ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
azadi ka amrit mahotsav g20-india-2023

ಶಿಕ್ಷಣ ಸಚಿವಾಲಯವು 2020-21ನೇ ಸಾಲಿನ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯಕ್ಷಮತೆ ಶ್ರೇಣಿ ಸೂಚ್ಯಂಕದ ವರದಿಯನ್ನು ಬಿಡುಗಡೆ ಮಾಡಿದೆ


​​​​​​​ವರದಿಯು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಕಾರ್ಯಕ್ಷಮತೆಯನ್ನು ಏಕರೂಪದ ಪ್ರಮಾಣದಲ್ಲಿ ವರ್ಗೀಕರಿಸಿದೆ

ಭಾರತೀಯ ಶಿಕ್ಷಣ ವ್ಯವಸ್ಥೆಯು ಸುಮಾರು 14.9 ಲಕ್ಷ ಶಾಲೆಗಳು, 95 ಲಕ್ಷ ಶಿಕ್ಷಕರು ಮತ್ತು ಸುಮಾರು 26.5 ಕೋಟಿ ವಿದ್ಯಾರ್ಥಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ.

ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳು 2020-21 ರಲ್ಲಿ ಹಂತ 2 ಕ್ಕೆ ಹೊಸದಾಗಿ ಪ್ರವೇಶಿಸಿದ್ದು, ಇದುವರೆಗಿನ ಯಾವುದೇ ರಾಜ್ಯಕ್ಕಿಂತ ಹೆಚ್ಚಿನ ಮಟ್ಟವನ್ನು ಸಾಧನೆಯಾಗಿದೆ.

Posted On: 03 NOV 2022 10:05AM by PIB Bengaluru

ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇಂದು 2020-21ನೇ ಸಾಲಿಗೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಕಾರ್ಯಕ್ಷಮತೆ ಶ್ರೇಣಿ ಸೂಚ್ಯಂಕ (ಪಿಜಿಐ) ಅನ್ನು ಬಿಡುಗಡೆ ಮಾಡಿದೆ, ಇದು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಶಾಲಾ ಶಿಕ್ಷಣ ವ್ಯವಸ್ಥೆಯ ಪುರಾವೆ ಆಧಾರಿತ ಸಮಗ್ರ ವಿಶ್ಲೇಷಣೆಗಾಗಿ ವಿಶಿಷ್ಟ ಸೂಚ್ಯಂಕವಾಗಿದೆ.

ಭಾರತೀಯ ಶಿಕ್ಷಣ ವ್ಯವಸ್ಥೆಯು ಸುಮಾರು 14.9 ಲಕ್ಷ ಶಾಲೆಗಳು, 95 ಲಕ್ಷ ಶಿಕ್ಷಕರು ಮತ್ತು ವಿವಿಧ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಸುಮಾರು 26.5 ಕೋಟಿ ವಿದ್ಯಾರ್ಥಿಗಳನ್ನು ಹೊಂದಿರುವ ವಿಶ್ವದ ಅತಿದೊಡ್ಡ ಶಿಕ್ಷಣ ವ್ಯವಸ್ಥೆಗಳಲ್ಲಿ ಒಂದಾಗಿದೆ. ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಾಲಾ ಶಿಕ್ಷಣದ ಯಶಸ್ಸಿನ ಕಾರ್ಯಕ್ಷಮತೆ ಮತ್ತು ಸಾಧನೆಗಳ ಬಗ್ಗೆ ಒಳನೋಟಗಳು ಮತ್ತು ದತ್ತಾಂಶ ಚಾಲಿತ ಕಾರ್ಯವಿಧಾನವನ್ನು ಒದಗಿಸಲು ಡಿಒಎಸ್ ಇ ಮತ್ತು ಎಲ್ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಪಿಜಿಐ ಅನ್ನು ರೂಪಿಸಿದೆ. ಪಿಜಿಐನ ಪ್ರಮುಖ ಉದ್ದೇಶವೆಂದರೆ ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಉತ್ತೇಜಿಸುವುದು ಮತ್ತು ಎಲ್ಲರಿಗೂ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಿಕೊಳ್ಳಲು ಕೋರ್ಸ್ ತಿದ್ದುಪಡಿಯನ್ನು ಬಿಂಬಿಸುವುದು. ಇಲ್ಲಿಯವರೆಗೆ, ಡಿಒಎಸ್ ಇ & ಎಲ್ 2017-18, 2018-19 ಮತ್ತು 2019-20 ನೇ ಸಾಲಿನ ಪಿಜಿಐ ವರದಿಯನ್ನು ಬಿಡುಗಡೆ ಮಾಡಿದೆ. ಪ್ರಸ್ತುತ ವರದಿಯು 2020-21ನೇ ಸಾಲಿಗೆ ಸಂಬಂಧಿಸಿದ್ದಾಗಿದೆ.

