ಸಂಸ್ಕೃತಿ ಸಚಿವಾಲಯ

2019,2020 ಮತ್ತು 2021ನೇ ಸಾಲಿನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಭಾರತದ 102 ಕಲಾವಿದರನ್ನು ಆಯ್ಕೆ ಮಾಡಿದ ಸಂಗೀತ ನಾಟಕ ಅಕಾಡೆಮಿ

Posted On: 25 NOV 2022 6:23PM by PIB Bengaluru


* 40 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಲಾವಿದರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಲಾಗುತ್ತದೆ. 

* ದೇಶದ ಈಶಾನ್ಯ ರಾಜ್ಯಗಳಿಗೆ ಸಹ ಸಮರ್ಪಕ ಪ್ರಾತಿನಿಧ್ಯ ನೀಡಲಾಗಿದ್ದು ಇಲ್ಲಿನ 19 ಕಲಾವಿದರಿಗೆ ಪುರಸ್ಕಾರ ಸಿಗಲಿದೆ.

ಸಂಗೀತ ನಾಟಕ ಅಕಾಡೆಮಿ, ಸಂಗೀತ, ನೃತ್ಯ ಮತ್ತು ನಾಟಕಗಳ ರಾಷ್ಟ್ರೀಯ ಅಕಾಡೆಮಿಯಾಗಿದ್ದು,ಅದು ಕಳೆದ ನವೆಂಬರ್ 6ರಿಂದ 8ರವರೆಗೆ ನವದೆಹಲಿಯಲ್ಲಿ ನಡೆದ ತನ್ನ ಸಾಮಾನ್ಯ ಮಂಡಳಿ ಸಭೆಯಲ್ಲಿ, ಪ್ರದರ್ಶನ ಕಲೆಗಳಲ್ಲಿ ತಮ್ಮದೇ ಆದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಯುವ ಪ್ರತಿಭೆಗಳನ್ನು ಗುರುತಿಸಿ ಭಾರತದ 102 (ಮೂರು ಜಂಟಿ ಪ್ರಶಸ್ತಿಗಳನ್ನು ಒಳಗೊಂಡಂತೆ) ಕಲಾವಿದರನ್ನು ಆಯ್ಕೆ ಮಾಡಿದೆ. 2019, 2020 ಮತ್ತು 2021 ರ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕಾಗಿ ಈ ಯುವ ಕಲಾವಿದರನ್ನು ಆಯ್ಕೆ ಮಾಡಲಾಗಿದೆ. 

40 ವರ್ಷಕ್ಕಿಂತ ಕೆಳಗಿನ ಕಲಾವಿದರಿಗೆ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಪ್ರದರ್ಶನ ಕಲೆಯ ವೈವಿಧ್ಯಮಯ ಕ್ಷೇತ್ರಗಳಲ್ಲಿ ಅತ್ಯುತ್ತಮ ಯುವ ಪ್ರತಿಭೆಗಳನ್ನು ಗುರುತಿಸುವ ಮತ್ತು ಪ್ರೋತ್ಸಾಹಿಸುವ ಉದ್ದೇಶದಿಂದ ಇದನ್ನು ಪರಿಚಯಿಸಲಾಯಿತು. ಈ ಮೂಲಕ ಯುವ ಕಲಾವಿದರ ಜೀವನದ ಆರಂಭದಲ್ಲಿ ಅವರಿಗೆ ರಾಷ್ಟ್ರೀಯ ಮನ್ನಣೆಯನ್ನು ನೀಡುವ ಮೂಲಕ ಅವರು ಆಯ್ಕೆ ಮಾಡಿದ ಕ್ಷೇತ್ರಗಳಲ್ಲಿ ಹೆಚ್ಚಿನ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡಲು ಪ್ರೋತ್ಸಾಹ ಸಿಕ್ಕಿದಂತಾಗುತ್ತದೆ.

ಯುವ ಕಲಾವಿದರು ಗಾಯನ ಸಂಗೀತ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡೂ ಪ್ರಕಾರಗಳಲ್ಲಿ, ವಾದ್ಯಸಂಗೀತ ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ, ಕೊಳಲು, ಸಿತಾರ್ ಮತ್ತು ಮೃದಂಗ ಮತ್ತು ಸಂಗೀತದ ಇತರ ಪ್ರಮುಖ ಸಾಂಪ್ರದಾಯಿಕ ಕಲೆಗಳ ಸಂಪೂರ್ಣ ಶ್ರೇಣಿಯನ್ನು ಒಳಗೊಂಡಿದೆ.

ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ನಾಗಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾ ರಾಜ್ಯಗಳ 19 ಕಲಾವಿದರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಈಶಾನ್ಯ ರಾಜ್ಯಗಳ ಕಲಾವಿದರಿಗೂ ಸರಿಯಾದ ಪ್ರಾತಿನಿಧ್ಯ ನೀಡಲಾಗಿದೆ.

ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರವು 25,000 ರೂಪಾಯಿ ನಗದನ್ನು ಒಳಗೊಂಡಿರುತ್ತದೆ. ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರು ವಿಶೇಷ ಸಮಾರಂಭದಲ್ಲಿ ಯುವ ಪುರಸ್ಕಾರವನ್ನು ಪ್ರದಾನ ಮಾಡಲಿದ್ದಾರೆ.

Click here for complete details of awardees

******



(Release ID: 1878988) Visitor Counter : 104