ಪರಿಸರ ಮತ್ತು ಅರಣ್ಯ ಸಚಿವಾಲಯ
ಇಂಡಿಯನ್ ಆಯಿಲ್‌ನ ಸುಸ್ಥಿರ ಉಪಕ್ರಮಗಳನ್ನು ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಸಿಒಪಿ 27(COP27) ನಲ್ಲಿ ಭಾರತ ಸಭೆಯಲ್ಲಿ ವಿವರಿಸಲಾಗಿದೆ
Posted On:
12 NOV 2022 7:16PM by PIB Bengaluru
ಪಿಐಬಿ, ನವದೆಹಲಿ ನವೆಂಬರ್ 12: ಭಾರತೀಯ ತೈಲ ನಿಗಮ ನಿಯಮಿತ(Indian Oil Corporation Limited) ಒಂದು ಕೇಂದ್ರ ಸರ್ಕಾರ ಸ್ವಾಮ್ಯದ ಸಾರ್ವಜನಿಕ ವಲಯ ಉದ್ಯಮವಾಗಿದ್ದು, ಈಜಿಪ್ಟ್ ದೇಶದ ಶರ್ಮ್ ಎಲ್-ಶೇಖ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ವಾರ್ಷಿಕ ಹವಾಮಾನ ಶೃಂಗಸಭೆ ಸಿಒಪಿ 27(COP 27) ನಲ್ಲಿ ಕಾರ್ಯಕ್ರಮದ ಭಾರತೀಯ ಭಾಗದಲ್ಲಿ ಇಂದು ಅಧಿವೇಶನ ನಡೆಸಿತು. ಜೈವಿಕ ಇಂಧನಗಳು, ಸುಸ್ಥಿರ ಸೌರ ಆಧಾರಿತ ಅಡುಗೆ, ಇಂಗಾಲದ ಸಮರ್ಥ ಸಂಸ್ಕರಣಾ ತಂತ್ರಜ್ಞಾನಗಳು ಮತ್ತು ಶಕ್ತಿ ಪರಿವರ್ತನೆಯಲ್ಲಿ ಅದರ ಉಪಕ್ರಮಗಳ ಕುರಿತು ಭಾರತೀಯ ತೈಲದ ಉಪಕ್ರಮಗಳನ್ನು ಅಧಿವೇಶನದಲ್ಲಿ ಚರ್ಚಿಸಲಾಯಿತು.
ಭಾರತೀಯ ತೈಲ ನಿಗಮವು 2046ರ ವೇಳೆಗೆ ನಿವ್ವಳ-ಶೂನ್ಯ(Net-Zero by 2046) ಹೊರಸೂಸುವಿಕೆಯನ್ನು ಸಾಧಿಸುವ ಗುರಿ ಹೊಂದಿದೆ. ಕಳೆದ ಆಗಸ್ಟ್ 25ರಂದು ನಡೆದ ಕಂಪನಿಯ 63 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇಂಡಿಯನ್ ಆಯಿಲ್ ಅಧ್ಯಕ್ಷರಾದ ಶ್ರೀಕಾಂತ್ ಮಾಧವ್ ವೈದ್ಯ ಅವರು ಈ ಘೋಷಣೆ ಮಾಡಿದರು. ನಿವ್ವಳ ಶೂನ್ಯವನ್ನು ಸಾಧಿಸಲು ತಾನು ಹೋಗುವ ದಾರಿ ಮತ್ತು ಸಾಧಿಸುವ ಗುರಿಗಳನ್ನು ಭಾರತೀಯ ತೈಲ ನಿಗಮ ನಿಯಮಿತ ಇಂದಿನ ಅಧಿವೇಶನದಲ್ಲಿ ವಿವರಿಸಿತು. ಎಥೆನಾಲ್ ವಿರುದ್ಧ ಜೈವಿಕ ಇಂಧನ ಬಂಡವಾಳವನ್ನು ಹೆಚ್ಚಿಸುವಲ್ಲಿ ಭಾರತದ ಪ್ರಯತ್ನಗಳು, ಸಂಕುಚಿತ ಜೈವಿಕ ಅನಿಲ (ಬಯೋಮಿಥೇನ್), ಜೈವಿಕ ಡೀಸೆಲ್, ಸುಸ್ಥಿರ ವಾಯುಯಾನ ಇಂಧನ ಮತ್ತು ಇತ್ತೀಚೆಗೆ ಬಿಡುಗಡೆಯಾದ 'ಸೂರ್ಯ ನೂತನ್' ಸೌರ ಅಡುಗೆ ಒಲೆ ಬಗ್ಗೆ ಭಾರತೀಯ ತೈಲ ನಿಗಮ ಚರ್ಚಿಸಿದೆ. ಅಧಿಕ ಇಂಗಾಲ ಹೊರಸೂಸುವಿಕೆ ಕಡಿತಕ್ಕೆ ಕಾರಣವಾದ ಭಾರತೀಯ ತೈಲ ಸಂಸ್ಕರಣಾಗಾರಗಳ ಶಕ್ತಿಯ ಬಳಕೆಯ ಕಡಿತದ ಉಪಕ್ರಮಗಳನ್ನು ಸಹ ಅಧಿವೇಶನದಲ್ಲಿ ವಿವರಿಸಿ ಚರ್ಚಿಸಲಾಗಿದೆ.