ಪಿಜಿಐ ರಚನೆಯು 70 ಸೂಚಕಗಳಲ್ಲಿ 1000 ಅಂಕಗಳನ್ನು ಒಳಗೊಂಡಿದೆ, ಇದನ್ನು 2 ವರ್ಗಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ ಫಲಿತಾಂಶಗಳು, ಆಡಳಿತ ನಿರ್ವಹಣೆ (ಜಿಎಂ). ಈ ವರ್ಗಗಳನ್ನು 5 ಕೇತ್ರಗಳಾಗಿ ವಿಂಗಡಿಸಲಾಗಿದೆ, ಅವುಗಳೆಂದರೆ, ಕಲಿಕೆಯ ಫಲಿತಾಂಶಗಳು (ಎಲ್ಒ), ಪ್ರವೇಶ (ಎ), ಮೂಲಸೌಕರ್ಯ ಮತ್ತು ಸೌಲಭ್ಯಗಳು (ಐಎಫ್), ಇಕ್ವಿಟಿ (ಇ) ಮತ್ತು ಆಡಳಿತ ಪ್ರಕ್ರಿಯೆ (ಜಿಪಿ).
ಹಿಂದಿನ ವರ್ಷಗಳಲ್ಲಿ ಮಾಡಿದಂತೆ, ಪಿಜಿಐ 2020-21 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಹತ್ತು ಶ್ರೇಣಿಗಳಾಗಿ ವರ್ಗೀಕರಿಸಿದೆ, ಅಂದರೆ ಗರಿಷ್ಠ ಸಾಧಿಸಬಹುದಾದ ಶ್ರೇಣಿ ಲೆವೆಲ್ 1 ಆಗಿದೆ, ಇದು ಒಟ್ಟು 1000 ಅಂಕಗಳಲ್ಲಿ 950 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸುವ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ. ಅತ್ಯಂತ ಕಡಿಮೆ ಶ್ರೇಣಿ ಲೆವೆಲ್ 10 ಆಗಿದ್ದು, ಇದು 551 ಕ್ಕಿಂತ ಕಡಿಮೆ ಸ್ಕೋರ್ ಗೆ. ಪಿಜಿಐನ ಅಂತಿಮ ಗುರಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಎಲ್ಲಾ ಆಯಾಮಗಳನ್ನು ಒಳಗೊಂಡ ಬಹು-ಅಪೇಕ್ಷಿತ ಅತ್ಯುತ್ತಮ ಶಿಕ್ಷಣ ಫಲಿತಾಂಶಗಳನ್ನು ತರುವ ಬಹು-ಆಯಾಮದ ಮಧ್ಯಸ್ಥಿಕೆಗಳನ್ನು ಕೈಗೊಳ್ಳಲು ಪ್ರೇರೇಪಿಸುವುದು. ಪಿಜಿಐ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಂತರಗಳನ್ನು ಗುರುತಿಸಲು ಮತ್ತು ಶಾಲಾ ಶಿಕ್ಷಣ ವ್ಯವಸ್ಥೆಯು ಪ್ರತಿ ಹಂತದಲ್ಲೂ ಸದೃಢವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಕ್ಕಾಗಿ ಪ್ರದೇಶಗಳಿಗೆ ಆದ್ಯತೆ ನೀಡಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಕೇರಳ, ಪಂಜಾಬ್, ಚಂಡೀಗಢ, ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶ ಸೇರಿದಂತೆ ಒಟ್ಟು 7 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 2017-18 ಮತ್ತು 2019-20ರಲ್ಲಿ ಯಾವುದಕ್ಕೂ ಹೋಲಿಸಿದರೆ 2020-21ರಲ್ಲಿ 2ನೇ ಹಂತವನ್ನು (ಸ್ಕೋರ್ 901-950) ತಲುಪಿವೆ. ಗುಜರಾತ್, ರಾಜಸ್ಥಾನ ಮತ್ತು ಆಂಧ್ರಪ್ರದೇಶಗಳು ಇದುವರೆಗೆ ಯಾವುದೇ ರಾಜ್ಯಕ್ಕಿಂತ ಅತ್ಯುನ್ನತ ಮಟ್ಟಕ್ಕೆ ಹೊಸದಾಗಿ ಪ್ರವೇಶಿಸಿವೆ.
ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವಾದ ಲಡಾಖ್ 2020-21 ರಲ್ಲಿ 8 ನೇ ಹಂತದಿಂದ 4 ನೇ ಹಂತಕ್ಕೆ ಪಿಜಿಐನಲ್ಲಿ ಗಮನಾರ್ಹ ಸುಧಾರಣೆಯನ್ನು ಮಾಡಿದೆ ಅಥವಾ 2019-20 ಕ್ಕೆ ಹೋಲಿಸಿದರೆ 2020-21 ರಲ್ಲಿ ತನ್ನ ಅಂಕಗಳನ್ನು 299 ಅಂಕಗಳಿಂದ ಸುಧಾರಿಸಿದೆ.

2020-21 ರಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಸಾಧಿಸಿದ ಪಿಜಿಐ ಅಂಕಗಳು ಮತ್ತು ಶ್ರೇಣಿಗಳು ಪಿಜಿಐ ವ್ಯವಸ್ಥೆಯ ಪರಿಣಾಮಕಾರಿತ್ವಕ್ಕೆ ಸಾಕ್ಷಿಯಾಗಿವೆ. ಸೂಚಕವಾರು ಪಿಜಿಐ ಸ್ಕೋರ್ ಒಂದು ರಾಜ್ಯವು ಸುಧಾರಿಸಬೇಕಾದ ಪ್ರದೇಶಗಳನ್ನು ಬಿಂಬಿಸುತ್ತದೆ. ಪಿಜಿಐ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ತುಲನಾತ್ಮಕ ಕಾರ್ಯಕ್ಷಮತೆಯನ್ನು ಏಕರೂಪದ ಪ್ರಮಾಣದಲ್ಲಿ ಪ್ರತಿಬಿಂಬಿಸುತ್ತದೆ, ಇದು ಉತ್ತಮ ಪ್ರದರ್ಶನ ನೀಡಲು ಮತ್ತು ಪ್ರದರ್ಶಕರು ಅನುಸರಿಸುವ ಉತ್ತಮ ಅಭ್ಯಾಸವನ್ನು ಅಳವಡಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತದೆ.

2020-21ನೇ ಸಾಲಿನ ಪಿಜಿಐ ವರದಿಯನ್ನು https://pgi.udiseplus.gov.in/#/home ನೋಡಬಹುದು.

*****(Release ID: 1873440) Visitor Counter : 149