ವಾರ್ತಾ ಮತ್ತು ಪ್ರಸಾರ ಸಚಿವಾಲಯ

​​​​​​​'ನಾಳೆಯ 75 ಸೃಜನಶೀಲ ಮನಸ್ಸು’ಗಳಿಗಾಗಿ ’53 ಗಂಟೆಗಳ ಸವಾಲು’ ಉಪಕ್ರಮವನ್ನು ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು ಉದ್ಘಾಟಿಸಿದರು


​​​​​​​ಭಾರತ@100 ಕಲ್ಪನೆಯ ಮೇಲೆ ಕಿರುಚಿತ್ರಗಳನ್ನು ನಿರ್ಮಿಸುವ ಮೂಲಕ “75 ಸೃಜನಶೀಲ ಮನಸ್ಸು” ಉಪಕ್ರಮದ ವಿಜೇತರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ

Posted On: 21 NOV 2022 4:11PM by PIB Bengaluru

'ನಾಳೆಯ 75 ಸೃಜನಶೀಲ ಮನಸ್ಸುಗಳು’  ಎಂಬ ಉಪಕ್ರಮದ ವಿಜೇತರಿಗಾಗಿ  “53 ಗಂಟೆಗಳ ಸವಾಲು”  ಅನ್ನು ಉದ್ಘಾಟಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು, "ಯುವಜನರಿಗೆ ಕಲಿಯಲು ಮತ್ತು ಬೆಳೆಯಲು ಅವಕಾಶವನ್ನು ನೀಡಬೇಕು ಎಂಬ ಪ್ರಧಾನಮಂತ್ರಿಯ ದೃಷ್ಟಿಕೋನಕ್ಕೆ ಅನುಗುಣವಾಗಿ “ನಾಳೆಯ 75 ಸೃಜನಶೀಲ ಮನಸ್ಸುಗಳು“ ಎಂಬ ವಿನೂತನ ನೂತನ ಉಪಕ್ರಮವನ್ನು ರೂಪಿಸಲಾಗಿದೆ" ಎಂದು ಹೇಳಿದರು. “ಶಾರ್ಟ್ಸ್ ಟಿವಿಯ “53 ಗಂಟೆಗಳ ಸವಾಲು” ಎಂಬುದು ಸೃಜನಶೀಲ ಮನಸ್ಸುಗಳಿಗೆ ಕಡಿಮೆ ಸಮಯದಲ್ಲಿ ತಮ್ಮ ಸೃಜನಶೀಲತೆಯನ್ನು ತೋರಿಸಲು ಒಂದು ಅವಕಾಶವಾಗಿದೆ”  ಎಂದು ಕೇಂದ್ರ ಸಚಿವರು ಹೇಳಿದರು.

'ನಾಳೆಯ 75 ಸೃಜನಶೀಲ ಮನಸ್ಸುಗಳು’ ಉಪಕ್ರಮದ ವಿಜೇತರಿಗಾಗಿ “53 ಗಂಟೆಗಳ ಸವಾಲು”ಗಳನ್ನು ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಉದ್ಘಾಟಿಸಿದರು.

'ನಾಳೆಯ 75 ಸೃಜನಶೀಲ ಮನಸ್ಸುಗಳು’ ಉಪಕ್ರಮದ ವಿಜೇತರಿಗಾಗಿ “53 ಗಂಟೆಗಳ ಸವಾಲು”ಗಳ ಉದ್ಘಾಟನಾ ಸಮಾರಂಭದಲ್ಲಿ  ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಭಾಷಣ ಮಾಡಿದರು.

