ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಮಹಿಳೆಯರು ಸಶಕ್ತರು ಎನ್ನುವ ಈ ಸಮಾಜದಲ್ಲಿ ಮಹಿಳೆಯರು ನಿಜವಾಗಿಯೂ ಸುರಕ್ಷಿತರಾಗಿದ್ದಾರೆಯೇ? ಎಂದು 'ನಾನು ಕುಸುಮ' ಎಂಬ ಚಲನಚಿತ್ರ ಪ್ರಪ್ರಶ್ನಿಸುತ್ತದೆ


ಕಠಿಣ ಕಾನೂನುಗಳನ್ನು ಜಾರಿಗೆ ತಂದ ನಂತರವೂ ಮಹಿಳೆಯರಿಗೆ ನ್ಯಾಯ ಒದಗಿಸದ ನಮ್ಮ ಈ ಪಿತೃಪ್ರಧಾನ ಸಮಾಜದ ವಾಸ್ತವತೆಯನ್ನು 'ನಾನು ಕುಸುಮ' ಪ್ರತಿಬಿಂಬಿಸುತ್ತದೆ: ನಿರ್ದೇಶಕ ಕೃಷ್ಣೇಗೌಡ

Posted On: 22 NOV 2022 8:16PM by PIB Bengaluru

#ಐಎಫ್ಎಫ್ಐವುಡ್, 22 ನವೆಂಬರ್ 2022

ನಾವು ಒಂದು ಸಮಾಜವನ್ನು ಸಶಕ್ತ ಮಹಿಳಾ ಸಮಾಜ ಎಂದು ವರ್ಣಿಸಿದರೆ, ಮಹಿಳೆಯರು ತಮಗರಿಯದ ಎಲ್ಲ ಅಪಾಯಗಳಿಂದ ಸುರಕ್ಷಿತರಾಗಿದ್ದಾರೆ ಎಂದು ನಿಜವಾಗಿಯೂ ಅದರ ಅರ್ಥವೇ? ಮೂಲತಃ ಇದು ನಿಜವಾಗಿಯೂ ಜಾರಿಗೆ ಬಂದಿದೆಯೇ? ಸುರಕ್ಷತೆ ಮತ್ತು ಭದ್ರತೆಯನ್ನು ಬೋಧಿಸುವ ಮಹಾತ್ಮಾ ಗಾಂಧೀಜಿಯವರ ರಾಮರಾಜ್ಯದ ಪರಿಕಲ್ಪನೆಯ ಕನಸನ್ನು ನಾವು ನಿಜವಾಗಿಯೂ ಸಾಧಿಸಿದ್ದೇವೆಯೇ? ಕನ್ನಡದ 'ನಾನು ಕುಸುಮ' ಎಂಬ ಚಲನಚಿತ್ರವು ಇಂತಹ ಹಲವಾರು ಚಿಂತನಾ ಪ್ರಚೋದಕ ಪ್ರಶ್ನೆಗಳಿಗೆ ನಾಂದಿ ಹಾಡುತ್ತದೆ. 

ಐಎಫ್ಎಫ್ಐ 53ರ ಸಂದರ್ಭದಲ್ಲಿ ಪಿಐಬಿ ಆಯೋಜಿಸಿದ್ದ 'ಟೇಬಲ್ ಟಾಕ್' ಗೋಷ್ಠಿಯಲ್ಲಿ ಮಾಧ್ಯಮ ಮತ್ತು ಉತ್ಸವದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ನಿರ್ದೇಶಕ ಕೃಷ್ಣೇಗೌಡ, 'ನಾನು ಕುಸುಮ' ಚಲನಚಿತ್ರವು ಕಠಿಣ ಕಾನೂನುಗಳನ್ನು ಜಾರಿಗೆ ತಂದ ನಂತರವೂ ಮಹಿಳೆಯರಿಗೆ ನ್ಯಾಯ ಒದಗಿಸದ ನಮ್ಮ ಈ ಪಿತೃಪ್ರಧಾನ ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
 
ಈ ಚಿತ್ರವು ಕನ್ನಡದ ಲೇಖಕ ಡಾ.ಬೆಸಗರಹಳ್ಳಿ ರಾಮಣ್ಣ ಅವರು ಬರೆದ ಸಣ್ಣ ಕಥೆಯನ್ನು ಆಧರಿಸಿದೆ. ಅವರು ನಿಜ ಜೀವನದ ಘಟನೆಯ ಎಳೆಗಳನ್ನು ಹೆಕ್ಕಿ ಪುಸ್ತಕವನ್ನು ಬರೆದಿದ್ದಾರೆ. "ಮಹಿಳಾ ಸಬಲೀಕರಣ ಮತ್ತು ಮಹಿಳಾ ಸುರಕ್ಷತೆ ಈ ಚಿತ್ರದ ತಿರುಳಾಗಿದೆ. ಸಮಾಜಕ್ಕೆ ಸಂದೇಶವನ್ನು ರವಾನಿಸುವ ವಿಷಯಗಳ ಬಗ್ಗೆ ಚಲನಚಿತ್ರಗಳನ್ನು ಮಾಡುವುದರ ಬಗ್ಗೆ ನನ್ನ ಒಲವು" ಎಂದು ನಿರ್ದೇಶಕರು ಹೇಳಿದರು.

