ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಫೋಟೋ ಜರ್ನಲಿಸ್ಟ್ ಗಳು ಒಂದೇ ದಿನದಲ್ಲಿ ಅನೇಕ ಜಗತ್ತಿನ ಅನುಭವ ಪಡೆಯುತ್ತಾರೆ.  



ಇಂದಿನ ಸಂವೇದನಾಶೀಲ ಜಗತ್ತಿನಲ್ಲಿ ಯಾವುದೇ ವಿಶೇಷ ಸುದ್ದಿ ಎಂಬುದಿಲ್ಲ - ವಿಕ್ರಮ್ ಪಟವರ್ಧನ್, ನಿರ್ದೇಶಕ

Posted On: 26 NOV 2022 5:16PM by PIB Bengaluru

" ಎಲ್ಲವನ್ನೂ ಸೆನ್ಸೇಶನಲ್ (ಪ್ರಚೋದನಕಾರಿಯನ್ನಾಗಿ)  ಮಾಡುವ ಇಂದಿನ ಜಗತ್ತಿನಲ್ಲಿ ಯಾವುದೇ ವಿಶೇಷ ಸುದ್ದಿ ಎಂಬುದು ಇಲ್ಲ" ಎಂದು ಫ್ರೇಮ್ ಚಿತ್ರದ ನಿರ್ದೇಶಕ ವಿಕ್ರಮ್ ಪಟವರ್ಧನ್ ಹೇಳಿದರು. ಛಾಯಾಚಿತ್ರ ತಯಾರಿಕೆಯಲ್ಲಿ ತಂತ್ರಜ್ಞಾನದ ಅಳವಡಿಕೆಯೊಂದಿಗೆ, ಒಂದು ವೃತ್ತಿಯಾಗಿ ಫೋಟೋ ಜರ್ನಲಿಸಂ ಇತ್ತೀಚಿನ ದಿನಗಳಲ್ಲಿ ಮಾದರಿ ಬದಲಾವಣೆಯನ್ನು ಹೊಂದಿದೆ ಎಂದು ಅವರು ಹೇಳಿದರು.

ಗೋವಾದಲ್ಲಿ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ನೇಪಥ್ಯದಲ್ಲಿ ಪಿಐಬಿ ಆಯೋಜಿಸಿರುವ 'ಟೇಬಲ್ ಟಾಕ್ಸ್' ಅಧಿವೇಶನವೊಂದರಲ್ಲಿ  ಮಾಧ್ಯಮ ಮತ್ತು ಉತ್ಸವದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ವಿಕ್ರಮ್ ಪಟವರ್ಧನ್, ಫ್ರೇಮ್ ಎಂಬುದು ಫೋಟೋ ಜರ್ನಲಿಸ್ಟ್ ಒಬ್ಬರ ಜೀವನದ ಬಗ್ಗೆ ಹೇಳುತ್ತದೆ, ಅದು ಫೋಟೋ ಜರ್ನಲಿಸ್ಟ್ ನ ಧರ್ಮವು ಒಂದು ಘಟನೆಯನ್ನು ವಿರೂಪಗೊಳಿಸದೆ,  ಯಥಾವತ್ತಾಗಿ ಜನರಿಗೆ ವರದಿ ಮಾಡುವುದು ಎಂಬ ಕಲ್ಪನೆಯನ್ನು ನಂಬಿರುವ ಫೋಟೋ ಜರ್ನಲಿಸ್ಟ್ ನ ಜೀವನವನ್ನು ಕುರಿತಾಗಿದೆ ಎಂದು ಹೇಳಿದರು. 

ತಮ್ಮ ಕೆಲಸದ ಅನುಭವದ ಹಿನ್ನೆಲೆಯಲ್ಲಿ ಫೋಟೋ ಜರ್ನಲಿಸ್ಟ್ ಜೀವನದ ಬಗ್ಗೆ ವಿವರಿಸಿದ ಅವರು, "ಫೋಟೋ ಜರ್ನಲಿಸ್ಟ್ ಗಳು ಒಂದೇ ದಿನದಲ್ಲಿ ಅನೇಕ ವಿಭಿನ್ನ ಪ್ರಪಂಚಗಳಲ್ಲಿ ಬದುಕುತ್ತಾರೆ ಮತ್ತು ಅವರು ಅಕ್ಷರಶಃ ಪ್ರತಿದಿನ ವಿವಿಧ ರೀತಿಯ ಅನುಭವಗಳಿಗೆ ಒಳಗಾಗುತ್ತಾರೆ" ಎಂದು ಹೇಳಿದರು. ಫೋಟೋ ಜರ್ನಲಿಸ್ಟ್ ಗಳು ಎದುರಿಸುವ ಸವಾಲುಗಳನ್ನು ತಮ್ಮ ಸ್ವಂತ ಕೆಲಸದ ಅನುಭವವನ್ನು ಬಳಸಿಕೊಂಡು ಚಿತ್ರಿಸಲು ಬಯಸುತ್ತೇನೆ ಎಂದೂ ಅವರು ಹೇಳಿದರು.

