ವಾರ್ತಾ ಮತ್ತು ಪ್ರಸಾರ ಸಚಿವಾಲಯ
iffi banner

ಬೆದರಿಕೆ, ರ‍್ಯಾಗಿಂಗ್ ವಿರುದ್ಧ ಸಿಡಿದೆದ್ದು ನಿಂತ 'ಕ್ಲಿಂಟನ್' 53ನೇ ಐಎಫ್ಎಫ್ಐಯಲ್ಲಿ ಪ್ರೇಕ್ಷಕರ ಬಹುಪರಾಕ್ 


''ಮಕ್ಕಳ ಚಲನಚಿತ್ರಗಳನ್ನು ವಯಸ್ಕರು ವೀಕ್ಷಿಸುವುದು ಮುಖ್ಯ'': 'ಕ್ಲಿಂಟನ್' ನಿರ್ದೇಶಕ ಪೃಥ್ವಿರಾಜ್ ದಾಸ್ ಗುಪ್ತ

ನವೆಂಬರ್ 27, ಪಿಐಬಿ ಮುಂಬೈ

''ಚಿಕ್ಕವನಿದ್ದಾಗ ನನ್ನನ್ನು ಬೋರ್ಡಿಂಗ್ ಶಾಲೆಗೆ ಕಳುಹಿಸಿದ್ದಕ್ಕೆ ಪೋಷಕರ ಮೇಲೆ ಸಿಟ್ಟಾಗಿದ್ದೆ, ಇಂದು ನನಗೆ ಅದರಿಂದ ಸಿನಿಮಾ ಮಾಡಲು ಸಹಾಯವಾಗಿದ್ದು ನನ್ನ ಪೋಷಕರಿಗೆ ಆಭಾರಿಯಾಗಿದ್ದೇನೆ'' ಎನ್ನುತ್ತಾರೆ ನಿರ್ದೇಶಕ ಪೃಥ್ವಿರಾಜ್ ದಾಸ್ ಗುಪ್ತ. ಗೋವಾದಲ್ಲಿ ನಡೆಯುತ್ತಿರುವ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) 'ಟೇಬಲ್ ಟಾಕ್' ಅಧಿವೇಶನದಲ್ಲಿ ಸಂವಾದ ನಡೆಸುವ ವೇಳೆ ಮಾತನಾಡುತ್ತಿದ್ದರು. ಪೃಥ್ವಿರಾಜ್ ದಾಸ್ ಗುಪ್ತ ಅವರ 'ಕ್ಲಿಂಟನ್' ಚಿತ್ರಕ್ಕೆ ಪಶ್ಚಿಮ ಬಂಗಾಳದ ಕಲಿಂಪೊಂಗ್ ನಲ್ಲಿ ಬೋರ್ಡಿಂಗ್ ಶಾಲೆಯಲ್ಲಿ ಕಳೆದ ದಿನಗಳ ಸ್ವಂತ ಅನುಭವಗಳೇ ಸ್ಫೂರ್ತಿಯಂತೆ.

10 ವರ್ಷದ ಬಾಲಕ ಕ್ಲಿಂಟನ್ ಶಾಲೆಯಲ್ಲಿ ರ‍್ಯಾಗಿಂಗ್ ವಿರುದ್ಧ ಹೇಗೆ ಧೈರ್ಯದಿಂದ ಹೋರಾಡುತ್ತಾನೆ, ಆ ಬಾಲಕನ ಕರುಣೆಯ ಮನಸ್ಸನ್ನು ಚಿತ್ರ ಅನಾವರಣಗೊಳಿಸುತ್ತಿದ್ದು, ಮಕ್ಕಳು ಜಗತ್ತನ್ನು ಹೇಗೆ ನೋಡುತ್ತಾರೆ ಮತ್ತು ಆಗುಹೋಗುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕಥೆಯನ್ನು ಒಳಗೊಂಡಿದೆ. 53ನೇ ಐಎಫ್ಎಫ್ಐಯಲ್ಲಿ ಭಾರತೀಯ ಪನೋರಮಾ ವಿಭಾಗದಲ್ಲಿ ಪ್ರದರ್ಶನಗೊಂಡ ಇಂಗ್ಲಿಷ್ ಭಾಷೆಯ ಚಿತ್ರವಾಗಿದೆ.

