ಉಕ್ಕು ಸಚಿವಾಲಯ
ಆರ್ ಐ ಎನ್ ಎಲ್ ನಲ್ಲಿ ಆರಂಭವಾದ ವಿಚಕ್ಷಣಾ ಜಾಗೃತಿ ಸಪ್ತಾಹ - 2022
ಆರ್ ಐ ಎನ್ ಎಲ್ ಸಿಎಂಡಿ ಶ್ರೀ ಅತುಲ್ ಭಟ್ ಮತ್ತು ನೌಕರರಿಂದ ಪ್ರಾಮಾಣಿಕತೆಯ ಪ್ರತಿಜ್ಞೆ
Posted On:
01 NOV 2022 3:24PM by PIB Bengaluru
ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್ ಐ ಎನ್ ಎಲ್) ವಿಶಾಖಪಟ್ಟಣಂ ಉಕ್ಕು ಘಟಕವು ಕೇಂದ್ರೀಯ ವಿಚಕ್ಷಣಾ ಆಯೋಗದ (ಸಿವಿಸಿ) ನಿರ್ದೇಶನಗಳ ಪ್ರಕಾರ 31.10.2022 ರಿಂದ 6.11.2022 ರವರೆಗೆ ವಿಕ್ಷಣಾ ಜಾಗೃತಿ ಸಪ್ತಾಹ - 2022 ಅನ್ನು ಆಚರಿಸುತ್ತಿದೆ.
ಅಕ್ಟೋಬರ್ 31, 2022 ರಂದು ವಿಶಾಖಪಟ್ಟಣಂ ಉಕ್ಕು ಘಟಕದ ಆಡಳಿತ ಕಟ್ಟಡದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಆರ್ ಐ ಎನ್ ಎಲ್ ಸಿಎಂಡಿ ಶ್ರೀ ಅತುಲ್ ಭಟ್, ನಿರ್ದೇಶಕರು, ಹಿರಿಯ ಅಧಿಕಾರಿಗಳು ಮತ್ತು ನೌಕರರು ಪ್ರಾಮಾಣಿಕತೆಯ ಪ್ರತಿಜ್ಞೆ ಮಾಡಿದರು.
ಉಕ್ಕು ಘಟಕದ ವಿವಿಧ ವಿಭಾಗಗಳ ಮುಖ್ಯಸ್ಥರು ಮತ್ತು ವೈಜಾಗ್ ನ ಹೊರಗಿರುವ ಸ್ಥಾವರ, ಗಣಿ, ಸಂಪರ್ಕ ಮತ್ತು ಮಾರುಕಟ್ಟೆ ಕಚೇರಿಗಳ ವಿವಿಧ ಸ್ಥಳಗಳಲ್ಲಿನ ನೌಕರರು ಸಹ ಪ್ರಾಮಾಣಿಕತೆಯ ಪ್ರತಿಜ್ಞೆಯನ್ನು ಮಾಡಿದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯ ಅಂಗವಾಗಿ 31 ಅಕ್ಟೋಬರ್, 2022 ರಂದು ಉಕ್ಕು ಕ್ರೀಡಾಂಗಣದಲ್ಲಿ, ವಿಶಾಖಪಟ್ಟಣಂ ಉಕ್ಕು ಘಟಕದ ಕ್ರೀಡಾ ಮತ್ತು ವಿಚಕ್ಷಣಾ ಇಲಾಖೆಗಳು ಜಂಟಿಯಾಗಿ "ಏಕತಾ ಓಟ / "ವಾಕಥಾನ್" ಅನ್ನು ಆಯೋಜಿಸಿದ್ದವು. ಮುನ್ನೂರಕ್ಕೂ ಹೆಚ್ಚು ಶಾಲಾ ಮಕ್ಕಳು, ಉದ್ಯೋಗಿಗಳು, ಗೃಹಿಣಿಯರು, ಯುವಕರು ಹಾಗೂ ಯೋಗ ಪಟುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಉದ್ದೇಶದಿಂದ ವಿಚಕ್ಷಣಾ ಜಾಗೃತಿ ಸಪ್ತಾಹವನ್ನು ಆಚರಿಸುವ ಅಭಿಯಾನದ ಭಾಗವಾಗಿ ಆರ್ ಐ ಎನ್ ಎಲ್ ನ ವಿಚಕ್ಷಣಾ ವಿಭಾಗವು ಈ ಚಟುವಟಿಕೆಯನ್ನು ಹಮ್ಮಿಕೊಂಡಿದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ಪ್ರತಿ ವರ್ಷ ಏಕತಾ ಓಟವನ್ನು ನಡೆಸಲಾಗುತ್ತದೆ. ಈ ದಿನವನ್ನು ರಾಷ್ಟ್ರೀಯ ಏಕತಾ ದಿನ ಅಥವಾ ರಾಷ್ಟ್ರೀಯ ಏಕತಾ ದಿವಸ್ ಎಂದೂ ಕರೆಯಲಾಗುತ್ತದೆ. ಡಾ.ಎ.ಪಿ.ನವೀನ್ ಕುಮಾರ್ ಮಾತನಾಡಿ, ಮಕ್ಕಳು ಸ್ವಯಂ ಶಿಸ್ತು ಹೊಂದಿರಬೇಕು, ಪ್ರಾಮಾಣಿಕತೆಯೊಂದಿಗೆ ದೈಹಿಕವಾಗಿ ಸುದೃಢರಾಗಿರಬೇಕು ಎಂದು ಸಲಹೆ ನೀಡಿದರು. ಈ ಎಲ್ಲಾ ಅಂಶಗಳು ದೇಶದ ಉತ್ತಮ ನಾಗರಿಕರಾಗಲು ಕಾರಣವಾಗುತ್ತವೆ ಎಂದು ಅವರು ಹೇಳಿದರು.
*****
(Release ID: 1872838)
Visitor Counter : 161