ಈ ಚಿತ್ರದ ನಿರ್ಮಾಣ ಯಾನದ ಬಗ್ಗೆ ಮಾತನಾಡಿದ ವಿಕ್ರಮ್ ಪಟವರ್ಧನ್, ತಂಡದ ಕೆಲಸವು ಅತ್ಯುತ್ತಮವಾಗಿತ್ತು, ಇದು ಫ್ರೇಮ್ ನ ಪ್ರಯಾಣವನ್ನು ಬಿರುಗಾಳಿಯನ್ನಾಗಿಸಿತು ಎಂದು ಹೇಳಿದರು. ತಮ್ಮ ತಂಡವು ಪರಸ್ಪರ ಚೆನ್ನಾಗಿ ಬೆಸೆದುಕೊಂಡಿದ್ದರಿಂದ, ಇಡೀ ಚಲನಚಿತ್ರದ ಚಿತ್ರೀಕರಣವನ್ನು ಇಪ್ಪತ್ತು ದಿನಗಳಲ್ಲಿ ಮುಗಿಸಲು ಸಾಧ್ಯವಾಯಿತು  ಎಂದು ಅವರು ಹೇಳಿದರು.

ಈ ಚಲನಚಿತ್ರವು ಕಥಾನಾಯಕ, ಮಧ್ಯವಯಸ್ಕ ಫೋಟೋ ಜರ್ನಲಿಸ್ಟ್ ಚಂದು ಪನ್ಸಾರೆ (ಸಿಪಿ) ಅವರ ಸುತ್ತ ಸಾಗುತ್ತದೆ, ಅವರು 'ನಮ್ಮ ವೃತ್ತಿಯಂತೆ, ನಮ್ಮ ಜೀವನವೂ ಒಂದು ಕಲೆಯಾಗಿದೆ; ಮತ್ತು ಯಾವುದೇ ಕಲೆಗೆ ಯಾವುದೇ ಒಂದು ನಿರ್ದಿಷ್ಟ ಸ್ವರೂಪವಿಲ್ಲ' ಎಂದು ನಂಬಿದವರು. ಅವರ ವೃತ್ತಿಪರ ನೈತಿಕತೆ ಮತ್ತು ಸಮಾಜದ ನಿಟ್ಟಿನಲ್ಲಿ ಅವರ  ಕರ್ತವ್ಯವು ಪರಸ್ಪರ ಸಂಘರ್ಷಕ್ಕೆ ಒಳಗಾದಾಗ ಅವರ ನಂಬಿಕೆಗಳೂ ಸಂಘರ್ಷಕ್ಕೆ ಒಳಗಾಗುತ್ತವೆ. ಹೊಸದಾಗಿ ನೇಮಕಗೊಂಡ ಯುವ ಫೋಟೋ ಜರ್ನಲಿಸ್ಟ್ ಸಿದ್ಧಾರ್ಥ್ ದೇಶಮುಖ್ ಅವರಿಗೆ ಸಿಪಿ ಮಾರ್ಗದರ್ಶನ ಮಾಡುತ್ತಿರುತ್ತಾರೆ. ವೃತ್ತಿಪರ ನೈತಿಕತೆಯ ಬಗ್ಗೆ ಪರಸ್ಪರ ಭಿನ್ನಾಭಿಪ್ರಾಯ ಹೊಂದಿದ್ದಾರೆ.

ಚಲನಚಿತ್ರದ ಬಗ್ಗೆ
ನಿರ್ದೇಶನ: ವಿಕ್ರಮ್ ಪಟವರ್ಧನ್
ನಿರ್ಮಾಪಕ: ಝೀ ಸ್ಟುಡಿಯೋಸ್, ಅತ್ಪಾತ್
ಚಿತ್ರಕಥೆ: ವಿಕ್ರಮ್ ಪಟವರ್ಧನ್
ಛಾಯಾಗ್ರಹಣ: ಮಿಲಿಂದ್ ಜೋಗ್
ಸಂಪಾದಕರು: ಕುತುಬ್ ಇನಾಮದಾರ್
ತಾರಾಗಣ: ನಾಗರಾಜ್ ಮಂಜುಲೆ, ಅಮೆ ವಾಘ್, ಮುಗ್ಧಾ ಗೋಡ್ಸೆ, ಅಕ್ಷಯ ಗೌರವ್
2021 | ಮರಾಠಿ | ಕಲರ್ | 118 ನಿಮಿಷಗಳು.