'ನಾನು ಕುಸುಮ' ಚಲನಚಿತ್ರ, ತನ್ನ ಮಗಳ ಬಗ್ಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಹೊಂದಿರುವ, ಪ್ರೀತಿ ಮತ್ತು ಕಾಳಜಿಯುಳ್ಳ ತಂದೆಯ ಮಗಳು, ಕುಸುಮಾಳ ಕಥೆಯಾಗಿದೆ. ಆದರೆ ವಿಧಿ ಅವಳ ಬಗ್ಗೆ ಬೇರೆಯೇ ಯೋಜನೆಗಳನ್ನು ಹೊಂದಿದ್ದು, ಅವಳ ತಂದೆ ಅಪಘಾತದಲ್ಲಿ ಮರಣಿಸಿದ ನಂತರ, ಅವಳ ಜೀವನ ಅಸ್ತವ್ಯಸ್ತಗೊಳ್ಳುತ್ತದೆ. ವೈದ್ಯೆಯಾಗಲು ಬಯಸಿದ್ದ ಕುಸುಮಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ವೈದ್ಯಕೀಯ ಶಾಲೆಯಿಂದ ಹೊರಗುಳಿಯಬೇಕಾದುತ್ತದೆ. ಅವಳು ಪರಿಹಾರದ ಆಧಾರದ ಮೇಲೆ ತನ್ನ ತಂದೆಯ ಸರ್ಕಾರಿ ಕೆಲಸವನ್ನು ಪಡೆಯುತ್ತಾಳೆ. ಆದರೆ ಕುಸುಮಾ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಅವಳ ಜೀವನ ನಾಟಕೀಯ ತಿರುವು ಪಡೆಯುತ್ತದೆ.
 
ಕುಸುಮಾಳನ್ನು ಚಿತ್ರಿಸುವುದು ಎಷ್ಟು ಸವಾಲಿನ ಕೆಲಸ ಎಂದು ಹಂಚಿಕೊಂಡ ನಟಿ ಗ್ರೀಷ್ಮಾ ಶ್ರೀಧರ್, ಈ ಪ್ರಕ್ರಿಯೆಯು ನಿರಂತರವಾಗಿ ಅದೇ ಮನಸ್ಥಿತಿಯಲ್ಲಿರಲು ಗೊಂದಲ, ಆತಂಕ ಮತ್ತು ಆಯಾಸವನ್ನುಂಟುಮಾಡಿದೆ ಎಂದು ತಿಳಿಸಿದರು. "ಇದು ಯಾವುದೇ ತಪ್ಪು ಮಾಡದೆ, ಸಮಸ್ಯೆಗಳಿಗೆ ಸಿಲುಕಿ, ನಿರಂತರವಾಗಿ ಮೂಲೆಗುಂಪಾಗುವ ಮಹಿಳೆಯರ ಕಥೆಯಾಗಿದೆ."  "ಈ ನಿರ್ದಿಷ್ಟ ವಿಷಯದ ಬಗ್ಗೆ ದೊರಕುವ ಪ್ರಕರಣಗಳಿಗೆ ಕೊರತೆಯಿಲ್ಲ ಎಂದು ಹೇಳಲು ನನಗೆ ತುಂಬಾ ಯಾತನೆಯಾಗುತ್ತದೆ. ಈ ಪಾತ್ರವನ್ನು ನಿಭಾಯಿಸಲು ಹೆಚ್ಚು ಕಷ್ಟಕರವಾಗಿದೆ" ಎಂದು ಹೇಳಿದರು.
 
