ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಯುವ ಮತ್ತು ವಯಸ್ಕರಾದಿಯಾಗಿ ಅನಿಮೇಷನ್ ಪ್ರೇಮಿಗಳನ್ನು ರಂಜಿಸುವ ಭರವಸೆ  ನೀಡುತ್ತದೆ `ಐಎಫ್ಎಫ್ಐ 53ʼ

Posted On: 13 NOV 2022 8:59PM by PIB Bengaluru

ಮನರಂಜನೆಯ ಮೂಲಕ ಪ್ರೇಕ್ಷಕರಿಗೆ ಶಿಕ್ಷಣ ನೀಡುವ ಮತ್ತು ಅವರನ್ನು ತೊಡಗಿಸಿಕೊಳ್ಳುವ ಕಲೆಯ ಹೆಸರೇ ಅನಿಮೇಷನ್!  ರೋಮಾಂಚಕ ಬಣ್ಣಗಳು, ವಿವಿಧ ಮಟ್ಟದ ಚಲನೆ ಮತ್ತು ಸರಳ ವಿಷಯಗಳು ಅಥವಾ ಸಂದೇಶಗಳಿಗಾಗಿ ಈ ಪ್ರಕಾರವನ್ನು ಮಕ್ಕಳು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ, ಇದೇ ವೇಳೆ, ಸಾರ್ವಕಾಲಿಕ ಶ್ರೇಷ್ಠ ಅನಿಮೇಷನ್ ಚಲನಚಿತ್ರಗಳಲ್ಲಿ ಅನೇಕವು ಹೆಚ್ಚು ಪ್ರಬುದ್ಧ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡೂ ಸಜ್ಜುಗೊಂಡಿವೆ.  ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 53ನೇ ಆವೃತ್ತಿಯು ಈ ಚಲನಚಿತ್ರ-ಕಲೆಯ ವಿವಿಧ ಪ್ರಕಾರಗಳ ಉತ್ತಮ ಮಿಶ್ರಣವನ್ನು ಹೊಂದಿದೆ. ಈ ವರ್ಷ ʻಐಎಫ್ಎಫ್ಐʼ, ವಿಶ್ವದ ವಿವಿಧ ಭಾಗಗಳಿಂದ ಮಕ್ಕಳು ಮತ್ತು ವಯಸ್ಕರನ್ನು ಆಕರ್ಷಿಸುವ ಕಥೆಗಳೊಂದಿಗೆ ಅಂತಹ ಐದು ಚಲನಚಿತ್ರಗಳನ್ನು ವಿಶೇಷವಾಗಿ ಆಯ್ದ ಅನಿಮೇಟೆಡ್ ವಿಭಾಗದಲ್ಲಿ ಪ್ರದರ್ಶಿಸಲಿದೆ. 

1."ಬ್ಲೈಂಡ್ ವಿಲ್ಲೋ, ಸ್ಲೀಪಿಂಗ್‌ ವುಮನ್‌"
ಈ 2022ರ ಜಪಾನಿನ ಅನಿಮೇಷನ್ ಚಲನಚಿತ್ರವನ್ನು ಪ್ರಸಿದ್ಧ ಬರಹಗಾರ ಹರುಕಿ ಮುರಕಾಮಿ ಅವರು ಸಣ್ಣ ಕಥೆಗಳಿಂದ ಅಳವಡಿಸಿಕೊಳ್ಳಲಾಗಿದೆ. ವಿಶ್ವದಾದ್ಯಂತದ ಲಕ್ಷಾಂತರ ಮುರಕಾಮಿ ಅವರ ಅಭಿಮಾನಿಗಳನ್ನು ಮಾತ್ರವಲ್ಲದೆ, ಲೇಖಕರ ಪರಿಚಯವಿಲ್ಲದವರನ್ನು ಗುರಿಯಾಗಿಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಭೂಕಂಪ ಮತ್ತು ದೈತ್ಯ ಕಪ್ಪೆಯು ಚಿತ್ರದಲ್ಲಿನ ಪಾತ್ರಗಳಿಗೆ "ಅವು ತಮ್ಮಿಂದ ಮರೆಮಾಚುತ್ತಿರುವ ಸತ್ಯಗಳನ್ನು" ಬಹಿರಂಗಪಡಿಸಲು ಹೇಗೆ ಸಹಾಯ ಮಾಡುತ್ತವೆ ಎಂಬುದನ್ನು ಈ ಚಲನಚಿತ್ರವು ಅನ್ವೇಷಿಸುತ್ತದೆ.  ಈ ಕಥೆಗಳು ನೆನಪುಗಳು, ಕನಸುಗಳು ಮತ್ತು ಕಲ್ಪನೆಗಳಿಂದ ರೂಪುಗೊಂಡಿವೆ, ಭೂಕಂಪದ ವೈಯಕ್ತಿಕ ದೃಷ್ಟಿಕೋನಗಳಿಂದ ಪ್ರಭಾವಿತವಾಗಿವೆ, ಏಕೆಂದರೆ ಇದರಲ್ಲಿ ಕಥಾನಾಯಕ ಪಾತ್ರಗಳು ತಮ್ಮ ನೈಜ ಸ್ವರೂಪದೊಂದಿಗೆ ಮರುಸಂಪರ್ಕ ಹೊಂದಲು ಪ್ರಯತ್ನಿಸುತ್ತವೆ.

