ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಐಎಫ್ ಎಫ್‌ಐ-53 ಪ್ರತಿನಿಧಿಗಳಿಗೆ ಮೆಕ್ಸಿಕನ್ ಚಿತ್ರಗಳ ಔತಣಕೂಟ
"ವಿಶ್ವಸನೀಯ ಭಾರತದ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೆಕ್ಸಿಕನ್ ಚಲನಚಿತ್ರಗಳ ಭಾಗವಹಿಸುವಿಕೆಗೆ ನಾವು ಹೆಮ್ಮೆಪಡುತ್ತೇವೆ": ಮೆಕ್ಸಿಕೋ ಸರ್ಕಾರದ ಪ್ರವಾಸೋದ್ಯಮ ಸಚಿವ ಮಿಗುಯೆಲ್ ಟೊರುಕೊ ಮಾರ್ಕ್ವೆಸ್
"ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು ಮತ್ತು ರಾಷ್ಟ್ರಗಳ ನಡುವೆ ಸಂಪರ್ಕ ಸೇತುವೆಗಳನ್ನು ನಿರ್ಮಿಸಲು ಚಲನಚಿತ್ರಗಳು ಉತ್ತಮ ಮಾರ್ಗವಾಗಿದೆ": ಮಿಗುಯೆಲ್ ಟೊರುಕೊ ಮಾರ್ಕ್ವೆಸ್
#ಐಎಫ್ ಎಫ್ ಐ ವುಡ್ 27 ನವೆಂಬರ್ 2022
53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ ಎಫ್ ಐ) ತನ್ನ ಎಲ್ಲಾ ಪ್ರತಿನಿಧಿಗಳಿಗೆ ರುಚಿಕರವಾದ ಮೆಕ್ಸಿಕನ್ ಔತಣವನ್ನು ಸಿದ್ಧಪಡಿಸಿದೆ. ಉತ್ಸವದಲ್ಲಿ ವಿವಿಧ ವಿಭಾಗಗಳಲ್ಲಿ ದೇಶದ ಹಲವು ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಮೆಕ್ಸಿಕೋ ಸರ್ಕಾರದ ಪ್ರವಾಸೋದ್ಯಮ ಸಚಿವ ಮಿಗುಯೆಲ್ ಟೊರುಕೊ ಮಾರ್ಕ್ವೆಸ್ ಅವರು ವಿಡಿಯೋ ಸಂದೇಶದಲ್ಲಿ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು "ಗೋವಾದಲ್ಲಿ ೫೩ ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಶ್ವಸನೀಯ ಭಾರತದಲ್ಲಿ ಈ ಮಹತ್ವದ ಕ್ಷಣವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ. ಮೆಕ್ಸಿಕೋ ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಮತ್ತು ಈ ಪರಂಪರೆಯ ಬಹುಮುಖ್ಯ ಭಾಗ ನಮ್ಮ ಸಿನಿಮಾ. ದಂತಕಥೆಗಳೆಂದು ಪರಿಗಣಿಸಲ್ಪಟ್ಟ ಮಹಾನ್ ಚಲನಚಿತ್ರ ನಿರ್ದೇಶಕರು ಮತ್ತು ನಟರ ನಾಡು ನಮ್ಮದು. ನಮ್ಮ ಚಲನಚಿತ್ರಗಳು ಪ್ರಪಂಚದಾದ್ಯಂತ ಅನೇಕ ಪ್ರಶಸ್ತಿಗಳನ್ನು ಪಡೆದಿವೆ” ಎಂದರು.
