ಬಂಧದ ಹೊರತಾಗಿಯೂ ನಾವು ಪಾತಾಳ್-ಟೀ ಮೂಲಕ ಭೋಟಿಯಾ ಬುಡಕಟ್ಟುಗಳ ಕಥೆಯನ್ನು ಹೇಳಲು ಬಯಸಿದ್ದೇವೆ. ಚಿತ್ರದ ನಿರ್ಮಾಣದ ನಂತರ ರಸುಲ್ ಪೂಕುಟ್ಟಿ ಸೇರಿದಂತೆ ಬಾಲಿವುಡ್‌ನ ಅನೇಕರು ನಮಗೆ ಸಹಾಯ ಮಾಡಿದ್ದಾರೆ. ಅವರೆಲ್ಲರಿಗೂ ನಾವು ಆಭಾರಿಯಾಗಿದ್ದೇವೆ.” ಎಂದು ನಿರ್ಮಾಣದ  ಪ್ರಕ್ರಿಯೆಯ ಬಗ್ಗೆ ಮುಕುಂದ್ ನಾರಾಯಣ್ ಹೇಳಿದರು.

ಭಾರತೀಯ ಭಾಷೆಯ ಚಲನಚಿತ್ರಗಳ ಭವಿಷ್ಯದ ಕುರಿತು ಮಾತನಾಡುತ್ತಾ, ಸಂತೋಷ್ ಸಿಂಗ್ ಅವರು 'ಪ್ರಾದೇಶಿಕ' 'ಹೊಸ ಜಾಗತಿಕ' ಆಗಿರುವ ಯುಗವನ್ನು ನಾವು ಪ್ರವೇಶಿಸುತ್ತಿದ್ದೇವೆ ಎಂದು ಹೇಳಿದ್ದಾರೆ. “ಇಂದು ಭಾರತದ ಪ್ರಾದೇಶಿಕ ಚಲನಚಿತ್ರಗಳು ಜಗತ್ತನ್ನು ಗೆಲ್ಲುತ್ತಿವೆ, ಅದು ಕಾಂತಾರಾ ಅಥವಾ ವ್ಯಾಗ್ರೋ ಅಥವಾ ಫ್ರೇಮ್ ಆಗಿರಬಹುದು. ಜನರು ಪಾತ್ರಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುವುದರಿಂದ ಪ್ರಾದೇಶಿಕವು ಹೊಸ ಜಾಗತಿಕವಾಗಿದೆ ”ಎಂದು ಸಹ-ನಿರ್ದೇಶಕರು ಹೇಳಿದರು.

ಚಿತ್ರದ ಬಗ್ಗೆ

ನಿರ್ದೇಶಕರು: ಮುಕುಂದ್ ನಾರಾಯಣ್ ಮತ್ತು ಸಂತೋಷ್ ಸಿಂಗ್

ನಿರ್ಮಾಪಕರು: ಮುಕುಂದ್ ನಾರಾಯಣ್ ಮತ್ತು ಸಂತೋಷ್ ಸಿಂಗ್

ಚಿತ್ರಕಥೆ: ಮುಕುಂದ್ ನಾರಾಯಣ್ ಮತ್ತು ಸಂತೋಷ್ ಸಿಂಗ್

ಛಾಯಾಗ್ರಾಹಣ: ಬಿಟ್ಟು ರಾವತ್

ಸಂಪಾದಕರು: ಪೂಜಾ ಪಿಳ್ಳೈ, ಸಂಯುಕ್ತಾ ಕಾಜಾ

ಪಾತ್ರವರ್ಗ: ಆಯುಷ್ ರಾವತ್, ಕಮಲಾ ದೇವಿ ಕುನ್ವರ್, ದಮಯಂತಿ ದೇವಿ, ಧನ್ ಸಿಂಗ್ ರಾಣಾ, ಭಗತ್ ಸಿಂಗ್ ಬರ್ಫಲ್

2021 | ಭೋಟಿಯಾ | ಬಣ್ಣದ ಚಲನಚಿತ್ರ | 24 ನಿಮಿಷಗಳು

 

ಸಾರಾಂಶ:

ಹದಿಮೂರು ವರ್ಷದ ಫಗ್ನುಗೆ ತನ್ನ ಅಜ್ಜನಿಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ. ಅವನ ಅಜ್ಜ ಅನಾರೋಗ್ಯಕ್ಕೆ ಒಳಗಾದ ನಂತರ, ಅವನ ಅಜ್ಜಿಯ ಎಚ್ಚರಿಕೆಯ ಹೊರತಾಗಿಯೂ, ಹಿಮಾಲಯದ ಆತ್ಮದಿಂದ ರಕ್ಷಿಸಲ್ಪಟ್ಟ ಪುರಾಣ ಮತ್ತು ವಸ್ತುಗಳ ನಡುವೆ ಭೂಮಿಯಲ್ಲಿದೆ ಎಂದು ಹೇಳಲಾಗುವ 'ಪವಿತ್ರ ಜಲ''ದ ಹುಡುಕಾಟದಲ್ಲಿ ಫಗ್ನು ಪ್ರಯಾಸಕರ ಅನ್ವೇಷಣೆಯನ್ನು ಪ್ರಾರಂಭಿಸುತ್ತಾನೆ.

ನಿರ್ದೇಶನ ಮತ್ತು ನಿರ್ಮಾಣ: ಮುಕುಂದ್ ನಾರಾಯಣ್ ಮತ್ತು ಸಂತೋಷ್ ಸಿಂಗ್ ಸಿನಿಮಾವನ್ನು ಅತ್ಯಂತ ಹತ್ತಿರವಾಗುವ  ಮಾಧ್ಯಮವೆಂದು ಪರಿಗಣಿಸುವ ಕಥೆಗಾರರು. ಗ್ರಾಮೀಣ ಹಿನ್ನೆಲೆಯಿಂದ ಬಂದವರು ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಯಾವುದೇ ಔಪಚಾರಿಕ ತರಬೇತಿಯಿಲ್ಲದೆ, ಅವರು ಗುರುತಿಸದ ಭಾರತದಲ್ಲಿ ಪುರಾಣಗಳ ವಿಭಿನ್ನ ದೃಷ್ಟಿಕೋನಗಳನ್ನು ಅನ್ವೇಷಿಸಲು ಹಂಬಲಿಸುತ್ತಾರೆ. ಪಾತಾಳ್-ಟೀ ಅವರ ಮೊದಲ ಚಿತ್ರ.

*****

iffi reel

(Release ID: 1879434) Visitor Counter : 170