ಇದನ್ನು ನಿರ್ಮಾಣ ಮಾಡಿದವರು ಅಮೆರಿಕ ಮೂಲದ ಸಂಯೋಜಕ, ಆರ್ಕೆಸ್ಟ್ರಾಟರ್, ವರ್ಣಚಿತ್ರಕಾರ ಮತ್ತು ಚಲನಚಿತ್ರ ತಯಾರಕ ಪಿಯರೆ ಫೋಲ್ಡೆಸ್.
 

ಮೈ ಲವ್‌ ಅಫೇರ್‌ ವಿತ್‌ ಮ್ಯಾರೇಜ್‌ 
2022ರ ಈ ಅನಿಮೇಷನ್ ನಾಟಕವು ಪ್ರೀತಿ ಮತ್ತು ಲಿಂಗದ ಜೈವಿಕ ರಸಾಯನಶಾಸ್ತ್ರವನ್ನು ಪರೀಕ್ಷಿಸಲು ಸಂಗೀತ ಮತ್ತು ವಿಜ್ಞಾನವನ್ನು ಬಳಸುತ್ತದೆ. ಹಾಗೆಯೇ ಸಾಮಾಜಿಕ ಶಿಷ್ಟಾಚಾರಗಳಿಗೆ ಅನುಗುಣವಾಗಿ ವ್ಯಕ್ತಿಯ ಮೇಲೆ ಸಾಮಾಜಿಕ ಒತ್ತಡಗಳ ಬಗ್ಗೆ ಬೆಳಕು ಚಲ್ಲುತ್ತದೆ. ಇದೊಂದು ಆಂತರಿಕ ಸ್ತ್ರೀ ಬಂಡಾಯದ ಕಥೆಯಾಗಿದೆ. ಅಲ್ಲಿ ಜೆಲ್ಮಾ ಎಂಬ ಯುವ ಉತ್ಸಾಹಿ ಮಹಿಳೆಯೊಬ್ಬಳು ಪ್ರೀತಿಯನ್ನು ಗಳಿಸುವುದಕ್ಕಾಗಿ ಪುರಾಣ ಗೀತೆಗಳನ್ನು ಹಾಡುವ ಒತ್ತಡಕ್ಕೆ ಸಿಲುಕುತ್ತಾಳೆ. ಇಷ್ಟವಿಲ್ಲದಿದ್ದರೂ ಹಾಗೆಯೇ ನಡೆದುಕೊಳ್ಳಲು ನಿರ್ಧರಿಸುತ್ತಾಳೆ. ಆದರೆ ಅವಳು ಈ ಹಾದಿಯಲ್ಲಿ ಹೆಚ್ಚು ಹೆಜ್ಜೆ ಇಟ್ಟಷ್ಟೂ, ಅವಳ ದೇಹವು ಹೆಚ್ಚು ಹೆಚ್ಚು ಪ್ರತಿರೋಧ ತೋರುತ್ತದೆ. 

ಈ ಚಿತ್ರವು ಈಗಾಗಲೇ ವಿಶ್ವದಾದ್ಯಂತ ಚಲನಚಿತ್ರೋತ್ಸವಗಳಲ್ಲಿ ಎರಡು ಪ್ರಶಸ್ತಿಗಳು ಮತ್ತು ಆರು ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. 