ಸಾರಾಂಶ:
ಹೊಸದಾಗಿ ಸೇರ್ಪಡೆಗೊಂಡ ಇಪ್ಪತ್ಮೂರು ವರ್ಷದ ಕಿರಿಯ ಫೋಟೋ ಜರ್ನಲಿಸ್ಟ್ ಸಿದ್ಧಾರ್ಥ್ ದೇಶ್ ಮುಖ್ ಅವರಿಗೆ "ನಮ್ಮ ವೃತ್ತಿಯಂತೆಯೇ, ನಮ್ಮ ಜೀವನವೂ ಒಂದು ಕಲೆಯಾಗಿದೆ, ಮತ್ತು ಯಾವುದೇ ಕಲೆಗೆ ಒಂದು ಮಾದರಿ ಸ್ವರೂಪ ಎಂಬುದಿಲ್ಲ” ಎಂದು ನಲವತ್ತೈದು ವರ್ಷದ ಖ್ಯಾತ ಫೋಟೋ ಜರ್ನಲಿಸ್ಟ್ ಚಂದು ಪನ್ಸಾರೆ ಹೇಳುತ್ತಾರೆ. ಇಬ್ಬರೂ ಮಹಾರಾಷ್ಟ್ರದ ಪುಣೆಯಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಚಂದು ಅವರ ಸಲಹೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಇರುವಾಗ  ಅವರ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನಲ್ಲಿ  ಅನಿಶ್ಚಿತ ಘಟನೆಗಳ ಸರಪಳಿಯೇ ಸಂಭವಿಸುತ್ತದೆ. ಮತ್ತು ದಕ್ಷಿಣ ಮಹಾರಾಷ್ಟ್ರದಲ್ಲಿ ಘಟಿಸಿದ ಭೂಕಂಪವು ಅವರ ಜೀವನದ ಪಥವನ್ನು ಹೇಗೆ ಬದಲಾಯಿಸುತ್ತದೆ ಎಂಬುದು ನಂತರದ ಮಹತ್ವದ  ಸಂಗತಿಯಾಗಿದೆ.

ನಿರ್ದೇಶಕ: ವಿಕ್ರಮ್ ಪಟವರ್ಧನ್ ಮಹಾರಾಷ್ಟ್ರದ ಪುಣೆಯಲ್ಲಿ ಫೋಟೋ ಜರ್ನಲಿಸ್ಟ್ ಆಗಿದ್ದು, ಸಂಸ್ಕೃತಿಯಿಂದ ಹಿಡಿದು ಅಪರಾಧ, ರಾಜಕೀಯದಿಂದ ಕ್ರೀಡೆಯವರೆಗೆ ವಿವಿಧ ಪ್ರಕಾರಗಳನ್ನು ವರದಿ ಮಾಡಿದ್ದಾರೆ. ’ಫ್ರೇಮ್’ ಚಲನಚಿತ್ರ  ನಿರ್ದೇಶಕರಾಗಿ ಅವರ ಚೊಚ್ಚಲ ಚಿತ್ರವಾಗಿದೆ.
ನಿರ್ಮಾಪಕರು: ಝೀ ಸ್ಟುಡಿಯೋಸ್ ಎಂಬುದು 2012 ರಲ್ಲಿ ಸ್ಥಾಪನೆಯಾದ,  ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಣ ಮತ್ತು ವಿತರಣಾ ಸ್ಟುಡಿಯೋ ಆಗಿದ್ದು, ಚಲನಚಿತ್ರ ನಿರ್ಮಾಣ, ವಿತರಣೆ, ಅಂತರರಾಷ್ಟ್ರೀಯ ವಿತರಣೆ, ಪ್ರಚಾರ, ಜಾಹೀರಾತು ಮತ್ತು ಆದಾಯವನ್ನು ತರುವ ಯೋಜನೆಗಳನ್ನು  ಹೊಂದಿರುವ ಸಂಸ್ಥೆಯಾಗಿದೆ. 

*****



(Release ID: 1879301) Visitor Counter : 124