ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿಗೆ "ಇಂಡಿಯಾ ಅಗ್ರಿ ಬಿಸಿನೆಸ್ ಅವಾರ್ಡ್ಸ್ 2022" ಪ್ರಶಸ್ತಿ
Posted On:
10 NOV 2022 12:15PM by PIB Bengaluru
ಸಚಿವ ಡಾ. ಸಂಜೀವ್ ಕೆ ಬಲ್ಯಾನ್ ಅವರು ʻಎನ್‌ಎಫ್‌ಡಿಬಿʼಗೆ ʻಇಂಡಿಯಾ ಅಗ್ರಿ ಬಿಸಿನೆಸ್ ಅವಾರ್ಡ್ಸ್ 2022ʼಅನ್ನು ಪ್ರದಾನ ಮಾಡಿದರು
ʻಭಾರತ ಅಂತರರಾಷ್ಟ್ರೀಯ ಕೃಷಿ ವ್ಯಾಪಾರ ಮತ್ತು ತಂತ್ರಜ್ಞಾನ ಮೇಳ – 2022ʼ ಅನ್ನು ಆಯೋಜಿಸಲಾಗಿದೆ
ಆಹಾರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಸಂಬಂಧಿತ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಮುಖ ಪಾಲುದಾರರು ಸಾಧಿಸಿದ ಅಭಿವೃದ್ಧಿ ಮತ್ತು ಆಧುನೀಕರಣದ ಪ್ರದರ್ಶನ ಈ ಮೇಳದ ಉದ್ದೇಶವಾಗಿದೆ.
ʻಭಾರತ ಅಗ್ರಿ ಬಿಸಿನೆಸ್ ಅವಾರ್ಡ್ಸ್-2022ʼ ಅನ್ನು ʻಎನ್‌ಎಫ್‌ಡಿಬಿʼಗೆ ಪ್ರದಾನ ಮಾಡಿದ ಸಚಿವ ಡಾ.ಸಂಜೀವ್ ಕೆ.ಬಲ್ಯಾನ್ ಮತ್ತು ನೀತಿ ಆಯೋಗದ ಸದಸ್ಯ ಡಾ.ರಮೇಶ್ ಚಂದ್.
ಭಾರತ ಸರಕಾರದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಅಡಿಯಲ್ಲಿನ ಮೀನುಗಾರಿಕಾ ಇಲಾಖೆಯ ಅಧೀನ ಸಂಸ್ಥೆಯಾದ ಹೈದರಾಬಾದ್‌ನ ʻರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿʼಯು (ಎನ್ಎಫ್‌ಡಿಬಿ) ಅತ್ಯುತ್ತಮ ಕೃಷಿ ಉದ್ಯಮ ಪ್ರಶಸ್ತಿಯಾದ "ಭಾರತ ಅಗ್ರಿ ಬಿಸಿನೆಸ್ ಅವಾರ್ಡ್ಸ್-2022"ಗೆ ಭಾಜನವಾಗಿದೆ. ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ಸಮರ್ಪಿತವಾಗಿ ಸಂಸ್ಥೆಯು ವಹಿಸಿದ ಮಾದರಿ ಮತ್ತು ಮಹತ್ವದ ಪಾತ್ರ ಹಾಗೂ ಆ ಮೂಲಕ ಮೀನುಗಾರಿಕೆ ವಲಯಕ್ಕೆ ನೀಡಿದ ಸೇವೆ ಮತ್ತು ಬೆಂಬಲವನ್ನುಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ. ಮೀನು ಸೇವನೆ ಹೆಚ್ಚಿಸಲು, ಮೀನು ಉತ್ಪಾದನೆ ಮತ್ತು ಉತ್ಪಾದಕತೆಯಲ್ಲಿ ಗಮನಾರ್ಹ ಹೆಚ್ಚಳವನ್ನು ತರಲು, ಮೀನುಗಾರರ ಜೀವನೋಪಾಯವನ್ನು ಸುಧಾರಿಸಲು, ಮೀನುಗಾರಿಕೆಯಲ್ಲಿ ಉದ್ಯಮಶೀಲತೆಯ ಅವಕಾಶಗಳನ್ನು ಉತ್ತೇಜಿಸಲು, ಉದ್ಯೋಗ ಸೃಷ್ಟಿ, ಮೀನುಗಳ ನೈರ್ಮಲ್ಯ ನಿರ್ವಹಣೆ ಮತ್ತು ಮಾರುಕಟ್ಟೆಯನ್ನು ಉತ್ತೇಜಿಸಲು ಸಂಸ್ಥೆಯು ಹಲವು ಅಗತ್ಯ-ಆಧರಿತ ಯೋಜನೆಗಳನ್ನು ಬೆಂಬಲಿಸುತ್ತಿದೆ. ತಂತ್ರಜ್ಞಾನದ ಉನ್ನತೀಕರಣ, ಜಲಚರ ಸಾಕಣೆಯಲ್ಲಿ ಪ್ರಭೇದಗಳ ವೈವಿಧ್ಯೀಕರಣ, ಹೊಸ ಮತ್ತು ಸುಧಾರಿತ ಮೀನು ಪ್ರಭೇದಗಳ ಪ್ರಸರಣ, ಸಮುದ್ರದ ಜೊಂಡು ಕೃಷಿಯನ್ನು ಉತ್ತೇಜಿಸುವುದು, ಅಲಂಕಾರಿಕ ಮೀನುಗಾರಿಕೆ, ತರಬೇತಿ ಮತ್ತು ಸಾಮರ್ಥ್ಯ ವರ್ಧನೆ ಇತ್ಯಾದಿ ಉಪಕ್ರಮಗಳನ್ನು ಸಂಸ್ಥೆ ಕೈಗೊಳ್ಳುತ್ತಿದೆ.