53 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐ.ಎಫ್.ಎಫ್.ಐ.) ಜೊತೆಗೆ ಆಯೋಜಿಸಿದ '53-ಗಂಟೆಗಳ ಚಾಲೆಂಜ್' ಅನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಉದ್ಘಾಟಿಸಿದರು. ತಮ್ಮ ಕಲ್ಪನೆಯ ಭಾರತ@100 ಕುರಿತು 53 ಗಂಟೆಗಳ ಅವಧಿಯಲ್ಲಿ ಕಿರುಚಿತ್ರವನ್ನು ನಿರ್ಮಿಸಲು 75 'ಸೃಜನಶೀಲ ಮನಸ್ಸು’ಗಳಿಗೆ ಈ ಸ್ಪರ್ಧೆಯು ಸವಾಲು ಒದಗಿಸುತ್ತದೆ. ಐ.ಎಫ್.ಎಫ್.ಐ.). ಐ.ಎಫ್.ಎಫ್.ಐ. 53 ಇದರ ಈ ವಿಭಾಗವು ಶಾರ್ಟ್ಸ್ ಟಿವಿ ಸಹಯೋಗದೊಂದಿಗೆ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದಿಂದ (ಎನ್.ಡಿ.ಎಫ್.ಸಿ) ನಡೆಸಲ್ಪಡುತ್ತದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ. ಎಲ್. ಮುರುಗನ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಸೇರಿದಂತೆ ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

1000 ಕ್ಕೂ ಅಧಿಕ ಅಪೇಕ್ಷಿತ ಅರ್ಜಿದಾರರಿಂದ ಆಯ್ಕೆಯಾಗಿರುವ ಪ್ರತಿಭಾನ್ವಿತ ‘75 ಸೃಜನಶೀಲ ಮನಸ್ಸು’ ಗಳನ್ನು ಅಭಿನಂದಿಸಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು “ನೀವು ನಿಮ್ಮ ಜೀವನದಲ್ಲಿ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೀರಿ, ನಮ್ಮ ಮಾಸ್ಟರ್‌ ಕ್ಲಾಸ್‌ಗಳು ನಿಮಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮನಸ್ಸುಗಳಿಂದ ಹೆಚ್ಚಿನ ಅವಕಾಶಗಳನ್ನು ಸೇರಿಸುತ್ತವೆ. 75 ಯುವಕರು ಸಂಪರ್ಕ ನೆಟ್‌ ವರ್ಕ್ ಮಾಡಲು, ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು, ಅತ್ಯುತ್ತಮವಾದವುಗಳಿಂದ ಕಲಿಯಲು ಮತ್ತು ತಮ್ಮ ವೃತ್ತಿಜೀವನದಲ್ಲಿ ಮುಂದುವರಿಯಲು ಇದು ಒಂದು ವೇದಿಕೆಯಾಗಿದೆ” ಎಂದು ಕೇಂದ್ರ ಸಚಿವರು ಹೇಳಿದರು.

'ನಾಳೆಯ 75 ಸೃಜನಶೀಲ ಮನಸ್ಸುʼಗಳು ಎಂಬ  ಉಪಕ್ರಮದ ಈ ತನಕದ ಪ್ರಯಾಣದ ಕುರಿತು ಮಾತನಾಡಿದ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು, “ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದೃಷ್ಟಿಯ ಚಿಂತನೆಯ ಪ್ರೇರಣೆಯ ಪ್ರಕಾರವಾಗಿ ಈ ಪ್ರಯಾಣವು ನಮ್ಮ ಯುವಕರನ್ನು ತೊಡಗಿಸಿಕೊಳ್ಳಲು, ಪ್ರೋತ್ಸಾಹಿಸಲು ಮತ್ತು ಅನ್ವೇಷಿಸಲು ಒಂದು ವೇದಿಕೆಯಾಗಿ ಐ.ಎಫ್‌.ಎಫ್‌.ಐ. ನಲ್ಲಿ ಕಳೆದ ವರ್ಷ ಪ್ರಾರಂಭವಾಯಿತು. ಇದು “ನಾಳೆಯ 75 ಕ್ರಿ ಸೃಜನಶೀಲ ಮನಸ್ಸುʼಗಳ ಎರಡನೇ ಆವೃತ್ತಿಯಾಗಿದೆ ಮತ್ತು ನಾವು ಈಗಾಗಲೇ ಸಿನಿಮಾ, ಸೃಜನಶೀಲತೆ ಮತ್ತು ಸಂಸ್ಕೃತಿಯ ಮೇಲಿನ ಅವರ ಹಂಚಿಕೆಯ ಪ್ರೀತಿಯ ಮೂಲಕ 150 ಪ್ರಬಲ ಪ್ರತಿಭಾನ್ವಿತ ವ್ಯಕ್ತಿಗಳ ಸಮುದಾಯವನ್ನು ಸಂಪರ್ಕ ಏರ್ಪಡಿಸಿದ್ದೇವೆ” ಎಂದು ಸಚಿವರು ಈ ಸಂದರ್ಭದಲ್ಲಿ ಹೇಳಿದರು.