ಮೆಕ್ಸಿಕನ್ ಸಿನಿಯಮಾ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಅಭಿವ್ಯಕ್ತಿಯಾಗಿ ಉದಯಿಸಿದೆ ಎಂದು ವಿವರಿಸಿದರು. ತಮ್ಮ ತಾಯಿ, ಮರಿಯಾ ಎಲೆನಾ ಮಾರ್ಕ್ವೆಸ್ ಮತ್ತು ತಂದೆ, ಮಿಗುಯೆಲ್ ಟೊರುಕೊ, ಮೆಕ್ಸಿಕನ್ ಸಿನಿಮಾದ "ಸುವರ್ಣ ಯುಗ’ದ ಮೆಕ್ಸಿಕನ್ ನಟರಾಗಿದ್ದರು ಎಂದು ಅವರು ಹೆಮ್ಮೆಯಿಂದ ಹಂಚಿಕೊಂಡರು.
ಸಚಿವರು ಮಾತು ಮುಂದುವರಿಸಿ,“ಜನರ ನಡುವಿನ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು ಮತ್ತು ರಾಷ್ಟ್ರಗಳ ನಡುವೆ ಸಂಪರ್ಕಸೇತುವೆಗಳನ್ನು ನಿರ್ಮಿಸಲು ಚಲನಚಿತ್ರಗಳು ಅತ್ಯುತ್ತಮ ಮಾರ್ಗವೆಂದು ನಾನು ಸದಾ ಭಾವಿಸುತ್ತೇನೆ. ಮೆಕ್ಸಿಕೋ ಪ್ರಸ್ತುತ ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮದಲ್ಲಿ ಅದ್ಭುತ ಸೃಜನಶೀಲತೆ ಮತ್ತು ನಿರ್ಮಾಣ ಸಾಮರ್ಥ್ಯವನ್ನು ಹೊಂದಿದೆ, ಇದು ಸಿನಿಮಾದಲ್ಲಿ ಹೊಸ ಯುಗಕ್ಕೆ ನಮ್ಮನ್ನು ಕರೆದೊಯ್ಯುತ್ತದೆ. ಈ ವಿಶಿಷ್ಟ ಉತ್ಸವದಲ್ಲಿ ಮೆಕ್ಸಿಕನ್ ಚಲನಚಿತ್ರಗಳು ಭಾಗವಹಿಸಿದ್ದಕ್ಕಾಗಿ ನಾವು ಹೆಮ್ಮೆಪಡುತ್ತೇವೆ. ಈ ಸುಂದರ ಕಾರ್ಯಕ್ರಮದ ಭಾಗವಾಗಿರುವ ಎಲ್ಲರಿಗೂ ನಮ್ಮ ಹೆಚ್ಚಿನ ಬೆಂಬಲ ಮತ್ತು ಮೆಚ್ಚುಗೆಯನ್ನು ನೀಡಲು ಬಯಸುತ್ತೇನೆ. ನಿಮ್ಮೆಲ್ಲರಿಗೂ ಯಶಸ್ಸು ದೊರಕಬೇಕೆಂದು ನಾನು ಬಯಸುತ್ತೇನೆ” ಎಂದರು.
