ಪರಿಸರ ಮತ್ತು ಅರಣ್ಯ ಸಚಿವಾಲಯ
ಪ್ರತಿಕೂಲ ವಾಯು ಗುಣಮಟ್ಟ ಪರಿಸ್ಥಿತಿಯನ್ನು ಎದುರಿಸಲು ಪರಿಷ್ಕೃತ ಜಿ ಆರ್ ಎ ಪಿ
ಸಿ&ಡಿ ಚಟುವಟಿಕೆಗಳಿಂದ ಉಂಟಾಗುವ ಧೂಳು ವಾಯು ಮಾಲಿನ್ಯದ ಪ್ರಮುಖ ಮತ್ತು ಸ್ಥಿರ ಮೂಲವಾಗಿದೆ
ಎನ್‌ಸಿಆರ್‌ನಲ್ಲಿನ ಎಲ್ಲಾ ಸಿ&ಡಿ ಯೋಜನೆಗಳಲ್ಲಿ ಸಾಕಷ್ಟು ಸಂಖ್ಯೆಯ ಹೊಂಜು ನಿವಾರಕ ಗನ್‌ಗಳನ್ನು ನಿಯೋಜಿಸುವುದನ್ನು ಸಿಎಕ್ಯೂಎಂ ಕಡ್ಡಾಯಗೊಳಿಸಿದೆ
ಸಿ&ಡಿ ಯೋಜನಾ ಸ್ಥಳಗಳಲ್ಲಿ ಮೊದಲ ಹಂತದಿಂದಲೇ ಹೊಂಜು ನಿವಾರಕ ಗನ್‌ಗಳ ಬಳಕೆಗೆ ಪರಿಷ್ಕೃತ ಜಿ ಆರ್ ಎ ಪಿ ಆದೇಶ
Posted On:
07 NOV 2022 6:15PM by PIB Bengaluru
ನಿರ್ಮಾಣ ಮತ್ತು ಕೆಡಹುವ (ಸಿ&ಡಿ) ಚಟುವಟಿಕೆ ನಡೆಯುವ ಸ್ಥಳಗಳಲ್ಲಿ ಉಂಟಾಗುವ ಧೂಳನ್ನು ತಗ್ಗಿಸಲು ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್‌ಸಿಆರ್) ಒಟ್ಟಾರೆ ವಾಯುಗುಣಮಟ್ಟವನ್ನು ಇನ್ನಷ್ಟು ಸುಧಾರಿಸಲು ಕ್ರಮಗಳನ್ನು ತೀವ್ರಗೊಳಿಸಲು, ಎನ್‌ಸಿಆರ್‌ಮತ್ತು ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಎನ್‌ಸಿಆರ್‌ನಲ್ಲಿನ ಎಲ್ಲಾ ಸಿ & ಡಿ ಯೋಜನೆಗಳಲ್ಲಿ ಯೋಜನೆ ನಿರ್ಮಾಣದ ಒಟ್ಟು ಪ್ರದೇಶಕ್ಕೆ ಅನುಗುಣವಾಗಿ ಸಾಕಷ್ಟು ಸಂಖ್ಯೆಯ ಹೊಂಜು ನಿವಾರಕ ಗನ್‌ಗಳನ್ನು ನಿಯೋಜಿಸುವುದನ್ನು ಕಡ್ಡಾಯಗೊಳಿಸಿದೆ. ಎನ್‌ಸಿಆರ್‌ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು (ಎಸ್‌ಪಿಸಿಬಿಗಳು) ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ತಮ್ಮ ಜಿಲ್ಲೆಗಳಲ್ಲಿ ವಿವಿಧ ಸಿ & ಡಿ ಸೈಟ್‌ಗಳಲ್ಲಿ ಅಳವಡಿಸಲಾಗಿರುವ ಹೊಂಜು ನಿವಾರಕ ಗನ್‌ಗಳ ನಿರಂತರ ಮತ್ತು ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಲುವಂತೆ ನಿರ್ದೇಶಿಸಲಾಗಿದೆ.
ಆಯೋಗದ ಇತ್ತೀಚಿನ ನಿರ್ದೇಶನದ ಪ್ರಕಾರ, ಎಲ್ಲಾ ಸಿ & ಡಿ ಸ್ಥಳಗಳು ನಿರ್ಮಾಣ ಪ್ರದೇಶಕ್ಕನುಗುಣವಾಗಿ ಕೆಳಗಿನ ಮಾನದಂಡದ ಪ್ರಕಾರ ಸಾಕಷ್ಟು ಸಂಖ್ಯೆಯ ಹೊಂಜು ನಿವಾರಕ ಗನ್‌ಗಳನ್ನು ನಿಯೋಜಿಸಬೇಕು.
· 5000 - 10,000 ಚದರ ಮೀಟರ್ ನಡುವಿನ ಒಟ್ಟು ನಿರ್ಮಾಣ ಪ್ರದೇಶಕ್ಕೆ ಕನಿಷ್ಠ 1.