ಕಳೆದ ವರ್ಷದ 'ನಾಳೆಯ 75 ಸೃಜನಶೀಲ ಮನಸ್ಸುʼಗಳು ಉಪಕ್ರಮದ ವಿಜೇತರು ಚಲನಚಿತ್ರಗಳು ಮತ್ತು ಒ.ಟಿ.ಟಿ. ಪ್ರದರ್ಶನಗಳಲ್ಲಿ ತೋರಿಸಿದ ಪ್ರತಿಭೆಗಳನ್ನು, ನೀಡಿರುವ ಕೊಡುಗೆಯನ್ನು ಶ್ಲಾಘಿಸಿದ ಕೇಂದ್ರ ಸಚಿವರು, “ಈ ಯುವ ಮತ್ತು ಪ್ರತಿಭಾವಂತ ಮನಸ್ಸುಗಳು ಭಾರತೀಯ ಚಿತ್ರರಂಗ ಮತ್ತು ಚಲನಚಿತ್ರೋದ್ಯಮಕ್ಕೆ ಭವಿಷ್ಯದಲ್ಲಿ ವಿಶೇಷವಾಗಿ ಅಮೃತ್ ಕಾಲದ ಮುಂದಿನ 25 ವರ್ಷಗಳಲ್ಲಿ ಗಣನೀಯ ಕೊಡುಗೆ ನೀಡಲಿದ್ದಾರೆ” ಎಂದು ಹೇಳಿದರು.

ಚಲನಚಿತ್ರೋದ್ಯಮವನ್ನು ಸೃಜನಶೀಲ ಮನಸ್ಸುಗಳು ಎಂದು ಕರೆಯಲಾಗುತ್ತದೆ, ಆದರೆ ನಾವು ಅದನ್ನು ಸೃಜನಶೀಲ ಆರ್ಥಿಕತೆಯಾಗಿಯೂ ನೋಡಬೇಕು, ಇದು ಸೌಮ್ಯ(ಮೃದು) ಶಕ್ತಿಯ ಒಂದು ರೂಪವಾಗಿದೆ ಮತ್ತು ಕೆಲವು ರಾಷ್ಟ್ರಗಳು ಕೂಡಾ ಇದರಿಂದಾಗಿ ಪ್ರಸಿದ್ಧವಾಗಿವೆ”ಎಂದು ಸಚಿವರು ಹೇಳಿದರು. ಭಾರತೀಯ ಸಿನಿಮಾವನ್ನು ಭಾರತೀಯ ಮೃದು ಶಕ್ತಿಯ ರೂಪವನ್ನಾಗಿ ಮಾಡುವಲ್ಲಿ ಅಗತ್ಯ ಬದಲಾವಣೆಯನ್ನು ತರಲು ಭಾರತದಲ್ಲಿಂದು ಐ.ಎಫ್. ಎಫ್.‌ ಐ. ಒಂದು ಯಶಸ್ವೀ ವೇದಿಕೆಯಾಗಿದೆ. ಇಲ್ಲವಾದಲ್ಲಿ ಐ.ಎಫ್‌.ಎಫ್‌.ಐ.ನ ಭಾಗವಾಗಲು ಹಲವು ಅಂತಾರಾಷ್ಟ್ರೀಯ ಪ್ರಮುಖರನ್ನು ಕರೆ ತರುವುದು ಅಷ್ಟು ಸುಲಭವಲ್ಲ.

ಸಾವಿರಾರು ಅರ್ಜಿಗಳಿಂದ ಉತ್ತಮವಾದುದನ್ನು ಆಯ್ಕೆ ಮಾಡುವಲ್ಲಿ ತೀರ್ಪುಗಾರರ ಪ್ರಯತ್ನವನ್ನು ಸಚಿವರು ಈ ಸಂದರ್ಭದಲ್ಲಿ  ಶ್ಲಾಘಿಸಿದರು.  

*****



(Release ID: 1877841) Visitor Counter : 137