ಭಾರತದ ರಾಷ್ಟ್ರೀಯ ತೈಲ ಕಂಪೆನಿಯಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಂಧನಗಳನ್ನು ಸ್ವಚ್ಛಗೊಳಿಸಲು ಮತ್ತು ಅದರ ಪ್ರಕ್ರಿಯೆಯಿಂದ ಅಧಿಕ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ದೇಶದ ಶಕ್ತಿ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿದೆ. ನಿಗಮ ಇತ್ತೀಚೆಗೆ, 2046 ರ ವೇಳೆಗೆ ಅನಿಲ ಹೊರಸೂಸುವಿಕೆಯಲ್ಲಿ ನಿವ್ವಳ ಶೂನ್ಯ ಗುರಿ 1 ಮತ್ತು 2ನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಕಳೆದ ವರ್ಷ ಸ್ಕಾಟ್ ಲ್ಯಾಂಡ್ ನ ಅತಿದೊಡ್ಡ ನಗರ ಗ್ಲಾಸ್ಗೊದಲ್ಲಿ ನಡೆದಿದ್ದ ಸಿಒಪಿ 26(COP26)ದಲ್ಲಿ ಪಂಚಾಮೃತ ಯೋಜನೆ ಮಾರ್ಗದರ್ಶನದಡಿ 2046ರ ವೇಳೆಗೆ ನಿವ್ವಳ-ಶೂನ್ಯವನ್ನು ಸಾಧಿಸುವ ಭಾರತೀಯ ತೈಲ ನಿಗಮದ ಗುರಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಘೋಷಿಸಿದ್ದರು.
2046 ರ ವೇಳೆಗೆ ನಿವ್ವಳ-ಶೂನ್ಯವನ್ನು ಸಾಧಿಸುವ ಭಾರತೀಯ ತೈಲ ನಿಗಮದ ಧ್ಯೇಯವು, ಕಳೆದ ವರ್ಷ ಗ್ಲಾಸ್ಗೋದಲ್ಲಿ ಆಯೋಜಿಸಲಾಗಿದ್ದ COP 26 ನಲ್ಲಿ ಪ್ರಧಾನಿ ಮೋದಿಯವರು ಘೋಷಿಸಿದ್ದ ಪಂಚಾಮೃತ ಯೋಜನೆ ಮತ್ತು ಮೋದಿಯವರ ಮಿಷನ್ ಲೈಫ್, ಈ ಬಾರಿ ಈಜಿಪ್ಟ್ ನ ಶರ್ಮ್ ಎಲ್-ಶೇಖ್ ನಲ್ಲಿ ನಡೆಯುತ್ತಿರುವ ಸಿಒಪಿ 27(COP 27)ನಿಂದ ಮಾರ್ಗದರ್ಶಿಸಲ್ಪಟ್ಟಿದೆ.
ಹೆಚ್ಚಿನ ಉಲ್ಲೇಖಗಳು:
ಭಾರತೀಯ ತೈಲ ನಿಗಮ 2046ಕ್ಕೆ ನಿವ್ವಳ-ಶೂನ್ಯ ಸಾಧಿಸುವ ಗುರಿಯ ಬಗ್ಗೆ ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಸೂರ್ಯ ನೂತನ ಸೌರ ಅಡುಗೆ ಒಲೆ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ನಮ್ಮನ್ನು ಇಮೇಲ್ ವಿಳಾಸ http://envforestpib[at]gmail[dot]com ಮೂಲಕ ಸಂಪರ್ಕಿಸಿ
*****
(Release ID: 1875530)
Visitor Counter : 184