"ಐಎಫ್ ಎಫ್ ಐ ಟೇಬಲ್ ಟಾಕ್’ ಗೋಷ್ಠಯಲ್ಲಿ ರೆಡ್ ಶೂಸ್ ಚಿತ್ರದ ನಿರ್ಮಾಪಕ ಅಲೆಜಾಂಡ್ರೊ ಡಿ ಇಕಾಜಾ "ಮೆಕ್ಸಿಕನ್ ಸರ್ಕಾರವು ಸಿನಿಮಾಕ್ಕಾಗಿ ನಿಧಿಯನ್ನು ಹೊಂದಿದೆ, ಅದರಡಿಯಲ್ಲಿ ಅವರು ನಮ್ಮಂತಹ ಕಲಾತ್ಮಕ ಚಲನಚಿತ್ರಗಳನ್ನು ಒಳಗೊಂಡಂತೆ ಚಲನಚಿತ್ರಗಳನ್ನು ಉತ್ತೇಜಿಸುತ್ತಾರೆ. ಸರ್ಕಾರದ ಪ್ರೋತ್ಸಾಹವಿಲ್ಲದೆ ಈ ರೀತಿಯ ಚಲನಚಿತ್ರಗಳನ್ನು ನಿರ್ಮಿಸುವುದು ಕಷ್ಟ ಏಕೆಂದರೆ ಅವುಗಳನ್ನು ವಾಣಿಜ್ಯೀಕರಣ ಮಾಡುವುದು ಕಷ್ಟ” ಎಂದು ಹೇಳಿದರು. ವಿವಾಹದ ಕುರಿತು ಭಾರತದೊಂದಿಗೆ ಜಂಟಿ ನಿರ್ಮಾಣವನ್ನು ಮಾಡಲು ಅನ್ವೇಷಿಸುತ್ತಿದ್ದೇನೆ ಎಂದು ಅವರು ಹೇಳಿದರು. “ನಾವು ವಾಸ್ತವವಾಗಿ ಮದುವೆಯ ಬಗ್ಗೆ ಜಂಟಿಯಾಗಿ ಚಲನಚಿತ್ರ ಮಾಡಲು ಪ್ರಯತ್ನಿಸುತ್ತಿದ್ದೇವೆ. ಎರಡೂ ದೇಶಗಳಲ್ಲಿ, ಮದುವೆಗಳು ದೊಡ್ಡದಾಗಿರುತ್ತವೆ, ವರ್ಣರಂಜಿತವಾಗಿರುತ್ತವೆ ಮತ್ತು ಹಲವು ದಿನಗಳವರೆಗೆ ಇರುತ್ತದೆ. ಈ ರೀತಿಯ ಸಾಂಸ್ಕೃತಿಕ ಹೋಲಿಕೆಗಳು ಭವಿಷ್ಯದಲ್ಲಿ ಇತರ ಯೋಜನೆಗಳಿಗೆ ಕಾರಣವಾಗಬಹುದು” ಎಂದರು.
"ರೆಡ್ ಶೊಸ್’’ ನ ಚಿತ್ರ
2022ರ ಮೆಕ್ಸಿಕನ್ ಚಲನಚಿತ್ರ ರೆಡ್ ಶೂಸ್ ಅಂತಾರಾಷ್ಟ್ರೀಯ ಸ್ಪರ್ಧೆಯ ವಿಭಾಗದಲ್ಲಿ 14 ಇತರ ಚಲನಚಿತ್ರಗಳೊಂದಿಗೆ ಸ್ಪರ್ಧಿಸಲಿದೆ, ಅದರಲ್ಲಿ ವಿಜೇತರಿಗೆ ಅಸ್ಕರ್ ಗೋಲ್ಡನ್ ಪೀಕಾಕ್ ನೀಡಲಾಗುತ್ತದೆ. ಕಾರ್ಲೋಸ್ ಐಚೆಲ್ಮನ್ ಕೈಸರ್ ನಿರ್ದೇಶಿಸಿದ ರೆಡ್ ಶೂಸ್, ಒಂಟಿ ಜೀವನ ನಡೆಸುವ ಮತ್ತು ತನ್ನ ಮಗಳ ಸಾವಿನ ಸುದ್ದಿಯನ್ನು ಸ್ವೀಕರಿಸುವ ರೈತನ ಕುರಿತಾದ ಚಲನಚಿತ್ರವಾಗಿದೆ. ಚಲನಚಿತ್ರವು ವೆನಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೇಕ್ಷಕರ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿತ್ತು ಮತ್ತು ಹಲವಾರು ಉತ್ಸವಗಳಲ್ಲಿ ಹಲವು ನಾಮನಿರ್ದೇಶನಗಳನ್ನು ಸ್ವೀಕರಿಸಿದೆ.