 


 

''ಇದು ನನ್ನ ವಾಸ್ತವ ಬದುಕಿನ ಅನುಭವವಾಗಿದ್ದರಿಂದ ನಾನು ಮಾತ್ರ ಈ ಕಥೆಯನ್ನು ಹೇಳಲು ಸಾಧ್ಯವಾಗಿತ್ತು, ಮತ್ತು ಈ ಕಥೆಗೆ ಒಂದು ನೈಜತೆಯನ್ನು ತರಲು ಸಾಧ್ಯವಾಯಿತು ಎನ್ನುವ ನಿರ್ದೇಶಕ ಪೃಥ್ವಿರಾಜ್ ದಾಸ್ ಗುಪ್ತ ಅವರ ಎರಡನೇ ಚಿತ್ರ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅವರ ಮೊದಲ ಚಿತ್ರ ಐಎಫ್ಎಫ್ಐಯ ಮೊದಲ ಆವೃತ್ತಿಯಲ್ಲಿ ಪ್ರದರ್ಶನಗೊಂಡಿತ್ತು.

ಕ್ಲಿಂಟನ್ ಚಿತ್ರವು ಶಾಲೆಗಳಲ್ಲಿ ಮಕ್ಕಳಿಗೆ ಮಾತ್ರವಲ್ಲದೆ ವಯಸ್ಕರು ಸಹ ಬೇರೆ ಕಡೆಗಳಲ್ಲಿ ಪ್ರದರ್ಶನಗೊಳ್ಳಬೇಕಾದ ಮತ್ತು ನೋಡಬಹುದಾದ ಚಿತ್ರವಾಗಿದೆ ಎನ್ನುತ್ತಾರೆ ಪೃಥ್ವಿರಾಜ್ ದಾಸ್ ಗುಪ್ತ. ವಯಸ್ಕರು ಈ ಚಿತ್ರವನ್ನು ಮತ್ತು ಇತರ ಮಕ್ಕಳ ಚಲನಚಿತ್ರಗಳನ್ನು ನೋಡುವುದು ಮುಖ್ಯ, ಏಕೆಂದರೆ ಮಕ್ಕಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯ. "ಸಾಮಾನ್ಯವಾಗಿ ವಯಸ್ಕರು ಮಕ್ಕಳ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸಣ್ಣಪುಟ್ಟ ವಿಷಯಗಳು ಮಕ್ಕಳಿಗೆ ಎಷ್ಟು ಮುಖ್ಯವಾಗುತ್ತದೆಂದು ದೊಡ್ಡವರಿಗೆ ಅನೇಕ ಸಂದರ್ಭಗಳಲ್ಲಿ ಅರ್ಥವಾಗುವುದಿಲ್ಲ ಮತ್ತು ಪರಿಣಾಮಗಳನ್ನು ಮಕ್ಕಳ ಮೇಲೆಯೇ ಬಿಟ್ಟುಬಿಡುತ್ತಾರೆ ಎಂದು ನಿರ್ದೇಶಕರು ಹೇಳುತ್ತಾರೆ. ಕ್ಲಿಂಟನ್ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್ ಮಕ್ಕಳ ಮುಗ್ಧತೆಯನ್ನು ಪರದೆಯ ಮೇಲೆ ಸೆರೆಹಿಡಿಯಲು ಆಶಿಸಿದ್ದಾರೆ ಜೊತೆಗೆ ಕಾಲಿಂಪಾಂಗ್‌ನಲ್ಲಿ ಕಳೆದ ಬಾಲ್ಯ ಜೀವನವನ್ನು ಸಹ ನೆನಪಿಸಿಕೊಂಡಿದ್ದಾರೆ.

*****

iffi reel

(Release ID: 1879425) Visitor Counter : 166