ಇದರ ನಿರ್ಮಾಪಕರಾದ ಸಿಗ್ನೆ ಬೌಮನೆ ಅವರು ಲಾಟ್ವಿಯಾ ಮೂಲದ ಆನಿಮೇಟರ್, ಕಲಾವಿದ, ಚಿತ್ರಕಾರ ಮತ್ತು ಬರಹಗಾರ್ತಿ. ಅವರು ಪ್ರಸ್ತುತ ನ್ಯೂಯಾರ್ಕ್ ನಗರದಲ್ಲಿ ವಾಸಿಸುತ್ತಿದ್ದಾರೆ ಮತ್ತು ಕೆಲಸ ಮಾಡುತ್ತಿದ್ದಾರೆ. ಅವರು 16 ಕಿರುಚಿತ್ರಗಳು ಮತ್ತು ಎರಡು ಆನಿಮೇಟೆಡ್ ಚಲನಚಿತ್ರಗಳನ್ನು ಬರೆದಿದ್ದಾರೆ, ನಿರ್ದೇಶಿಸಿದ್ದಾರೆ, ವಿನ್ಯಾಸಗೊಳಿಸಿದ್ದಾರೆ ಮತ್ತು ಆನಿಮೇಟೆಡ್ ಮಾಡಿದ್ದಾರೆ.
 
ದಿ ಐಲ್ಯಾಂಡ್‌ 
2021ರ ಈ ಚಲನಚಿತ್ರವು ʻರಾಬಿನ್ಸನ್ ಕ್ರುಸೋ ಮಿಥ್‌: ದಿ ಲಿಟಲ್ ಪ್ರಿನ್ಸ್ ಮೀಟ್ಸ್‌ ಮಾಂಟಿ ಪೈಥಾನ್ʼ ಎಂಬ ದಂತ ಕಥೆ ಕುರಿತಾದ ಸಂಗೀತ ಪ್ರಧಾನ ಅನಿಮೇಷನ್ ಮತ್ತು ಮಿಶ್ರ-ಪ್ರಕಾರದ ಚಲನಚಿತ್ರವಾಗಿದೆ. ರಾಬಿನ್ಸನ್ ಒಬ್ಬ ವೈದ್ಯ. ವಲಸಿಗರು, ಸಾಮಾಜಿಕ ಸೇವಾ ಸಂಸ್ಥೆಗಳು(ಎನ್‌ಜಿಒ) ಮತ್ತು ಕಾವಲುಗಾರರಿಂದ ಆಕ್ರಮಿಸಲ್ಪಟ್ಟ ದ್ವೀಪದಲ್ಲಿ ಅವನು ಸ್ವಯಂ ಪ್ರೇರಿತನಾಗಿ ಏಕಾಂತ ವಾಸದಲ್ಲಿರುತ್ತಾನೆ. ಅಕ್ರಮ ನಿರಾಶ್ರಿತ ದೋಣಿಯ ಏಕೈಕ ಬದುಕುಳಿದವನನ್ನು (ಕ್ಯಾಸ್ಟ್‌ಅವೇ) ಈ ವೈದ್ಯನು ರಕ್ಷಿಸುತ್ತಾನೆ. ದ್ವೀಪದಲ್ಲಿ ತನ್ನ ಪ್ರಯಾಣದ ಸಮಯದಲ್ಲಿ, ರಾಬಿನ್ಸನ್ ಅಸಾಧಾರಣ ಜೀವಿಗಳು ಮತ್ತು ಘಟನೆಗಳನ್ನು ಎದುರಿಸುತ್ತಾನೆ. ಪ್ರತಿಯೊಬ್ಬರೂ ತಮ್ಮದೇ ಆದ ಸ್ವರ್ಗವನ್ನು ಹುಡುಕುವ ಈ ಜಗತ್ತಿನಲ್ಲಿ, ದೈನಂದಿನ ವ್ಯವಹಾರಗಳನ್ನು ಅವನು ದೃಶ್ಯಕಾವ್ಯ ಮತ್ತು ಸಾಂಕೇತಿಕತೆಯ ಮೂಲಕ ಎದುರಿಸುತ್ತಾನೆ

.

 ರೊಮೇನಿಯಾ ಮೂಲದ ಆಂಕಾ ಡೇಮಿಯನ್ ಅವರು ಕಲೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಲವಾರು ಸಾಕ್ಷ್ಯಚಿತ್ರಗಳಿಗೆ ನಿರ್ದೇಶಕಿಯಾಗಿ, ಚಿತ್ರಕಥೆಗಾರರಾಗಿ ಮತ್ತು ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ʻದಿ ಐಲ್ಯಾಂಡ್‌ʼ ಅವರ ಏಳನೇ ಚಲನಚಿತ್ರವಾಗಿದೆ.

ಚಲನಚಿತ್ರ ಸಂಯೋಜಕ ಮತ್ತು ಸಂಗೀತಗಾರ ಅಲೆಕ್ಸಾಂಡರ್ ಬಾಲನೆಸ್ಕು ಅವರು ರೊಮೇನಿಯನ್ ಮೂಲದ ಪ್ರಸಿದ್ಧ ಸಂಯೋಜಕ ಮತ್ತು ಸಮಕಾಲೀನ ಅತ್ಯಂತ ದೂರದೃಷ್ಟಿಯ ಮತ್ತು ಅದ್ಭುತ ಪಿಟೀಲು ವಾದಕರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ.