ಈ ಚಲನಚಿತ್ರವನ್ನು ಇಂಡಿಯನ್ ಪನೋರಮಾ ಫೀಚರ್ ಫಿಲ್ಮ್ಸ್ ವಿಭಾಗದಲ್ಲಿ ಪ್ರದರ್ಶಿಸಲಾಯಿತು. ಯುನೆಸ್ಕೋದ ಆದರ್ಶಗಳನ್ನು ಪ್ರತಿಬಿಂಬಿಸುವ ಅಂತರರಾಷ್ಟ್ರೀಯ ಮತ್ತು ಭಾರತೀಯ ಕಾಲ್ಪನಿಕ ಚಲನಚಿತ್ರಗಳ ಐಎಫ್ಎಫ್ಐನಲ್ಲಿ ಇತರ 8 ಚಲನಚಿತ್ರಗಳೊಂದಿಗೆ ಐಸಿಎಫ್ ಟಿ - ಯುನೆಸ್ಕೋ ಗಾಂಧಿ ಪದಕಕ್ಕಾಗಿ ಇದು ಸ್ಪರ್ಧಿಸುತ್ತಿದೆ.

ಚಲನಚಿತ್ರದ ಬಗ್ಗೆ:
ನಿರ್ದೇಶನ: ಕೃಷ್ಣೇಗೌಡ
 ನಿರ್ಮಾಪಕರು: ಕೃಷ್ಣೇಗೌಡ
 ಚಿತ್ರಕಥೆ: ಕೃಷ್ಣೇಗೌಡ ಎಲ್ಡಾಸ್, ಡಾ.ಬೆಸಗರಹಳ್ಳಿ ರಾಮಣ್ಣನವರು
 ಛಾಯಾಗ್ರಹಣ: ಅರ್ಜುನ್ ರಾಜ
 ಸಂಪಾದಕರು: ಶಿವಕುಮಾರ್ ಸ್ವಾಮಿ
 ತಾರಾಗಣ: ಗ್ರೀಷ್ಮಾ ಶ್ರೀಧರ್, ಸನಾತನಿ, ಕೃಷ್ಣೇಗೌಡ, ಕಾವೇರಿ ಶ್ರೀಧರ್, ಸೌಮ್ಯ ಭಾಗವತ್, ವಿಜಯ್
 2022 | ಕನ್ನಡ | ಕಲರ್ | 105 ನಿಮಿಷಗಳು.
ಸಾರಾಂಶ: ಕುಸುಮಾ ಸುಸಂಸ್ಕೃತ, ಕಾಳಜಿಯುಕ್ತ ತಂದೆಯ ಮಗಳು. ಅವಳು ಆಸ್ಪತ್ರೆಯಲ್ಲಿ ಮೋರ್ಟಿಷಿಯನ್ ಆಗಿ ಕೆಲಸ ನಿರ್ವಹಿಸುತ್ತಾಳೆ. ಕುಸುಮಾ ವೈದ್ಯೆಯಾಗಬೇಕೆಂದು ಅವಳ ತಂದೆ ಬಯಸುತ್ತಾನೆ, ಆದರೆ ಆತನು ಅಪಘಾತಕ್ಕೆ ಒಳಗಾಗಿ ಸಾಯುತ್ತಾನೆ. ಅವನ ದೇಹವು ಅದೇ ಶವಾಗಾರದಲ್ಲಿ ಅದೇ ಕಾರ್ಯವಿಧಾನಕ್ಕೆ ಒಳಗಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕುಸುಮಾ ವೈದ್ಯಕೀಯ ಶಾಲೆಯನ್ನು ತ್ಯಜಿಸಿ ನರ್ಸ್ ಆಗಲು ನಿರ್ಧರಿಸುತ್ತಾಳೆ. ತನ್ನ ತಂದೆಯ ಪರಿಹಾರದ ಆಧಾರದ ಮೇಲೆ ಅವಳು ಸರ್ಕಾರಿ ಕೆಲಸವನ್ನು ಪಡೆಯುತ್ತಾಳೆ. ಆದರೆ ಕುಸುಮಾ ಅತ್ಯಾಚಾರಕ್ಕೊಳಗಾದಾಗ ಅವಳ ಜೀವನವು ನಾಟಕೀಯ ತಿರುವು ಪಡೆಯುತ್ತದೆ.
 
ನಿರ್ದೇಶಕ ಮತ್ತು ನಿರ್ಮಾಪಕ: ಕೃಷ್ಣೇಗೌಡ ಕನ್ನಡ ಚಿತ್ರರಂಗದಲ್ಲಿ ನಟ, ನಿರ್ಮಾಪಕ, ನಿರ್ದೇಶಕರಾಗಿದ್ದಾರೆ. ಮೂರು ದಶಕಗಳಲ್ಲಿ, ಅವರು ಅನೇಕ ಚಲನಚಿತ್ರಗಳಲ್ಲಿ ನಟಿಸಿ, 15 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ.
 

*****



(Release ID: 1878235) Visitor Counter : 579


Read this release in: English , Urdu , Hindi , Tamil