ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
azadi ka amrit mahotsav

ಇಎಸ್ಐಸಿಯಿಂದ ಯಶಸ್ವಿ ವಿಶೇಷ ಸ್ವಚ್ಛತಾ ಅಭಿಯಾನ 2.0 


​​​​​​​367 ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗಿದೆ

657 ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳನ್ನು ಬಗೆಹರಿಸಲಾಗಿದೆ

Posted On: 01 NOV 2022 8:14PM by PIB Bengaluru

ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಶಾಸನಬದ್ಧ ಸಂಸ್ಥೆಯಾಗಿದ್ದು, ವಿಶೇಷ ಸ್ವಚ್ಛತಾ ಅಭಿಯಾನ 2.0 ಅನ್ನು ನವದೆಹಲಿಯ ಪ್ರಧಾನ ಕಚೇರಿಯಲ್ಲಿ ಮತ್ತು ಅದರ ಎಲ್ಲಾ ಕ್ಷೇತ್ರ ಕಚೇರಿಗಳು/ಇಎಸ್ಐಸಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ 2022 ರ ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರವರೆಗೆ ದೇಶಾದ್ಯಂತ ನಡೆಸಿತು. ಅಭಿಯಾನದ ಸಮಯದಲ್ಲಿ, ಬಾಕಿ ಉಳಿದಿರುವ ವಿಷಯಗಳನ್ನು ವಿಲೇವಾರಿ ಮಾಡುವಲ್ಲಿ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಾಯಿತು ಮತ್ತು 367 ಸ್ಥಳಗಳನ್ನು ಗುರುತಿಸಿ ಅಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು.

ಸ್ವಚ್ಛತಾ ಅಭಿಯಾನಗಳಲ್ಲದೆ, ಗಣ್ಯ ವ್ಯಕಿಗಳ ಉಲ್ಲೇಖಗಳು, ಸಂಸದೀಯ ಭರವಸೆಗಳು, ರಾಜ್ಯ ಸರ್ಕಾರದ ಉಲ್ಲೇಖಗಳನ್ನು ಸಹ ಇತ್ಯರ್ಥಗೊಳಿಸಲಾಯಿತು. ಅಭಿಯಾನದ ಸಮಯದಲ್ಲಿ ಒಟ್ಟು 657 ಸಾರ್ವಜನಿಕ ಕುಂದುಕೊರತೆಗಳು ಮತ್ತು ಮೇಲ್ಮನವಿಗಳನ್ನು ಸಹ ಪರಿಹರಿಸಲಾಗಿದೆ. ಗುಜರಿ ವಿಲೇವಾರಿ ಮತ್ತು ಕಚೇರಿ ಸ್ಥಳದ ಪರಿಣಾಮಕಾರಿ ನಿರ್ವಹಣೆಯನ್ನು ಸಹ ಮಾಡಲಾಗಿದೆ.

ನೌಕರರ ರಾಜ್ಯ ವಿಮಾ ನಿಗಮವು ತನ್ನ ಸೇವಾ ವಿತರಣಾ ಕಾರ್ಯವಿಧಾನವನ್ನು ಸುಧಾರಿಸಲು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ವಿಶೇಷ ಅಭಿಯಾನ 2.0 ರ ಅಂಶಗಳನ್ನು ಅಳವಡಿಸಿಕೊಳ್ಳಲು ನಿಯಮಿತವಾಗಿ ಕೆಲಸ ಮಾಡುತ್ತಿದೆ.

ವಿಶೇಷ ಅಭಿಯಾನ 2.0 ಸಮಯದಲ್ಲಿ ಇಎಸ್ಐಸಿ ಕೈಗೊಂಡ ಕೆಲಸ ಮತ್ತು ವಿಲೇವಾರಿಯ ಅಂಕಿಅಂಶಗಳು:

ಕ್ರ.ಸಂ.

ಚಟುವಟಿಕೆ

ವಿಶೇಷ ಅಭಿಯಾನ 2.0 ಸಮಯದಲ್ಲಿ ವಿಲೇವಾರಿ ಮಾಡಲಾದ ಪ್ರಕರಣಗಳ ಒಟ್ಟು ಸಂಖ್ಯೆ

1

ಸಂಸದರ ಉಲ್ಲೇಖಗಳು

36

2

ಸಂಸದೀಯ ಭರವಸೆಗಳು

02

3

ಐಎಂಸಿ ಉಲ್ಲೇಖಗಳು (ಸಂಪುಟದ ಪ್ರಸ್ತಾವನೆಗಳು)

0

4

ರಾಜ್ಯ ಸರ್ಕಾರಗಳ ಉಲ್ಲೇಖಗಳು

15

5

ಪ್ರಧಾನಿ ಕಚೇರಿ ಉಲ್ಲೇಖಗಳು

0

6

ಸಾರ್ವಜನಿಕ ಕುಂದುಕೊರತೆಗಳು

379

7

ಸಾರ್ವಜನಿಕ ಕುಂದುಕೊರತೆಗಳ ಮೇಲ್ಮನವಿಗಳು

278

8

ಸ್ವಚ್ಛತಾ ಅಭಿಯಾನ(ಗಳು)

367

9

ಜಾಗವನ್ನು ಮುಕ್ತಗೊಳಿಸಿದ್ದು (ಚ.ಅಡಿಯಲ್ಲಿ)

4659

10

ದಾಖಲೆ ನಿರ್ವಹಣೆ- ಭೌತಿಕ ಕಡತಗಳ ಪರಿಶೀಲನೆ

3422

11

ಕಳೆ ನಿರ್ಮೂಲನೆ

2506


ಪ್ರಾದೇಶಿಕ ಕಚೇರಿ, ಫರೀದಾಬಾದ್

*****


(Release ID: 1872868) Visitor Counter : 177


Read this release in: English , Urdu , Punjabi