ಡಜನ್ಸ್‌ ಆಫ್‌ ನಾರ್ತ್ಸ್‌
2021ರ ಈ ಜಪಾನಿ ಅನಿಮೇಷನ್‌ ಚಿತ್ರವು 2011ರ ʻಗ್ರೇಟ್ ಈಸ್ಟ್ ಜಪಾನ್ ಭೂಕಂಪʼದ ನಂತರದ ವಿಪತ್ತನ್ನು ವಿವರಿಸುತ್ತದೆ. ಹಾಳು ಸುರಿಯುವ ಮತ್ತು ದುಃಸ್ವಪ್ನದ ದೃಶ್ಯಗಳನ್ನು ಚಿತ್ರಿಸುವ ಶ್ರೀಮಂತ, ಸಂಭಾಷಣೆರಹಿತ ಕಥಾನಕಗಳನ್ನು ಈ ಚಲನಚಿತ್ರವು ಒಳಗೊಂಡಿದೆ.  ಇದು ನಿಜ ಜೀವನದ ಘಟನೆಗಳಿಂದ ಉಂಟಾಗುವ ಆಧುನಿಕ-ದಿನದ ಯಾತನೆಯನ್ನು ಪೌರಾಣಿಕ ಮತ್ತು ಸಾರ್ವತ್ರಿಕ ಆಯಾಮದಲ್ಲಿ ಕಟ್ಟಿಕೊಡುತ್ತದೆ. ಜೊತೆಗೆ ಮಾನವ ಅಸ್ತಿತ್ವದ ಅಸಂಬದ್ಧತೆಗಳು ಮತ್ತು ದುರಂತಗಳನ್ನು ಭರವಸೆಯ ವಿಶ್ವಾಸದೊಂದಿಗೆ ಹೇಳಲಾಗುತ್ತದೆ. ಚಿತ್ರಮಂದಿರದ ಕತ್ತಲಲ್ಲಿರುವ ಬಿಳಿ ಪರದೆಯಂತೆ, ಈ ಚಿತ್ರವು ಅತ್ಯಂತ ಕತ್ತಲೆಯ ಜಾಗಗಳಲ್ಲಿಯೂ ಬೆಳಕನ್ನು ಕಂಡುಕೊಳ್ಳುತ್ತದೆ.

ಆಸ್ಕರ್ ನಾಮನಿರ್ದೇಶಿತ "ಮೌಂಟ್ ಹೆಡ್" (2002) ನಂತಹ ಅವರ ಹಲವಾರು ಕಿರು-ಚಿತ್ರಗಳಿಗೆ ಹೆಸರುವಾಸಿಯಾದ ಕೋಜಿ ಯಮಮುರಾ ಅವರು ಈ ಚಲನಚಿತ್ರದ ನಿರ್ಮಾಪಕರು.


ಪಿನೋಚಿಯೋ
2022ರ ಈ ಚಲನಚಿತ್ರವು ʻಗೆಪ್ಪೆಟ್ಟೊʼ ಎಂಬ ದುಃಖತಪ್ತ ಮರಕೊರಕ ಹುಳುವಿನ ಮನಸ್ಸನ್ನು ಸರಿಪಡಿಸುವ ಸಲುವಾಗಿ ಮಾಂತ್ರಿಕವಾಗಿ ಜೀವ ಪಡೆಯುವ ಸೂತ್ರದ ಬೊಂಬೆಯೊಂದರ ಕಥೆಯನ್ನು ಪುನರುಜ್ಜೀವಗೊಳಿಸುತ್ತದೆ. 
ಅಕಾಡೆಮಿ ಪ್ರಶಸ್ತಿ ವಿಜೇತ ಗಿಲ್ಲೆರ್ಮೊ ಡೆಲ್ ಟೊರೊ ಮತ್ತು ಮಾರ್ಕ್ ಗುಸ್ಟಾಫ್ಸನ್ ನಿರ್ದೇಶಿಸಿದ ಈ ವಿಲಕ್ಷಣ, ಸ್ಟಾಪ್-ಮೋಷನ್ ಚಲನಚಿತ್ರವು ಪಿನೋಚಿಯೋನ ತುಂಟತನ  ಮತ್ತು ಅವಿಧೇಯ ಸಾಹಸಗಳನ್ನು ತೆರೆದಿಡುತ್ತದೆ.

*****

 



(Release ID: 1875766) Visitor Counter : 155


Read this release in: English , Urdu , Marathi , Hindi