ಹಲವು ರಾಷ್ಟ್ರೀಯ / ಅಂತರರಾಷ್ಟ್ರೀಯ ಕೈಗಾರಿಕಾ ಸಂಘಗಳು ಮತ್ತು ಸಂಬಂಧಿತ ಸಂಸ್ಥೆಗಳೊಂದಿಗೆ ತಾಂತ್ರಿಕ ಸಹಯೋಗಗಳನ್ನು ಹೊಂದಿರುವ ಭಾರತ ಸರಕಾರದ ಅಧೀನದ ʻಭಾರತೀಯ ಆಹಾರ ಮತ್ತು ಕೃಷಿ ಸಂಸ್ಥೆʼಯು(ಐಸಿಎಫ್ಎ) ʻಭಾರತ ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಮತ್ತು ತಂತ್ರಜ್ಞಾನ ಮೇಳʼ - "ಆಗ್ರೋವರ್ಲ್ಡ್ 2022" ಅನ್ನು 2022ರ ನವೆಂಬರ್ 9 ರಿಂದ 11ರವರೆಗೆ ನವದೆಹಲಿಯ ಪೂಸಾ ಕ್ಯಾಂಪಸ್‌ನಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದೆ. ಆಹಾರ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಸಂಬಂಧಿತ ಪ್ರಮುಖ ಕ್ಷೇತ್ರಗಳಲ್ಲಿನ ಪ್ರಮುಖ ಮಧ್ಯಸ್ಥಗಾರರು ಸಾಧಿಸಿದ ಅಭಿವೃದ್ಧಿ ಮತ್ತು ಆಧುನೀಕರಣಗಳನ್ನು ಪ್ರದರ್ಶಿಸುವುದು ಈ ಮೇಳದ ಉದ್ದೇಶವಾಗಿದೆ.
ಈ ಕಾರ್ಯಕ್ರಮದ ಅಂಗವಾಗಿ, ʻರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿʼಯು ಮೀನುಗಾರಿಕೆ ಕ್ಷೇತ್ರದಲ್ಲಿ ಮಾಡಿದ ಅಸಾಧಾರಣ ಕಾರ್ಯಕ್ಕಾಗಿ ಮೀನುಗಾರಿಕೆ ವಲಯದ ಅಡಿಯಲ್ಲಿ ಅತ್ಯುತ್ತಮ ಕೃಷಿ ಉದ್ಯಮ ಪ್ರಶಸ್ತಿ - "ಭಾರತ ಅಗ್ರಿ ಬಿಸಿನೆಸ್ ಅವಾರ್ಡ್ಸ್ 2022" ಅನ್ನು ಸ್ವೀಕರಿಸಿತು. ʻಎನ್ಎಫ್‌ಡಿಬಿʼಯ ಮುಖ್ಯ ಕಾರ್ಯನಿರ್ವಾಹಕ ಡಾ. ಸುವರ್ಣ ಚಂದ್ರಪ್ಪಗಾರಿ (ಐಎಫ್ಎಸ್) ಅವರು ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಹಾಯಕ ಸಚಿವ ಡಾ. ಸಂಜೀವ್ ಕುಮಾರ್ ಬಲ್ಯಾನ್ ಮತ್ತು ನವದೆಹಲಿಯ ನೀತಿ ಆಯೋಗದ ಸದಸ್ಯ ಡಾ. ರಮೇಶ್ ಚಂದ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು.
******
(Release ID: 1874956)
Visitor Counter : 251