"ಐಲ್ಯಾಂಡ್ ಆಫ್ ಲಾಸ್ಟ್ ಗರ್ಲ್ಸ್"ನ ಚಿತ್ರ
‘ಅತ್ಯುತ್ತಮ ಚೊಚ್ಚಲ ಫೀಚರ್ ಡೈರೆಕ್ಟರ್’ ಪ್ರಶಸ್ತಿಯ ಸ್ಪರ್ಧೆಯಲ್ಲಿ ಮೆಕ್ಸಿಕೋ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ, ಐಲ್ಯಾಂಡ್ ಆಫ್ ಲಾಸ್ಟ್ ಗರ್ಲ್ಸ್ ಸಹ-ನಿರ್ಮಾಣ ಮಾಡಿದ ಚಲನಚಿತ್ರ. ಆನ್-ಮೇರಿ ಸ್ಮಿತ್ ಮತ್ತು ಬ್ರಿಯಾನ್ ಸ್ಮಿತ್ ನಿರ್ದೇಶಿಸಿದ ಈ ಚಿತ್ರವು ಸಮುದ್ರದ ಗುಹೆಯಲ್ಲಿ ಸಿಕ್ಕಿಬಿದ್ದ ಮೂವರು ಸಹೋದರಿಯರ ರೋಮಾಂಚಕ ಕಥೆಯಾಗಿದ್ದು, ದೈತ್ಯಾಕಾರದ ಅಲೆಗಳು ಮತ್ತು ಅಲೌಕಿಕ ಜೀವಿಗಳೊಂದಿಗೆ ಹೋರಾಡುತ್ತದೆ. ಈ ಚಲನಚಿತ್ರವನ್ನು ಮಾಸ್ಕೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮತ್ತು ಫ್ಯಾಂಟಸಿಯಾ ಉತ್ಸವದಲ್ಲಿ ಪ್ರದರ್ಶಿಸಲಾಯಿತು.
ಫೆಸ್ಟಿವಲ್ ಕೆಲಿಡೋಸ್ಕೋಪ್ ವಿಭಾಗದ ಅಡಿಯಲ್ಲಿ ಮೆಕ್ಸಿಕೋ ಮತ್ತು ಅರ್ಜೆಂಟೀನಾ ನಡುವಿನ ಸಹ-ನಿರ್ಮಾಣವಾದ ಮಾಂಟೊ ಡಿ ಗೆಮಾಸ್ (ರೋಬ್ ಆಫ್ ಜೆಮ್ಸ್) ಅನ್ನು ಪ್ರದರ್ಶಿಸಲಾಯಿತು. ಈ ಚಲನಚಿತ್ರವು ಗ್ರಾಮೀಣ ಮೆಕ್ಸಿಕೋದಲ್ಲಿ ನಡೆಯಲಿದ್ದು, ಅಲ್ಲಿ ವಿವಿಧ ಸಾಮಾಜಿಕ ವರ್ಗಗಳ ಮೂವರು ಮಹಿಳೆಯರು ಸಂಘಟಿತ ಅಪರಾಧಕ್ಕೆ ಸಂಬಂಧಿಸಿ ಕಾಣೆಯಾದ ವ್ಯಕ್ತಿಯ ಪ್ರಕರಣದಲ್ಲಿ ದುರಂತದಲ್ಲಿ ತೊಡಗಿಸಿಕೊಂಡಿದ್ದಾರೆ. ಐಎಫ್ ಎಫ್ ಐ 53ರಲ್ಲಿ ತಮ್ಮ ಉಪಸ್ಥಿತಿಯನ್ನು ಗುರುತಿಸುವ ಮೆಕ್ಸಿಕನ್ ಮೂಲದ ಇತರ ಚಲನಚಿತ್ರಗಳೆಂದರೆ ಬ್ಲಾಂಕ್ವಿಟಾ, ಸೋಲ್ಸ್ ಜರ್ನಿ, ಈಮಿ, ಪಿನೋಚ್ಚಿಯೋ ಮತ್ತು ಹ್ಯೂಸೆರಾ.
*****
(Release ID: 1879429)
Visitor Counter : 147