· 10,001 - 15,000 ಚ.ಮೀ ನಡುವಿನ ಒಟ್ಟು ನಿರ್ಮಾಣ ಪ್ರದೇಶಕ್ಕೆ ಕನಿಷ್ಠ 2.
· 15,001 - 20,000 ಚ.ಮೀ ನಡುವಿನ ಒಟ್ಟು ನಿರ್ಮಾಣ ಪ್ರದೇಶಕ್ಕೆ ಕನಿಷ್ಠ 3.
· 20,000 ಚದರ ಮೀಟರ್‌ಗಿಂತ ಹೆಚ್ಚಿನ ಒಟ್ಟು ನಿರ್ಮಾಣ ಪ್ರದೇಶಕ್ಕೆ ಕನಿಷ್ಠ 4
ಸಿ&ಡಿ ಚಟುವಟಿಕೆಗಳಿಂದ ಉಂಟಾಗುವ ಧೂಳು ವಾಯು ಮಾಲಿನ್ಯದ ಪ್ರಮುಖ ಮತ್ತು ಸ್ಥಿರವಾದ ಮೂಲವಾಗಿದೆ ಮತ್ತು ನ್‌ಸಿಆರ್‌ನಲ್ಲಿ ಪಿಎಂ 2.5 ಮತ್ತು ಪಿಎಂ 10 ಮಟ್ಟಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹೊಂಜು ನಿವಾರಕ ಗನ್‌ಗಳು, ಸ್ಪ್ರಿಂಕ್ಲರ್‌ಗಳು ಇತ್ಯಾದಿಗಳ ಬಳಕೆ ಮಾಡಬೇಕು. ಸಿ&ಡಿ ಸ್ಥಳಗಳಲ್ಲಿ ಉತ್ಪತ್ತಿಯಾಗುವ ಹೆಚ್ಚಿನ ಪ್ರಮಾಣದ ಧೂಳನ್ನು ತಗ್ಗಿಸಲು ನೀರಿನ ಬಳಕೆ, ವಿಂಡ್ ಬ್ರೋಕರ್‌ಗಳು, ಧೂಳಿನ ತಡೆ ಪರದೆಗಳು, ನಿರ್ಮಾಣ ಸಾಮಗ್ರಿಗಳು ಮತ್ತು ಸಿ&ಡಿ ಅವಶೇಷಗಳ ಮೇಲೆ ಹೊದಿಕೆ, ಮುಚ್ಚಿದ ವಾಹನಗಳಲ್ಲಿ ಸಾಗಾಣಿಕೆ ಸೇರಿದಂತೆ ಸಿ&ಡಿ ತ್ಯಾಜ್ಯಗಳ ಸೂಕ್ತ ವಿಲೇವಾರಿ ಎನ್‌ಸಿಆರ್‌ನಲ್ಲಿ ಸಿ&ಡಿ ಯೋಜನೆಗಳು ಮೂಲಭೂತವಾಗಿ ಅನುಸರಿಸಬೇಕಾದ ಕೆಲವು ಕ್ರಮಗಳಾಗಿವೆ.
ಜುಲೈ, 2022 ರಲ್ಲಿ ಆಯೋಗ ರೂಪಿಸಿದ ಎನ್‌ಸಿಆರ್‌ನಲ್ಲಿ ವಾಯು ಮಾಲಿನ್ಯವನ್ನು ನಿಗ್ರಹಿಸುವ ಸಮಗ್ರ ನೀತಿಯು, ಧೂಳನ್ನು ಕಡಿಮೆ ಮಾಡಲು ಸಿ & ಡಿ ಚಟುವಟಿಕೆಗಳ ನಿರ್ವಹಣೆಗೆ, ಸಿ & ಡಿ ಯೋಜನಾ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಹೊಂಜು ನಿವಾರಕ ಗನ್‌ಗಳ ನಿಯೋಜನೆಯನ್ನು ಸಹ ನಿಗದಿಪಡಿಸಿದೆ. ಅದರ ಹೊರತಾಗಿ, ಇಡೀ ಎನ್‌ಸಿಆರ್‌ನಲ್ಲಿ ಸಾಮಾನ್ಯವಾಗಿ ಚಳಿಗಾಲದಲ್ಲಿ ಉಂಟಾಗುವ ಪ್ರತಿಕೂಲ ವಾಯು ಗುಣಮಟ್ಟದ ಸನ್ನಿವೇಶವನ್ನು ಎದುರಿಸಲು ಪರಿಷ್ಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿ ಆರ್ ಎ ಪಿ)ಯು, ನಿರ್ಮಾಣ ಸ್ಥಳಗಳಲ್ಲಿ ಹೊಂಜು ನಿವಾರಕ ಗನ್‌ಗಳ ಬಳಕೆಗಾಗಿ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ತಿಳಿಸಿದೆ.
****
(Release ID: 1874379)
Visitor Counter : 166